• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್‌ಟಿ-ಪಿಸಿಆರ್ ಪರೀಕ್ಷೆ: ಯಾವ ರಾಜ್ಯದಲ್ಲಿ ಎಷ್ಟು ಶುಲ್ಕ?

|

ನವದೆಹಲಿ, ನವೆಂಬರ್ 24: ಕೆಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವಂತೆ ಪರೀಕ್ಷೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ದೆಹಲಿ, ಗುಜರಾತ್, ಗೋವಾ ಮತ್ತು ರಾಜಸ್ಥಾನದಿಂದ ಬರುವ ಎಲ್ಲ ಪ್ರವಾಸಿಗರೂ ರಿಯಲ್ ಟೈಮ್ ಪಾಲಿಮೆರಸ್ ಚೈನ್ ರಿಯಾಕ್ಷನ್ (ಪಿಟಿ-ಪಿಸಿಆರ್) ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ತರುವಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ವಾಯು, ರಸ್ತೆ, ಜಲ ಅಥವಾ ರೈಲು ಮಾರ್ಗ ಸೇರಿದಂತೆ ಯಾವುದೇ ಮಾರ್ಗದಿಂದ ಪ್ರಯಾಣಿಸಿದರೂ ಈ ನಾಲ್ಕು ರಾಜ್ಯಗಳ ಜನರು ಮಹಾರಾಷ್ಟ್ರಕ್ಕೆ ಕಾಲಿಡುವ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವುದು ಕಡ್ಡಾಯ. ರಾಪಿಡ್ ಆಂಟಿಜೆನ್ ಪರೀಕ್ಷೆ ಕೋವಿಡ್ ತಪಾಸಣೆಯ ಮತ್ತೊಂದು ಮಾದರಿ. ಆದರೆ ಇದರಿಂದ ಅಷ್ಟು ನಿಖರ ಫಲಿತಾಂಶ ದೊರಕುವುದಿಲ್ಲ. ಈ ಬಗೆಯ ಪರೀಕ್ಷೆ ಹೆಚ್ಚಾಗಿರುವುದರಿಂದಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಇದು ಕೋವಿಡ್ ಸೋಂಕನ್ನು ನಿಖರವಾಗಿ ಗುರುತಿಸಲಾರದು ಎಂದು ಹೇಳಲಾಗಿದೆ. ಹೀಗಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚು ನಿಖರ ಎನ್ನಲಾಗಿದೆ.

ಭಾರತದಲ್ಲಿ ಕೊವಿಡ್-19 ಪರೀಕ್ಷೆಗೆ ಕೇವಲ 400 ರೂಪಾಯಿ!

ಈಗ ದೇಶದಾದ್ಯಂತ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ವಿಧಿಸಲಾಗುತ್ತಿರುವ ಶುಲ್ಕವು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇದೆ. ಈ ದರವನ್ನು ದೇಶದಾದ್ಯಂತ ಏಕರೂಪದಲ್ಲಿ ಇರುವಂತೆ ಮಾಡಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಿದೆ. ಹಾಗಾದರೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಯಾವ ರಾಜ್ಯದಲ್ಲಿ ಎಷ್ಟು ದರವಿದೆ? ಮುಂದೆ ಓದಿ.

ಮಹಾರಾಷ್ಟ್ರದಲ್ಲಿ ವೆಚ್ಚವೆಷ್ಟು?

ಮಹಾರಾಷ್ಟ್ರದಲ್ಲಿ ವೆಚ್ಚವೆಷ್ಟು?

ಕೊರೊನಾ ವೈರಸ್ ಆರಂಭದ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಯ ದರವು ಸುಮಾರು 4,500 ರೂ.ದಷ್ಟಿತ್ತು. ಆದರೆ ಈಗ ಅದರಲ್ಲಿ ಇಳಿಕೆ ಮಾಡಲಾಗಿದೆ. ಲ್ಯಾಬೋರೇಟರಿಗಳಲ್ಲಿ ಪರೀಕ್ಷೆ ನಡೆಸಿದರೆ 980 ರೂ., ಕೋವಿಡ್ ಕೇರ್ ಕೇಂದ್ರಗಳಿಂದ, ಆಸ್ಪತ್ರೆಗಳಿಂದ ಮಾದರಿ ಸಂಗ್ರಹಿಸಿದರೆ 1,400 ರೂ ಮತ್ತು ಮನೆಗಳಿಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಿದರೆ 1,800 ರೂ ದರ ವಿಧಿಸಲಾಗುತ್ತಿದೆ.

ಕರ್ನಾಟಕದಲ್ಲಿ ಪರೀಕ್ಷೆ ವೆಚ್ಚ

ಕರ್ನಾಟಕದಲ್ಲಿ ಪರೀಕ್ಷೆ ವೆಚ್ಚ

ದೇಶದಲ್ಲಿಯೇ ಪ್ರತಿ ಲಕ್ಷ ಜನಸಂಖ್ಯೆಗೆ 16,360ರಂತೆ ಅತಿ ಹೆಚ್ಚು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಿದ ದಾಖಲೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯದಲ್ಲಿ ಖಾಸಗಿ ಲ್ಯಾಬ್‌ಗಳಲ್ಲಿ ಮಾದರಿ ಸಂಗ್ರಹಕ್ಕೆ 1,200 ರೂ ವೆಚ್ಚವಾಗುತ್ತಿದೆ. ಮನೆಗೆ ಬಂದು ಪರೀಕ್ಷೆ ನಡೆಸಿದರೆ 1,600 ರೂ ನಿಗದಿ ಮಾಡಲಾಗುತ್ತಿದೆ. ಅಕ್ಟೋಬರ್ 16ರಂದು ಆದೇಶ ಹೊರಡಿಸಿದ್ದ ಕರ್ನಾಟಕ ಸರ್ಕಾರ, ಖಾಸಗಿ ಲ್ಯಾಬ್‌ನಲ್ಲಿ ಸರ್ಕಾರದ ಶಿಫಾರಸಿನಂತೆ ಪರೀಕ್ಷೆ ನಡೆಸಿದರೆ 800 ರೂ ಶುಲ್ಕ ಪಡೆಯುವಂತೆ ನಿಗದಿಪಡಿಸಿದೆ.

ರಾತ್ರಿ ಕರ್ಫ್ಯೂದಿಂದ ಯಾವ ಪ್ರಯೋಜನವೂ ಇಲ್ಲ: ತಜ್ಞರ ಅಭಿಪ್ರಾಯ

ಉತ್ತರ ಪ್ರದೇಶದಲ್ಲಿ ದರ ಇಳಿಕೆ

ಉತ್ತರ ಪ್ರದೇಶದಲ್ಲಿ ದರ ಇಳಿಕೆ

ಅಕ್ಟೋಬರ್ ಕೊನೆಯ ವಾರದಲ್ಲಿ ಉತ್ತರ ಪ್ರದೇಶ ಸರ್ಕಾರವು ಆರ್‌ಟಿ-ಪಿಸಿಆರ್ ಪರೀಕ್ಷೆ ದರವನ್ನು 1,600 ರಿಂದ 600ಕ್ಕೆ ಇಳಿಸಿದೆ. ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 600 ರೂ ವಿಧಿಸಲಾಗುತ್ತಿದೆ. ಖಾಸಗಿ ಮಾಲೀಕತ್ವ ಸೇರಿದಂತೆ ಎಲ್ಲ ಪ್ರಯೋಗಾಲಯಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಯ ಶುಲ್ಕವನ್ನು 2,500 ರಿಂದ 1,600ಕ್ಕೆ ಇಳಿಸಲಾಗಿದೆ.

ದೆಹಲಿಯಲ್ಲಿ ಪರೀಕ್ಷೆ ವೆಚ್ಚ

ದೆಹಲಿಯಲ್ಲಿ ಪರೀಕ್ಷೆ ವೆಚ್ಚ

ದೆಹಲಿಯಲ್ಲಿ ಖಾಸಗಿ ಲ್ಯಾಬ್‌ಗಳಲ್ಲಿ ಆರ್‌ಟಿ-ಪಿಸಿಆರ್‌ಗೆ 2,400 ರೂ ಹಣ ತೆರಬೇಕು. ಸ್ಪೈಸ್ ಜೆಟ್ ಏರ್ಲೈನ್ ಆರಂಭಿಸಿರುವ ತನ್ನ ಮೊದಲ ಕೋವಿಡ್ ಪರೀಕ್ಷೆ ಕೇಂದ್ರದಲ್ಲಿ ಕೇವಲ 499 ರೂ ದಿಂದ ಪರೀಕ್ಷೆ ಶುಲ್ಕ ವಿಧಿಸುತ್ತಿದೆ. ಇನ್ನು ಐಸಿಎಂಆರ್ ಅನುಮೋದಿತ ಜೆಐಟಿಎಂ ಸ್ಕಿಲ್ಸ್ ಲ್ಯಾಬ್‌ಗಳಲ್ಲಿ 1,200 ರೂ ದರ ವಿಧಿಸಲಾಗುತತಿದೆ.

ಆಂಧ್ರಪ್ರದೇಶದಲ್ಲಿ ದರ

ಆಂಧ್ರಪ್ರದೇಶದಲ್ಲಿ ದರ

ಆಂಧ್ರಪ್ರದೇಶದಲ್ಲಿ ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ವೆಚ್ಚವನ್ನು ರಾಜ್ಯ ಸರ್ಕಾರ 2,400 ರೂ ದಿಂದ 1,600 ರೂಗೆ ಇಳಿಸಿದೆ. ಐಸಿಎಂಆರ್ ಅನುಮೋದಿತ ಲ್ಯಾಬ್‌ಗಳಲ್ಲಿ 1,900 ರೂ. ಶುಲ್ಕ ಪಡೆದುಕೊಳ್ಳಲಾಗುತ್ತಿದೆ.

ತೆಲಂಗಾಣದಲ್ಲಿ ವೆಚ್ಚ

ತೆಲಂಗಾಣದಲ್ಲಿ ವೆಚ್ಚ

ಖಾಸಗಿ ಲ್ಯಾಬ್‌ಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ 2,200 ರೂ ಪಡೆದುಕೊಳ್ಳಲಾಗುತ್ತಿತ್ತು. ಇದನ್ನು ತೆಲಂಗಾಣ ಸರ್ಕಾರ 850 ರೂ.ಗೆ ಇಳಿಸಿದೆ. ಇನ್ನು ಮನೆಯಿಂದ ಮಾದರಿ ಸಂಗ್ರಹಿಸಲು 1,200 ರೂ ವಿಧಿಸಲಾಗುತ್ತಿದೆ.

ಬಂಗಾಳ, ಗುಜರಾತ್

ಬಂಗಾಳ, ಗುಜರಾತ್

ಪಶ್ಚಿಮ ಬಂಗಾಳದಲ್ಲಿ ಖಾಸಗಿ ಲ್ಯಾಬ್‌ಗಳಲ್ಲಿ ದರವನ್ನು 2,250 ರೂ. ನಿಂದ 1,500 ರೂ.ಗೆ ಇಳಿಸಲಾಗಿದೆ. ಗುಜರಾತ್‌ನಲ್ಲಿ ಖಾಸಗಿ ಲ್ಯಾಬ್‌ಗಳು 2,500 ರೂ. ದರ ವಿಧಿಸುತ್ತಿದ್ದವು. ಅವುಗಳನ್ನೀಗ 1,500ಕ್ಕೆ ಇಳಿಕೆ ಮಾಡಲಾಗಿದೆ. ಮನೆಗಳಲ್ಲಿ ಮಾದರಿ ಸಂಗ್ರಹಿಸಲು 2,000 ರೂ. ಪಡೆಯಲಾಗುತ್ತಿದೆ.

ಅಸ್ಸಾಂನಲ್ಲಿ ಉಚಿತ

ಅಸ್ಸಾಂನಲ್ಲಿ ಉಚಿತ

ರಾಜಸ್ಥಾನದಲ್ಲಿ 2,200 ರೂ ಇದ್ದ ಆರ್‌ಟಿ-ಪಿಸಿಆರ್ ಪರೀಕ್ಷೆ ವೆಚ್ಚವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ 1,200 ರೂ,ಗೆ ಕಡಿತಗೊಳಿಸಲಾಗಿದೆ. ಅಸ್ಸಾಂನಲ್ಲಿ ಕೋವಿಡ್ ಪರೀಕ್ಷೆಗಳು ಉಚಿತ. ಆದರೆ 24 ಗಂಟೆ ಒಳಗೆ ವರದಿಯನ್ನು ಪಡೆದುಕೊಳ್ಳಲು ಬಯಸುವವರು ಪ್ರತಿ ಪರೀಕ್ಷೆಗೆ 2,200 ರೂ. ಶುಲ್ಕ ತೆರಬೇಕು. ಮೇಘಾಲಯದಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆಗೆ 1,000 ರೂ ಇದೆ.

   Mohammed Siraj ಅವರ ತಂದೆಗೆ ಈ ಸರಣಿ ಅರ್ಪಣೆಯಂತೆ | Oneindia Kannada

   English summary
   People in various states have to pay different amount of price for Covid -19 RT-PCR Tests. Here is the state-wise price list for test
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X