ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಪರ ಸಂಘಟನೆಗಳನ್ನು ಗಂಭೀರ ಚಿಂತನೆಗೆ ದೂಡಿದ RSS ಮುಖ್ಯಸ್ಥರ ಹೇಳಿಕೆ

|
Google Oneindia Kannada News

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ನಾಗಪುರದಲ್ಲಿ ನೀಡಿದ ಅಚ್ಚರಿಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವೊಂದು ಕಾಂಗ್ರೆಸ್ ಮುಖಂಡರೂ
ಭಾಗವತ್ ಹೇಳಿಕೆಯನ್ನು ಸ್ವಾಗತಿಸಿದರೆ, ಹಿಂದೂಪರ ಸಂಘಟನೆಗಳು ಈ ನಿಟ್ಟಿನಲ್ಲಿ ಚಿಂತಿಸುವಂತೆ ಮಾಡಿದೆ.

ಅಭಿವೃದ್ದಿ ವಿಷಯಗಳಿಗಿಂತ ಧಾರ್ಮಿಕ ವಿಚಾರಗಳೇ ಮುನ್ನಲೆಯಲ್ಲಿರುವ ಈ ಕಾಲಘಟ್ಟದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಹಲವು ಆಯಾಮಗಳಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಅದೂ ಜ್ಞಾನವಾಪಿ ಮಸೀದಿ ವಿವಾದ ನ್ಯಾಯಾಲಯದ ಕಟಕಟೆಯಲ್ಲಿ ಇರುವ ಹೊತ್ತಿಗೆ.

ಜ್ಞಾನವಾಪಿ ವಿವಾದ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನೆಜ್ಞಾನವಾಪಿ ವಿವಾದ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನೆ

ಹಿಂದೂ ಎನ್ನುವ ವಿಚಾರಕ್ಕೆ ಬಂದಾಗ ಹೆಚ್ಚಾಗಿ ಜನರು ಹತ್ತಿರುವಾಗುವುದು ಸಂಘಟನೆಯಾಗಿ ಆರ್‌ಎಸ್‌ಎಸ್ ಮತ್ತು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು. ಬಿಜೆಪಿ ಈ ಹಂತಕ್ಕೆ ಬೆಳೆದು ನಿಂತಿದ್ದು ಇದೇ ವಿಚಾರವನ್ನು ಮುಂದಕ್ಕೆ ಇಟ್ಟುಕೊಂಡು ಎನ್ನುವುದು ನಿರ್ವಿವಾದ.

ಇಸ್ಲಾಂ ರಾಜರಿಂದ ಹಿಂದೂ ಧಾರ್ಮಿಕ ಕೇಂದ್ರಗಳು ನಾಶಗೊಂಡವು ಎನ್ನುವ ವಿಚಾರ ಮನೆಮಾತಾಗಿರುವ ಈ ಹೊತ್ತಿನಲ್ಲಿ, ಮತ್ತೆ ದೇವಾಲಯಗಳನ್ನು ಮರಳಿ ಪಡೆಯಬೇಕು ಎನ್ನುವ ಹಿಂದೂಪರ ಸಂಘಟನೆಗಳ ಹಠ/ನಿಲುವಿಗೆ ಹಿನ್ನಡೆಯಾಗಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

 ಬಾಬ್ರಿ ಮಸೀದಿ ಧ್ವಂಸ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ

ಬಾಬ್ರಿ ಮಸೀದಿ ಧ್ವಂಸ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ

ಬಾಬ್ರಿ ಮಸೀದಿ ಧ್ವಂಸ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಸಂಘಟನೆಯ ಪಾತ್ರ ಅದೊಂದು ಐತಿಹಾಸಿಕ ಕಾರಣ ಎಂದು ಮೋಹನ್ ಭಾಗವತ್ ಪುನರುಚ್ಚಿಸಿದ್ದಾರೆ. ಆದರೆ, "ಇನ್ನು ಮುಂದೆ ಈ ರೀತಿಯ ಹೋರಾಟದಲ್ಲಿ ಸಂಘಟನೆಯ ಪಾತ್ರ ಇರುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ" ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆ ಮೂಲಕ ಧಾರ್ಮಿಕ ವಿಚಾರವನ್ನೇ ಕಸುಬು ಮಾಡಿಕೊಂಡಿರುವ ಕೆಲವೊಂದು ಸಂಘಟನೆ ಮತ್ತದರ ಪಾತ್ರಧಾರಿಗಳು ಗಂಭೀರವಾಗಿ ಆಲೋಚಿಸುವಂತೆ ಮಾಡಿದ್ದಾರೆ.

 ವಾರಣಾಸಿ ವಿಶ್ವನಾಥನ ದೇವಾಲಯದ ಪಕ್ಕದಲಿರುವ ಜ್ಞಾನವಾಪಿ ಮಸೀದಿ

ವಾರಣಾಸಿ ವಿಶ್ವನಾಥನ ದೇವಾಲಯದ ಪಕ್ಕದಲಿರುವ ಜ್ಞಾನವಾಪಿ ಮಸೀದಿ

ವಾರಣಾಸಿ ವಿಶ್ವನಾಥನ ದೇವಾಲಯದ ಪಕ್ಕದಲಿರುವ ಜ್ಞಾನವಾಪಿ ಮಸೀದಿಯಲ್ಲಿ ಶಿವ, ನಂದಿಯ ದೇವಾಲಯವಿದ್ದ ಕುರುಹು ಪತ್ತೆಯಾಗಿತ್ತು. ಈ ವಿಚಾರ ಮಾತ್ರವಲ್ಲದೇ ಮಥುರಾ ಕೃಷ್ಣ ದೇವಾಲಯದ ಪಕ್ಕದ ಮಸೀದಿ, ಆಗ್ರಾ, ಮಂಡ್ಯ, ಶ್ರೀರಂಗಪಟ್ಟಣ, ಮಂಗಳೂರು ಮುಂತಾದ ಕಡೆಯೂ ದೇವಾಲಯ ನಾಶ ಮಾಡಿ ಮಸೀದಿ ನಿರ್ಮಿಸಲಾಗಿದೆ ಎನ್ನುವ ಆಕ್ರೋಶವನ್ನು ಹಿಂದೂಪರ ಸಂಘಟನೆಗಳು ಹೊರಹಾಕುತ್ತಿವೆ. ಜೊತೆಗೆ, ಹೋರಾಟದ ರೂಪುರೇಷೆಯನ್ನೂ ಸಿದ್ದಪಡಿಸಿಕೊಳ್ಳುತ್ತಿವೆ. ಇಂತಹ ಸಮಯದಲ್ಲಿ ಮೋಹನ್ ಭಾಗವತ್ ಹೇಳಿಕೆ ಮಹತ್ವನ್ನು ಪಡೆದುಕೊಂಡಿದೆ.

 ಭಾಗವತ್ ಹೇಳಿಕೆಗೆ ಹಲವು ಧಾರ್ಮಿಕ ಮುಖಂಡರು ಸ್ವಾಗತ

ಭಾಗವತ್ ಹೇಳಿಕೆಗೆ ಹಲವು ಧಾರ್ಮಿಕ ಮುಖಂಡರು ಸ್ವಾಗತ

ಹಿಂದೂ ದೇವಾಲಯಗಳಿದ್ದ ಜಾಗವನ್ನು ನಮಗೆ ಬಿಟ್ಟುಕೊಡಿ ಎನ್ನುವ ಹೋರಾಟ ಚಿಗುರು ಒಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಯಾವ ಹೋರಾಟಕ್ಕೂ ನಮ್ಮ ಬೆಂಬಲವಿಲ್ಲ ಎನ್ನುವ ಮೋಹನ್ ಭಾಗವತ್ ಹೇಳಿಕೆ, ಹಲವು ಸಂಘಟನೆಗಳನ್ನು ಚಿಂತಿಸುವಂತೆ ಮಾಡಿರುವುದಂತೂ ಹೌದು. ಸೌಹಾರ್ದಯುತವಾಗಿ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎನ್ನುವ ಭಾಗವತ್ ಹೇಳಿಕೆಯನ್ನು ಹಲವು ಧಾರ್ಮಿಕ ಮುಖಂಡರು ಸ್ವಾಗತಿಸಿದ್ದಾರೆ.

 ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯ

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯ

"ಮೋಹನ್ ಭಾಗವತ್ ಅವರ ಈ ರಚನಾತ್ಮಕ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಾವು ಇತಿಹಾಸವನ್ನು ಪಕ್ಕಕ್ಕೆ ಇಡಲು ಕಲಿಯಬೇಕು ಮತ್ತು ಅದನ್ನು ಪರಸ್ಪರರ ವಿರುದ್ಧ ಹೋರಾಟಕ್ಕೆ ಬಳಸಬಾರದು" ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ. "ಇತಿಹಾಸವನ್ನು ನಾವು ರಚನೆ ಮಾಡಿಲ್ಲ. ಇಂದಿನ ಹಿಂದೂ-ಮುಸ್ಲಿಮರೂ ರಚಿಸಿದ್ದಲ್ಲ. ನಕ್ಕೊಂದು ಹೊಸ ವಿವಾದವನ್ನು ಯಾಕೆ ಸೃಷ್ಟಿ ಮಾಡಬೇಕು? ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಮಸೀದಿಗಳಲ್ಲೂ ಯಾಕೆ ಶಿವಲಿಂಗವನ್ನು ಹುಡುಕಬೇಕು"ಎಂದು ಮೋಹನ್ ಭಾಗವತ್ ಹೇಳಿದ್ದರು.

Recommended Video

IPL ಫೈನಲ್ ಮ್ಯಾಚ್ ನಲ್ಲಿ ಮೋಸ ನಡೆದಿದೆ ಎಂದ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ | OneIndia Kannada

English summary
RSS Chief Mohan Bhagwat No More Andolan Statement, Made Hindu Organization To Rethink. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X