• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿಚಿತ್ರ: ಪತ್ರಕರ್ತ, ಲೇಖಕ, ಉಪ ಸಭಾಪತಿ ಹರಿವಂಶ್ ಸಿಂಗ್

|

ಎನ್ಡಿಎ ಅಭ್ಯರ್ಥಿ ಜೆಡಿಯು ಸಂಸದ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆ ಉಪ ಸಭಾಪತಿಯಾಗಿ ಮರು ಆಯ್ಕೆಯಾಗಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಕೊರೊನಾವೈರಸ್ ಕರಿನೆರಳಿನಲ್ಲಿ ಆರಂಭವಾದ ಮುಂಗಾರು ಅಧಿವೇಶನ ಮೊದಲ ದಿನದಂದು ಹಾಜರಿದ್ದ 359 ಸಂಸದರ ಪೈಕಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಮಿಕ್ಕಂತೆ ಧ್ವನಿಮತದ ಮೂಲಕ ನಡೆದ ಮತದಾನ ಪ್ರಕ್ರಿಯೆಯಂತೆ ಹರಿವಂಶ್ ಜಯ ಗಳಿಸಿದರು ಎಂದು ಸಭಾಪತಿ ಎಂ ವೆಂಕಯ್ಯ ನಾಯ್ಡು ಘೋಷಿಸಿದರು.

ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ್ ಮರು ಆಯ್ಕೆ

ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ರನ್ನು ಸೋಲಿಸಿ ಹರಿವಂಶ್ ಅವರು ಹೊಸ ಇತಿಹಾಸ ಬರೆದಿದ್ದರು. ಸರಿ ಸುಮಾರು 41 ರಿಂದ 43ವರ್ಷಗಳ ಕಾಲ ಉಪಸಭಾಪತಿ ಸ್ಥಾನವನ್ನು ಗೆಲ್ಲುತ್ತಾ ಬಂದಿದ್ದ ಕಾಂಗ್ರೆಸ್ಸಿಗೆ ಮತ್ತೆ ಆಘಾತವಾಗಿದೆ.

ಉತ್ತರ ಪ್ರದೇಶದಲ್ಲಿ ಜನನ

ಉತ್ತರ ಪ್ರದೇಶದಲ್ಲಿ ಜನನ

* ಹರಿವಂಶ ನಾರಾಯಣ ಸಿಂಗ್​ ಅವರು 1956ರ ಜೂನ್​ 30ರಂದು ಉತ್ತರ ಪ್ರದೇಶದಲ್ಲಿ ಜನಿಸಿದರು.

* ಬನಾರಸ್​ ಹಿಂದು ವಿಶ್ವವಿದ್ಯಾಲಯ(BHU) ದಿಂದ ಪದವಿ ಪಡೆದಿದ್ದಾರೆ.

* BHU ನಿಂದಲೇ ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮಾ ಪಡೆದುಕೊಂಡರು.

* 500ರು ತಿಂಗಳ ಸಂಬಳದೊಂದಿಗೆ ವೃತ್ತಿ ಬದುಕು ಆರಂಭಿಸಿದರು.

* ಕಾಲೇಜು ದಿನಗಳಲ್ಲಿ ಜಯಪ್ರಕಾಶ್ ನಾರಾಯಣ್(ಜೆಪಿ ಚಳವಳಿ) ಅವರ ಸಾಮಾಜಿಕ ಕ್ರಾಂತಿಯಿಂದ ಪ್ರಭಾವಿತರಾದರು. 1974ರಲ್ಲಿ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.

ಅನುಭವಿ ಪತ್ರಕರ್ತರಾಗಿದ್ದರು

ಅನುಭವಿ ಪತ್ರಕರ್ತರಾಗಿದ್ದರು

* 1977ರಲ್ಲಿ ಟೈಮ್ ಆಫ್ ಇಂಡಿಯಾದಲ್ಲಿ ಟ್ರೈನಿ ಪತ್ರಕರ್ತರಾಗಿದ್ದರು.

* ಧರ್ಮಯುಗ್ ಮ್ಯಾಗಜೀನ್ ನಲ್ಲಿ 1981ರ ತನಕ ಕಾರ್ಯ ನಿರ್ವಹಿಸಿದರು.

* 1981ರಿಂದ 1984ರ ತನಕ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದರು. ನಂತರ ಧರ್ಮ್ ಯುದ್ಧ್, ಅಮೃತ್ ಬಜಾರ್ ಪತ್ರಿಕಾದ ರವಿವಾರ್ ಮ್ಯಾಗಜೀನ್ ನ ಸಂಪಾದಕರಾಗಿದ್ದರು.

* 1989ರಲ್ಲಿ ರಾಂಚಿಯಲ್ಲಿ ಉಷಾ ಮಾರ್ಟಿನ್ ಸಮೂಹದ ಪ್ರಭಾತ್ ಖಬರ್ ನ ಜವಾಬ್ದಾರಿ ವಹಿಸಿಕೊಂಡರು. ಮೇವು ಹಗರಣ ಬಯಲಿಗೆಳೆದ ಪತ್ರಿಕೆ ಇದಾಗಿದೆ.

* ವಿಶ್ವ ಹಿಂದಿ ಸಮ್ಮೇಳನದಲ್ಲಿ ಲೇಖಕರಾಗಿ ಪಾಲ್ಗೊಂಡಿದ್ದರು. ಮಾಧವ್ ರಾವ್ ಸಪ್ರೆ ಪ್ರಶಸ್ತಿ ವಿಜೇತರು ಕೂಡಾ.

ಲೋಕಸಭೆ ಉಪಾಧ್ಯಕ್ಷರ ಆಯ್ಕೆ, ಎನ್ಡಿಎ ಕುತೂಹಲಕಾರಿ ತಂತ್ರ!

ಮಾಧ್ಯಮ ಸಲಹೆಗಾರರಾಗಿ ಕೆಲಸ

ಮಾಧ್ಯಮ ಸಲಹೆಗಾರರಾಗಿ ಕೆಲಸ

* ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು.

* ಪ್ರಭಾತ್ ಖಬರ್ ಸುಧಾರಣೆ ಮಾಡಿದ್ದಲ್ಲದೆ, ಜಾರ್ಖಂಡ್, ಬಿಹಾರ ಹಾಗೂ ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಿದರು.

* ಹರಿವಂಶ ನಾರಾಯಣ ಸಿಂಗ್​ ಅವರು ಮಾಜಿ ಪ್ರಧಾನಿ ಚಂದ್ರಶೇಖರ್​ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು.

* ನಿತೀಶ್ ಕುಮಾರ್ ಅವರ ಜೆಡಿ-ಯುವಿನಿಂದ ಪ್ರಥಮ ಬಾರಿಗೆ ಸಂಸದರಾಗಿ ನಾಮಾಂಕಿತಗೊಂಡರು.

* ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ನಾಮಪತ್ರದ ಶುಲ್ಕ 10,000 ರು ಗಳನ್ನು ರೀಫಂಡ್ ಆಗಿ ಪಡೆದುಕೊಂಡಿದ್ದಾರೆ.

2014ರಲ್ಲಿ ಸಕ್ರಿಯ ರಾಜಕಾರಣಿ

2014ರಲ್ಲಿ ಸಕ್ರಿಯ ರಾಜಕಾರಣಿ

ಬಿಹಾರ ಕೋಟಾದಿಂದ ಜೆಡಿಯುನಿಂದ ರಾಜ್ಯಸಭೆಗೆ 2014ಕ್ಕೆ ನಾಮಾಂಕಿತಗೊಂಡು 6 ವರ್ಷ ಅವಧಿ ಪೂರೈಸಿದರು. 2018ರಲ್ಲಿ ಕಾಂಗ್ರೆಸ್ಸಿನ ಬಿಕೆ ಹರಿಪ್ರಸಾದ್ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ಸೇತರ ಅಭ್ಯರ್ಥಿಯಾಗಿ ಉಪ ಸಭಾಪತಿ ಹುದ್ದೆಗೇರಿದ ಮೊದಲ ಹಾಗೂ ಮೂರನೇ ವ್ಯಕ್ತಿ ಎನಿಸಿಕೊಂಡರು.

English summary
Harivansh Narayan Singh re-elected as the deputy chairman of the Rajya Sabha through voice-vote. Here is Harivansh Narayan Singh Biography in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X