Timeline; ಪ್ರವಾದಿ ಬಗ್ಗೆ ಅವಹೇಳನ, ವಿವಾದದ ಸುತ್ತಮುತ್ತ
ಬಿಜೆಪಿ ವಕ್ತಾರರಾಗಿದ್ದ ನುಪೂರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಮಾತನಾಡಿರು, ಅಕ್ಷೇಪಾರ್ಹ ಟ್ವೀಟ್‌ಗಳನ್ನು ಮಾಡಿದ್ದಾರೆ ಎಂದು ದೇಶಾದ್ಯಂತ ದೊಡ್ಡ ಚರ್ಚೆಯ ವಿಷಯ. ಬಿಜೆಪಿ ಇಬ್ಬರ ವಿರುದ್ಧವೂ ಕ್ರಮ ಕೈಗೊಂಡಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗೆ ದೇಶ, ವಿದೇಶಗಳಲ್ಲಿ ಪ್ರತಿರೋಧ ಎದುರಾಗುತ್ತಿದೆ. ಕುವೈತ್, ಕತಾರ್, ಒಮನ್ ರಾಷ್ಟ್ರಗಳಲ್ಲಿ ಭಾರತದ ರಾಯಭಾರಿಗಳನ್ನು ಕರೆಯಿಸಿ ಪ್ರತಿಭಟನೆಯ ಟಿಪ್ಪಣಿಗಳನ್ನು ದಾಖಲಿಸಿವೆ.
ಅಲ್ಲದೆ ದೇಶದ ವಿವಿಧ ರಾಜಕಾರಣಿಗಳು ತಮ್ಮ ಹೇಳಿಕೆಗಳಲ್ಲಿ ಬಿಜೆಪಿ ನಾಯಕರ ನಡೆ ಖಂಡಿಸಿದ್ದು, ಬಿಎಸ್‌ಪಿ ಮುಖ್ಯಸ್ಥೆ ಮಯಾವತಿ ಆರೋಪಿಗಳನ್ನು ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾದ ಬಗ್ಗೆ ಪ್ರಮುಖ ಘಟನಾವಳಿಗಳು ಇಂತಿವೆ.

1. ಮೇ 27: ಟೈಮ್ಸ್ ನೌ ಟಿವಿ ಕಾರ್ಯಕ್ರಮದಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನುಪೂರ್ ಶರ್ಮಾ ಅವಹೇಳನಕಾರಿ ಹೇಳಿಕೆ
2. ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕಿಂಗ್‌ನಲ್ಲಿ ಮೊಹಮ್ಮದ್ ಜಬೀರ್ ಅವರು ವಿಡಿಯೋ ಟ್ವೀಟ್ ಮಾಡಿ ನಮಗೇಕೆ ದ್ವೇಷ ಕಾರುವ ರಾಕ್ಷಕರು. ಟಿವಿ ನಿರೂಪಕರೇ ತಮ್ಮ ಸ್ಟುಡಿಯೋಗಳಲ್ಲಿ ಧರ್ಮ ಹಾಗೂ ಸಮುದಾಯದ ಬಗ್ಗೆಗಿನ ಈ ಕೆಲಸವನ್ನು ಅವರೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
3. ಈ ಬಗ್ಗೆ ಟ್ವೀಟ್ ಮಾಡಿದ್ದ ನುಪೂರ್ ಶರ್ಮಾ ಮೊಹಮ್ಮದ್ ಜಬೀರ್ ಅವರ ಸುಳ್ಳು ನಿರೂಪಣೆಯಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
4. ಬಳಿಕ ನುಪೂರ್ ಶರ್ಮಾ ಹಾಗೂ ಆಆಲ್ಟ್ ನ್ಯೂಸ್‌ನ ಮೊಹಮ್ಮದ್ ಜಬೀರ್ ಮೇಲೆ ವಿವಿಧ ರಾಜ್ಯಗಳಲ್ಲಿಎಫ್‌ಐಆರ್ ದಾಖಲು. ( ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಈವರೆಗೂ ಬಂದಿರಲಿಲ್ಲ)

ಜೂನ್ 1: ಬಿಜೆಪಿ ದೆಹಲಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಪೋಸ್ಟ್. ( ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಈವರೆಗೂ ಬಂದಿರಲಿಲ್ಲ)
ಜೂನ್ 3: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವಹೇಳನ ಹಿನ್ನೆಲೆ ಕನ್ಪೂರದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಗಲಭೆ ಆರಂಭ. ಈ ಬಗ್ಗೆ ಸಹಾಯಕ ಪೊಲೀಸ್ ನಿರ್ದೇಶಕ ಪ್ರಶಾಂತ್ ಕುಮಾರ್ ಪತ್ರದಲ್ಲಿ " ಘಟನೆ ಸಂಬಂಧ ಪೊಲೀಸರು 3 ಪ್ರಕರಣಗಳನ್ನು 1500 ವ್ಯಕ್ತಿಗಳ ಮೇಲೆ ದಾಖಲಿಸಿದ್ದು, 36 ಜನರನ್ನು ಶುಕ್ರವಾರ ಹಾಗು ಶನಿವಾರ ಬಂಧಿಸಲಾಗಿದೆ. ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದರು. ಉತ್ತರ ಪ್ರದೇಶ ಪೊಲೀಸರು ನುಪೂರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದರು.
( ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಈವರೆಗೂ ಬಂದಿರಲಿಲ್ಲ)
ಜೂ. 4: ಒಮನ್ ಸಚಿವಾಲಯ ಅಹಮ್ಮದ್ ಬಿನ್ ಅಹ್ಮದ್ ಅಲ್ ಖಲಿ ಈ ಅವಹೇಳನಕಾರಿ ಹೇಳಿಕೆ ಬಗ್ಗೆ ಪೂರ್ವ ಮತ್ತು ಪಶ್ಚಿಮದಲ್ಲಿ ಪ್ರತಿ ಮುಸ್ಲಿಮರ ವಿರುದ್ಧ ಯುದ್ಧ ಎಂದು ಬಣ್ಣಿಸಿದರು.
ಗಲ್ಫ್‌ನ ಹಲವು ಮಾರುಕಟ್ಟೆಗಳಲ್ಲಿ ಭಾರತೀಯ ವಸ್ತುಗಳಿಗೆ ನಿರ್ಬಂಧ
(ಬಿಜೆಪಿ ಹೈಕಮಾಂಡ್‌ನಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಈವರೆಗೂ ಬಂದಿಲ್ಲ)
ಜೂ. 5 ಸಂವಿಧಾನದ ಅಡಿಯಲ್ಲಿ ಬಿಜೆಪಿ ಎಲ್ಲ ಧರ್ಮ ಹಾಗೂ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಹೇಳಿಕೆ ನೀಡಿ ನುಪೂರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ ಮಾಡಿತು.
ಕತಾರ್, ಕುವೈತ್ ಹಾಗೂ ಇರಾನ್‌ನಿಂದ ಭಾರತೀಯ ರಾಯಭಾರಿಗಳಿಗೆ ನೋಟಿಸ್ ಜಾರಿ,
ವಿವಾದ ಸಂಬಂಧ ಕತಾರ್ ಬಿಜೆಪಿ ನಡೆಯನ್ನು ಸ್ವಾಗತಿಸಿ ಭಾರತ ಸರ್ಕಾರದಿಂದ ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಆಗ್ರಹ.
ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಬಳಿಕ ವಿಶ್ವಪರಿಸರ ದಿನಾಚರಣೆಯಲ್ಲಿ ಭಾರತವು ಪರಿಸರಕ್ಕೆ ಹಲವು ಉತ್ತಮ ಕಾರ್ಯಗಳನ್ನು ಮಾಡಲು ಶಕ್ತವಾಗಿದೆ. ಅದರಲ್ಲಿ ಹುಲಿಗಳು ಚಿರತೆಗಳು ಆನೆಗಳು ಹಾಗೂ ಘೇಂಡಾಮೃಗಗಳ ಸಂತತಿ ಹೆಚ್ಚಿಸುವುದು ಸೇರಿದೆ ಎಂದರು.












Click it and Unblock the Notifications