ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛಂದಕ್ಕೆ ಪಶ್ಚಿಮ ದೇಶಗಳೇ ಬೇಕು; ರಷ್ಯನ್ನರ ಆಷಾಢಭೂತಿತನ

|
Google Oneindia Kannada News

ಅಮೆರಿಕ ಮತ್ತು ರಷ್ಯಾ ನಡುವಿನ ಶತ್ರುತ್ವ ಸುದೀರ್ಘ ಕಾಲದಿಂದ ಇದೆ. ಪಾಶ್ಚಿಮಾತ್ಯ ದೇಶಗಳೆಂದು ಕರೆಯಲಾಗುವ ಅಮೆರಿಕ ಮತ್ತು ಬಹುತೇಕ ಐರೋಪ್ಯ ರಾಷ್ಟ್ರಗಳೊಂದಿಗೆ ರಷ್ಯಾ ಶತ್ರುತ್ವ ಇದೆ. ಅಮೆರಿಕ ಮತ್ತು ರಷ್ಯಾ ನಡುವಿನ ಶೀತಲ ಸಮರ ದಶಕಗಳ ಕಾಲ ನಡೆದು 1991ರಲ್ಲಿ ಯುಎಸ್‌ಎಸ್‌ಆರ್ ಪತನದೊಂದಿಗೆ ಅಂತ್ಯವಾಗಿತ್ತು. ಅದಾದ ಬಳಿಕ ಆರ್ಥಿಕವಾಗಿ ಕುಸಿದಿದ್ದ ರಷ್ಯಾ ಈಗ ಹಂತಹಂತವಾಗಿ ಚೇತರಿಕೆ ಕಾಣುತ್ತಿದ್ದಂತೆಯೇ ಮತ್ತೊಮ್ಮೆ ಅಮೆರಿಕ-ರಷ್ಯಾ ನಡುವೆ ಶೀತಲ ಸಮರ ಹಬೆಯಾಡತೊಡಗಿದೆ.

ಇದೇ ವೇಳೆ, ರಷ್ಯಾದ ಸಿರಿವಂತರ ಮಕ್ಕಳು ಪಾಶ್ಚಿಮಾತ್ಯ ದೇಶಗಳಲ್ಲಿ ವಿಲಾಸೀ ಜೀವನ ನಡೆಸುತ್ತಿರುವುದು ಓಪನ್ ಸೀಕ್ರೆಟ್ ಆಗಿರುವ ವಿಚಾರ. ಈಗ ಇಂಥ ಮಕ್ಕಳಿಗೆ ಅಮೆರಿಕ ಮತ್ತು ಯೂರೋಪ್ ದೇಶಗಳು ನಿರ್ಬಂಧ ಹಾಕುವ ಟ್ರೆಂಡ್ ಶುರುವಾಗಿದೆ.

ಪಶ್ಚಿಮ ನಾಡಿನ ದೇಶಗಳಲ್ಲಿ ಬದುಕಲು ಹಾತೊರೆಯುವ ರಷ್ಯನ್ ಯುವ ಪೀಳಿಗೆಯ ತಂದೆ ತಾಯಿಯರು ಪಾಶ್ಚಿಮಾತ್ಯ ದೇಶಗಳನ್ನು ವಾಚಾಮಗೋಚರವಾಗಿ ಬಯ್ಯುತ್ತಾರೆ. ಆದರೆ, ಅವರ ಮಕ್ಕಳನ್ನು ವಿಲಾಸೀ ಜೀವನಕ್ಕಾಗಿ ಅಮೆರಿಕ ಮೊದಲಾದೆಡೆ ಬಿಡುತ್ತಾರೆ ಎಂದು ಲಾಸ್ ಏಂಜಲಿಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇನಿಯಲ್ ಟ್ರೇಸ್ಮನ್ ಅವರು ಹೇಳುತ್ತಾರೆ.

Spies Story: ಉಕ್ರೇನ್-ರಷ್ಯಾ ಯುದ್ಧ ತಡೆಯಲು ಪ್ರಯತ್ನಿಸಿದ ಗೂಢಚಾರಿಗಳ ರೋಚಕ ಕಥೆSpies Story: ಉಕ್ರೇನ್-ರಷ್ಯಾ ಯುದ್ಧ ತಡೆಯಲು ಪ್ರಯತ್ನಿಸಿದ ಗೂಢಚಾರಿಗಳ ರೋಚಕ ಕಥೆ

ಇದು ಆಷಾಢಭೂತಿತನದ ಪರಮಾವಧಿ, ವಿಚಿತ್ರವೆಂದರೆ ರಷ್ಯನ್ ರಾಜಕಾರಣಿಗಳಾಗಲೀ ಸಿರಿವಂತರಿಗಾಗಲೀ ತಾವು ಪಾಶ್ಚಿಮಾತ್ಯ ದೇಶಗಳನ್ನ ಕಟುವಾಗಿ ಟೀಕಿಸಿದರೂ ತಮ್ಮ ಮಕ್ಕಳನ್ನ ಅದೇ ದೇಶಗಳಿಗೆ ಕಳುಹಿಸುತ್ತಾರೆ. ಇದು ವೈರುದ್ಧತೆ ಎಂದು ಅವರಿಗೆ ಅನಿಸುವುದೇ ಇಲ್ಲ. ಅಮೆರಿಕ ಮತ್ತು ರಷ್ಯಾ ನಡುವೆ ಸ್ಪರ್ಧೆ ಇದ್ದ ಮಾತ್ರಕ್ಕೆ ತಮ್ಮ ಮಕ್ಕಳ ಶಿಕ್ಷಣ, ಜೀವನಕ್ಕೆ ಯಾಕೆ ಧಕ್ಕೆ ತರಬೇಕು ಎನ್ನುವ ಚಿಂತನೆ ಈ ಜನಗಳದ್ದು ಎಂದು ಕ್ಯಾಲಿಫೋರ್ನಿಯಾ ವಿವಿಯಲ್ಲಿ ರಷ್ಯನ್ ರಾಜಕೀಯ ವಿಚಾರದ ತಜ್ಞಬೋಧಕರೂ ಆಗಿರುವ ಡೇನಿಯಲ್ ಅಭಿಪ್ರಾಯಪಡುತ್ತಾರೆ.

 ಪುಟಿನ್ ಕೂಡ ಸಿಡಿಮಿಡಿ:

ಪುಟಿನ್ ಕೂಡ ಸಿಡಿಮಿಡಿ:

ಪಾಶ್ಚಿಮಾತ್ಯ ದೇಶಗಳಲ್ಲಿ ಓದುವ ಅಥವಾ ಜೀವನ ನಡೆಸುವ ರಷ್ಯನ್ ಜನರನ್ನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ತಾನು ಮಾಡಿದ ಒಂದು ಭಾಷಣದಲ್ಲಿ ಪುಟಿನ್ ಬಹಳ ಕಠೋರವಾಗಿ ಇಂಥ ರಷ್ಯನ್ನರನ್ನು ಝಾಡಿಸಿದ್ಧಾರೆ.

ಈ ಮಂದಿ ಮಾನಸಿಕವಾಗಿ ಪಶ್ಚಿಮ ದೇಶಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ಧಾರೆ. ರಷ್ಯಾದ ವಿನಾಶ ಮಾಡುವ ಪಾಶ್ಚಿಮಾತ್ಯರ ಗುರಿಗೆ ತಕ್ಕಂತೆ ಇವರು ಕೆಲಸ ಮಾಡುತ್ತಿದ್ದಾರೆ. ಯಾರು ನಿಜವಾದ ದೇಶಭಕ್ತರು, ಯಾರು ದೇಶದ್ರೋಹಿಗಳು ಎಂಬುದನ್ನು ರಷ್ಯಾದ ಜನರು ಕಂಡುಹಿಡಿಯಬಲ್ಲರು. ಬಾಯಿಗೆ ಆಕಸ್ಮಿಕವಾಗಿ ಬೀಳುವ ಹುಳುವನ್ನು ಹೊರಗೆ ಉಗಿಯುವ ರೀತಿಯಲ್ಲಿ ದೇಶದ್ರೋಹಿಗಳನ್ನು ಹೊರಹಾಕುತ್ತಾರೆ ಎಂದು ಪುಟಿನ್ ಸಿಡಿಗುಟ್ಟಿದ್ದಾರೆ.

 ನಿಮಗೆ ದೊಡ್ಡ ಮಿತ್ರ ಬೇಕಾದರೆ ನಮ್ಮ ಕೈದಿಗಳನ್ನು ಹಸ್ತಾಂತರಿಸಿ: ರಷ್ಯಾಕ್ಕೆ ಝೆಲೆನ್ಸ್ಕಿ ಷರತ್ತು ನಿಮಗೆ ದೊಡ್ಡ ಮಿತ್ರ ಬೇಕಾದರೆ ನಮ್ಮ ಕೈದಿಗಳನ್ನು ಹಸ್ತಾಂತರಿಸಿ: ರಷ್ಯಾಕ್ಕೆ ಝೆಲೆನ್ಸ್ಕಿ ಷರತ್ತು

 ಪುಟಿನ್‌ದ್ದೂ ಆಷಾಢಭೂತಿತನ:

ಪುಟಿನ್‌ದ್ದೂ ಆಷಾಢಭೂತಿತನ:

ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ವಾಸಿಸುವ ರಷ್ಯನ್ನರನ್ನು ದೇಶದ್ರೋಹಿಗಳೆಂದು ನಿಂದಿಸುವ ವ್ಲಾದಿಮಿರ್ ಪುಟಿನ್ ತಮ್ಮ ಪತ್ನಿ, ಮಕ್ಕಳನ್ನು ಪಶ್ಚಿಮ ದೇಶಗಳಿಗೆ ಕಳುಹಿಸಿ ವಿಲಾಸೀ ಜೀವನಕ್ಕೆ ಎಡೆ ಮಾಡಿಕೊಟ್ಟಿರುವುದು ವಿಪರ್ಯಾಸ. ಇವರ ಸಂಗಾತಿಯೊಬ್ಬಳಿಗೆ ಫ್ರಾನ್ಸ್ ದೇಶದ ಮೊನಾಕೋ ನಗರದಲ್ಲಿ ಕೋಟ್ಯಂತರ ಮೌಲ್ಯದ ಭವ್ಯ ಅಪಾರ್ಟ್ಮೆಂಟ್ ಇದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿದೆ.

ಪುಟಿನ್ ಅವರ ದೊಡ್ಡ ಮಗಳು ಮಾರಿಯಾ ಅವರು ನೆದರ್ ಲ್ಯಾಂಡ್ಸ್ ದೇಶದ ಉದ್ಯಮಿಯನ್ನು ಮದುವೆಯಾಗಿ ಅಲ್ಲಿಯೇ ನೆಲಸಿದ್ದಾರೆ. ಇನ್ನೊಬ್ಬ ಮಗಳು ಕ್ಯಾಟರಿನಾಳಿಗೆ ಫ್ರಾನ್ಸ್ ದೇಶದಲ್ಲಿ ಎಂಟು ಬೆಡ್ ರೂಮ್ ಇರುವ ಬಂಗಲೆ ಕೊಡಿಸಿದ್ಧಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಬೇರೆ ಬೇರೆ ವಿವಾಹಗಳಿಗೆ ಇನ್ನೂ ಹೆಚ್ಚು ಮಕ್ಕಳಿದ್ಧಾರೆ. ಬಹುತೇಕ ಅವರಲ್ಲರನ್ನೂ ಪಾಶ್ಚಿಮಾತ್ಯ ದೇಶಗಳಲ್ಲಿ ನೆಲಸುವಂತೆ ಮಾಡಿದ್ದಾರೆ ಎನ್ನಲಾಗಿದೆ.ಕಳೆದ ವಾರವಷ್ಟೇ ಬ್ರಿಟನ್ ಮತ್ತು ಅಮೆರಿಕ ದೇಶಗಳು ವ್ಲಾದಿಮಿರ್ ಪುಟಿನ್ ಅವರ ಮಕ್ಕಳನ್ನು ನಿಷೇಧಿಸುವ ನಿರ್ಧಾರ ಮಾಡಿವೆ. ಇದು ರಷ್ಯಾ ಮೇಲೆ ಹೇರಿರುವ ಒಟ್ಟಾರೆ ನಿಷೇಧದ ಒಂದು ಭಾಗವಾದ ಕ್ರಮವಾಗಿದೆ.

ಪುಟಿನ್ ಆಪ್ತ ಪೆಸ್ಕೋವ್‌ನ ಕುಟುಂಬದ ಕರ್ಮಕಾಂಡ

ಪುಟಿನ್ ಆಪ್ತ ಪೆಸ್ಕೋವ್‌ನ ಕುಟುಂಬದ ಕರ್ಮಕಾಂಡ

ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮುಖ್ಯ ವಕ್ತಾರನಾಗಿರುವ ಡಿಮಿಟ್ರಿ ಪೆಸ್ಕೋವ್ ಅವರು ಪಾಶ್ಚಿಮಾತ್ಯ ದೇಶಗಳನ್ನ ಹಿಗ್ಗಾಮುಗ್ಗ ಝಾಡಿಸುವ ಪ್ರಮುಖ ರಷ್ಯನ್ನರಲ್ಲಿ ಒಬ್ಬರು. ಆದರೆ, ಇವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಪಶ್ಚಿಮ ದೇಶಗಳಲ್ಲಿ ವಿಲಾಸೀ ಜೀವನ ನಡೆಸಿದ್ದರು. ಒಬ್ಬ ಸರಕಾರಿ ಅಧಿಕಾರಿಗೆ ಸಿಗುವ ವರಮಾನದಲ್ಲಿ ಇಷ್ಟೆಲ್ಲಾ ಭೋಗಜೀವನ ಸಾಧ್ಯವಿಲ್ಲ. ಇದು ಪುಟಿನ್ ಪ್ರಭಾವದಿಂದ ಪೆಸ್ಕೋವ್ ಗಳಿಸಿದ ಅಕ್ರಮ ಹಣದ ಕರಾಮತ್ತು ಎಂದು ಭಾವಿಸಲಾಗಿದೆ. ಇದೇ ಕಾರಣಕ್ಕೆ ಅಮೆರಿಕ ಸರಕಾರವು ಪೆಸ್ಕೋವ್, ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ನಿಷೇಧ ಹೇರಿದೆ.

 ಕಳ್ಳರ ಸರಕಾರ:

ಕಳ್ಳರ ಸರಕಾರ:

ಅಮೆರಿಕದ ಜಾರ್ಜ್‌ಟೌನ್ ಯೂನಿವರ್ಸಿಟಿಯ ಪ್ರೊಫೆಸರ್ ಜೋದಿ ವಿಟೋರಿ ಅವರು ಪುಟಿನ್ ನೇತೃತ್ವದ ರಷ್ಯಾ ಸರಕಾರವನ್ನು ಕಳ್ಳರ ಆಡಳಿತ ಎಂದು ಬಣ್ಣಿಸಿದ್ದಾರೆ. ಅದಕ್ಕೆ ಕ್ಲೆಪ್ಟೋಕ್ರಸಿ ಎಂದು ಕರೆದು ಜರೆದಿರುವ ಅವರು, ರಷ್ಯಾ ಸರಕಾರ ತನ್ನ ನೀತಿ ಮತ್ತು ನಿರ್ಧಾರಗಳನ್ನ ಕಳ್ಳರ ಪರವಾಗಿ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ರಷ್ಯಾದ ಕಳ್ಳರು ಸಂಪಾದಿಸುವ ಆಸ್ತಿಯನ್ನ ಪಶ್ಚಿಮ ದೇಶಗಳಲ್ಲಿ ವ್ಯಯಿಸುತ್ತಾರೆ. ವಿಶ್ವದ ಅತ್ಯಂತ ಸಿರಿವಂತ ದೇಶಗಳು ಪಶ್ಚಿಮದಲ್ಲೇ ಇರುವುದರಿಂದ ಈ ಕಳ್ಳರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಾಸಿಸಲು ಇಚ್ಛಿಸುತ್ತಾರೆ. ಈ ಪಶ್ಚಿಮ ದೇಶಗಳಲ್ಲಿ ಕಾನೂನು ವ್ಯವಸ್ಥೆ ಚೆನ್ನಾಗಿರುವುದರಿಂದ ಈ ರಷ್ಯನ್ ಕಳ್ಳರು ಆರಾಮವಾಗಿ ಬದುಕಬಹುದು. ಹೀಗಾಗಿ, ಎಲ್ಲಾ ಹಣವನ್ನು ಹೊತ್ತು ಅಲ್ಲಿಗೆ ಬರುತ್ತಾರೆ ಎಂದು ಈ ಪ್ರೊಫೆಸರ್ ಹೇಳಿದ್ದಾರೆ.

ಪೆಸ್ಕೋವ್ ಮಗಳು ಸೋಷಿಯಲ್ ಮೀಡಿಯಾ ಸೆನ್ಸೇಷನ್:

ಪೆಸ್ಕೋವ್ ಮಗಳು ಸೋಷಿಯಲ್ ಮೀಡಿಯಾ ಸೆನ್ಸೇಷನ್:

ಡಿಮಿಟ್ರಿ ಪೆಸ್ಕೋವ್ ಅವರ ಎರಡನೇ ಹೆಂಡತಿಯ 24 ವರ್ಷದ ಮಗಳು ಎಲಿಜವೆಟಾ ಪೆಸ್ಕೋವಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸುದ್ದಿಯಾಗಿದ್ದರು. ಈಕೆ ಹಾಕುವ ಪೋಸ್ಟ್‌ಗಳು ಟ್ಯಾಬ್ಲಾಯ್ಡ್ ಪತ್ರಿಕೆಗಳಿಗೆ ಒಳ್ಳೆಯ ಸರಕಾಗಿರುತ್ತವೆ. ರಷ್ಯಾದ ಶಿಕ್ಷಣ ವ್ಯವಸ್ಥೆ ನರಕಸದೃಶ ಎಂದು ಬಣ್ಣಿಸುವ ಈಕೆ ತನಗೆ ಐರೋಪ್ಯ ವಾತಾವರಣವೇ ಉತ್ತಮ ಎಂದು ಹೇಳಿಕೊಂಡಿದ್ದರು.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಈಗ "ನೋ ಟು ವಾರ್" ಎಂದು ಪೋಸ್ಟ್ ಹಾಕಿದ್ದರು. ಉಕ್ರೇನ್ ಯುದ್ಧವನ್ನು ವಿರೋಧಿಸುವ ಕೆಲ ರಷ್ಯನ್ನರಿಗೆ ಪೆಸ್ಕೋವಾಳದ ನೋ ಟು ವಾರ್ ಎಂಬ ಸ್ಲೋಗನ್ ಒಂದು ಅಸ್ತ್ರವಾಗಿತ್ತು.

ರಷ್ಯನ್ ರಾಜಕಾರಣಿಗಳ ಮಕ್ಕಳ ಮೇಲೆ ಅಮೆರಿಕ, ಯೂರೋಪ್ ದೇಶಗಳಲ್ಲಿ ನಿರ್ಬಂಧ ಹೇರಿರುವ ಕ್ರಮದ ಬಗ್ಗೆ ಪೆಸ್ಕೋವಾ ಬಹಳ ಬೇಸರ ಪಡುತ್ತಾರೆ. ತಾನು ರಷ್ಯನ್ ಆಗಿರುವುದಕ್ಕೆ ಹೆಮ್ಮೆ ಇದೆ. ಪ್ರಾಯಕ್ಕೆ ಬಂದ ಮಕ್ಕಳನ್ನು ಅದರಲ್ಲೂ ಒಬ್ಬ ಹುಡುಗಿಯನ್ನ ಯಾವುದೇ ಸರಿಯಾದ ವಿಚಾರಣೆ ಇಲ್ಲದೇ ನಿಷೇಧಿಸುವುದು ಸೇಡಿನ ಕ್ರಮ ಅಷ್ಟೇ ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಈಕೆ ಬರೆದುಕೊಂಡಿದ್ದಾರೆ.

ಡಿಮಿಟ್ರಿ ಪೆಸ್ಕೋವ್ ಅವರ ವಿಸ್ತೃತ ಕುಟುಂಬದ ಇತರ ಸದಸ್ಯರೂ ಪಾಶ್ಚಿಮಾತ್ಯ ದೇಶಗಳಲ್ಲಿ ವಿಲಾಸೀ ಜೀವನ ನಡೆಸುತ್ತಿದ್ದಾರೆ. ರಷ್ಯಾದಲ್ಲಿ 2 ಕೋಟಿಗೂ ಅಧಿಕ ಜನರು ಬಡತನದಿಂದ ಬೇಯುತ್ತಿದ್ದರೂ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ಮಕ್ಕಳು ಸಿರಿವಂತ ದೇಶಗಳಲ್ಲಿ ಭೋಗ ಜೀವನ ನಡೆಸುತ್ತಿದ್ದಾರೆ ಎಂಬ ಟೀಕೆ ವ್ಯಾಪಕವಾಗಿ ಕೇಳಿಬರುತ್ತಿದೆ.

Recommended Video

ಮೇಕ್ ಇನ್ ಇಂಡಿಯಾ ! ಮೋದಿ ಕನಸಿಗೆ ಸಾಥ್ ಕೊಟ್ಟ HAL! | Oneindia Kannada
 ರಷ್ಯಾ ವಿದೇಶಾಂಗ ಸಚಿವರ ಕುಟುಂಬದ್ದೂ ಅದೇ ಕಥೆ:

ರಷ್ಯಾ ವಿದೇಶಾಂಗ ಸಚಿವರ ಕುಟುಂಬದ್ದೂ ಅದೇ ಕಥೆ:

ಪುಟಿನ್ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿರುವ ಸೆರ್ಗೇ ಲಾವ್ರೋವ್ ಅವರು ಕೆಲ ವರ್ಷಗಳ ಹಿಂದೆ ಪಾಶ್ಚಿಮಾತ್ಯ ಶಕ್ತಿಗೆ ಪರ್ಯಾಯ ವಿಶ್ವಶಕ್ತಿ ನಿರ್ಮಾಣ ಮಾಡಲು ಕರೆ ನೀಡಿದ್ದರು. ಇಂಥ ರಾಜಕಾರಣಿಯ ಕುಟುಂಬ ಸದಸ್ಯರು ಅದೇ ಪಾಶ್ಚಿಮಾತ್ಯ ದೇಶಗಳಲ್ಲಿ ಓದುತ್ತಿದ್ದಾರೆ, ಮಜಾ ಮಾಡುತ್ತಿದ್ಧಾರೆ. ಇವರ ಮಗಳು ಲಂಡನ್ ಮತ್ತು ನ್ಯೂಯಾರ್ಕ್‌ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ್ದಾರೆ. ಲವ್ರೋವ್ ಅವರ ಪ್ರೇಯಸಿ ಹಾಗು ಇನ್ನೂ ಇಬ್ಬರು ಮಕ್ಕಳು ಆಸ್ಟ್ರೇಲಿಯಾ, ಅಮೆರಿಕ ಮೊದಲಾದ ಕಡೆ ಬದುಕು ಕಟ್ಟಿಕೊಂಡಿದ್ದಾರೆನ್ನಲಾಗಿದೆ.

ಮಾಹಿತಿ ಕೃಪೆ: ಸಿಎನ್ಎನ್

English summary
Russian politicans and officers hate western countries, but their family members lead luxuruious lives in these very countries. That is the hypocracy says westerners. Many countries have sanctioned against these Russian people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X