ನಿವೃತ್ತ ಐಎಎಸ್ ಅಧಿಕಾರಿ ಡಾ ಸಿ ಸೋಮಶೇಖರ್ ಆತ್ಮಕತನ 'ನೀನೊಲಿದ ಬದುಕು' ಪುಸ್ತಕ ಬಿಡುಗಡೆ
ಬೆಂಗಳೂರು, ನವೆಂಬರ್ 04: ಕರ್ನಾಟಕಕ್ಕೆ ಡಾ: ಸಿ.ಸೋಮಶೇಖರ್ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಸದಾಕಾಲ ಕ್ರೀಯಾಶೀಲರಾಗಿ ಕೊಡುಗೆ ನೀಡುತ್ತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ನಿವೃತ್ತ ಐಎಎಸ್ ಅಧಿಕಾರಿ ಡಾ: ಸಿ.ಸೋಮಶೇಖರ್ ಅವರ ಆತ್ಮಕಥನ 'ನೀನೊಲಿದ ಬದುಕು' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಅಧಿಕಾರಿಯಾಗಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅಧಿಕಾರ ಇಲ್ಲದಾಗಲೂ ಅಷ್ಟೇ ನಿರಂತರವಾಗಿ ಮಾಡುತ್ತಿದ್ದಾರೆ. ಅವರು ಗಡಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಗಡಿ, ಭಾಷೆ,ಆಧ್ಯಾತ್ಮ, ವಚನ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ, ಅನುಭವ ಇದೆ ಎಂದರು.

ಬದುಕನ್ನು ಒಲಿಸಿಕೊಂಡ ಧೀಮಂತ:
ಅವರು ಬರೆದಿರುವ ಆದರೆ, ಮುದ್ರಿಸದೇ ಇರುವ ಬರಹ ಬಹಳಷ್ಟಿದೆ. ಸೋಮಶೇಖರ್ ಅವರದ್ದು ವರ್ಣ ರಂಜಿತ ಬದುಕು. ಎಲ್ಲಾ ರಂಗದಲಿಯೂ ಬಹಳ ಆಸಕ್ತಿವುಳ್ಳವರು.
ಒಲವನ್ನು ಬದುಕಿನಲ್ಲಿ ಗಳಿಸಿಕೊಳ್ಳಬೇಕಾಗುತ್ತದೆ. ತಾಯಿ ಮಗುವಿನ ಪ್ರೀತಿಯಿಂದ ಹಿಡಿದು ಎಲ್ಲಾ ಸಂಬಂಧ ಗಳಲ್ಲಿ ಒಲವು ಪಡೆದುಕೊಳ್ಳುವುದು ಕಷ್ಟದ ಕೆಲಸ. ನಾನು ಅನ್ನುವುದು ಬಿಟ್ಟಾಗ ಒಲವು ಸಿಗುತ್ತದೆ.ಸೋಮಶೇಖರ್ ಅವರ ಬದುಕಿನಲ್ಲಿ ನಾನು ಎನ್ನುವುದು ಅತ್ಯಂತ ವಿರಳವಾಗಿ ಬಂದಿದೆ. ಯಾವುದೇ ಸ್ಥಾನಮಾನ ಸಿಕ್ಕರೂ ಜನರ ಸೇವೆ ಮಾಡಿದ್ದಾರೆ. ಅವರು ಆಧ್ಯಾತ್ಮವನ್ನು ಬಲ್ಲವರು, ಸಂಪೂರ್ಣವಾಗಿಬದುಕನ್ನು ಒಲಿಸಿಕೊಂಡು, ಗಳಿಸಿಕೊಂಡು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ ಎಂದರು.
ತಾಳ್ಮೆ ಇರಬೇಕು
ತಾಳ್ಮೆ ಇದ್ದವರಿಗೆ ಬದುಕು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಂದೂ ಕೂಡ ಮನುಷ್ಯ ನಿರಾಶರಾಗಬಾರದು. ಅವರು ಅಧಿಕಾರದಲ್ಲಿದ್ದಾಗ ಎಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರೋ ಅಷ್ಟೇ ಕ್ರಿಯಾಶೀಲರಾಗಿ ಅಧಿಕಾರ ಇಲ್ಲದಾಗಲೂ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಜನಸಮೂಹವನ್ನು ಗೆದ್ದಾಗ ಇದು ಬರುತ್ತದೆ ಎಂದರು.

ಬಸವ ಪ್ರಶಸ್ತಿ ಪ್ರಾರಂಭಿಸಿದವರು
ಬಸವ ಪ್ರಶಸ್ತಿ ಪ್ರಾರಂಭಿಸಿ, ಅಧಿಕಾರಿಗಳಿಗೆ, ಸಾಹಿತ್ಯ ವರ್ಗಕ್ಕೆ, ಬೇಕಾದವರಾಗಿದ್ದಾರೆ. ಸಮಾಜಕ್ಕೆ ನಗುವನ್ನು ಹರಡುವ ಸ್ವಭಾವದವರು. ಅವರು ಜೀವನದಲ್ಲಿ ನೋವು ಅನುಭವಿಸಿದ್ದಾರೆ ಅದನ್ನು ಮನದಾಳದಲ್ಲಿ ಇಟ್ಟುಕೊಂಡು ನಮಗೆಲ್ಲಾ ಸಂತೋಷ ನೀಡಿದ್ದಾರೆ. ಅವರ ಆಸೆಗಳನ್ನು ಈಡೇರಿಸುವ ದಿನಗಳು ದೂರ ಇಲ್ಲ. ಬಹಳಷ್ಟು ಆತ್ಮಕಥನಗಳಲ್ಲಿ ಹೇಳಿದ್ದಕ್ಕಿಂತ ಮುಚ್ಚಿಡುವುದೇ ಹೆಚ್ಚಿರುತ್ತದೆ. ಕನ್ನಡ ನಾಡಿಗೆ ಭಿನ್ನವಾದ, ಅಪರೂಪದ ಸಾಹಿತಿ, ಅಧಿಕಾರಿಯಾಗಿದ್ದಾರೆ. ಸೋಮಶೇಖರ್ ತಮ್ಮ ಬದುಕಿನ ಮೌಲ್ಯ ನಿರಂತರ ಹರಡಿ. ಇದೇ ಬದುಕಿನ ಬುತ್ತಿ ಎಂದರು. ಗಡಿ ಅಭಿವೃದ್ಧಿಯನ್ನು ಬಹಳಷ್ಟು ಗಟ್ಟಿಯಾಗಿ ಮಾಡಲಿ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಸುನಿಲ್ ಕುಮಾರ್, ವಿ. ಸೋಮಣ್ಣ, ನಿ. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉಪಸ್ಥಿತರಿದ್ದರು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications