ಮೆಟ್ರೋದಲ್ಲಿ ಕೂಸು ಹೊತ್ತ ಮಹಿಳೆಗೆ ಸೀಟು ಕೊಡದ ಪ್ರಯಾಣಿಕರು, ನೆಟ್ಟಿಗರ ಆಕ್ರೋಶ
ಬೆಂಗಳೂರು, ಜೂನ್ 22: ನಾವು ರೈಲಿನಲ್ಲಾಗಲೀ, ಬಸ್ಸಿನಲ್ಲಾಗಲೀ ಪ್ರಯಾಣಿಸುವಾಗ ಇಂಥ ಘಟನೆಗಳನ್ನು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ವಯಸ್ಸಾದವರು, ಗರ್ಭಿಣಿಯರು, ಅಂಗವೈಕಲ್ಯರಾದವರು ಸೀಟು ಸಿಗದೇ ನಿಂತುಕೊಂಡೇ ಪ್ರಯಾಣಿಸುತ್ತಿದ್ದರೆ, ಚಿಕ್ಕ ವಯಸ್ಸಿನ ಗಟ್ಟಿಮುಟ್ಟಾಗಿರುವ ಜನರು ಆರಾಮವಾಗಿ ನಿಶ್ಚಿಂತೆಯಿಂದ ಸೀಟು ಆಕ್ರಮಿಸಿಕೊಂಡು ಪ್ರಯಾಣಿಸುತ್ತಾರೆ. ಇಂಥದ್ದೇ ಒಂದು ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿರುವ ದೃಶ್ಯದಲ್ಲಿ ಮೆಟ್ರೋವೊಂದರಲ್ಲಿ ಎಳೆಯ ಮಗು ಹೊತ್ತು ಮಹಿಳೆಯೊಬ್ಬಳು ಕೆಳಗೆ ಕೂತುಕೊಂಡಿರುವುದು ಕಾಣುತ್ತದೆ. ಯಾವ ಪ್ರಯಾಣಿಕರೂ ಈಕೆಗೆ ಸೀಟು ಬಿಟ್ಟುಕೊಡುವ ಅಂತಃಕರಣ ತೋರುವುದಿಲ್ಲ. ಈ ಮಹಿಳೆ ಬಳಿಯಲ್ಲೇ ಸಿಟು ಹಿಡಿದು ಕೂತಿದ್ದರೆ ಇತರೆ ಮಹಿಳೆಯರಿಗೆ ಈಕೆಗೆ ಸೀಟು ಕೊಡುವ ಹೃದಯ ಬರಲಿಲ್ಲ. ಈ ಘಟನೆಯ ಯಾವ ನಗರದ ಮೆಟ್ರೋದಲ್ಲಿ ನಡೆದಿದೆ ಎಂಬುದು ಗೊತ್ತಾಗಿಲ್ಲ.
आपकी डिग्री सिर्फ़ एक काग़ज़ का टुकड़ा है, अगर वो आपके व्यवहार में ना दिखे. pic.twitter.com/ZbVFn4EeAX
— Awanish Sharan (@AwanishSharan) June 18, 2022
ಅವನೀಶ್ ಶರಣ್ ಎಂಬುವವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ಧಾರೆ. "ನೀವು ಓದಿದ ಪದವಿ ಕೇವಲ ಕಾಗದದ ತುಂಡು ಮಾತ್ರ. ನೀವು ಏನು ಓದಿದಿರಿ ಎಂಬುದು ನಿಮ್ಮ ವರ್ತನೆಯಲ್ಲೇ ಗೊತ್ತಾಗುತ್ತದೆ" ಎಂದು ಅವರು ಬರೆದಿದ್ದಾರೆ.

ಜೂನ್ 18ರಂದು ಪೋಸ್ಟ್ ಆದ ಈ ವಿಡಿಯೋವನ್ನು ಎಂಟು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ವಿಡಿಯೋಗೆ ಆಕ್ರೋಶಭರಿತ ಪ್ರತಿಕ್ರಿಯೆಗಳು ಬಂದಿವೆ.
ಒಬ್ಬ ಮಹಿಳೆಯೂ ಸೀಟು ಕೊಡಲಿಲ್ಲವಲ್ಲ ಎಂದು ಒಬ್ಬರು ಅಚ್ಚರಿ ಪಟ್ಟರೆ, ಮಾನವೀಯತೆಯೇ ಕೊಚ್ಚಿಕೊಂಡು ಹೋಗಿದೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ಎಲ್ಲಿ ಹೋಗಿ ತಲುಪುತ್ತಿದ್ದೇವೋ ಗೊತ್ತಿಲ್ಲ, ನಮ್ಮ ಸೋ ಕಾಲ್ಡ್ ಸುಶಿಕ್ಷಿತ ಜನರಿಗೆ ನಾಚಿಕೆಯಾಗಬೇಕು ಎಂದು ಇನ್ನೊಬ್ಬರು ಸಿಡಿಗುಟ್ಟಿದ್ದಾರೆ.
Surprising is none of the ladies offered her the seat .
— herefortruth (@herefortruth3) June 18, 2022
Humanity washed ashore 💔💔
— Vishal Bhadauriya (@Vishl1212) June 18, 2022
Where we are heading towards, shame on so called educated people.
— ਅਰੋੜਾ ਧੀਰਜ 🇮🇳 (@drjmiglani) June 18, 2022
I see humans but no humanity.
— Ranjana (@Ranjana03958892) June 18, 2022
ನಾನು ಮನುಷ್ಯರನ್ನು ನೋಡುತ್ತಿದ್ದೇನೆಯೇ ವಿನಃ ಮಾನವೀಯತೆಯೇ ಕಾಣುತ್ತಿಲ್ಲ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಡೆಲ್ಲಿ ಮೆಟ್ರೋದಲ್ಲಿ ಹಿಂದಿನ ಒಂದು ಘಟನೆ:
ಬೆಂಗಳೂರಿನ ಬಿಎಂಟಿಸಿ ಬಸ್ಸು ಮತ್ತು ಮೆಟ್ರೋದಲ್ಲೂ ಇಂಥ ಹಲವು ದೃಶ್ಯಗಳನ್ನು ಕಾಣಬಹುದು. ಡೆಲ್ಲಿ ಮೆಟ್ರೋದಲ್ಲಿ 2017ರಲ್ಲಿ ನಡೆದ ಒಂದು ಘಟನೆ ಇದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಡೆಲ್ಲಿ ಮೆಟ್ರೋದಲ್ಲಿ ವಯಸ್ಸಾದ ಒಬ್ಬ ಮುಸ್ಲಿಮ್ ವ್ಯಕ್ತಿ ತನಗೆ ಕೂರಲು ಸೀಟು ಕೊಡಿ ಎಂದು ಯುವಕರಿಗೆ ಮನವಿ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಆ ಯುವಕರು ಆ ಮುಸ್ಲಿಮ್ ವ್ಯಕ್ತಿಯನ್ನು ನಿಂದಿಸುತ್ತಾರೆ. ಆತ ಮುಸ್ಲಿಂ ಎಂದು ಗೊತ್ತಾಗಿ, ಸೀಟು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ತುಚ್ಛವಾಗು ಮಾತನಾಡಿ ಅವಮಾನಿಸುತ್ತಾರೆ.
ಆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಟ್ರೇಡ್ ಯೂನಿಯನ್‌ವೊಂದರ ಅಧಿಕಾರಿ ಕಾಮ್ರೇಡ್ ಸಂತೋಷ್ ರಾಯ್ ಎಂಬುವರು ಆ ವೃದ್ಧನ ನೆರವಿಗೆ ಧಾವಿಸುತ್ತಾರೆ. ಪಂಡರ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಕೆಲ ದಿನಗಳ ಬಳಿಕ ರಾಯ್ ಅವರು ಮತ್ತೆ ಆ ಪೊಲೀಸ್ ಠಾಣೆಗೆ ಬಂದು ಪ್ರಕರಣದ ಬಗ್ಗೆ ವಿಚಾರಿಸಿದಾಗ, ಆ ವೃದ್ಧರು ತಮ್ಮ ದೂರನ್ನು ಹಿಂಪಡೆಯಲು ನಿರ್ಧರಿಸಿದ್ದು ತಿಳಿದುಬಂದಿತು.
ಆ ಘಟನೆಯನ್ನು ಪ್ರಗತಿಪರ ಮಹಿಳಾ ಸಂಘಟನೆಯೊಂದರ ಕಾರ್ಯದರ್ಶಿ ಕವಿತಾ ಕೃಷ್ಣನ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದೂ ಕೂಡ ವೈರಲ್ ಆಗಿತ್ತು.
(ಒನ್ಇಂಡಿಯಾ ಸುದ್ದಿ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications