ಶಾಸಕರ ಮೌಲ್ಯ ಮಾಪನ; ಬಸವರಾಜ ಬೊಮ್ಮಾಯಿ ಕಾರ್ಯ ವೈಖರಿಗೆ ಅಂಕ ನೀಡಿ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಶಾಸಕರು. 2018ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕ್ಷೇತ್ರದ ಜನರು ನಮ್ಮ ಶಾಸಕರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೊಂಡಿರಲಿಲ್ಲ. ಆದರೆ ರಾಜಕೀಯ ಪರಿಸ್ಥಿತಿ ಎಲ್ಲವನ್ನೂ ಬದಲಾವಣೆ ಮಾಡಿತು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿ ಇದೆ. ನಿಮ್ಮ ಅಮೂಲ್ಯ ಮತವನ್ನು ನೀಡಿ ಆಯ್ಕೆ ಮಾಡಿದ ಶಾಸಕರು ನಾಲ್ಕೂವರೆ ವರ್ಷ ಮಾಡಿದ್ದೇನು? ಎಂದು ಜನರು ಈಗ ತೀರ್ಮಾನ ಮಾಡುವ ಸಮಯ.

ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ಆರಂಭಿಸಿದೆ. ಇಲ್ಲಿ ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಅಂಕ ನೀಡಬಹುದು.

Rate Your MLA Rate your Constituency MLA Performance in Oneindia Kannada Website

ಒಟ್ಟು 9 ಅಂಶಗಳ ಆಧಾರದ ಮೇಲೆ ನೀವು ಶಾಸಕರ ಮೌಲ್ಯ ಮಾಪನ ಮಾಡಬಹುದು. ಇದರಲ್ಲಿ ನೀವು ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಈ ಪುಟವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇತರರು ಸಹ ಮತ ನೀಡುವಂತೆ ಮನವಿ ಮಾಡಬಹುದಾಗಿದೆ.

ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ನೀವು ವೋಟ್ ಮಾಡಬೇಕು.

ಈ ಪುಟದಲ್ಲಿ ನೀವು ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿಗೆ ವೋಟ್ ಮಾಡಬಹುದಾಗಿದೆ. ಪುಟದ ಕೊನೆಯಲ್ಲಿ ನೀವು ಎಷ್ಟು ಅಂಕ ನೀಡಿದ್ದೀರಿ? ಎಂಬ ಸರಾಸರಿ ತೋರಿಸುತ್ತದೆ.

ಈ ಪುಟದಲ್ಲಿ ಶಿಗ್ಗಾವಿ ಕ್ಷೇತ್ರದ ವಿವರ, 2018ರ ಚುನಾವಣೆಯಲ್ಲಿ ಅಭ್ಯರ್ಥಿಗಳ ವಿವರ, ಪಡೆದ ಮತಗಳು ಸೇರಿದಂತೆ ಇತರ ವಿವರಗಳಿವೆ. ಚುನಾವಣೆ ಹತ್ತಿರವಾಗುತ್ತಿರುವಾಗ ನೀವು ಶಾಸಕರ ಮೌಲ್ಯ ಮಾಪನ ಮಾಡಿ, ಶಾಸಕರಿಗೆ ಮತ ನೀಡಿ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಶಿಗ್ಗಾವಿ ಕ್ಷೇತ್ರಕ್ಕೆ ಅನುದಾನ ಹರಿದು ಬರುತ್ತಿದೆಯೇ?, ಅಭಿವೃದ್ಧಿಯ ಕಾರ್ಯಗಳಿಗೆ ವೇಗ ಸಿಕ್ಕಿದಿಯೇ? ಮುಂತಾದ ಅಂಶಗಳನ್ನು ಪರಿಗಣಿಸಿ ವೋಟ್ ಮಾಡಿ.

ಶಿಗ್ಗಾವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ 2018ರ ಚುನಾವಣೆಯಲ್ಲಿ 83,868 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಯ್ಯದ್ ಅಜ್ಜಂಪೀರ್ ಖಾದ್ರಿ ಸೋಲು ಕಂಡಿದ್ದರು.

Vote ಮಾಡಲು ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+