ಅಪರೂಪದ ನೀಲಿ ಸೀಗಡಿ ಪತ್ತೆ: ವಿಡಿಯೋ ನೋಡಿ ಬೆರಗಾದ ಜನ
ಈ ಜಗತ್ತಿನಲ್ಲಿ ಅನೇಕ ಅಪರೂಪದ ಜೀವಿಗಳಿವೆ. ಅವು ಸಾಮಾನ್ಯ ಜನರ ಕಣ್ಣಿಗೆ ಹೆಚ್ಚು ಕಾಣಿಸುವುದಿಲ್ಲವಾದರೂ ಕೆಲವೊಮ್ಮೆ ಕಂಡಾಗ ಆಶ್ಚರ್ಯವನ್ನುಂಟು ಮಾಡುತ್ತವೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ಪ್ರಾಣಿಯೊಂದು ಚರ್ಚೆಯಾಗುತ್ತಿದೆ. ಇದನ್ನು ನೋಡಿ ಎಲ್ಲರೂ ಬೇರೆ ಗ್ರಹದಿಂದ ಬಂದಿರುವ ಪ್ರಾಣಿ ಎಂದು ಕೇಳುತ್ತಿದ್ದಾರೆ.
From Maine to the British Isles, only a few fishermen have ever hauled in a blue lobster, a rare crustacean with an iridescent sapphire hue.
— Vala Afshar (@ValaAfshar) January 4, 2023
How rare is a blue lobster?
The chances of finding a blue lobster is one in 2 million. pic.twitter.com/VAdS7GfQsk
ವೈರಲ್ ಆಗಿರುವ ವಿಡಿಯೋದಲ್ಲಿ ನೀಲಿ ಬಣ್ಣದ ಪ್ರಾಣಿಯೊಂದು ನೆಲದ ಮೇಲೆ ಬಿದ್ದಿರುವುದನ್ನು ಕಾಣಬಹುದು. ಅದರ ಮೇಲೆ ಬಿಳಿ ಬಣ್ಣದ ಸಣ್ಣ ಮಚ್ಚೆಗಳಿವೆ. ಆರಂಭದಲ್ಲಿ ಇದು ಆಟಿಕೆ ಎಂದು ತೋರುತ್ತದೆ. ಆದರೆ ಅಲ್ಲಿ ನಿಂತಿದ್ದ ವ್ಯಕ್ತಿ ಅದನ್ನು ಎತ್ತಿ ತೋರಿಸಿದಾಗ ನೋಡುಗರಿಗೆ ಬೆರಗಾಗಿದೆ. ಆ ಜೀವಿ ಜೀವಂತ ಪ್ರಾಣಿಯಾಗಿದ್ದು ದೇಹದ ಅಂಗಾಂಗಗಳು ಚಲಿಸುತ್ತಿತ್ತು. ನಂತರ ಈ ವಿಡಿಯೋ ಹೆಚ್ಚು ವೈರಲ್ ಆಗಿದೆ. ಈ ವಿಡಿಯೋಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ.
ವಿಡಿಯೊ ಕುರಿತು ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಇದು ಬೇರೆ ಗ್ರಹದಿಂದ ಬಂದಿದೆ ಎಂದು ಬರೆದಿದ್ದಾರೆ. ಇದು ಸಂಪೂರ್ಣವಾಗಿ ಅನ್ಯಲೋಕದಂತೆ ಕಾಣುತ್ತದೆ ಎಂದಿದ್ದಾರೆ. ಇನ್ನೊಬ್ಬರು 'ಇದನ್ನು ಬೇಯಿಸಿ ತಿನ್ನುವ ಪ್ರಾಣಿಯಲ್ಲ. ಇದನ್ನು ನೋಡಿ ಕಣ್ತುಂಬಿಕೊಳ್ಳಬೇಕು. ಹೀಗಾಗಿ ಇದನ್ನು ಕೊಲ್ಲಲು ಸಾಧ್ಯವಿಲ್ಲ. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಅಷ್ಟೇ' ಎಂದು ಬರೆದಿದ್ದಾರೆ. ಈ ಜೀವಿ ಊಟದ ತಟ್ಟೆಗೆ ಅಲ್ಲ, ಸಮುದ್ರದ ದಡದಲ್ಲಿ ಪ್ರಯಾಣಿಕರಿಗೆ ಸಂತೋಷಗೊಳಿಸುತ್ತದೆ. ಇದು ತುಂಬಾ ಅಪರೂಪ, ಆದ್ದರಿಂದ ಅದನ್ನು ಮತ್ತೆ ಸಮುದ್ರಕ್ಕೆ ಎಸೆಯಿರಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ಸತ್ಯ ಏನು?
ಜೀವಶಾಸ್ತ್ರಜ್ಞರ ಪ್ರಕಾರ, ಇದು ನೀಲಿ ನಳ್ಳಿ. ಇದನ್ನು ಸಾಮಾನ್ಯ ಭಾಷೆಯಲ್ಲಿ ನೀಲಿ ಸೀಗಡಿ ಎಂದು ಕರೆಯಬಹುದು. ಇದು ಬಹಳ ಅಪರೂಪದ ಜಾತಿಯಾಗಿದೆ. ಸುಮಾರು 2 ಮಿಲಿಯನ್ ಸೀಗಡಿಗಳಲ್ಲಿ ಒಂದು ಸೀಗಡಿ ಈ ಬಣ್ಣದ್ದಾಗಿರುತ್ತದೆ ಎನ್ನುತ್ತಾರೆ ಜೀವಶಾಸ್ತ್ರಜ್ಞರು. ಈ ವಿಡಿಯೊವನ್ನು ಮೀನುಗಾರನೊಬ್ಬ ಸೆರೆಹಿಡಿದಿದ್ದಾನೆ. ಕೆಲವರು ಅದನ್ನು ಹಿಡಿದು ಮಾರುವುದಿದೆ.
2800 ಕ್ಕೂ ಹೆಚ್ಚು ಜಾತಿಗಳು
ಅನೇಕ ಜನರು ಸೀಗಡಿಗಳನ್ನು ತಿನ್ನುತ್ತಾರೆ. ಇದು ಶುದ್ಧ ನೀರು ಮತ್ತು ಸಮುದ್ರ ಎರಡರಲ್ಲೂ ಕಂಡುಬರುತ್ತದೆ. ಸೀಗಡಿಗಳು ಕೆಲವೊಮ್ಮೆ ತಮ್ಮದೇ ಜಾತಿಯನ್ನು ತಿನ್ನುತ್ತವೆ. ಸಂಶೋಧನೆಯ ಪ್ರಕಾರ, ಪ್ರಪಂಚದಲ್ಲಿ 2800 ಕ್ಕೂ ಹೆಚ್ಚು ಜಾತಿಯ ಸೀಗಡಿಗಳಿವೆ. ಅವು ಅನೇಕ ಬಣ್ಣಗಳಲ್ಲಿ ಕಂಡುಬರುತ್ತವೆ. ಆದರೆ ನೀಲಿ ಸೀಗಡಿ ಬಹಳ ಅಪರೂಪ.
-
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications