ಸ್ವಾತಂತ್ರ್ಯ ಹೋರಾಟಗಾರರ ಹೆಸರಿರುವ ಭಾರತದ ರೈಲು ನಿಲ್ದಾಣಗಳಿವು
ನವದೆಹಲಿ, ನವೆಂಬರ್ 11: ಭಾರತೀಯ ರೈಲ್ವೆ ಆಡಳಿತ ಹೊಂದಿರುವ ಭಾರತೀಯ ರೈಲ್ವೆ ನಿಲ್ದಾಣಗಳು ಸಾರ್ವಜನಿಕರಿಗೆ ಅಚ್ಚುಮೆಚ್ಚು. ಪ್ರತಿದಿನ ಲಕ್ಷಾಂತರ ಮಂದಿ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಜನರ ಜೀವನಕ್ಕೆ ಸದಾ ಮೆಚ್ಚುಗೆಯ ಸಾರಿಗೆ ಆಗಿರುವ ಹೊರೆಯಾಗದ ಅಗ್ಗದ ಸಾರಿಗೆಯಾಗಿದೆ ಎಂದರೆ ರೈಲ್ವೆ ಇಲಾಖೆಯ ರೈಲುಗಳು. ಇಂದಿನ ಕಾಲಘಟ್ಟದಲ್ಲಿ ನಿತ್ಯವು ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ.
ಮಧ್ಯಮ ವರ್ಗದ ಜನರಿಗೆ ರೈಲು ಪ್ರಯಾಣವು ಅಗ್ಗದ ಮತ್ತು ಆರ್ಥಿಕ ಸಾರಿಗೆಯಾಗಿದೆ. ಭಾರತದಲ್ಲಿ ರೈಲು ಸಂಪರ್ಕ ಜಾಲವು ಬಹಳ ದೊಡ್ಡ ಪ್ರಮಾಣದಲ್ಲಿ ಹರಡಿದೆ. ವಿವಿಧ ಸ್ಥಳಗಳಲ್ಲಿ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇದರಿಂದ ದೇಶದ ಅನೇಕ ಪ್ರದೇಶದಿಂದ ಜನರು ರೈಲು ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಾರೆ.
ಹೆಚ್ಚಿನ ರೈಲು ನಿಲ್ದಾಣಗಳಿಗೆ ಆ ಸ್ಥಳದ ಹೆಸರನ್ನೂ ಇಡಲಾಗಿದೆ. ಇದರಿಂದ ಪ್ರಯಾಣಿಕರ ಮನಸ್ಸಿನಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ. ಆದರೆ, ಅನೇಕ ರೈಲು ನಿಲ್ದಾಣಗಳಿಗೆ ಕ್ರಾಂತಿಕಾರಿ ವ್ಯಕ್ತಿಗಳು ಅಥವಾ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಹೋರಾಟಗಾರರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ಹೋರಾಟಗಾರರ ಹೆಸರು ರೈಲ್ವೆ ನಿಲ್ದಾಣಗಳಿಗೆ ಹೊಸದಾಗಿ ನಾಮಕರಣ ಮಾಡಿರುವ ಕ್ರಮ ರೈಲು ಪ್ರಯಾಣಿಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ನಾಮಕರಣ ಮಾಡಿರುವ ಆ ರೈಲು ನಿಲ್ದಾಣಗಳು ಯಾವುವು ಎಂದು ನೀವು ಇಲ್ಲಿ ತಿಳಿಯಬಹುದು.

ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ ಹಾವೇರಿ
ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿರುವ ಹಾವೇರಿ ರೈಲು ನಿಲ್ದಾಣದ ಹೆಸರನ್ನು 2020ರಲ್ಲಿ ಮಹದೇವಪ್ಪ ಮೈಲಾರ ರೈಲು ನಿಲ್ದಾಣ ಎಂದು ಹೆಸರು ಬದಲಾಯಿಸಲಾಯಿತು. ಮೈಲಾರ ಮಹದೇವಪ್ಪ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ ವೈಕ್ತಿಯಾಗಿದ್ದರು. ಇವರು 18ನೇ ವಯಸ್ಸಿನಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ 'ದಂಡಿ ಮೆರವಣಿಗೆ'ಗೆ ಹೋದರು. ಅವರ ತ್ಯಾಗ ಮತ್ತು ಧೈರ್ಯವು ಹೆಚ್ಚಿನ ಸಂಖ್ಯೆಯ ಜನರಿಗೆ ಸ್ಫೂರ್ತಿ ನೀಡಿತ್ತು. ಸಮಾಜ ಸೇವೆ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ವಸಾಹತುಶಾಹಿ ಆಡಳಿತವನ್ನು ವಿರೋಧಿಸಲು ಮೈಲಾರ ಮಹದೇವಪ್ಪನವರು 74 ವಿವಿಧ ಚಳುವಳಿಗಳನ್ನು ಸಂಘಟಿಸಿದರು.
ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಜಿಲ್ಲೆಯ ಹೆಸರನ್ನು ಅಜರಾಮರವಾಗಿಸಿದವರು ಮೈಲಾರ ಮಹದೇವಪ್ಪ. ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸುವಾಗಲೇ ಬ್ರಿಟಿಷರ ಗುಂಡೇಟಿಗೆ ಬಲಿಯಾಗಿ ತಮ್ಮ ಇಬ್ಬರು ಸಹಚರರೊಂದಿಗೆ ಮೈಲಾರ ಮಹದೇವಪ್ಪ ಹುತಾತ್ಮರಾದವರು. ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದ ಮಹದೇವಪ್ಪ ಮೈಲಾರ ಅವರು ಮಹಾತ್ಮ ಗಾಂಧಿ ಅವರ ಅನುಯಾಯಿಯಾಗಿದ್ದರು. 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.

ಬೆಲನಗರ ರೈಲು ನಿಲ್ದಾಣ, ಶಹಜಹಾನ್‌ಪುರ ರೈಲು ನಿಲ್ದಾಣ
ಪಂಡಿತ್ 'ರಾಮ್ ಪ್ರಸಾದ್ ಬಿಸ್ಮಿಲ್ ಸ್ಟೇಷನ್' ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿರುವ ಒಂದು ಸಣ್ಣ ರೈಲು ನಿಲ್ದಾಣ. ಪ್ರಮುಖ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಕಾರಿಯ ಪ್ರಮುಖ ಹೋರಾಟಗಾರ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಹೆಸರನ್ನು ಈ ನಿಲ್ದಾಣಕ್ಕೆ ಇಡಲಾಗಿದೆ. ಈ ನಿಲ್ದಾಣವು ಎರಡು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಇದರೊಂದಿಗೆ ಕಾಕೋರಿ ಘಟನೆಯಂತಹ ಪ್ರಮುಖ ಘಟನೆಗಳಲ್ಲೂ ಭಾಗಿಯಾಗಿದ್ದರು. ಆದರೆ, 30ರ ಹರೆಯದಲ್ಲಿ ಅವರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿತು.
ಕೋಲ್ಕತ್ತಾದಲ್ಲಿರುವ 'ಬೆಳನಗರ ರೈಲು ನಿಲ್ದಾಣ ರೈಲು ನಿಲ್ದಾಣಕ್ಕೆ ಬೇಲಾ ಬೋಸ್ ಹೆಸರಿಡಲಾಗಿದೆ. ಅದಕ್ಕಾಗಿಯೇ ಇದನ್ನು 'ಬೆಳನಗರ ರೈಲು ನಿಲ್ದಾಣ' ಎಂದು ಕರೆಯಲಾಗುತ್ತದೆ. ಬೇಲಾ ಬೋಸ್ ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಸೊಸೆ. ಅವರು 1936ರಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ ಗುಪ್ತಚರ ಮುಖ್ಯಸ್ಥ ಹರಿದಾಸ್ ಮಿತ್ರ ಅವರನ್ನು ವಿವಾಹವಾದರು. ಇದರೊಂದಿಗೆ ಐಎನ್‌ಎ ತಂಡದ ಸದಸ್ಯರ ಭದ್ರತೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಅವರು ಜುಲೈ 1952ರಲ್ಲಿ ಕೊನೆಯುಸಿರೆಳೆದರು.

ಸುನಮ್ ಉಧಮ್ ಸಿಂಗ್ ವಾಲಾ ನಿಲ್ದಾಣ
ಈ ರೈಲು ನಿಲ್ದಾಣ ಪಂಜಾಬ್‌ನ ಸಂಗ್ರೂರ್‌ನಲ್ಲಿದೆ. ಈ ನಿಲ್ದಾಣವನ್ನು ಮೊದಲು ಸುನಮ್ ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಅದರ ಹೆಸರನ್ನು 'ಸುನಮ್ ಉಧಮ್ ಸಿಂಗ್ ವಾಲಾ ಸ್ಟೇಷನ್' ಎಂದು ಬದಲಾಯಿಸಲಾಯಿತು. 1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಉಧಮ್ ಸಿಂಗ್ ಸಾಕ್ಷಿಯಾಗಿದ್ದರು. ಈ ಹತ್ಯಾಕಾಂಡವನ್ನು ನೋಡಿದ ನಂತರ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಧುಮುಕುವ ಪ್ರತಿಜ್ಞೆಯನ್ನು ತೆಗೆದುಕೊಂಡರು ಮತ್ತು ರೆಜಿನಾಲ್ಡ್ ಡೈಯರ್ ಮತ್ತು ಮೈಕೆಲ್ ಓ'ಡ್ವೈಯರ್ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಸೇಡು ತೀರಿಸಿಕೊಳ್ಳಲು ಅವರು ಮೈಕೆಲ್ ಓ'ಡ್ವೈರ್ ಮೇಲೆ 6 ಗುಂಡುಗಳನ್ನು ಹಾರಿಸಿದ್ದರು. 31 ಜುಲೈ 1940ರಂದು ಮೈಕೆಲ್ ಓ'ಡ್ವೈರ್ ಕೊಲೆಗೆ ಶಿಕ್ಷೆಗೊಳಗಾದ ಪೆಂಟೊನ್ವಿಲ್ಲೆ ಜೈಲಿನಲ್ಲಿ ಅವನನ್ನು ಗಲ್ಲಿಗೇರಿಸಲಾಯಿತು.

ವೀರಾಂಗಣ ಲಕ್ಷ್ಮೀಬಾಯಿ ರೈಲು ನಿಲ್ದಾಣ (ಝಾನ್ಸಿ)
'ಖುಬ್ ಲಡೀ ಮರ್ದಾನಿ ವೋ ತೋ ಝಾನ್ಸಿ ವಾಲಿ ರಾಣಿ ಥಿ' (ಒಬ್ಬಳೆ ಹೊರಾಟ ನಡೆಸಿದಳು , ದೀರ ಮಹಿಳೆ, ಅವಳೇ ಝಾನ್ಸಿ ರಾಣಿ ಲಕ್ಷ್ಮೀಬಾಯಿ) ಎಂದು ದೇಶದ ನಾಯಕಿ ರಾಣಿ ಲಕ್ಷ್ಮೀಬಾಯಿ ಅವರಿಗೆ ಹೇಳಿದ ಈ ಮಾತು ಇಂದಿನ ಮಗುವಿಗೆ ತಿಳಿದಿದೆ. ಈ ರಾಣಿ ಝಾನ್ಸಿಯ ಪ್ರದೇಶವನ್ನು ರಕ್ಷಿಸಲು ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಹೋರಾಡಿದರು ಮತ್ತು ವೀರಗತಿಯನ್ನು ಪಡೆದರು. ಅವರಿಗೆ ಶ್ರದ್ಧಾಂಜಲಿ ಅರ್ಪಿಸಿಲೆಂದೆ ರೈಲ್ವೆ ಇಲಾಖೆಯು 'ಝಾನ್ಸಿ ರೈಲು ನಿಲ್ದಾಣ'ದ ಹೆಸರನ್ನು 'ವೀರಂಗನಾ ಲಕ್ಷ್ಮೀಬಾಯಿ ರೈಲು ನಿಲ್ದಾಣ' ಎಂದು ಬದಲಾಯಿಸಲಾಯಿತು.

ನೇತಾಜಿ ಜಂಕ್ಷನ್, ವಾಂಚಿ ಮಣಿಯಾಚಿ ನಿಲ್ದಾಣ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟವನ್ನು ನಡೆಸುವ ಮತ್ತು 'ಆಜಾದ್ ಹಿಂದ್ ಫೌಜ್' ಸ್ಥಾಪಿಸುವ ಉದ್ದೇಶವನ್ನು ಪೂರೈಸಲು ದೇಶವನ್ನು ತೊರೆದಾಗ, ಅವರು ಕೊನೆಯ ಗಂಟೆಗಳನ್ನು ಜಾರ್ಖಂಡ್‌ನ ಗೋಮೋದಲ್ಲಿ ಕಳೆದರು. ಗೊಮೊ ನಿಲ್ದಾಣದಿಂದಲೇ ಕಲ್ಕಾ ಮೇಲ್ ಮೂಲಕ ಪೇಶಾವರಕ್ಕೆ ಹೊರಟರು. ಈಗ ಗೋಮೋ ಜಂಕ್ಷನ್‌ನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಜಂಕ್ಷನ್ ಎಂದು ಕರೆಯಲಾಗುತ್ತದೆ.
ತಮಿಳುನಾಡಿನ ವಾಂಚಿನಾಥನ್ ಸ್ವಾತಂತ್ರ್ಯ ಹೋರಾಟಗಾರ, ಸ್ವಾತಂತ್ರ್ಯಕ್ಕಾಗಿ ರೈಲ್ವೇ ಕಲೆಕ್ಟರ್ ರೈಲಿನಲ್ಲಿ ಹೊಡೆದುರುಳಿಸಿದರು. ವಾಂಚಿನಾಥನ್ ಅವರ ತ್ಯಾಗವನ್ನು ಸ್ಮರಿಸುವುದಕ್ಕಾಗಿ ಲೋಕಸಭೆಯ ಮಾಜಿ ಸಂಸದೆ ಕುಮಾರಿ ಅನಂತನ್ ಅವರು 'ಮಾನ್ಯಾಚಿ ರೈಲ್ವೆ ಜಂಕ್ಷನ್' ನ್ನು 'ವಂಚಿ ಮಣಿಯಾಚಿ' ಎಂದು ಮರುನಾಮಕರಣ ಮಾಡಿದರು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications