ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವಾರಂಟೈನ್ ಕಥೆ; ಪಾರಿವಾಳದ ಕೂಗು, ಅಳಿಲಿನ ಚೀರಾಟ

By ಗುರು ಕುಂಟವಳ್ಳಿ
|
Google Oneindia Kannada News

ಸುಮಾರು ಎರಡೂವರೆ ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ 'ಚೌಕ' ಎಂಬ ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ 'ಹಕ್ಕಿ ಗೋಪಾಲ' ಎಂಬ ಪಾತ್ರ ಬರುತ್ತದೆ. ಪಾರಿವಾಳಗಳನ್ನು ಪಳಗಿಸುವ ಪಾತ್ರವದು.

Recommended Video

ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

ಕೊರೊನಾ ಭೀತಿಯಿಂದಾಗಿ ಲಾಕ್ ಡೌನ್ ಆಗಿ ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೆಲಸದ ನಡುವೆ ಮನಸ್ಸಿಗೆ ನೆಮ್ಮದಿ ನೀಡುವುದು ಮನೆಯ ಬಳಿ ಇರುವ ಪಾರಿವಾಳಗಳ ಕಲರವ.

ಕತ್ರಿಗುಪ್ಪೆ ಬಿಟ್ಟು ಹನುಮಂತನಗರಕ್ಕೆ ಬಂದು ಸುಮಾರು ಮೂರುವರೆ ವರ್ಷ ಕಳೆದಿದೆ. ಮನೆಗೆ ಬಂದ ಮೊದಲ ದಿನವೇ ಬಾತ್ ರೂಂ ಕಿಟಕಿ ಗಾಜನ್ನು ಒಡೆದು ಸ್ವಾಗತ ಕೋರಿದ್ದು ಪಾರಿವಾಳ. ಮನೆಯ ಸುತ್ತ-ಮುತ್ತ 30 ಕ್ಕೂ ಹೆಚ್ಚು ಪಾರಿವಾಳಗಳಿವೆ.

ಚಿಂವ್ ಚಿಂವ್ ಗುಬ್ಬಚ್ಚಿ ಎಲ್ಲಿ ಹೋದೆ...ಚಿಂವ್ ಚಿಂವ್ ಗುಬ್ಬಚ್ಚಿ ಎಲ್ಲಿ ಹೋದೆ...

Quarantine Diaries Birds Love In Bengaluru

ಮನೆಗೆ ಬಂದ ಮೊದಲ ದಿನದಿಂದ ಇವುಗಳಿಗೆ ಅನ್ನ, ಅಕ್ಕಿ ಹಾಕುವ ಅಭ್ಯಾಸವಾಗಿದೆ. ಅನ್ನ ಹೆಚ್ಚಾದರೆ ಪಾರಿವಾಳಕ್ಕೆ ನಿಗದಿ ಪಡಿಸಿದ ಜಾಗದಲ್ಲಿ ಹಾಕಿದರೆ ಆಯಿತು. ಒಮ್ಮೆ ಅವು ಬಂದರೆ ಹತ್ತು ನಿಮಿಷದಲ್ಲಿ ಅನ್ನ ಹಾಕಿದ್ದು ಸುಳ್ಳು ಎಂಬಂತೆ ಜಾಗವನ್ನು ಕ್ಲೀನ್ ಮಾಡುತ್ತವೆ.

ಆಫೀಸ್ ಇರುವಾಗ ಯಾವಾಗಲೋ ಹೋಗಿ ಯಾವಾಗಲೋ ಬರುವ ನಾನು ಪಾರಿವಾಳಗಳ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಎಷ್ಟು ಹೊತ್ತಿಗೋ ಅನ್ನ ಅಥವ ಅಕ್ಕಿ ಹಾಕಿ ಸುಮ್ಮನಾಗುತ್ತಿದ್ದೆ. ಚಿಕ್ಕ ಪಾತ್ರೆಯಲ್ಲಿರುವ ನೀರನ್ನು ಅವು ಬೇಕಾದಾಗ ಕುಡಿಯುತ್ತಿದ್ದವು.

ರೈತ ಸ್ನೇಹಿ ಟಿಟ್ಟಿಬ ಪಕ್ಷಿ ಬಗ್ಗೆ ನಿಮಗೆಷ್ಟು ಗೊತ್ತು?ರೈತ ಸ್ನೇಹಿ ಟಿಟ್ಟಿಬ ಪಕ್ಷಿ ಬಗ್ಗೆ ನಿಮಗೆಷ್ಟು ಗೊತ್ತು?

Quarantine Diaries Birds Love In Bengaluru

ಈಗ ಲಾಕ್ ಡೌನ್ ಸಮಯದಲ್ಲಿ ಪಾರಿವಾಳ ಜೊತೆಗಿನ ನಂಟು ಹೆಚ್ಚಾಗಿದೆ. ದಿನಕ್ಕೆ ಎರಡರಿಂದ ಮೂರು ಬಾರಿ ಅವುಗಳಿಗೆ ಆಹಾರ ಹಾಕಲೇಬೇಕು. ಅನ್ನವಿಲ್ಲದಿದ್ದರೆ ಅಕ್ಕಿಯನ್ನು ಹಾಕಿದರೂ ಅವು ತಿಂದು ಮುಗಿಸುತ್ತವೆ.

ಮುಂಜಾನೆ ಆರೂವರೆ, ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೆ, ಸಂಜೆ ನಾಲ್ಕು ಗಂಟೆ ಸುಮಾರು ಪಾರಿವಾಳದ ಊಟದ ಸಮಯ. ನಿಗದಿ ಮಾಡಿದ ಜಾಗಕ್ಕೆ ಒಮ್ಮೆ ಬಂದು ಕೂರುತ್ತವೆ. ಅಲ್ಲಿ ಏನಾದರೂ ಕಂಡಿತೋ ಸರಿ. ಇಲ್ಲವೇ ಮನೆಯ ಬಾಗಿಲ ಬಳಿ ಬಂದು ಭಯವಿಲ್ಲದೇ ನೋಡುತ್ತವೆ. ಸ್ವಲ್ಪ ಸದ್ದಾದರೂ ಪುರ್ ಎಂದು ಹಾರಿ ಹೋಗುತ್ತವೆ.

ಅನ್ನ ಅಥವ ಅಕ್ಕಿ ಹಾಕಿದಾಗ ಹಿಂಡು ಹಿಂಡಾಗಿ ಬರುವ ಅವುಗಳ ನಡುವೆ ಊಟಕ್ಕಾಗಿ ಜಗಳ ನಡೆಯುತ್ತದೆ. ದಪ್ಪಗೆ ಬಲಿಷ್ಟವಾಗಿರುವ ಹಕ್ಕಿ ತಾನು ತಿನ್ನುವಾಗ ಇತರ ಹಕ್ಕಿಗಳನ್ನು ಕುಕ್ಕಿ ಓಡಿಸುತ್ತದೆ. ಒಂದು ಕಣ್ಣು ಕಾಣದ, ಕಾಲು ಸರಿ ಇಲ್ಲದ ಒಂದು ಹಕ್ಕಿ ಯಾವಾಗಲೂ ಸಂತ್ರಸ್ತ.

ಉಳಿದ ಎಲ್ಲವೂ ಹಾರಿಹೋದ ಮೇಲೆ ಇದು ನಿಧಾನವಾಗಿ ಕಾಳು ಮಿಕ್ಕಿದ್ದರೆ ತಿನ್ನುತ್ತದೆ. ಇಲ್ಲವಾದಲ್ಲಿ ಮನೆಯೊಳಗೆ ಬರುತ್ತದೆ. ಇದಕ್ಕೆ ಭಯವಂತೂ ಇಲ್ಲವೇ ಇಲ್ಲ. ಊಟ ಹಾಕುವುದು ನಿನ್ನ ಹಕ್ಕು ಎಂಬಂತೆ ಆಹಾರಕ್ಕಾಗಿ ಬೇಡಿಕೆ ಇಡುತ್ತದೆ.

ಬರೀ ಪಾರಿವಾಳಗಳು ಮಾತ್ರವಲ್ಲ. ಮುಂಜಾನೆ ಮತ್ತು ಸಂಜೆ ಗಿಳಿ, ಕೋಗಿಲೆ ಬರುತ್ತದೆ. ಅಳಿಲು ಇಲ್ಲಿನ ಖಾಯಂ ಅತಿಥಿ. ಪಾರಿವಾಳಗಳ ಜಗಳದ ನಡುವೆಯೇ ಅಳಿಲು ಸಣ್ಣ ಅನ್ನದ ಉಂಡೆಯನ್ನು ಹೊತ್ತುಕೊಂಡು ಕ್ಷಣ ಮಾತ್ರದಲ್ಲಿ ಮರೆಯಾಗುತ್ತದೆ.

ಪಾರಿವಾಳದ ಕೂಗು, ಅಳಿಲಿನ ಚೀರಾಟ ಮುಂಜಾನೆಯ ಅಲಾರಂ ಆಗಿದೆ. ಕತ್ತಲಾಗುತ್ತಲೇ ಸುಮ್ಮನಾಗುವ ಪಾರಿವಾಳಗಳು ರಾತ್ರಿ ಒಂದು ಅಥವ ಎರಡು ಗಂಟೆ ಹೊತ್ತಿಗೆ ಒಮ್ಮೆ ಕೂತ ಜಾಗದಿಂದ ಕೂಗಿಕೊಂಡು ಎದ್ದು ಜೋರಾಗಿ ರೆಕ್ಕೆ ಬಡಿದು ಕೂರುತ್ತವೆ. ಮೊದಲು ಇದು ಭಯ ಹುಟ್ಟಿಸಿತ್ತು, ಈಗ ಅಭ್ಯಾಸವಾಗಿ ಹೋಗಿದೆ.

English summary
To fight against the COVID-19 epidemic whole country in quarantine. Here are the quarantine story from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X