ವಿಡಿಯೋ: ಹೆಬ್ಬಾವಿನೊಂದಿಗೆ ಈಜುಕೊಳದಲ್ಲಿ ಮಕ್ಕಳ ಮೋಜು
ಇತ್ತೀಚೆಗೆ ವಿಷಕಾರಿ ಪ್ರಾಣಿಗಳನ್ನು ಸಾಕುವ ಪ್ರೌವೃತ್ತಿಯನ್ನು ಮನುಷ್ಯ ರೂಢಿಸಿಕೊಳ್ಳುತ್ತಿದ್ದಾನೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳು. ಕೆಲ ವಿಡಿಯೋಗಳಲ್ಲಿ ಮನುಷ್ಯ ವಿಷಕಾರಿ ಪ್ರಾಣಿಗಳೊಂದಿಗೆ ಯಾವುದೇ ಭಯ ಆತಂಕವಿಲ್ಲದೇ ಬೆರೆಯುವುದು ನೋಡಗರನ್ನು ಬೆಚ್ಚಿ ಬೀಳಿಸುತ್ತವೆ. ಇತ್ತೀಚೆಗೆ ಅಂತಹದೇ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈಜುಕೊಳದಲ್ಲಿ ಸಾಮಾನ್ಯವಾಗಿ ನೆಚ್ಚಿನ ನಾಯಿ ಬೆಕ್ಕುಗಳೊಂದಿಗೆ ಈಜಲು ಅಥವಾ ಅವುಗಳೊಂದಿಗೆ ಆಟವಾಡುವುದನ್ನ ನಾವು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ಅಪಾಯಕಾರಿ ಧೈತ್ಯ ಹೆಬ್ಬಾವಿನೊಂದಿಗೆ ಮಕ್ಕಳು ಈಜುಕೊಳದಲ್ಲಿ ಆಟವಾಡುತ್ತಾರೆ. ಈ ಭಯಾನಕ ವಿಡಿಯೋ ಕಂಡು ಜನ ಬೆಚ್ಚಿಬಿದ್ದಿದ್ದಾರೆ.
ಸಣ್ಣ ಹಾವು ನೋಡಿದರೆ ಹತ್ತು ಅಡಿ ದೂರ ನಿಂತುಕೊಂಡು ಇಣುಕಿ ನೋಡುವ ಜನ ನಮ್ಮಲ್ಲಿದ್ದಾರೆ. ಹೀಗಿರುವಾಗ ಈಜುಕೊಳದಲ್ಲಿರುವ ಮಕ್ಕಳ ನಡುವೆ ಇರುವ ಉದ್ದನೆಯ, ಭಾರವಾದ ಹೆಬ್ಬಾವನ್ನು ನೋಡಿ, ಜನರ ಸ್ಥಿತಿ ಏನಾಗಬಹುದು ಎಂದು ಊಹಿಸಿಕೊಳ್ಳಿ. ಹೀಗಿರುವಾಗ ವೈರಲ್ ವಿಡಿಯೋದಲ್ಲಿ ದೈತ್ಯ ಹೆಬ್ಬಾವು ಮಕ್ಕಳೊಂದಿಗೆ ಈಜುಕೊಳದಲ್ಲಿ ಇರುವುದು ಕಂಡುಬಂದಿದೆ. ಇದನ್ನು ನೋಡಿದ ಜನ ನಿಜಕ್ಕೂ ಶಾಕ್ ಆಗಿದ್ದಾರೆ.

ಹೆಬ್ಬಾವಿಗೆ ಸಹನೆಯೋ? ಮಕ್ಕಳಿಗೆ ನಿರ್ಭಯವೋ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಹೆಬ್ಬಾವು ಕೆಲವೇ ಸೆಕೆಂಡುಗಳಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯನ್ನು ಕೊಲ್ಲುತ್ತದೆ. ಆಶ್ಚರ್ಯ ಎಂದರೆ ಈಜುಕೊಳದಲ್ಲಿರುವ ಮಕ್ಕಳು ಈ ಹೆಬ್ಬಾವು ಕಂಡು ಕೊಂಚವೂ ಭಯ ಪಡುವುದಿಲ್ಲ. ಅದನ್ನು ಮುಟ್ಟಲು ಹಿಂಜರಿಯುವುದಿಲ್ಲ. ಅದರೊಂದಿಗೆ ಸಹಜವಾಗಿ ವರ್ತಿಸುತ್ತಾರೆ. ಅಷ್ಟೇ ಅಲ್ಲದೇ ಮಕ್ಕಳ ಪೋಷಕರೂ ಮಕ್ಕಳನ್ನು ಧೈರ್ಯವಾಗಿ ಹಾವಿನೊಂದಿಗೆ ಈಜುಕೊಳದಲ್ಲಿ ಬಿಟ್ಟಿರುವುದು ಕಂಡುಬರುತ್ತದೆ. ಅವರೂ ಕೂಡ ಮಕ್ಕಳಿಗೆ ಹೆಬ್ಬಾವಿನೊಂದಿಗೆ ಬೆರೆಯಲು ಮಕ್ಕಳನ್ನು ಪ್ರೇರೇಪಿಸುತ್ತಾರೆ.












Click it and Unblock the Notifications