2017ರ ಪಂಜಾಬ್ ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು? ಆಗಿದ್ದೇನು?
ಚಂಡೀಗಢ, ಮಾರ್ಚ್ 09: ಮಾರ್ಚ್ 10ರಂದು ಪಂಜಾಬ್ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಸೋಮವಾರ ಚುನಾವಣೋತ್ತರ ಸಮೀಕ್ಷೆಯು ಬಂದಿದ್ದು, ಬಹುತೇಕ ಎಲ್ಲಾ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸ್ಪಷ್ಟ ಬಹುಮತವಿದೆ ಎಂದು ಹೇಳಿದೆ. ಆದರೆ 2017ರ ಚುನಾವಣೆಯ ಫಲಿತಾಂಶವನ್ನು ಉಲ್ಲೇಖ ಮಾಡಿ ಹಲವಾರು ನಾಯಕರುಗಳು ಈ ಸಮೀಕ್ಷೆಯು ನಿಜವಾಗಲಿದೆ ಎಂದು ನಂಬಲಾಗದು ಎಂದಿದ್ದಾರೆ.
2017ರ ಕೆಲವು ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನಲ್ಲಿ ಅಧಿಕಾರವನ್ನು ಪಡೆಯಲಿದೆ ಎಂದು ಹೇಳಿದೆ. ಆದರೆ ಆಮ್ ಆದ್ಮಿ ಪಕ್ಷವು ಕೇವಲ 20 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆದಿತ್ತು. ಆದರೆ ಪಂಜಾಬ್‌ನಲ್ಲಿ ಎರಡನೇ ಅತೀ ದೊಡ್ಡ ಪಕ್ಷವಾಯಿತು. ವಿಪಕ್ಷ ಸ್ಥಾನವನ್ನು ಪಡೆದುಕೊಂಡಿತು. ಚುನಾವಣೋತ್ತರ ಸಮೀಕ್ಷೆ ಮಾತ್ರ ನಿಜವಾಗಲಿಲ್ಲ.
ಇನ್ನು ಕಾಂಗ್ರೆಸ್‌ನೊಂದಿಗೆ ನೇರ ಸ್ಪರ್ಧೆಯನ್ನು ಎಎಪಿ ನೀಡಲಿದೆ ಎಂದು 2017ರ ಕೆಲವು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಆದರೆ 77 ಸ್ಥಾನಗಳೊಂದಿಗೆ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಪ್ರಸ್ತುತ ಕಾಂಗ್ರೆಸ್‌ನಿಂದ ಹೊರಬಂದು ತನ್ನದೇ ಆದ ಪಕ್ಷವನ್ನು ರಚನೆ ಮಾಡಿ, ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವತಃ "ಫಲಿತಾಂಶಗಳ ಬಗ್ಗೆ ಸಂಪೂರ್ಣ ಆಶ್ಚರ್ಯವನ್ನು" ವ್ಯಕ್ತಪಡಿಸಿದ್ದರು.

2017ರಲ್ಲಿ ಸಮೀಕ್ಷೆಗಳು ಹೇಳಿದ್ದು ಏನು?
ಸಿವೋಟರ್ ಸಮೀಕ್ಷೆಯು ಎಎಪಿಗೆ 59-67 ಸ್ಥಾನಗಳು ಲಭಿಸಲಿದೆ ಎಂದು ಊಹೆ ಮಾಡಿದ್ದವು. ಎಬಿಪಿ ಲೋಕನೀತಿ ಸಿಎಸ್‌ಡಿಎಸ್ ಸಮೀಕ್ಷೆಯು ಎಎಪಿಗೆ 36-46 ಮತ್ತು ಕಾಂಗ್ರೆಸ್‌ಗೆ 46-56 ಸ್ಥಾನಗಳು ಲಭ್ಯವಾಗಲಿದೆ ಎಂದು ಹೇಳಿತ್ತು. ಸಿ ವೋಟರ್ ಶಿರೋಮಣಿ ಅಕಾಲಿ ದಳಕ್ಕೆ 5-13 ಸ್ಥಾನಗಳನ್ನು ಮತ್ತು ಎಬಿಪಿ ಲೋಕನೀತಿ ಸಿಎಸ್‌ಡಿಎಸ್ ಸಮೀಕ್ಷೆಯು ಎಸ್‌ಎಡಿಗೆ 19-27 ಸ್ಥಾನಗಳು ಲಭ್ಯವಾಗಲಿದೆ ಎಂದು ಹೇಳಿತ್ತು. ಇನ್ನು ಇಂಡಿಯಾ ಟುಡೇ ಆಕ್ಸಿಸ್ 4-7 ಮತ್ತು ಇಂಡಿಯಾ ನ್ಯೂಸ್ ಎಂಆರ್‌ಸಿ ಕೇವಲ 7 ಕ್ಷೇತ್ರಗಳಲ್ಲಿ ಎಸ್‌ಎಡಿ ಗೆಲ್ಲಲಿದೆ ಎಂದು ಹೇಳಿತ್ತು. ಇಂಡಿಯಾ-ಟುಡೇ ಆಕ್ಸಿಸ್ ಸಮೀಕ್ಷೆಯು ಎಎಪಿಗೆ 42-51 ಸ್ಥಾನಗಳು ಲಭ್ಯವಾಗಲಿದೆ ಎಂದು ಹೇಳಿದರು. ಎಸ್‌ಎಡಿಗೆ ಕೇವಲ 10 ಸ್ಥಾನಗಳು ದೊರೆಯಲಿದೆ ಎಂದಿತ್ತು. ಇಂಡಿಯಾ ಟುಡೇ ಆಕ್ಸಿಸ್ 42-510, ಇಂಡಿಯಾ ಟುಡೇ ಸಿವೋಟರ್ 41-49, ಎಬಿಪಿ ಲೋಕತಿ ಸಿಎಸ್‌ಡಿಎಸ್ 36-46 ಸೇರಿದಂತೆ ಕನಿಷ್ಠ ಮೂರು ಸಮೀಕ್ಷೆಗಳಲ್ಲಿ ಎಎಪಿ ಪಂಜಾಬ್‌ನಲ್ಲಿ ಹೆಚ್ಚು ಸ್ಥಾನವನ್ನು ಪಡೆದು ಪ್ರಮುಖ ಪಕ್ಷ ಎಂದು ಹೇಳಿತ್ತು.

ಪಂಜಾಬ್ ಚುನಾವಣೆ ಫಲಿತಾಂಶ ಏನು ಹೇಳಿತು?
ಚುನಾವಣೋತ್ತರ ಸಮೀಕ್ಷೆಗಳು ಪಂಜಾಬ್‌ನಲ್ಲಿ ಎಎಪಿಗೆ ಅಧಿಕಾರ ಬರಲಿದೆ ಎಂದು ಹೇಳಿದರೆ, ಆದರೆ ಚುನಾವಣೆಯ ಫಲಿತಾಂಶವೇ ಹೇಳಿದ್ದು ಬೇರೆ. 2017ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತವನ್ನು ಸಾಧಿಸಿ ಸರ್ಕಾರವನ್ನು ರಚನೆ ಮಾಡಿದೆ. 177 ವಿಧಾನಸಭೆ ಕ್ಷೇತ್ರಗಳಲ್ಲಿ ಅಧಿಕಾರ ಪಡೆಯಲು 59 ಮ್ಯಾಜಿಕ್ ಸಂಖ್ಯೆಯಾದರೆ ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿ ಗದ್ದುಗೆಯನ್ನು ಪಡೆಯಿತು. ಎಎಪಿ ಇಪ್ಪತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಶಿರೋಮಣಿ ಅಕಾಳಿದಳವು 15 ಹಾಗೂ ಬಿಜೆಪಿ ಮೂರು, ಇತರೆ ಪಕ್ಷಗಳು ಎರಡು ಕ್ಷೇತ್ರದಲ್ಲಿ ಗೆಲುವು ಪಡೆದವು. ಇದಕ್ಕೂ ಮುನ್ನ 2012ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಎಸ್‌ಎಡಿ ಮೈತ್ರಿಕೂಟವು ಅಧಿಕಾರವನ್ನು ಪಡೆದಿದ್ದವು.

2022ರ ಚುನಾವಣೋತ್ತರ ಸಮೀಕ್ಷೆಯಲ್ಲಿ ಏನಿದೆ?
2022ರ ಚುನಾವಣೋತ್ತರ ಸಮೀಕ್ಷೆಯು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗೆಲುವು ಖಚಿತ ಎಂದು ಹೇಳಿದೆ. ಪಂಜಾಬ್ ಚುನಾವಣೆಗೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಟಿಜಿ ರಿಸರ್ಚ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟುಡೇ ಸಿಎನ್ಎಕ್ಸ್, ನ್ಯೂಸ್ 24- ಟುಡೇ ಚಾಣಕ್ಯ, ನ್ಯೂಸ್ ಎಕ್ಸ್ - ಪೋಲ್ ಸ್ಟ್ರಾಟ್, ರಿಪಬ್ಲಿಕ್, ಟೈಮ್ಸ್ ನೌ, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲಾ ಸಮೀಕ್ಷೆಗಳು ಎಎಪಿಗೆ ಗದ್ದುಗೆ ದೊರೆಯಲಿದೆ ಎಂದು ಹೇಳಿದೆ. 2017ರ ಕೆಲವು ಚುನಾವಣೋತ್ತರ ಸಮೀಕ್ಷೆಗಳು ಕೂಡಾ ಎಎಪಿ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿತ್ತು. ಆದರೆ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿ ಪಟ್ಟಕ್ಕೆ ಏರಿತ್ತು.

2022ರ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಪಕ್ಷಗಳು ಹೇಳುವುದು ಏನು?
2022ರ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ, "ಈ ಸಮೀಕ್ಷೆಗಾಗಿ ಕಡಿಮೆ ಸಂಖ್ಯೆಯ ಜನರನ್ನು ಸಂಪರ್ಕ ಮಾಡಲಾಗಿದೆ. ಆದ್ದರಿಂದ ಈ ಸಮೀಕ್ಷೆಯು ವಿಶ್ವಾಸಾರ್ಹವಲ್ಲ. ಪೋಲ್ ಸಮೀಕ್ಷೆಗಳು ಬಹಳ ವಿಶೇಷವಾದ ಕೆಲಸವಾಗಿದೆ. ಆದರೆ ಸಂಪೂರ್ಣ ವೃತ್ತಿಪರ ತಂಡವನ್ನು ಎಷ್ಟು ಮಂದಿ ನಿಭಾಯಿಸಬಲ್ಲರು ಎಂದು ನನಗೆ ಖಚಿತವಿಲ್ಲ. ಈ ದಿನಗಳಲ್ಲಿ ಮತದಾರ ಕೂಡ ಬುದ್ಧಿವಂತ, ತಾನು ಮಾಡಿದ ಮತದಾನದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುವುದಿಲ್ಲ. ಜನರು ಸತ್ಯವನ್ನು ಹೇಳುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ," ಎಂದು ತಿಳಿಸಿದ್ದಾರೆ. ಇನ್ನು ಎಸ್‌ಎಡಿ ಚುನಾವಣೋತ್ತರ ಸಮೀಕ್ಷೆಯಲ್ಲಿ ನಮಗೆ ಯಾವುದೇ ವಿಶ್ವಾಸವಿಲ್ಲ ಎಂದಿದ್ದಾರೆ. ಮತ ಎಣಿಕೆ ನಡೆದ ಬಳಿಕವೇ ಚುನಾವಣೆಯ ಫಲಿತಾಂಶ ಹೊರಬೀಳಲಿದೆ ಎಂದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications