ZEE News Opinion Poll: ಪಂಜಾಬ್‌ನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎನ್ನುತ್ತಿರುವ ಸಮೀಕ್ಷೆ
ಚಂಡೀಗಢ, ಜನವರಿ 21: ಮುಂಬರುವ ಪಂಜಾಬ್ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಸಮೀಕ್ಷೆ ಹೇಳುತ್ತಿದೆ.
ಆದಾಗ್ಯೂ, ಪಂಜಾಬ್ ವಿಧಾನಸಭೆಯ ಹಾಲಿ ಪ್ರತಿಪಕ್ಷ ಎಎಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದು ಸಮೀಕ್ಷೆಯ ಲೆಕ್ಕಾಚಾರವಾಗಿದೆ.
ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಆಡಳಿತಾರೂಢ ಕಾಂಗ್ರೆಸ್77 ಸ್ಥಾನದಿಂದ 35-38ಕ್ಕೆ ಕುಸಿಯಲಿದೆ, ಶಿರೋಮಣಿ ಅಕಾಲಿದಳ ಮೈತ್ರಿಯು 15-32-35 ಸೀಟುಗಳನ್ನು ಗೆಲ್ಲಬಹುದು, ಹಾಲಿ ಪ್ರತಿಪಕ್ಷ ಎಎಪಿಯ ಸ್ಥಾನಗಳು 20ರಿಂದ 36-39ಕ್ಕೆ ಏರಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಇನ್ನು ಬಿಜೆಪಿ 2017ರಲ್ಲಿ ಮೂರು ಸ್ಥಾನಗಳನ್ನು ಗೆದ್ದಿತ್ತು, ಈ ಬಾರಿ ನಾಲ್ಕರಿಂದ ಏಳು ಕ್ಷೇತ್ರಗಳಲ್ಲಿ ಗೆಲುವುದು ಸಾಧಿಸಬಹುದು, ಇತರರು ಎರಡರಿಂದ ಮೂರು ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
2017ರಲ್ಲಿ ಶೇ.39 ರಷ್ಟು ಮತ ಪಡೆದಿದ್ದ ಕಾಂಗ್ರೆಸ್ ಈ ಬಾರಿಯೂ ಅಷ್ಟೇ ಮತ ಪಡೆಯಬಹುದು, ಶಿರೋಮಣಿ ಅಕಾಲಿದಳು ಶೇ.25-26ಕ್ಕೆ ಇಳಿಯಬಹುದು. ಎಎಪಿ ಮತ ಗಳಿಕೆಯು 24ರಿಂದ 33ಕ್ಕೆ ಹೆಚ್ಚಳವಾಗಬಹುದು, ಬಿಜೆಪಿ ಕೂಡ ಶೇ. 5-6ಕ್ಕೆ ಏರಿಸಿಕೊಳ್ಳಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಪಂಜಾಬ್‌ನ ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಕಡೆಗೆ ಅತಿಹೆಚ್ಚು ಮತದಾರರು ಒಲವು ಹೊಂದಿರುವುದು ಗೊತ್ತಾಗಿದೆ. ಸಿಎಂ ಚನ್ನಿ ಪರ ಶೇ.31ರಷ್ಟು ಜನರು ಮತ ಚಲಾಯಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಪ್ರಬಲ ಪೈಪೋಟಿ ನೀಡುತ್ತಿದ್ದು, ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಭಗವಂತ್ ಮನ್ ಕೂಡ ಶೇ.24ರಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಾರು ಆಗಬೇಕು ಎಂಬ ಪ್ರಶ್ನೆಗೆ 1 ಲಕ್ಷ 5 ಸಾವಿರ ಮಂದಿ ಉತ್ತರ ನೀಡಿದ್ದಾರೆ. ಈ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಮುಂದಿದ್ದಾರೆ. ಮತದಾರರ ಪ್ರಕಾರ ಯಾರಿಗೆ ಎಷ್ಟು ಮತ ಸಿಗಲಿದೆ ಎಂಬುದನ್ನು ಮುಂದೆ ತಿಳಿಯಿರಿ.
ಚರಂಜಿತ್ ಸಿಂಗ್ ಚನ್ನಿ (ಕಾಂಗ್ರೆಸ್) - ಶೇ. 31 ಭಗವಂತ್ ಮಾನ್ (ಎಎಪಿ) - ಶೇ. 24 ಸುಖಬೀರ್ ಸಿಂಗ್ ಬಾದಲ್ (SAD) - ಶೇ. 22 ಅರವಿಂದ್ ಕೇಜ್ರಿವಾಲ್ (ಎಎಪಿ) - ಶೇ. 11 ಕ್ಯಾಪ್ಟನ್ ಅಮರಿಂದರ್ ಸಿಂಗ್ (ಬಿಜೆಪಿ+): ಶೇ. 7 ನವಜೋತ್ ಸಿಂಗ್ ಸಿಧು (ಕಾಂಗ್ರೆಸ್): ಶೇ. 4 ಮೂರು ತಿಂಗಳ ಮುಖ್ಯಮಂತ್ರಿ ಜನಪ್ರಿಯತೆ: ಪಂಜಾಬ್‌ನಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ ರಾಜ್ಯದಲ್ಲಿ ಅಪಾರ ಜನ ಬೆಂಬಲವನ್ನು ಪಡೆದುಕೊಂಡಿದ್ದಾರೆ.
ಇನ್ನೊಂದು ದಿಕ್ಕಿನಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜನಪ್ರಿಯತೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಚನ್ನಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಆಗಿದ್ದು, ಈ ತಳಹದಿ ಮೇಲೆ ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನ ಹೆಚ್ಚಿನ ಶೇಕಡಾವಾರು ದಲಿತ ಮತದಾರರು ಅವರನ್ನು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆಯಿದೆ.
ಕಾಂಗ್ರೆಸ್ ನಾಯಕನ ಜನಪ್ರಿಯತೆಯ ಹೊರತಾಗಿ ಎಎಪಿ ಅಭ್ಯರ್ಥಿ ಭಗವಂತ್ ಮಾನ್ ಕೂಡ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
117 ಸದಸ್ಯ ಬದಲ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20ರಂದು ಚುನಾವಣೆ ನಡೆಯಲಿದೆ, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಧುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ರಾಘವ್ ಛಡ್ಡಾ ಮಾಹಿತಿ ನೀಡಿದ್ದು, ಪ್ರಸ್ತುತ ಆಡಳಿತ ಪಕ್ಷ ಕಾಂಗ್ರೆಸ್ ಧುರಿ ವಿಧಾನಸಭಾ ಕ್ಷೇತ್ರವನ್ನು ಆಕ್ರಮಿಸಿಕೊಂಡಿದೆ ಹಾಗೆಯೇ ಪಕ್ಷದ ದಲ್ವಿಂದರ್ ಖಂಗುರಾ ಶಾಸಕರಾಗಿದ್ದಾರೆ. ಭಗವಂತ್ ಮನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಎಎಪಿ ಸಂಸದರಾಗಿದ್ದರು.












Click it and Unblock the Notifications