Post Office Scheme: 15 ಲಕ್ಷ ರೂ. ಹೂಡಿಕೆ ಮಾಡಿ 21.73 ಲಕ್ಷ ಪಡೆಯಿರಿ! ಹೇಗೆ ಮಾಹಿತಿ ಇಲ್ಲಿದೆ
ನವದೆಹಲಿ, ಫೆಬ್ರವರಿ.19: ಉಳಿತಾಯ ಮಾಡುವುದು ಯಾರಿಗೆ ತಾನೇ ಇಷ್ವಿಲ್ಲ ಹೇಳಿ. ಮಧ್ಯಮವರ್ಗದ ಬಹುದೊಡ್ಡ ಆಸೆ ಹಣ ಉಳಿತಾಯ ಮಾಡಿ ಮನೆ ಕಟ್ಟುವುದು, ಮಕ್ಕಳ ಮದುವೆ ಮಾಡುವುದು, ತಮ್ಮ ಇಷ್ಟದ ವಾಹನ ಖರೀದಿಸುವುದರಲ್ಲಿ ಹೋಗುತ್ತದೆ. ಇದಕ್ಕಾಗಿಯೇ ಬ್ಯಾಂಕ್‌ಗಳು ಹಲವು ಯೋಜನೆಗಳನ್ನು ತರುತ್ತವೆ. ಸರ್ಕಾರ ಕೂಡ ಹಲವು ವಿಧಗಳಲ್ಲಿ ಜನರ ಸಹಾಯಕ್ಕೆ ನಿಲ್ಲುತ್ತದೆ.
ಸದ್ಯ ಭಾರತೀಯ ಅಂಚೆ ತನ್ನ ಹೂಡಿಕೆದಾರರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಕೂಡ ಸುರಕ್ಷಿತ. ಏಕೆಂದರೆ, ಎಲ್ಲಾ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಭಾರತ ಸರ್ಕಾರದಿಂದ ನಡೆಸಲ್ಪಡುವುದರಿಂದ ಆದಾಯವನ್ನು ಖಾತರಿಪಡಿಸುತ್ತವೆ.

ಇದಲ್ಲದೆ, 80C ಅಡಿಯಲ್ಲಿ ಎಲ್ಲಾ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಈ ಯೋಜನೆಗಳಲ್ಲಿ ಪ್ರಮುಖವಾದದ್ದು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC). ನಿಯಮಿತವಾಗಿ ಉಳಿತಾಯ ಮಾಡುವ ಸಣ್ಣ ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.
NSC ಯೋಜನೆಯ ವಿವರಗಳು
ಬಡ್ಡಿ ದರ: 7.7 ಶೇಕಡಾ
ಕನಿಷ್ಠ ಹೂಡಿಕೆ: ರೂ 1,000
ಗರಿಷ್ಠ ಹೂಡಿಕೆ: ಯಾವುದೇ ಮಿತಿಯಿಲ್ಲ
ಲಾಕ್-ಇನ್ ಅವಧಿ: 5 ವರ್ಷಗಳು
ಅರ್ಹತೆ: ಈ ಯೋಜನೆಯಲ್ಲಿ ಭಾರತೀಯರು ಮಾತ್ರ ಹೂಡಿಕೆ ಮಾಡಬಹುದು.
NSC ಯೋಜನೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಸಿಗುವುದು ಎಷ್ಟು?

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ಮೊತ್ತವು 1,000 ರೂಪಾಯಿ ಆಗಿದೆ. ಜೊತೆಗೆ ಯಾವುದೇ ಹೂಡಿಕೆ ಹಣದ ಮಿತಿಯಿಲ್ಲ. ಈ ಯೋಜನೆಯಲ್ಲಿ, ಎರಡರಿಂದ ಮೂರು ಜನರು ಒಟ್ಟಾಗಿ ಹೂಡಿಕೆ ಮಾಡಲು ಜಂಟಿ ಖಾತೆಯನ್ನು ಕೂಡ ತೆರೆಯಬಹುದು. ಅಪ್ರಾಪ್ತ ವಯಸ್ಕರಿಗೆ, ಅವರ ಪರವಾಗಿ ಅವರ ಪೋಷಕರು ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ 15 ಲಕ್ಷ ಹೂಡಿಕೆ ಮಾಡುವ ಮೂಲಕ ಶೇ.7.7 ಬಡ್ಡಿ ದರದಲ್ಲಿ 6,73,551 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದು. ಅಂದರೆ, ಒಟ್ಟಾರೆ ಮೆಚ್ಯೂರಿಟಿಯಲ್ಲಿ ಒಟ್ಟು 21,73,551 ರೂಪಾಯಿಗಳು ನಿಮಗೆ ಸಿಗಲಿದೆ. ಹೀಗಾಗಿ ಇದು ಉಳಿತಾಯ, ಹೂಡಿಕೆ ಮಾಡುವವರಿಗೆ ಇರುವ ಉತ್ತಮ ಯೋಜನೆ ಎನ್ನಬಹುದು.
ಎನ್ಎಸ್ಸಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಎನ್ಎಸ್ಸಿಗೆ ಅರ್ಜಿ ಸಲ್ಲಿಸಲು ಹಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ನಿಮ್ಮ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸೀನಿಯರ್ ಸಿಟಿಜನ್ ಐಡಿ ಅಥವಾ ಸರ್ಕಾರಿ ಐಡಿಯಲ್ಲಿ ಯಾವುದಾದರೂ ಒಂದನ್ನು ನೀಡುವ ಅಗತ್ಯವಿರುತ್ತದೆ. ಇದರ ಜೊತೆಗೆ ನಿಮ್ಮ ಫೋಟೋವನ್ನು ಕೂಡ ನೀಡಬೇಕು.
ಇನ್ನು, ಈ ಯೋಜನೆಯಲ್ಲಿ ಪ್ರಮಾಣಪತ್ರ ಹೊಂದಿರುವವರು ಮೃತಪಟ್ಟರೇ, ನ್ಯಾಯಾಧೀಶರು ಆದೇಶಿಸಿದರೆ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದು ಲಾಕ್-ಇನ್ ಅವಧಿಗಿಂತ ಮುಂಚಿತವಾಗಿ ಹಿಂಪಡೆಯಬಹುದು.












Click it and Unblock the Notifications