ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Positive News; ಉಗ್ರ ಸಂಘಟನೆ ಸೇರುವ ಯುವಕರ ಸಂಖ್ಯೆ ಇಳಿಕೆ

|
Google Oneindia Kannada News

ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಐತಿಹಾಸಿಕ ನಿರ್ಣಯ ಕೈಗೊಂಡಿತು. ಒಂದು ವರ್ಷದ ಬಳಿಕ ಕಾಶ್ಮೀರದ ಪರಿಸ್ಥಿತಿ ಹೇಗಿದೆ? ಎಂಬುದು ಈ ವರ್ಷದ ಪ್ರಶ್ನೆಯಾಗಿತ್ತು.

ಭಾರತೀಯರು ಸಂತಸ ಪಡಬೇಕಾದ ವಿಚಾರವಿದು. ಒಂದು ವರ್ಷದಲ್ಲಿ ಕಣಿವೆ ರಾಜ್ಯದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಮುಖ್ಯವಾಗಿ ಯುವಕರು ಭಯೋತ್ಪಾದಕ ಸಂಘಟನೆ ಸೇರುವುದರಲ್ಲಿ ಗಣನೀಯ ಇಳಿಕೆಯಾಗಿದೆ.

ನಾಟಕೀಯ ರೀತಿಯಲ್ಲಿ ಶರಣಾದ ಉಗ್ರ: ವಿಡಿಯೋನಾಟಕೀಯ ರೀತಿಯಲ್ಲಿ ಶರಣಾದ ಉಗ್ರ: ವಿಡಿಯೋ

ಗಡಿ ಮೂಲಕ ಒಳನುಸುಳುವ ಉಗ್ರರ ಪ್ರಯತ್ನಗಳು ನಡೆಯುತ್ತಲೇ ಇದೆ. ಆದರೆ, ಉಗ್ರ ಸಂಘಟನೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಮುನ್ನಡೆಸುವುದು ಬಹುದೊಡ್ಡ ಆರ್ಥಿಕ ಸವಾಲು ಎಂಬುದು ಸಂಘಟನೆಗಳಿಗೆ ಅರ್ಥವಾಗಿದೆ, ವೆಚ್ಚ ಅಧಿಕವಾಗಿದೆ.

News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ! News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ!

Positive News Decline In Youth Joining Terror Groups In Kashmir

370ನೇ ವಿಧಿಯನ್ನು ರದ್ದು ಮಾಡಿದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳ ಚಟುವಟಿಕೆಗಳು ಶೇ 36ರಷ್ಟು ಕಡಿಮೆಯಾಗಿವೆ ಎಂದು ವರದಿ ಹೇಳಿದೆ. ಜನವರಿ ಇಂದ ಜುಲೈ 15ರ ತನಕ ನಡೆದ ಉಗ್ರರ ದಾಳಿಗಳನ್ನು ಆಧರಿಸಿ ಕೇಂದ್ರ ಸರ್ಕಾರ ಈ ವರದಿ ತಯಾರು ಮಾಡಿದೆ.

News makers; ಸರ್ಕಾರವನ್ನೇ ಎದುರು ಹಾಕಿಕೊಂಡು ಬಲಿಯಾದ ದುಬೆ!News makers; ಸರ್ಕಾರವನ್ನೇ ಎದುರು ಹಾಕಿಕೊಂಡು ಬಲಿಯಾದ ದುಬೆ!

ಒಟ್ಟು 188 ಉಗ್ರರ ದಾಳಿ ಪ್ರಕರಣ ಇದುವರೆಗೂ ದಾಖಲಾಗಿದೆ. ಜನವರಿಯಿಂದ ಜುಲೈ 15ರ ತನಕ 120 ದಾಳಿ ನಡೆದಿದೆ. ಕಳೆದ ವರ್ಷ ಜನವರಿಯಿಂದ ಜುಲೈ ತನಕ ಪೊಲೀಸರು, ಯೋಧರು ಸೇರಿ 75 ಜನರು ಹುತಾತ್ಮರಾಗಿದ್ದರು. ಈ ವರ್ಷ 35 ಜನರು ಹುತಾತ್ಮರಾಗಿದ್ದಾರೆ. ಕಳೆದ ವರ್ಷ ಮೃತಪಟ್ಟ ಸಾಮಾನ್ಯ ಜನರು 23, ಈ ವರ್ಷ 22.

ಕಣಿವೆ ರಾಜ್ಯದಲ್ಲಿ ಕಳೆದ ವರ್ಷ 6 ಐಇಡಿ ದಾಳಿಗಳನ್ನು ನಡೆಸಲಾಗಿತ್ತು. ಈ ಬಾರಿ ಕೇವಲ 1 ಬಾರಿ ಮಾತ್ರ ದಾಳಿಯಾಗಿದೆ. ಈ ವರ್ಷ 110 ಉಗ್ರರನ್ನು ಹತ್ಯೆ ಮಾಡಲಾಗಿದೆ. ಇವುಗಳಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ 50, ಲಷ್ಕರ್‌ನ 20 ಸದಸ್ಯರು ಸೇರಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಬಹುದೊಡ್ಡ ನಷ್ಟವಾಗಿದೆ. ರಿಯಾಜ್ ನಾಯಿಕೋ ಮತ್ತು ಕಮಾಂಡ್ ಯಾಸಿರ್ ಹತ್ಯೆ ಮಾಡಲಾಗಿದೆ. ಲಷ್ಕರ್ ಸಂಘಟನೆಯ ಕಮಾಂಡರ್ ಹೈದರ್‌ನನ್ನು ಸಹ ಈ ವರ್ಷ ಹತ್ಯೆ ಮಾಡಲಾಗಿದೆ.

ರಕ್ಷಣಾ ಪಡೆಗಳು 22 ಗುಪ್ತ ಸ್ಥಳಗಳ ಮೇಲೆ ದಾಳಿಯನ್ನು ನಡೆಸಿದ್ದು, 190 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿವೆ. 22 ಉಗ್ರರು, 300 ಸಹಚರರನ್ನು ಬಂಧಿಸಿವೆ.

English summary
After the abrogation of Article 370 Jammu and Kashmir has seen a considerable decline in the number of youth joining terror groups. This is the positive news after the one year for abrogation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X