ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಪ್ರತಿಮೆ ಬಗ್ಗೆ ಮಾಹಿತಿ

|
Google Oneindia Kannada News

ಹೈದರಾಬಾದ್, ಜನವರಿ 21: ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ರಾಮಾನುಜಚಾರ್ಯರ ಪ್ರತಿಮೆಯನ್ನು ಫೆಬ್ರವರಿ 5 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಸಮಾಜ ಸುಧಾರಕ ಹಾಗೂ 11ನೇ ಶತಮಾನದ ಸಂತ ಎನಿಸಿಕೊಂಡಿರುವ ರಾಮಾನುಜಾಚಾರ್ಯಯ 216 ಅಡಿಯ ಪ್ರತಿಮೆ ಲೋಕಾರ್ಪಣೆಗೊಳ್ಳುತ್ತಿದೆ.

ವೈಷ್ಣ ಪಂಥದ ಮುಂದಾಳು ಮತ್ತು ಭಕ್ತಿ ಚಳವಳಿಯ ರೂವಾರಿ ರಾಮಾನುಜಾಚಾರ್ಯರು 1017ರಲ್ಲಿ ತಮಿಳುನಾಡಿನ ಪೆರಂಬೂರಿನಲ್ಲಿ ಜನಿಸಿದರು. ಅವರು ವೇದಗಳ ಸಾರವನ್ನು 9 ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು.

ಅವರು ಸಮಾಜದ ಎಲ್ಲಾ ವರ್ಗಗಳ ಭಾರತೀ ಜೀವನ ವಿಧಾನವನ್ನು ಅರ್ಥಮಾಡಿಕೊಳ್ಳಲು ದೇಶಾದ್ಯಂತ ಸಂಚರಿಸಿದರು. ಜೀವನದುದ್ದಕ್ಕೂ ಶ್ರೀ ರಾಮಾನುಜಾಚಾರ್ಯರು ಸಮಾಜದಲ್ಲಿನ ಎಲ್ಲಾ ರೀತಿಯ ಅಸಮಾನತೆಯ ವಿರುದ್ಧ ಹೋರಾಡಿದರು.

PM Modi To Unveil 216-Foot Statue of Equality In Hyderabad on February 5

ಉದ್ಘಾಟನೆಯ ಬಗ್ಗೆ ಚಿನ್ನ ಜೀಯರ್ ಆಶ್ರಮದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಎರಡನೇ ಅತಿ ದೊಡ್ಡ ಪ್ರತಿಮೆ ಇದಾಗಿದೆ ಎಂಬ ಖ್ಯಾತಿಯನ್ನು ಸಮಾನತೆಯ ಮೂರ್ತಿ ಹೊಂದಿದೆ.

ಶ್ರೀ ರಾಮಾನುಜಾಚಾರ್ಯರು 1,000 ವರ್ಷಗಳಿಂದ ಸಮಾನತೆಯ ನಿಜ ಪ್ರತಿಮೆಯಾಗಿ ನಮ್ಮ ಮುಂದಿದ್ದಾರೆ. ಹಾಗೂ ಈ ಮೂಲಕ ಅವರ ಪಾಠಗಳು ಕನಿಷ್ಠ ಮುಂದಿನ 1,000 ವರ್ಷಗಳಿಗೆ ಉಳಿದುಕೊಳ್ಳುವಂತೆ ಆಗಲಿದೆ ಎಂದು ಚಿನ್ನ ಜೀಯರ್ ಸ್ವಾಮೀಜಿ ಹೇಳಿದ್ದಾರೆ.

ಫೆಬ್ರವರಿ 13 ರಂದು ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು ಒಳಗಿನ ಭಾಗದಲ್ಲಿ ಇರುವ 120 ಕೆಜಿ ತೂಕದ ರಾಮಾನುಜಾಚಾರ್ಯರ ಮತ್ತೊಂದು ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ರಾಮಾನುಜಚಾರ್ಯಯ ಪ್ರತಿಮೆ ಕುರಿತು ಕೆಲವು ಅಂಶಗಳು
* ರಾಮಾನುಜಾಚಾರ್ಯಯ 216 ಅಡಿಯ ಪ್ರತಿಮೆಯು ಹೈದರಾಬಾದಿನ ಹೊರವಲಯದಲ್ಲಿ ನಿರ್ಮಿಸಲಾಗಿದ್ದು, ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆ ಆಗಿರಲಿದೆ.
*ಥಾಯ್ಲೆಂಡ್​ನ ಕುಳಿತ ಭಂಗಿಯ ಬುದ್ಧನ ಪ್ರತಿಮೆ ಮೊದಲನೇ ಎತ್ತರದ ಪ್ರತಿಮೆ ಆಗಿದೆ.
*ಈ ವಿಪ್ರತಿಮೆಯನ್ನು ಪಂಚಲೋಹ ಬಳಸಿ ನಿರ್ಮಾಣ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್ ಸೇರಿ ಐದು ಲೋಹಗಳಿಂದ ಈ ಪ್ರತಿಮೆ ತಯಾರಾಗಿದೆ.
*ಇಲ್ಲಿರುವ ರಾಮಾನುಜಾಚಾರ್ಯರ ಗರ್ಭಗುಡಿಯನ್ನು 120 ಕಿಲೋ ಗ್ರಾಂ ಬಂಗಾರದಿಂದ ನಿರ್ಮಿಸಲಾಗಿದೆ.

*ಶ್ರೀ ರಾಮಾನುಜಾಚಾರ್ಯರು 11ನೇ ಶತಮಾನದ ಹಿಂದು ಧರ್ಮಶಾಸ್ತ್ರಜ್ಞ ತತ್ವಜ್ಞಾನಿ ಹಾಗೂ ಭಕ್ತಿ ಚಳುವಳಿಯನ್ನು ನಡೆಸಿದ ಸಮಾಜ ಸುಧಾರಕರೂ ಆಗಿದ್ದಾರೆ. ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್​ನ ಶಮ್ಸಾಬಾದ್​ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ.
*ಒಂದು ಸಾವಿರ ಕೋಟಿ ಮೊತ್ತದ ಈ ಯೋಜನೆಯನ್ನು ಜಾಗತಿಕವಾಗಿ ಇರುವ ಭಕ್ತಜನರ, ದಾನಿಗಳ ನಿಧಿ ಸಂಗ್ರಹಣೆಯ ಮೊತ್ತದಿಂದ ನಿರ್ಮಿಸಲಾಗಿದೆ.
*ಇಲ್ಲಿ 108 ದಿವ್ಯ ದೇಶ, 108 ಸುಂದರ ವಿಷ್ಣು ದೇಗುಲಗಳು ಇರಲಿದೆ. ತಮಿಳು ಸಂತರಾದ ಆಳ್ವರ್ಸರ ಕೆಲಸಗಳಲ್ಲಿ ಉಲ್ಲೇಖಿಸಿರುವ ರೂಪದಲ್ಲಿ ಇದು ಇರಲಿದೆ.

*ಈ ಪ್ರತಿಮೆಯು 216 ಅಡಿ ಎತ್ತರವಿದ್ದು, ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಬೇಧ ಇಲ್ಲದೆ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ.

*ಫೆಬ್ರವರಿ 2 ರಿಂದ ಫೆಬ್ರವರಿ 14 ರವರೆಗೆ ಈ ಕಾರ್ಯಕ್ರಮಗಳು ನಡೆಯಲಿದೆ. ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಹೈದರಾಬಾದ್​ನ ಹೊರವಲಯದಲ್ಲಿ ಇರುವ ಶಮ್ಸಾಬಾದ್​ನ ಮುಚಿಂತಾಲ್ ಎಂಬಲ್ಲಿ ಇದೆ.

*ಕಾರ್ಯಕ್ರಮದ ವಿಶೇಷವಾಗಿ ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗುವುದು. ಎರಡು ಲಕ್ಷ ಹಸುವಿನ ಕೆಜಿ ತುಪ್ಪದಿಂದ ಹೋಮ ನೆರವೇರಲಿದೆ ಎಂದು ತಿಳಿಸಲಾಗಿದೆ.

ಈ ಸ್ಥಳವು ಶೀಘ್ರವೇ ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬುದು ಚಿನ್ನ ಜೀಯರ್ ಸ್ವಾಮೀಜಿಗಳ ಆಶಯವಾಗಿದೆ.

English summary
Prime Minister Narendra Modi would unveil a 216-foot statue of Ramanujacharya, an 11th century saint and a social reformer, in Hyderabad on February 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X