Get Updates
Get notified of breaking news, exclusive insights, and must-see stories!

ವಲಸೆ ಕಾರ್ಮಿಕ ಕುಟುಂಬಗಳಿಗೆ ಉಜ್ವಲಾ 2.0 ಯೋಜನೆ ಶ್ರೀರಕ್ಷೆ: ಪಿಎಂ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉಜ್ವಲಾ 2.0 (ಪ್ರಧಾನಮಂತ್ರಿ ಉಜ್ವಲಾ ಯೋಜನೆ - ಪಿಎಂಯುವೈ)ಗೆ ಉತ್ತರಪ್ರದೇಶದ ಮಹೊಬಾದಲ್ಲಿ ಅಡುಗೆ ಅನಿಲ (ಎಲ್ ಪಿಜಿ) ಸಂಪರ್ಕಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಉಜ್ವಲಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮುಂಬರುವ ರಕ್ಷಾಬಂಧನದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸಹೋದರಿಯರನ್ನುದ್ದೇಶಿಸಿ ಮಾತನಾಡುತ್ತಿರುವುದು ತಮಗೆ ಹರ್ಷತಂದಿದೆ ಎಂದರು. ಹೆಚ್ಚಿನ ಸಂಖ್ಯೆಯ ಜನರು ವಿಶೇಷವಾಗಿ ಮಹಿಳೆಯರ ಜೀವನ ಉಜ್ವಲಾ ಯೋಜನೆಯಿಂದಾಗಿ ಅನಿರೀಕ್ಷಿತ ರೀತಿಯಲ್ಲಿ ಪ್ರಕಾಶಿಸುತ್ತಿದೆ ಎಂದರು 2016ರಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದಿದ್ದ ಮಂಗಲಪಾಂಡೆಯ ಹುಟ್ಟೂರಾದ ಉತ್ತರಪ್ರದೇಶದ ಬಲಿಯಾದಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು.

ಇಂದು ಎರಡನೇ ಆವೃತ್ತಿಯ ಉಜ್ವಲಾ ಯೋಜನೆಗೆ ಉತ್ತರಪ್ರದೇಶದ ವೀರಭೂಮಿ ಮಹೊಬಾದಿಂದ ಚಾಲನೆ ನೀಡಲಾಗುತ್ತಿದೆ ಎಂದರು. ಬುಂಡೇಲಖಂಡ್ ನ ಮತ್ತೊಬ್ಬ ಮಣ್ಣಿನ ಮಗ ಮೇಜರ್ ಧ್ಯಾನ್ ಚಂದ್ ಅಥವಾ ದಾದಾ ಧ್ಯಾನ್ ಚಂದ್ ಅವರನ್ನು ಪ್ರಧಾನಮಂತ್ರಿ ಸ್ಮರಿಸಿದರು. ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ನಾಮಕರಣ ಮಾಡಲಾಗಿದೆ. ಇದು ಕ್ರೀಡೆಯಲ್ಲಿ ಭವಿಷ್ಯವನ್ನು ಅರಸಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಲಿದೆ ಎಂದರು.

ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ

ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ

ವಸತಿ, ವಿದ್ಯುಚ್ಛಕ್ತಿ, ನೀರು, ಶೌಚಾಲಯ, ಅಡುಗೆ ಅನಿಲ, ರಸ್ತೆ, ಆಸ್ಪತ್ರೆ ಮತ್ತು ಶಾಲೆ ಮತ್ತಿತರ ಹಲವು ಮೂಲಸೌಕರ್ಯಗಳಿಗಾಗಿ ದೇಶದ ಜನತೆ ದಶಕಗಳ ಕಾಲ ಕಾಯುವಂತಾಗಿತ್ತು ಎಂದು ಪ್ರಧಾನಮಂತ್ರಿ ಅವರು ಟೀಕಿಸಿದರು. ಇಂತಹ ಹಲವು ಸಮಸ್ಯೆಗಳನ್ನು ದಶಕಗಳ ಹಿಂದೆಯೇ ಪರಿಹರಿಸಬಹುದಾಗಿತ್ತು ಎಂದರು. ನಮ್ಮ ಸಹೋದರಿಯರು ಮನೆ ಹಾಗೂ ಅಡುಗೆ ಕೋಣೆಗಳಿಂದ ಈಚೆ ಬಂದು ರಾಷ್ಟ್ರ ನಿರ್ಮಾಣಕ್ಕೆ ವ್ಯಾಪಕವಾಗಿ ಕೊಡುಗೆ ನೀಡಬೇಕಾದರೆ ಮೊದಲು ಅವರು ಮನೆ ಮತ್ತು ಅಡುಗೆ ಕೋಣೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು. ಆದ್ದರಿಂದ ಕಳೆದ ಆರೇಳು ವರ್ಷಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಸಮರೋಪಾದಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ವಚ್ಛ ಭಾರತ್ ಮಿಷನ್ ಅಡಿ ದೇಶದಲ್ಲಿ ಕೋಟ್ಯಂತರ ಶೌಚಾಲಯ

ಸ್ವಚ್ಛ ಭಾರತ್ ಮಿಷನ್ ಅಡಿ ದೇಶದಲ್ಲಿ ಕೋಟ್ಯಂತರ ಶೌಚಾಲಯ

ಸ್ವಚ್ಛ ಭಾರತ್ ಮಿಷನ್ ಅಡಿ ದೇಶದಲ್ಲಿ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ; ಬಡಕುಟುಂಬಗಳಿಗೆ ಎರಡು ಕೋಟಿಗೂ ಅಧಿಕ ಮನೆಗಳನ್ನು ನೀಡಲಾಗಿದೆ. ಅದರಲ್ಲಿ ಬಹುತೇಕ ಮಹಿಳೆಯರ ಹೆಸರಿನಲ್ಲಿವೆ; ಗ್ರಾಮೀಣ ರಸ್ತೆಗಳು; ಮೂರು ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ, ಆಯುಷ್ಮಾನ್ ಭಾರತ್ ಅಡಿ 50 ಕೋಟಿ ಜನರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ಲಸಿಕೆ ಪಡೆಯಲು ಹಾಗು ಪೌಷ್ಟಿಕಾಂಶಕ್ಕೆ ನೇರ ನಗದು ವರ್ಗಾವಣೆ; ಕೊರೊನಾ ಅವಧಿಯಲ್ಲಿ ಮಹಿಳೆಯರಿಗೆ ಜನ್-ಧನ್ ಖಾತೆ ಮೂಲಕ ಸರ್ಕಾರದಿಂದ 30 ಸಾವಿರ ಕೋಟಿ ರೂಪಾಯಿ ಜಮೆ; ನಮ್ಮ ಸಹೋದರಿಯರಿಗೆ ಜಲಜೀವನ್ ಮಿಷನ್ ಅಡಿ ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಯೋಜನೆಗಳು ಮಹಿಳೆಯರ ಜೀವನದಲ್ಲಿ ಗಮನಾರ್ಹ ಪರಿವರ್ತನೆಗಳನ್ನು ತಂದಿದೆ ಎಂದು ಹೇಳಿದರು.

ಆರೋಗ್ಯ, ಅನುಕೂಲ ಮತ್ತು ಸಬಲೀಕರಣ

ಆರೋಗ್ಯ, ಅನುಕೂಲ ಮತ್ತು ಸಬಲೀಕರಣ

ನಮ್ಮ ಸಹೋದರಿಯರ ಆರೋಗ್ಯ, ಅನುಕೂಲ ಮತ್ತು ಸಬಲೀಕರಣಕ್ಕಾಗಿ ಕೈಗೊಂಡ ಕ್ರಮಗಳಿಂದಾಗಿ ಉಜ್ವಲ ಯೋಜನೆಗೆ ಹೆಚ್ಚಿನ ಉತ್ತೇಜನ ದೊರೆತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯೋಜನೆಯ ಮೊದಲ ಹಂತದಲ್ಲಿ ಎಂಟು ಕೋಟಿ ಬಡವರು, ದಲಿತರು, ಶೋಷಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಈ ಉಚಿತ ಅಡುಗೆ ಅನಿಲ ಸಂಪರ್ಕ ಯೋಜನೆಯ ಲಾಭದ ಅನುಭವವಾಗಿದೆ. ಉಜ್ವಲಾ ಯೋಜನೆ, ಎಲ್‌ಪಿಜಿ ಅನಿಲ ಮೂಲಸೌಕರ್ಯ ವಿಸ್ತರಣೆಯನ್ನು ಹಲವು ಪಟ್ಟು ಹೆಚ್ಚಿಸಿದೆ.

11 ಸಾವಿರಕ್ಕೂ ಅಧಿಕ ಎಲ್‌ಪಿಜಿ ವಿತರಣಾ ಕೇಂದ್ರ

11 ಸಾವಿರಕ್ಕೂ ಅಧಿಕ ಎಲ್‌ಪಿಜಿ ವಿತರಣಾ ಕೇಂದ್ರ

ಕಳೆದ ಆರೇಳು ವರ್ಷಗಳಲ್ಲಿ 11 ಸಾವಿರಕ್ಕೂ ಅಧಿಕ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. 2014ರಲ್ಲಿ ಉತ್ತರ ಪ್ರದೇಶದಲ್ಲಿ ಕೇವಲ ಎರಡು ಸಾವಿರ ಎಲ್‌ಪಿಜಿ ವಿತರಣಾ ಕೇಂದ್ರಗಳಿದ್ದವು. ಈಗ ಅವುಗಳ ಸಂಖ್ಯೆ ನಾಲ್ಕು ಸಾವಿರಕ್ಕೆ ಏರಿಕೆಯಾಗಿದೆ. 2014ರಿಂದೀಚೆಗೆ ಕಳೆದ ಏಳು ವರ್ಷಗಳಲ್ಲಿ ಹೆಚ್ಚಿನ ಅಡುಗೆ ಅನಿಲ ಸಂಪರ್ಕಗಳನ್ನು ನೀಡಿರುವುದರಿಂದ ನಾವು ಶೇಕಡ 100ರಷ್ಟು ಅಡುಗೆ ಅನಿಲ ಸಂಪರ್ಕ ಸಾಧಿಸುವತ್ತಾ ಸಾಗಿದ್ದೇವೆ ಎಂದು ಪ್ರಧಾನ ಮಂತ್ರಿ ಹೇಳಿದರು.

ವಲಸೆ ಹೋಗುವ ಕುಟುಂಬಗಳಿಗೆ ಇದು ನೆರವಾಗಿದೆ

ವಲಸೆ ಹೋಗುವ ಕುಟುಂಬಗಳಿಗೆ ಇದು ನೆರವಾಗಿದೆ

ಉತ್ತರ ಪ್ರದೇಶದಾದ್ಯಂತ ಮತ್ತು ಬುಂಡೇಲ್ ಖಂಡ ಸೇರಿದಂತೆ ಇತರೆ ರಾಜ್ಯಗಳ ಗ್ರಾಮಗಳಿಂದ ನಗರಗಳಿಗೆ ಅಥವಾ ರಾಜ್ಯಗಳಿಗೆ ವಲಸೆ ಹೋಗುವ ಕುಟುಂಬಗಳಿಗೆ ಇದು ನೆರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ವಿಳಾಸ ದಾಖಲೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಉಜ್ವಲಾ 2.0 ಅಡಿ ಅಂತಹ ಲಕ್ಷಾಂತರ ಕುಟುಂಬಗಳಿಗೆ ಗರಿಷ್ಠ ಪ್ರಯೋಜನವನ್ನು ಒದಗಿಸಲಾಗುವುದು. ಇದೀಗ ಅಂತಹ ಕೂಲಿಕಾರರು ವಿಳಾಸ ದೃಢೀಕರಣಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿಲ್ಲ. ವಲಸೆ ಕಾರ್ಮಿಕರ ಪ್ರಾಮಾಣಿಕತೆಯ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ನಂಬಿಕೆ ಎಂದು ಹೇಳಿದರು. ಇದಕ್ಕೆ ಮಾಡಬೇಕಾಗಿರುವುದೆಂದರೆ ವಿಳಾಸದ ಸ್ವಯಂ ದೃಢೀಕರಣ ಪತ್ರ ನೀಡಿ, ಅಡುಗೆ ಅನಿಲ ಸಂಪರ್ಕವನ್ನು ಪಡೆಯಬಹುದಾಗಿದೆ.

12 ಲಕ್ಷಕ್ಕೂ ಅಧಿಕ ಮನೆಗಳಿಗೆ ಪಿಎನ್‌ಜಿ ಅನಿಲ ಸಂಪರ್ಕ

12 ಲಕ್ಷಕ್ಕೂ ಅಧಿಕ ಮನೆಗಳಿಗೆ ಪಿಎನ್‌ಜಿ ಅನಿಲ ಸಂಪರ್ಕ

ಕೊಳವೆ ಮೂಲಕ ಅಡುಗೆ ಅನಿಲ ಒದಗಿಸುವ ಪ್ರಯತ್ನಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ನರೇಂದ್ರ ಮೋದಿ ಹೇಳಿದರು. ಸಿಲಿಂಡರ್‌ಗಿಂತ ಪಿಎನ್‌ಜಿ ಬಲೆ ಅತ್ಯಂತ ಕಡಿಮೆ ಮತ್ತು ಉತ್ತರ ಪ್ರದೇಶ ಸೇರಿದಂತೆ ಪೂರ್ವ ಭಾರತದ ಹಲವು ಜಿಲ್ಲೆಗಳಲ್ಲಿ ಪಿಎನ್‌ಜಿ ಒದಗಿಸುವ ಕೆಲಸ ಭರದಿಂದ ಸಾಗಿದೆ. ಮೊದಲನೇ ಹಂತದಲ್ಲಿ ಉತ್ತರ ಪ್ರದೇಶದ 50ಕ್ಕೂ ಅಧಿಕ ಜಿಲ್ಲೆಗಳಲ್ಲಿ 12 ಲಕ್ಷಕ್ಕೂ ಅಧಿಕ ಮನೆಗಳಿಗೆ ಪಿಎನ್‌ಜಿ ಅನಿಲ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ನಾವು ಇದೀಗ ಆ ಗುರಿಯ ಸನಿಹದಲ್ಲಿದ್ದೇವೆ ಎಂದರು.(ಮಾಹಿತಿ ಕೃಪೆ: ಪ್ರಧಾನಿ ಸಚಿವಾಲಯ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+