ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bike stunt: ಹಿಂದೆ ಕುಳಿತವಳಾಕೆ ಮುಂದೆ ನಿಂತವನು ಈತ- ಹುಷಾರ್ ಮಗಾ ಎಂದ ನೆಟ್ಟಿಗರು!

|
Google Oneindia Kannada News

ಇತ್ತೀಚಿಗೆ ಅಪಾಯಕಾರಿ ಬೈಕ್ ಸ್ಟಂಟ್ ವಿಡಿಯೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಕೆಲ ಪುಂಡರು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದಾರೆ. ಇಂತಹದ್ದೇ ಒಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಬೈಕ್‌ನಲ್ಲಿ ಜಾಲಿ ರೈಡ್ ವೇಳೆ ಅಪಾಯಕಾರಿ ಸ್ಟಂಟ್ ಮಾಡಿರುವುದು ಕಂಡು ಬಂದಿದೆ. ಈ ಅಪಾಯಕಾರಿ ಸಾಹಸ ಪ್ರದರ್ಶನದ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. 'ನಿಜವಾದ ಬಾದ್‌ಶಾ ಇದ್ದಾನೆ' ಎಂಬ ಶೀರ್ಷಿಕೆಯೊಂದಿಗೆ ಘಂಟಾ ಹೆಸರಿನ ಇಂಟಾಗ್ರಾಮ್‌ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್ ಕ್ಲಿಪ್‌ನಲ್ಲಿ ಪುರುಷನು ಅತ್ಯಂತ ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾನೆ. ಆದರೆ ಅವನ ಹೆಂಡತಿ ತನ್ನ ಘೂಂಗಟ್ ಜೊತೆ ಬೈಕ್‌ನಲ್ಲಿ ಅರಾಮದಾಯವಾಗಿ ಕುಳಿತುಕೊಳ್ಳುವುದನ್ನು ಕಾಣಬಹುದು. ಇಬ್ಬರ ಪ್ರಾಣವನ್ನು ಲೆಕ್ಕಿಸದೆ ಸವಾರ ಹುಚ್ಚಾಟ ತೋರಿದ್ದಾನೆ. ಹಿಂಬದಿಯ ಸವಾರರು ಈತನ ಹುಚ್ಚಾಟದ ವಿಡಿಯೋವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಸ್ಟಂಟ್‌ ಬಗ್ಗೆ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

Pillion Ride: Husband doing bike stunts with wife- viral video

ವೈರಲ್ ವಿಡಿಯೊದಲ್ಲಿ ಪುರುಷನು ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಓಡಿಸುತ್ತಿರುವಾಗ ಅವನ ಹೆಂಡತಿ ಹಿಂದೆ ಕುಳಿತುರುವುದನ್ನು ಕಾಣಬಹುದು. ದಂಪತಿಗಳು ಯಾವುದೇ ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಕುಳಿತಿದ್ದಾರೆ. ಈ ವೇಳೆ ವ್ಯಕ್ತಿಯು ಸಾಹಸಗಳನ್ನು ಪ್ರದರ್ಶಿಸುತ್ತಾನೆ. ಮೊದಲು ಅವನು ಬೈಕ್‌ನಲ್ಲಿ ಕುಳಿತು ನಂತರ ಹ್ಯಾಂಡಲ್‌ಬಾರ್‌ ಬಿಡುತ್ತಾನೆ. ಬಳಿಕ ಆತ ಚಲಿಸುತ್ತಿರುವ ಬೈಕಿನಲ್ಲಿ ಸಮತೋಲನ ಕಾಯ್ದುಕೊಂಡು ನಿಲ್ಲುತ್ತಾನೆ. ಬೈಕ್ ಸವಾರನು ಸೀಟಿನ ಮೇಲೆ ನಿಂತು ತನ್ನ ಸಾಹಸವನ್ನು ಮುಂದುವರಿಸಿದ ನಂತರ ವಿಡಿಯೊ ಕೊನೆಗೊಳ್ಳುತ್ತದೆ.

Pillion Ride: Husband doing bike stunts with wife- viral video

ರಾಮಾರಿದರೆ ಇವರಿಬ್ಬರ ಪ್ರಾಣಕ್ಕೆ ಮಾತ್ರವಲ್ಲದೆ ಸಹ ಪ್ರಯಾಣಿಕರ ಪ್ರಾಣಕ್ಕೂ ಕುತ್ತು ತರುವ ಅಪಾಯಕಾರಿ ಸ್ಟಂಟ್‌ ಅನ್ನು ವ್ಯಕ್ತಿ ಮಾಡಿದ್ದಾನೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ನಿಖರವಾದ ಮಾಹಿತಿ ಇಲ್ಲವಾದರೂ ಇಂತಹ ಸ್ಟಂಟ್‌ಗಳಿಗೆ ಬ್ರೇಕ್ ಬೀಳಬೇಕಿದೆ.

English summary
Pillion Ride: A video of a man doing a dangerous stunt during a jolly ride on a bike with his wife has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X