ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

|
Google Oneindia Kannada News

ಬೀಜಿಂಗ್, ಮಾರ್ಚ್ 18: ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲಿಗೆ ಕಾಣಿಸಿಕೊಂಡ ಮಾರಣಾಂತಿಕ ಕೊರೊನಾವೈರಸ್ ಈಗ ವಿಶ್ವವ್ಯಾಪ್ತಿ ಹಬ್ಬಿದ್ದು, ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಈ ನಡುವೆ ಕೊವಿಡ್19 ಕುರಿತಂತೆ ಚೀನಾದ ವೈದ್ಯಕೀಯ ಸಂಶೋಧನೆ ಮುಂದುವರೆದಿದ್ದು, ವಿವಿಧ ರಕ್ತದ ಗುಂಪಿನವರಿಗೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ.

Recommended Video

Bengaluru's iskon temple shut down | Temples shut down in bangalore | Bengaluru | Karnataka

ನೀವು ಎ ರಕ್ತ ಗುಂಪಿಗೆ ಸೇರಿದವರೇ? ಹಾಗಾದರೆ ನಿಮ್ಮಲ್ಲಿ ಕೊರೊನಾವೈರಸ್ ಸೋಂಕು ತಗುಲುವ ಸಂಭವ ಹೆಚ್ಚು, ಉಳಿದ ಬ್ಲಡ್ ಗ್ರೂಪಿಗೆ ಹೋಲಿಸಿದರೆ ಎ ಬ್ಲಡ್ ಗ್ರೂಪಿನವರಿಗೆ ಸೋಂಕು ಬೇಗ ತಗುಲುತ್ತಿದೆ ಎಂದು ಚೀನಿ ಸಂಶೋಧಕರು ಹೇಳಿದ್ದಾರೆ. ಚೀನಿ ವಿಜ್ಞಾನಿಗಳ ಪ್ರಕಾರ, ಒ ಬ್ಲಡ್ ಗ್ರೂಪಿನವರಿಗೆ ಕೊರೊನಾವೈರಸ್ ಸೋಂಕು ತಗುಲುವ ಸಾಧ್ಯತೆ ಕಡಿಮೆಯಿದೆ. ವೈರಸ್ ವಿರುದ್ಧ ಈ ಬ್ಲಡ್ ಗ್ರೂಪಿನವರು ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದ್ದಾರೆ. ಹೀಗಾಗಿ ಸುಲಭವಾಗಿ ಸೋಂಕು ತಗುಲುವುದಿಲ್ಲ ಎಂದು ವರದಿ ನೀಡಿದ್ದಾರೆ.

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

ಕೊರೊನಾವೈರಸ್ ಸೋಂಕು ಹೆಚ್ಚಾಗಿರುವ ಚೀನಾದ ಪ್ರಾಂತ್ಯಗಳಲ್ಲಿರುವ ಅನೇಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್19 ರೋಗಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲೂ ವುಹಾನ್ ಹಾಗೂ ಶೆನ್ಜೆನ್ ಪ್ರಾಂತ್ಯದ ಕೊವಿಡ್19 ರೋಗಿಗಳ ಸ್ಯಾಂಪಲ್ ಪಡೆದು ಪರೀಕ್ಷಿಸಿ ಈ ವರದಿಯನ್ನು ನೀಡಿದ್ದಾರೆ.

2000 ರೋಗಿಗಳ ಸ್ಯಾಂಪಲ್ ಪರೀಕ್ಷೆ

2000 ರೋಗಿಗಳ ಸ್ಯಾಂಪಲ್ ಪರೀಕ್ಷೆ

ಮೊದಲ ಹಂತದಲ್ಲಿ 2000 ರೋಗಿಗಳ ಸ್ಯಾಂಪಲ್ ಪರೀಕ್ಷಿಸಿದಾಗ ಎ ರಕ್ತಗುಂಪು ಹೊಂದಿದ್ದ ರೋಗಿಗಳಿಗೆ ಸೋಂಕು ಬೇಗ ಹರಡುವುದು ಪತ್ತೆಯಾಗಿದೆ. ಒ ಬ್ಲಡ್ ಗ್ರೂಪಿನವರಿಗೆ ಕಡಿಮೆ ಪ್ರಮಾಣದಲ್ಲಿ ಸೋಂಕು ತಗುಲಿದೆ. ರೋಗಿಗಳು ಹಾಗೂ ಸ್ಥಳೀಯರ ರಕ್ತದ ಸ್ಯಾಂಪಲ್ ಪರೀಕ್ಷೆ ಹೋಲಿಕೆ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ.

ಹೀಗಾಗಿ, ಎ ರಕ್ತದ ಗುಂಪಿನವರಿಗೆ ಹೆಚ್ಚಿನ ಆದ್ಯತೆ ಮೇರೆಗೆ ಆರೋಗ್ಯ ಭದ್ರತೆ ಒದಗಿಸಬೇಕು, ಪ್ರತ್ಯೇಕ ಚಿಕಿತ್ಸೆ ಒದಗಿಸಬೇಕು, ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಸೋಂಕಿಯ ಎ ರಕ್ತದ ಗುಂಪಿನವರಿಗೆ ಮೊದಲಿಗೆ ಚಿಕಿತ್ಸೆ ನೀಡಬೇಕು ಎಂದು ವರದಿಯಲ್ಲಿ ಹೇಳಿದ್ದಾರೆ.

ಆರಂಭಿಕ ಹಂತದ ಸಂಶೋಧನಾ ವರದಿ

ಆರಂಭಿಕ ಹಂತದ ಸಂಶೋಧನಾ ವರದಿ

ಇದು ಆರಂಭಿಕ ಹಂತದ ಸಂಶೋಧನಾ ವರದಿಯಾಗಿದೆ. ಕೊವಿಡ್19ಗೆ ಮದ್ದು ಕಂಡು ಹಿಡಿಯುವ ಕಾರ್ಯ ಭರದಿಂದ ಸಾಗಿದೆ. ಜೊತೆಜೊತೆಗೆ ಸರ್ಕಾರ ಹಾಗೂ ವೈದ್ಯಕೀಯ ತಂಡಗಳಿಗೆ ಸೂಚನೆಗಳನ್ನು ನೀಡುತ್ತಿರುವ ವಿಜ್ಞಾನಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ ಎಂದಿದ್ದಾರೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ

ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ. ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ರೋಗಿಯ ದೇಹ ಹೊಕ್ಕಿದ ಒಂದು ವಾರದಲ್ಲೇ ತಾನೆ ತಾನಾಗಿ ನಾಶವಾಗುತ್ತದೆ. ಅಥವಾ ತೆಗೆದುಕೊಳ್ಳುವ ಚಿಕಿತ್ಸೆ, ಆಹಾರ ಕ್ರಮದ ಮೇಲೆ ಶೀತ ಯಾವಾಗ ಕಡಿಮೆಯಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಸಾರ್ಸ್ ಮಾದರಿ ಕೊರೊನಾವೈರಸ್ ನಿಂದ ಹರಡುವ ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ.

ಮೆರ್ಸ್ ಮತ್ತು ಸಾರ್ಸ್ ವೈರಸ್ ನಂತೆ ಕೊರೊನಾ

ಮೆರ್ಸ್ ಮತ್ತು ಸಾರ್ಸ್ ವೈರಸ್ ನಂತೆ ಕೊರೊನಾ

ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ. ಕೆಲವು ಕೊರೊನಾ ವೈರಸ್ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ. ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.

ಕೋವಿಡ್19ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ

ಕೋವಿಡ್19ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ

ಕೊರೊನಾ ವೈರಸ್‌ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದಾಗಿದೆ. ಕೈಕಾಲುಗಳನ್ನು ಸೋಪು, ನೀರಿನಿಂದ ಕೈತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಈಗಾಗಲೇ ಸೋಂಕಿನ ಲಕ್ಷಣಗಳು ಕಂಡು ಬಂದಿರುವವರಿಂದ ದೂರವಿರಬೇಕು. ಒಂದೊಮ್ಮೆ ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ. ಅಮೆರಿಕ, ಯುರೋಪ್, ಭಾರತ, ಚೀನಾ, ಯುಕೆ ಮುಂತಾದೆಡೆ ವಿಜ್ಞಾನಿಗಳು, ವೈದ್ಯರು ಲಸಿಕೆ, ಚುಚ್ಚುಮದ್ದು ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

English summary
People With Blood Group Type ‘A’ And ‘O’ Have a Special Link to Coronavirus Disease. This is what a new Chinese study has revealed. According to the scientists, those with type ‘O’ blood group are more resistant to the virus than people belonging to any other blood groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X