ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿರುದ್ಧ ಪಾಕಿಸ್ತಾನ ನಾರ್ಕೋ ಭಯೋತ್ಪಾದನೆಯ ತಂತ್ರ: ವರದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 01: ಯುವಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಸಲುವಾಗಿ ಪಾಕಿಸ್ತಾನ ಕಾಶ್ಮೀರ ಕಣಿವೆಯಲ್ಲಿ ಭಾರತದ ವಿರುದ್ಧ ಡ್ರಗ್ಸ್‌ ಭಯೋತ್ಪಾದನೆಯನ್ನು ಹೊಸ ಅಸ್ತ್ರವಾಗಿ ಬಳಸುತ್ತಿದೆ.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್‌ಎಫ್‌) ನಲ್ಲಿ ಅಯ್ಜಾಜ್ ವಾನಿ ಎಂಬುವವರು, ಕಾಶ್ಮೀರವು ಮಾದಕ ವಸ್ತು, ಡ್ರಗ್ಸ್‌ ಭಯೋತ್ಪಾದನೆಯಲ್ಲಿ ಅಪಾಯಕಾರಿ ಏರಿಕೆಗೆ ಸಾಕ್ಷಿಯಾಗಿದೆ. ಧಾರ್ಮಿಕ ಮುಖಂಡರ ಅಸಮರ್ಥತೆಯು ಈ ಸಮಸ್ಯೆಯ ಬಗ್ಗೆ ಅವರ ಮೌನದಿಂದಾಗಿ ಮತ್ತಷ್ಟು ಹೆಚ್ಚಿಸಿದೆ ಎಂದು ವರದಿ ಮಾಡಿದೆ.

ಎನ್‌ಡಿಪಿಎಸ್ ಕಾಯ್ದೆಯಡಿ 'ಭಾಂಗ್' ಗೆ ನಿಷೇಧವಿಲ್ಲ: ಹೈಕೋರ್ಟ್ಎನ್‌ಡಿಪಿಎಸ್ ಕಾಯ್ದೆಯಡಿ 'ಭಾಂಗ್' ಗೆ ನಿಷೇಧವಿಲ್ಲ: ಹೈಕೋರ್ಟ್

ಕಾಶ್ಮೀರ ಕಣಿವೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಹೆರಾಯಿನ್ ದುರ್ಬಳಕೆ ಶೇ. 2,000ರಷ್ಟು ಏರಿಕೆ ಕಂಡಿದೆ. ಡ್ರೋನ್‌ಗಳ ಸಹಾಯದಿಂದ ಕಾಶ್ಮೀರದಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಒಳನುಸುಳಿಸಲು ಪಾಕಿಸ್ತಾನ ಇದೀಗ ಮುಂದಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಪಾಕಿಸ್ತಾನದ ಮಾದಕವಸ್ತು ಭಯೋತ್ಪಾದನೆಯನ್ನು ದೊಡ್ಡ ಸವಾಲು ಎಂದು ಕರೆದಿದ್ದಾರೆ.

ಕಳೆದ 30 ವರ್ಷಗಳಿಂದ ಪಾಕಿಸ್ತಾನವು ಜಮಾತ್-ಇ-ಇಸ್ಲಾಮಿ, ಸಲಾಫಿಸಂ ಮತ್ತು ತಬ್ಲೀಗ್‌ನಂತಹ ಧಾರ್ಮಿಕ ಸಿದ್ಧಾಂತಗಳನ್ನು ಹೆಚ್ಚಾಗಿ ಪರಿಚಯಿಸುವ ಮೂಲಕ ಅನೌಪಚಾರಿಕ ನಿಯಂತ್ರಣ ವ್ಯವಸ್ಥೆಯ ಸಾಂಪ್ರದಾಯಿಕ ವಿಧಾನಗಳನ್ನು ಒಡೆಯುವಲ್ಲಿ ಯಶಸ್ವಿಯಾಗಿದೆ. ಈ ಧಾರ್ಮಿಕ ಸಿದ್ಧಾಂತಗಳು ಸಮಾಜದೊಳಗಿನ ವಿವೇಕದ ಧ್ವನಿಗಳನ್ನು ಮೌನಗೊಳಿಸಿವೆ. ಅಲ್ಲದೆ ಸಾಂಪ್ರದಾಯಿಕ ಸಾಮಾಜಿಕ ನೀತಿಗಳು ಮತ್ತು ಗುರುತುಗಳನ್ನು ಅಪ್ರಸ್ತುತಗೊಳಿಸಿವೆ.

ಅಲ್ಲದೆ ಈ ಸಿದ್ಧಾಂತಗಳೊಂದಿಗೆ ಜನರ ಬಾಂಧವ್ಯವು ಸಮುದಾಯದ ಮಟ್ಟದಲ್ಲಿ ಸಮಾಜವನ್ನು ವಿಭಜಿಸಿದೆ. ಯುವಕರಲ್ಲಿ ವಿಕೃತ ನಡವಳಿಕೆಯನ್ನು ಉತ್ತೇಜಿಸಿದೆ. ಈ ಅನಿಯಂತ್ರಿತ ವಿಕೃತ ನಡವಳಿಕೆಯು ಮೂಲಭೂತವಾದ, ಉಗ್ರವಾದ ಮತ್ತು ಈಗ ಮಾದಕ ವ್ಯಸನದ ವ್ಯಾಪಕ ಏರಿಕೆಗೆ ಪ್ರಾಥಮಿಕವಾಗಿ ಕಾರಣವಾಗಿದೆ ಎಂದು ವಾನಿ ಹೇಳಿದ್ದಾರೆ.

ಧಾರ್ಮಿಕ ಕೂಟಗಳಲ್ಲಿ ಕುರಾನ್ ಬೋಧನೆಗಳು ಮತ್ತು ಮಾದಕ ವ್ಯಸನದ ವಿರುದ್ಧ ಪ್ರವಾದಿಯ ಮಾತುಗಳು, ಮಾದಕ ದ್ರವ್ಯ ಸೇವನೆ ಮತ್ತು ಪಾಕಿಸ್ತಾನದ ಪಾತ್ರವನ್ನು ಗಂಭೀರವಾಗಿ ಚರ್ಚಿಸುವ ಬದಲು ಮುಲ್ಲಾಗಳು ಮತ್ತು ಧಾರ್ಮಿಕ ಮುಖಂಡರು ತಮ್ಮ ಸ್ವಂತ ಬೋಧನೆಗಳಿಗೆ ಅಂಟಿಕೊಂಡಿದ್ದಾರೆ. ಈ ವಿವಾದಾತ್ಮಕ ಸಿದ್ಧಾಂತಗಳೊಂದಿಗೆ ಕೈಮೀಲಾಯಿಸಿರುವ ಮುಲ್ಲಾಗಳು ಶುಕ್ರವಾರ ಮತ್ತು ಹಬ್ಬದ ದಿನಗಳಲ್ಲಿ ಮಸೀದಿಗಳಲ್ಲಿ ಧರ್ಮೋಪದೇಶವನ್ನು ನೀಡುತ್ತಾರೆ. ಅವರು ತಮ್ಮ ಸಿದ್ಧಾಂತಗಳಿಗೆ ಆಳವಾಗಿ ಆವಾಹಿಸಿಕೊಳ್ಳುತ್ತಾರೆ. ಅವರ ಪ್ರವಚನಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರು ಎಂದಿಗೂ ಸಮಾಜದೊಳಗೆ ಮಾದಕ ವ್ಯಸನದ ವಿರುದ್ಧ ಮಾತನಾಡುವುದಿಲ್ಲ ಎಂದರು.

ಪಾಕಿಸ್ತಾನದಲ್ಲಿ ಪ್ರವಾಹ, ಚೀನಾದಲ್ಲಿ ಬರಗಾಲ: ಹವಾಮಾನ ವೈಪರಿತ್ಯದಿಂದ ಮುಂದೆ ಭಾರತಕ್ಕೂ ಕಾದಿದೆ ಕಂಟಕ!ಪಾಕಿಸ್ತಾನದಲ್ಲಿ ಪ್ರವಾಹ, ಚೀನಾದಲ್ಲಿ ಬರಗಾಲ: ಹವಾಮಾನ ವೈಪರಿತ್ಯದಿಂದ ಮುಂದೆ ಭಾರತಕ್ಕೂ ಕಾದಿದೆ ಕಂಟಕ!

ಇಂತಹ ಧಾರ್ಮಿಕ ಕೂಟಗಳಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಪಾಕಿಸ್ತಾನದ ಪಾತ್ರವನ್ನು ಗಂಭೀರವಾಗಿ ಚರ್ಚಿಸುವ ಬದಲು, ಮುಲ್ಲಾಗಳು ಮತ್ತು ಧಾರ್ಮಿಕ ಮುಖಂಡರು ತಮ್ಮ ಸ್ವಂತ ಬೋಧನೆಗಳಿಗೆ ಅಂಟಿಕೊಂಡಿದ್ದಾರೆ. ಅವರು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಲು ಆದ್ಯತೆ ನೀಡಿದ್ದಾರೆ. ಇದು ಅಂತ್ಯವಿಲ್ಲದ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಓಆರ್‌ಎಫ್‌ ವರದಿ ಮಾಡಿದೆ.

ಇದಲ್ಲದೆ, ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳ ಮುಷ್ಕರಗಳಿಗೆ ಪುನರಾವರ್ತಿತ ಕರೆಗಳು, ಭದ್ರತಾ ಏಜೆನ್ಸಿಗಳು ಹೇರಿದ ದೀರ್ಘಾವಧಿಯ ಕರ್ಫ್ಯೂಗಳು ಮತ್ತು ಅಂತ್ಯವಿಲ್ಲದ ಸಂಘರ್ಷವು ಆತಂಕ, ಖಿನ್ನತೆ, ಬೇಸರ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಿದೆ. ಇದರ ಜೊತೆಯಲ್ಲಿ ಮನರಂಜನಾ ಚಟುವಟಿಕೆಗಳ ಕೊರತೆಯು ಜಮ್ಮು ಮತ್ತು ಕಾಶ್ಮೀರದ ಪ್ರಭಾವಶಾಲಿ ಯುವ ಮನಸ್ಸನ್ನು ಮಾದಕ ವ್ಯಸನದ ಅಪಾಯಗಳಿಗೆ ಆಕರ್ಷಿಸಿದೆ ಎಂದು ವಾನಿ ಹೇಳಿದರು.

 2021 ರಲ್ಲಿ 10,000 ಮಾದಕ ವ್ಯಸನ ಪ್ರಕರಣ

2021 ರಲ್ಲಿ 10,000 ಮಾದಕ ವ್ಯಸನ ಪ್ರಕರಣ

ಕಣಿವೆ ಪ್ರದೇಶದ ಎಲ್ಲಾ ಸಾಮಾಜಿಕ ಆರ್ಥಿಕ ವರ್ಗಗಳಲ್ಲಿ ಮಾದಕ ವ್ಯಸನದಲ್ಲಿ ಅಪಾಯಕಾರಿ ಏರಿಕೆಗೆ ಸಾಕ್ಷಿಯಾಗಿದೆ. ಪ್ರತಿ ಗಂಟೆಗೊಮ್ಮೆ ಹೊಸ ಮಾದಕ ವ್ಯಸನಿ ಕಾಶ್ಮೀರದಲ್ಲಿರುವ ಮಾದಕ ವ್ಯಸನ ನಿವಾರಣಾ ಕೇಂದ್ರಕ್ಕೆ ತಪ್ಪದೇ ಪ್ರವೇಶಿಸುತ್ತಾನೆ. ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಓರಲ್ ಸಬ್‌ಸ್ಟಿಟ್ಯೂಷನ್ ಥೆರಪಿ ಸೆಂಟರ್ 2016 ರಲ್ಲಿ ಕೇವಲ 489 ಪ್ರಕರಣಗಳನ್ನು ವರದಿ ಮಾಡಿದೆ. ಆದರೆ 2021 ರಲ್ಲಿ 10,000 ಪ್ರಕರಣಗಳನ್ನು ಮೀರಿದೆ. ಕಳೆದ ಐದು ವರ್ಷಗಳಲ್ಲಿ ಈ ಆತಂಕಕಾರಿ ಬೆಳವಣಿಗೆ 2,000 ಪ್ರತಿಶತ ಏರಿಕೆಯು ಭದ್ರತಾ ವ್ಯವಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರದಾದ್ಯಂತ ಆಘಾತವನ್ನು ಉಂಟುಮಾಡಿದೆ.

 ಕಳ್ಳಸಾಗಣೆಯಾದ ಹೆರಾಯಿನ್ ಕಾಶ್ಮೀರದಾದ್ಯಂತ ಹರಡಿದೆ

ಕಳ್ಳಸಾಗಣೆಯಾದ ಹೆರಾಯಿನ್ ಕಾಶ್ಮೀರದಾದ್ಯಂತ ಹರಡಿದೆ

ಇತ್ತೀಚಿನ ದಿನಗಳಲ್ಲಿ ಸಂಘರ್ಷವನ್ನು ಜೀವಂತವಾಗಿಡಲು ಮತ್ತು ಕಣಿವೆಯ ಸಾಮಾಜಿಕ ರಚನೆಯ ತಿರುಳನ್ನು ಹರಿದು ಹಾಕಲು ಪಾಕಿಸ್ತಾನವು ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸುವ ದ್ವಂದ್ವ ತಂತ್ರವನ್ನು ಬಳಸಿದೆ. ಪಾಕಿಸ್ತಾನದಿಂದ ಕಳ್ಳಸಾಗಣೆಯಾದ ಹೆರಾಯಿನ್ ಕಾಶ್ಮೀರದಾದ್ಯಂತ ವ್ಯಾಪಕವಾಗಿ ಬಳಸಲಾಗುವ ಸಾಧನ ಆಗಿದೆ. ಮಾದಕ ದ್ರವ್ಯಗಳ ಗಡಿಯಾಚೆಗಿನ ಕಳ್ಳಸಾಗಣೆಯು ಹಣಕಾಸಿನ ಮೂಲಕ ಭಯೋತ್ಪಾದನೆಗೆ ಹಣವನ್ನು ಒದಗಿಸುತ್ತದೆ.

 ಉಗ್ರಗಾಮಿ ಪ್ರವೃತ್ತಿಯನ್ನು ಹರಡುತ್ತದೆ

ಉಗ್ರಗಾಮಿ ಪ್ರವೃತ್ತಿಯನ್ನು ಹರಡುತ್ತದೆ

ಹೆರಾಯಿನ್‌ನಂತಹ ಮಾದಕವಸ್ತುಗಳಿಂದ ಉತ್ಪತ್ತಿಯಾಗುವ ಹಣವು ಪ್ರತ್ಯೇಕತಾವಾದಿಗಳ ಚಟುವಟಿಕೆಗಳಿಗೆ ನಿಧಿಯನ್ನು ನೀಡುತ್ತದೆ ಮತ್ತು ಇತರ ಉಗ್ರಗಾಮಿ ಪ್ರವೃತ್ತಿಯನ್ನು ಹರಡುತ್ತದೆ. ಇತ್ತೀಚಿನ ದಿನಗಳಲ್ಲಿ ಭದ್ರತಾ ಏಜೆನ್ಸಿಗಳಿಂದ ಭೇದಿಸಲ್ಪಟ್ಟಿರುವ ಭಯೋತ್ಪಾದಕ ಘಟಕಗಳು ಸಮಾಜ ಮತ್ತು ಭದ್ರತೆಗೆ ಹೆಚ್ಚು ಮಹತ್ವದ ಸವಾಲನ್ನು ಹಾಕುತ್ತವೆ ಎಂದು ಓಆರ್‌ಎಫ್‌ ವರದಿ ಮಾಡಿದೆ.

 45 ಕೋಟಿ ಮೌಲ್ಯದ ಹೆರಾಯಿನ್ ವಶ

45 ಕೋಟಿ ಮೌಲ್ಯದ ಹೆರಾಯಿನ್ ವಶ

ಕಳೆದ ವರ್ಷ ಜೂನ್‌ನಲ್ಲಿ, ಬಾರಾಮುಲ್ಲಾ ಜಿಲ್ಲೆಯಲ್ಲಿ ಡ್ರಗ್ಸ್‌ ಭಯೋತ್ಪಾದನೆ ಘಟಕವನ್ನು ಭೇದಿಸಲಾಗಿದ್ದು, ಚೀನಾದ ಗ್ರೆನೇಡ್‌ಗಳು ಮತ್ತು ನಾಲ್ಕು ಪಿಸ್ತೂಲ್‌ಗಳೊಂದಿಗೆ ₹ 45 ಕೋಟಿ ಮೌಲ್ಯದ ಹೆರಾಯಿನ್ ಹೊಂದಿದ್ದ ಹತ್ತು ಜನರನ್ನು ಬಂಧಿಸಲಾಯಿತು. ಈ ಭಯೋತ್ಪಾದನಾ ಘಟಕವು ಇಡೀ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದ ಹೊರಗೆ ಕಾರ್ಯನಿರ್ವಹಿಸುತ್ತಿತ್ತು. ಆದಾಗ್ಯೂ, ಬಲಪಡಿಸಿದ ಭದ್ರತಾ ವ್ಯವಸ್ಥೆ ಮತ್ತು ವಿವಿಧ ಭದ್ರತಾ ಏಜೆನ್ಸಿಗಳ ನಡುವಿನ ಹೆಚ್ಚಿದ ಸಮನ್ವಯವು ಭಯೋತ್ಪಾದನಾ ಚಟುವಟಿಕೆಗಳ ಪ್ರಮಾಣವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿದೆ.

English summary
Pakistan is using drug terrorism as a new weapon against India in the Kashmir Valley to finance terrorist activities targeting the youth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X