OnePlus: ಒನ್‌ಪ್ಲಸ್ ಫೋನ್ಸ್ ಈಗ ಕೊಂಡರೆ ಭರ್ಜರಿ ಉಳಿತಾಯ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಗ್ರಾಕಕರು ಡಿಸ್ಕೌಂಟ್ ಯಾವಾಗ ಬರುತ್ತದೆ ಎಂದು ಕಾಯುತ್ತಲೇ ಇರುತ್ತಾರೆ. ಆ ದಿನವನ್ನು ನೋಡಿಕೊಂಡು ತಮ್ಮ ನೆಚ್ಚಿನ ಫೋನ್ ತೆಗೆದುಕೊಂಡು ಹಣವನ್ನು ಉಳಿಸಿದರೆ ಆತು ಎಂಬ ಲೆಕ್ಕಾಚಾರ ಅವರದ್ದಾಗಿರುತ್ತದೆ. ಇಷ್ಟೇ ಅಲ್ಲದೆ ತಮಗೆ ಇಷ್ಟವಾದ ಪೋನ್‌ಗಳನ್ನು ಕೈಗೆಟಕುವ ದರದಲ್ಲಿ ಪಡೆಯುವ ಚಾನ್ಸ್ ಸಹ ಗ್ರಾಹಕರಿಗೆ ಇರುತ್ತದೆ. ಇಂತಹದ್ದೇ ಸೇಲ್ ಅನ್ನು ಈಗ ಒನ್ ಪ್ಲಸ್ ಆರಂಭಿಸಿದೆ.
ನೀವು ಏನಾದ್ರೂ ಚೀನಾ ಮೂಲದ ಕಂಪನಿಯ ಅಭಿಮಾನಿಗಳು ಆಗಿದ್ದರೆ, ಈ ಫೋನ್ ತೆಗೆದುಕೊಳ್ಳುವ ಆಸೆ ನಿಮ್ಮಲ್ಲಿ ಇದ್ದರೆ, ಇದೋ ನಿಮಗಿದು ಸುವರ್ಣ ಅವಕಾಶ. ಒನ್‌ಪ್ಲಸ್ ನಿಂದ ಹೊಸ ಸೇಲ್ ಘೋಷಿಸಲಾಗಿದೆ. ಕಂಪನಿಯು ಈ ಹೊಸ ಮಾರಾಟವನ್ನು ಒನ್‌ಪ್ಲಸ್ ಕಮ್ಯುನಿಟಿ ಸೇಲ್ ಎಂದು ಹೆಸರಿಸಿದೆ. ಒನ್‌ಪ್ಲಸ್ ತನ್ನ ಗ್ರಾಹಕರಿಗೆ ಈ ಮಾರಾಟದಲ್ಲಿ ಅದ್ಭುತ ಕೊಡುಗೆಗಳು, ರಿಯಾಯಿತಿಗಳು ನೀಡುತ್ತಿದೆ.

ಎಷ್ಟು ದಿನದ ವರೆಗೆ ರಿಯಾಯಿತಿ?
ನೀವು ಒನ್ ಪ್ಲಸ್ ಮೊಬೈಲ್ ಫೋನ್‌ಗಳ ಅಭಿಮಾನಿ ಆಗಿದ್ದು, ಈ ಫೊನ್‌ಗಳನ್ನು ತೆಗೆದುಕೊಳ್ಳಲು ಬಯಸಿದ್ದಲ್ಲಿ ಇವುಗಳನ್ನು ಇನ್ನು ಐದು ದಿನದಲ್ಲಿ ಪಡೆದರೆ ಜೇಬಿಗೆ ಕತ್ತರಿ ಬೀಳುವುದು ತಪ್ಪುತ್ತದೆ. ಕಮ್ಯುನಿಟಿ ಸೇಲ್ ಒನ್‌ಪ್ಲಸ್ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯ. ಈ ಮಾರಾಟವು 6 ಜೂನ್ 2024 ರಿಂದ 11 ಜೂನ್ 2024 ರವರೆಗೆ ನಡೆಯುತ್ತದೆ. ನೀವು ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಪ್ರೀಮಿಯಂ ಗ್ಯಾಜೆಟ್‌ಗಳನ್ನು 6 ದಿನಗಳವರೆಗೆ ದೊಡ್ಡ ರಿಯಾಯಿತಿಗಳೊಂದಿಗೆ ಖರೀದಿಸಬಹುದು.
ಮತ್ತೇನಿದೆ ಆಫರ್?
ಕಮ್ಯುನಿಟಿ ಸೇಲ್‌ನಲ್ಲಿ ಗ್ರಾಹಕ ತನ್ನಿಷ್ಟದ ಗೆಜೆಟ್ ಖರೀದಿಸಿದ್ದೇ ಆದಲ್ಲಿ, ವಿಶೇಷ ಕೊಡುಗಡೆಗಳ ಲಾಭ ಪಡೆಯಬಹುದು. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಮಾರಾಟದ ಸಮಯದಲ್ಲಿ ಗ್ರಾಹಕರು ಒನ್‌ಪ್ಲಸ್ ಕೀಬೋರ್ಡ್ 81 ಪ್ರೊ ( 17,999 ರೂ) ಅನ್ನು ಗೆಲ್ಲಬಹುದು. ಈ ಪ್ರೀಮಿಯಂ ಕೀಬೋರ್ಡ್ ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ

ಭಾರೀ ರಿಯಾಯಿತಿ
ಒನ್‌ಪ್ಲಸ್ Open ಕಂಪನಿಯ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್. ಈ ಸ್ಮಾರ್ಟ್ಫೋನ್ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಒನ್‌ಪ್ಲಸ್ Open ಬೆಲೆ ಸುಮಾರು 1 ಲಕ್ಷ 40 ಸಾವಿರ ರೂ. ಒನ್‌ಪ್ಲಸ್ ಕಮ್ಯುನಿಟಿ ಸೇಲ್‌ನಲ್ಲಿ ಈ ಫೋನ್‌ಗೆ ಶೇಕಡಾ 14 ರಿಂದ 16 ಪರ್ಸೆಂಟ್ ರಿಯಾಯಿತಿ ಲಭ್ಯ.
OnePlus Buds Pro 2 ಖರೀದಿಸಿದರೆ ನೀವು ಶೇಕಡಾ 35 ರಷ್ಟು ಹಣವನ್ನು ಉಳಿಸಬಹುದು. ಲಾಂಚ್ ಪ್ರೈಸ್ 13,999 ಆಗಿದ್ದು, ಬಡ್ಸ್ ಅನ್ನು ನೀವು ಈಗ 8,999 ರೂ.ಗೆ ಖರೀದಿಸಬಹುದು. OnePlus 12R ಫೋನ್‌ಗಳ ಮೇಲೆ ಶೇಕಡಾ 7ರಿಂದ 10 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. OnePlus 12 ಈಗ ನೀವು ಖರೀದಿಸಿದರೆ ಒಳ್ಳೆಯ ಪ್ರೀಮಿಯಂ ಫೋನ್ ನಿಮ್ಮ ಕೈಗೆ 60,724 ರೂಪಾಯಿಗೆ ಲಭ್ಯ. ಈ ಫೋನ್ ಬಿಡುಗಡೆ ಆದಾಗ 69,999 ರೂ ಬೆಲೆ ಇತ್ತು. OnePlus Nord CE4 ಫೋನ್ ಖರೀದಿಸಿದಾಗಲು ಆಕರ್ಷಕ ಡಿಸ್ಕೌಂಟ್ ಹಾಗೂ ಬ್ಯಾಂಕ್ ಆಫರ್‌ಗಳನ್ನು ಪಡೆಯಬಹುದು.












Click it and Unblock the Notifications