• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಸಂಸದರ ಒಟ್ಟು ಆಸ್ತಿ, ಒಂದು ಗುಡಿಸಲು, ಒಂದು ಸೈಕಲ್, ಒಂದು ಬ್ಯಾಗು!

|
   ಈ ಸಂಸದನ ಬಳಿ ಇರುವುದು ಒಂದು ಸೈಕಲ್ ಒಂದು ಗುಡಿಸಲು ಅಷ್ಟೆ..! | Oneindia kannada

   ಶ್ವೇತ ವರ್ಣದ ಜುಬ್ಬಾ, ಪೈಜಾಮಾ, ಹೆಗಲಲ್ಲೊಂದು ಜೋಳಿಗೆ, ಓಡಾಡುವುದಕ್ಕೊಂದು ಸೈಕಲ್... ಇವರೊಬ್ಬ ಸಂಸದ!

   ಒಡಿಶಾದ ಬಲಾಸೋರ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಾರಂಗಿ ಆವರಿಗೆ 'ಒಡಿಶಾ ಮೋದಿ' ಎಂದೇ ಹೆಸರು! ಸರಳತೆಯನ್ನೇ ಬದುಕು ಎಂದುಕೊಂಡ ಇವರೆಗೆ ಇಡೀ ದೇಶವೂ ಕುಟುಂಬವೇ. ಸಂಸ್ಕೃತ ಪಂಡಿತರಾಗಿರುವ ಸಾರಂಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದು, ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಡಿ ಅಭ್ಯರ್ಥಿ ರಬೀಂದ್ರ ಜೇನಾ ಅವರನ್ನು 12,956 ಮತಗಳಿಂದ ಸೋಲಿಸಿ ಸಂಸದರಾದ ಸಾರಂಗಿ ಬಡ ಸಂಸದರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ!

   25 ವರ್ಷದ ಚಂದ್ರಾನಿ ಮುರ್ಮು ಅತ್ಯಂತ ಕಿರಿಯ ವಯಸ್ಸಿನ ಸಂಸದೆ

   ಗುಡಿಸಲಿನಲ್ಲಿ ವಾಸಿಸುವ ಸಾರಂಗಿ ಮದುವೆಯಾಗಿಲ್ಲ. ಕಳೆದ ವರ್ಷ ತಮ್ಮ ತಾಯಿಯನ್ನು ಕಳೆದುಕೊಂಡ ಅವರು ತಮ್ಮ ಇಡೀ ಬದುಕನ್ನೂ ಸಮಾಜ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಅವರು ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆಯೇ ಅವರ ಸರಳ ಬದುಕನ್ನು ತೋರಿಸುವ ಅವರ ಹಲವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

   ಹಣವಿಲ್ಲದೆ ಚುನಾವಣೆಗೆ ಸ್ಪರ್ಧೆ

   ಹಣವಿಲ್ಲದೆ ಚುನಾವಣೆಗೆ ಸ್ಪರ್ಧೆ

   ಚುನಾವಣೆಗಾಗಿ ಹಣವನ್ನು ಸುರಿಯದೆ, ಕಾಲ್ನಡಿಗೆಯಲ್ಲೇ ಪ್ರಚಾರ ಮಾಡಿದ ಸಾರಂಗಿ, ಹಣ ಮತ್ತು ಅದ್ಧೂರಿ ಪ್ರಚಾರವೇ ಚುನಾವಣೆಯ ಗೆಲುವಿಗೆ ಮಾನದಂಡವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ನಾನಾ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು, ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ಕಷ್ಟ ಅರಿತಿದ್ದಾರೆ. ಅವರ ನೈಜ ಕಾಳಜಿಗೆ ಮತದಾರ ಒಲಿದು, ಅವರನ್ನು ಸಂಸತ್ತಿಗೆ ಕಳಿಸಲು ಅಣಿಗೊಳಿಸಿದ್ದಾನೆ.

   ಆಗ ಪೊಲೀಸ್ ಅಧಿಕಾರಿ ಈಗ ಸಂಸದ, ಹಿರಿಯ ಅಧಿಕಾರಿಗಳಿಂದ ಸೆಲ್ಯೂಟ್

   ಆಧ್ಯಾತ್ಮಿಕ ಸಾಧನೆ

   ಆಧ್ಯಾತ್ಮಿಕ ಸಾಧನೆ

   ಅಧ್ಯಾತ್ಮಿಕ ಬದುಕಿನ ಬಗ್ಗೆ ಸಾಕಷ್ಟು ಆಸ್ಥೆ ಹೊಂದಿರುವ ಸಾರಂಗಿ ಸಮಯ ಸಿಕ್ಕಾಗಲೆಲ್ಲ ಭಗವಂತನ ಸ್ಮರಣೆ, ಧ್ಯಾನದಲ್ಲಿ ಕಳೆಯುತ್ತಾರೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳನ್ನು ದಯೆತುಂಬಿದ ಮನಸ್ಸಿನಲ್ಲಿಯೇ ನೋಡುವ ಸಾರಂಗಿ ಅವರ ಸೇವಾ ಮನೋಭಾವಕ್ಕೆ ಬಾಲಾಸೋರ್ ಮತದಾರ ಒಲಿದಿದ್ದಾನೆ!

   ಅಂದು ಹಾಲಿನ ವ್ಯಾಪಾರಿ, ಇಂದು ಕೋಲಾರದ ಬಿಜೆಪಿ ಸಂಸದ!

   ಹದಿನೈದು ವರ್ಷದ ನಂತರ ಬಿಜೆಪಿ ತೆಕ್ಕೆಗೆ ಬಾಲಸೋರ್

   ಹದಿನೈದು ವರ್ಷದ ನಂತರ ಬಿಜೆಪಿ ತೆಕ್ಕೆಗೆ ಬಾಲಸೋರ್

   ಬಾಲಸೋರ್ ಕ್ಷೇತ್ರದಲ್ಲಿ 1998, 1999 ಮತ್ತು 2004 ಈ ಮೂರು ಅವಧಿಯನ್ನು ಬಿಟ್ಟರೆ ಬಿಜೆಪಿ ಮತ್ತೆಂದೂ ಗೆಲುವು ಸಾಧಿಸಿರಲಿಲ್ಲ. 2014 ರಲ್ಲಿ ರಬೀಂದ್ರ ಜೈನ್ ಅವರ ವಿರುದ್ಧವೇ ಸ್ಪರ್ಧಿಸಿ ಸೋತಿದ್ದ ಸಾರಂಗಿ ಈ ಬಾರಿ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಅವರು 2004 ಮತ್ತು 2009 ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

   'ಭಿಕ್ಷಾಟನೆ' ವೃತ್ತಿ ಮಾಡಿಕೊಂಡಿದ್ದಾಕೆ ಇದೀಗ ಸಂಸದೆ!

   ಸಂಸ್ಕೃತ ಬಲ್ಲ ಏಕೈಕ ಸಂಸದ

   ಸಂಸ್ಕೃತ ಬಲ್ಲ ಏಕೈಕ ಸಂಸದ

   ಸಂಸ್ಕೃತ ಪಂಡಿತರಾಗಿರುವ ಸಾರಂಗಿ, ಸಂಸ್ಕೃತ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಬಲ್ಲ ಏಕೈಕ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೊದಿ ಅವರೂ ಸಾರಂಗಿ ಅವರ ಮೇಲೆ ವಿಶೇಷ ಅಕ್ಕರೆ ಹೊಂದಿದ್ದು, ಒಡಿಶಾಕ್ಕೆ ಬಂದರೆ ಸಾರಂಗಿ ಅವರನ್ನು ಭೇಟಿ ಮಾಡದೆ ಇರುವುದಿಲ್ಲ. ನಾಮಪತ್ರದ ಸಮಯದಲ್ಲಿ ಅವರು ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ ಪ್ರಜಾರ ಅವರ ಒಟ್ಟು ಆಸ್ತಿ 13,46,236 ರೂ. ಒಟ್ಟು ಏಳು ಕ್ರಿಮಿನಲ್ ಕೇಸ್ ಗಳು ಅವರ ಮೇಲಿದೆ.

   English summary
   BJP MP from Balasore Odisha Pratap Sarangi owns a cycle, a bag, and a hut and sets of cloths. Coming from RSS background, Sarangi wins elections with people's love, not with money.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X