ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಸಿ ಹೊಸ ವರ್ಷ; ಈ ಸಮುದಾಯದ ಇತಿಹಾಸ, ಮಹತ್ವ

|
Google Oneindia Kannada News

ಇಂದು ಮಂಗಳವಾರ ಪಾರ್ಸಿ ಹೊಸ ವರ್ಷಾಚರಣೆ ಇದೆ. ನವರೋಜ್ ಇತ್ಯಾದಿ ವಿವಿಧ ಹೆಸರುಗಳಿಂದ ಕರೆಯಲಾಗುವ ಪಾರ್ಸಿಗಳ ಈ ಹೊಸ ವರ್ಷದ ಆಚರಣೆಯಲ್ಲಿ ಹಲವು ವಿಶೇಷತೆಗಳಿವೆ.

ಪಾರ್ಸಿ ಹೊಸ ವರ್ಷವನ್ನು ಇರಾನೀ ಹೊಸ ವರ್ಷವೆಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿರುವ ಪಾರ್ಸಿ ಸಮುದಾಯದವರು ಆಗಸ್ಟ್ ತಿಂಗಳಲ್ಲಿ ಇದನ್ನು ಅಚರಿಸುತ್ತಾರೆ. ಈ ವರ್ಷ ಆಗಸ್ಟ್ ೧೬ರಂದು ಭಾರತೀಯ ಪಾರ್ಸಿಗಳು ಹೊಸ ವರ್ಷಾಚರಣೆ ಮಾಡುತ್ತಿದ್ದಾರೆ.

ಗೋವಾ ಯಾಕೆ ಆಗಸ್ಟ್ 15ಕ್ಕೆ ಸ್ವಾತಂತ್ರ್ಯೋತ್ಸವ ಆಚರಿಸಲ್ಲ? ಇತಿಹಾಸ ಪಾಠಗೋವಾ ಯಾಕೆ ಆಗಸ್ಟ್ 15ಕ್ಕೆ ಸ್ವಾತಂತ್ರ್ಯೋತ್ಸವ ಆಚರಿಸಲ್ಲ? ಇತಿಹಾಸ ಪಾಠ

ಹಿಂದೂಗಳಿಗೆ ಯುಗಾದಿ ಹೊಸ ವರ್ಷಾಚರಣೆಯಾಗಿ ಇರುವಂತೆ ಪಾರ್ಸಿಗಳಿಗೆ ನವ್ರೋಜ್ ಹೊಸ ವರ್ಷವಾಗಿದೆ. ಕಳೆದ ಮೂರು ಸಾವಿರ ವರ್ಷಗಳಿಂದಲೂ ಪಾರ್ಸಿಗಳಲ್ಲಿ ನವ್ರೋಜ್ ಆಚರಣೆ ಆಗುತ್ತಿದೆ.

ಭಾರತದಲ್ಲಿ ಪಾರ್ಸಿ ಸಮುದಾಯದವರು ಹೆಚ್ಚು ಸಂಖ್ಯೆಯಲ್ಲಿ ಇರುವುದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ. ಪಾರ್ಸಿಗಳ ಅತಿದೊಡ್ಡ ಹಬ್ಬಗಳಲ್ಲಿ ಇದೂ ಒಂದು. ಬಹಳ ವೈಭವವಾಗಿ ಮತ್ತು ಸಾಂಪ್ರದಾಯಿಕವಾಗಿ ಈ ಹಬ್ಬದ ಆಚರಣೆ ಆಗುತ್ತದೆ.

ಯಾರು ಈ ಪಾರ್ಸಿಗಳು?

ಯಾರು ಈ ಪಾರ್ಸಿಗಳು?

ಪಾರ್ಸಿಗಳು ಇರಾನ್ ದೇಶದ ಮೂಲದವರು. ಇರಾನ್ ದೇಶಕ್ಕೆ ಹಿಂದೆ ಪರ್ಷಿಯಾ ಎಂದು ಹೆಸರು ಬರಲು ಇದೇ ಪಾರ್ಸಿಗಳು ಕಾರಣ. ಇವರು ಜೊರೋಸ್ಟ್ರಿಯನ್ ಧರ್ಮದವರು. ಇರಾನ್ ಅನ್ನು ಇಸ್ಲಾಮ್ ಧರ್ಮ ವ್ಯಾಪಿಸಿದಾಗ ಅನೇಕರು ಭಾರತ ಮತ್ತಿತರ ಕೆಲ ದೇಶಗಳಿಗೆ ವಲಸೆ ಹೋಗಿದ್ದಾರೆ. ಟಾಟಾ, ಗೋದ್ರೇಜ್, ಅಜೀಂ ಪ್ರೇಂಜಿ, ನುಸ್ಲಿ ವಾಡಿಯಾ ಇತ್ಯಾದಿ ಅನೇಕ ಪ್ರಮುಖ ಭಾರತೀಯ ಉದ್ಯಮಿಗಳು ಪಾರ್ಸಿಗಳೇ ಆಗಿದ್ದಾರೆ. ಭಾರತೀಯ ಪಾರ್ಸಿಗಳು ಸ್ವಾತಂತ್ರ್ಯ ಹೋರಾಟಗಾರರು, ನಟರು, ವಿಜ್ಞಾನಿಗಳೂ ಆಗಿದ್ದಾರೆ. ಹಿಂದೂ ಮತ್ತು ಜೊರೋಸ್ಟ್ರಿಯನ್ ಧರ್ಮಗಳಲ್ಲಿ ಬಹಳ ಸಾಮ್ಯತೆ ಇರುವುದರಿಂದ ಪಾರ್ಸಿಗಳು ಸಾಂಸ್ಕೃತಿವಾಗಿ ಭಾರತಕ್ಕೆ ತೀರಾ ಒಗ್ಗಿಹೋಗಿದ್ದಾರೆ.

ಅಂತಾರಾಷ್ಟ್ರೀಯ ಯುವ ದಿನ 2022: ಯುವ ಶಕ್ತಿ ವೈಭವ, ದಿನದ ಪರಿಕಲ್ಪನೆ, ಮಹತ್ವ ತಿಳಿಯಿರಿಅಂತಾರಾಷ್ಟ್ರೀಯ ಯುವ ದಿನ 2022: ಯುವ ಶಕ್ತಿ ವೈಭವ, ದಿನದ ಪರಿಕಲ್ಪನೆ, ಮಹತ್ವ ತಿಳಿಯಿರಿ

ಹೊಸ ವರ್ಷಾಚರಣೆ ಯಾವಾಗಿನಿಂದ?

ಹೊಸ ವರ್ಷಾಚರಣೆ ಯಾವಾಗಿನಿಂದ?

ಪಾರ್ಸಿಗಳ ಹೊಸ ವರ್ಷಾಚರಣೆ ಕ್ರಿ.ಪೂ. 3500-3000 ಅವಧಿಯಲ್ಲಿ ಆರಂಭವಾಯಿತು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಪ್ರವಾದಿ ಜರಾತುಷ್ಟ್ರ ಜರೋಸ್ಟ್ರಿಯನ್ ಧರ್ಮ ಸ್ಥಾಪನೆ ಮಾಡಿದ್ದರು. ಈ ಹೊಸ ವರ್ಷದ ದಿನದಂದು ಬ್ರಹ್ಮಾಂಡದ ಮರುಸೃಷ್ಟಿ ಆಗಿತೆಂದು ಹೇಳಲಾಗುತ್ತದೆ.

ಹೊಸ ವರ್ಷಾಚರಣೆಯನ್ನು ಜಮ್‌ಶೆದ್-ಇ-ನೌರೋಜ್ ಎಂದು ಕರೆಯಲಾಗುತ್ತದೆ. ಜಮ್‌ಶೆದ್ ಎಂಬುದು ಇರಾನ್‌ನ ಸಸಾನಿಯನ್ ಸಾಮ್ರಾಜ್ಯದ ಪ್ರಮುಖ ದೊರೆಯ ಹೆಸರು. ಪಾರ್ಸಿ ಕ್ಯಾಲೆಂಡರ್ ಅನ್ನು ಆರಂಭಿಸಿದ್ದು ಜಮ್‌ಶೆದ್.

ನವ್ರೋಜ್ ಮಹತ್ವ

ನವ್ರೋಜ್ ಮಹತ್ವ

ಜೊರೋಸ್ಟ್ರಿಯನ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ ಫರ್ವರ್ದಿನ್‌ನ ಮೊದಲ ದಿನವನ್ನು ಪಾರ್ಸಿ ಹೊಸ ವರ್ಷವೆಂದು ಪರಿಗಣಿಸಲಾಗುತ್ತದೆ. ಮಾರ್ಚ್ ೨೧ರಂದು ನಡೆಯಲಿರುವ ಉತ್ತರಾಯಣ ಕಾಲವು ಹೊಸ ವರ್ಷದ ಆರಂಭವೆಂದು ಹೇಳಲಾಗುತ್ತದೆ.

ಮಾರ್ಚ್ ತಿಂಗಳಲ್ಲಿ ಪಾರ್ಸಿಗಳ ಹೊಸ ವರ್ಷದ ಆಚರಣೆ ನಡೆಯಬೇಕಿದ್ದರೂ ಭಾರತಲ್ಲಿರುವ ಆ ಸಮುದಾಯದವರು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಆಡುತ್ತಾರೆ.

ಆಚರಣೆ ಹೇಗೆ?

ಆಚರಣೆ ಹೇಗೆ?

ಪಾರ್ಸಿಗಳ ಪಾಲಿಗೆ ನವ್ರೋಜ್ ಹೊಸ ವರ್ಷದ ದಿನ ಬಹಳ ಅದೃಷ್ಟವೆಂದು ಹೇಳಲಾಗುತ್ತದೆ. ಹೊಸ ಉದ್ಯಮವನ್ನೋ, ಕೆಲಸವನ್ನೂ ಪ್ರಾರಂಭಿಸಬೇಕಾದರೆ ಸಾಮಾನ್ಯವಾಗಿ ಹೊಸ ವರ್ಷದ ದಿನವನ್ನು ಇವರು ಆಯ್ದುಕೊಳ್ಳುತ್ತಾರೆ.

ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ನಮ್ಮ ಆತ್ಮದ ಪರಿಶುದ್ಧಿ ಮಾಡಿಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಪಾರ್ಸಿಗಳು ತಮ್ಮ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ. ಎಲ್ಲಾ ವಸ್ತ್ರಗಳನ್ನು ಶುಚಿಗೊಳಿಸುತ್ತಾರೆ.

ತರಹಾವೇರಿ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಬಂಧು ಬಾಂಧವರೆಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರೆ. ದಾನ ಧರ್ಮಗಳು ಈ ದಿನ ಹೆಚ್ಚು. ಹಾಗೆಯೇ, ತಮ್ಮ ಮಂದಿರಗಳಿಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.

(ಒನ್ಇಂಡಿಯಾ ಸುದ್ದಿ)

Recommended Video

India-Pak Cricket Craze ಅಂದ್ಮೇಲೆ ಅದ್ರ ಹವಾ ಹಿಂಗೇ ಇರುತ್ತೆ | *Cricket | OneIndia Kannada

English summary
Parsis are of the Iranian origin. Most of the Parsis have left Iran after emergence of Islam. They follow Zoroastrian religion. Nowruz is their new year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X