ವರ್ಷದ ವ್ಯಕ್ತಿ : ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.

ಟೀಂ ಇಂಡಿಯಾದ ಮಾಜಿ ಬೌಲರ್, ಮಾಜಿ ನಾಯಕ, ಮಾಜಿ ಕೋಚ್ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ ಪರ ಸಾರ್ವಜನಿಕರ ಪ್ರೀತಿ ಹೇಗಿದೆ ಎಂಬುದು ಈ ವರ್ಷ ಜನಜನಿತವಾಯಿತು.

ವರ್ಷದ ವ್ಯಕ್ತಿ 2017

Newsmaker of Karnataka 2017, Cricket Legend Anil Kumble

ಸುಮಾರು 18 ವರ್ಷಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಟೀಂ ಇಂಡಿಯಾಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ಅನಿಲ್ ಕುಂಬ್ಳೆ ರಾಜಿನಾಮೆ ಸಲ್ಲಿಸಿದ್ದೇ ತಡ, ಕುಂಬ್ಳೆ ಪರವಾಗಿ ದೊಡ್ಡದೊಂದು ಅನುಕಂಪದ ಅಲೆ ಬಂದಿತ್ತು. ಕುಂಬ್ಳೆಯಂಥ ದಿಗ್ಗಜರನ್ನು ಆಡಳಿತ ಮಂಡಳಿ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಅಭಿಮಾನಿಗಳು, ಮಾಜಿ, ಹಾಲಿ, ಕ್ರಿಕೆಟರ್ ಗಳು ಬೆಂಬಲಿಸಿದರು. ಇದಕ್ಕೆ ಪೂರಕವಾಗಿ ಅವರು ಕಾರ್ಯಕ್ಷಮತೆಯೂ ಹಾಗೇ ಇತ್ತು.

46 ವರ್ಷ ವಯಸ್ಸಿನ ಕುಂಬ್ಳೆ ಅವರು ಕಳೆದ 12 ತಿಂಗಳುಗಳಲ್ಲಿ ವೆಸ್ಟ್ ಇಂಡೀಸ್ (2-0), ನ್ಯೂಜಿಲೆಂಡ್ (3-0), ಇಂಗ್ಲೆಂಡ್ (4-0), ಬಾಂಗ್ಲಾದೇಶ (1-0), ಆಸ್ಟ್ರೇಲಿಯಾ(1-0) ವಿರುದ್ಧ ಟೆಸ್ಟ್ ಸರಣಿ ಗೆದ್ದ ತಂಡದ ಕೋಚ್ ಆಗಿದ್ದರು. 8 ಏಕದಿನ ಕ್ರಿಕೆಟ್ ಹಾಗೂ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಅನಿಲ್ ಕುಂಬ್ಳೆ ಅವರು ಕೇವಲ ದುಡ್ಡಿಗಾಗಿ ಕೋಚ್ ಪದವಿಗೇರಿದವರಲ್ಲ ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗುತ್ತಿದೆ. ಕುಂಬ್ಳೆ ಅವರು ಅವರು ನೀಡಿದ ಸಲಹೆ, ಶಿಫಾರಸುಗಳಿಗೆ ಈಗ ಬೆಲೆ ಬಂದಿದೆ. ಕೊಹ್ಲಿ ಸೇರಿದಂತೆ ಎಲ್ಲರ ಸಂಬಳ ಏರಿಕೆಯಾಗಿದೆ. ಕುಂಬ್ಳೆ ಅವರ ದಕ್ಷತೆ ಹಾಗೂ ದೂರದರ್ಶಿತ್ವ ಟೀಂ ಇಂಡಿಯಾಕ್ಕೆ ಬುನಾದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+