• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ!

|

ನವದೆಹಲಿ, ಮಾರ್ಚ್ 11: ಲೋಕಸಭೆ ಚುನಾವಣೆ 2019ಗೆ ಮುಹೂರ್ತ ನಿಗದಿಯಾಗಿದ್ದು, ಸಮೀಕ್ಷೆಗಳ ಭರಾಟೆ ಆರಂಭವಾಗಿವೆ. ನ್ಯೂಸ್ ನೇಷನ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿದ್ದಾರೆ.

ಪ್ರಧಾನಿ ಪಟ್ಟಕ್ಕೆ ಯಾರು ಅರ್ಹರು ಎಂಬ ಪ್ರಶ್ನೆಗೆ ಉತ್ತರಿಸಿದ ದೇಶದ ಜನತೆ ಮೋದಿ ಪರ ಮತ ಹಾಕಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಎನ್ಡಿಎ ಜನಪ್ರಿಯತೆ ಕುಸಿದಿದೆ ಎಂದು ನ್ಯೂಸ್ ನೇಷನ್ ಹೇಳಿದೆ.

ಇಂಡಿಯಾ TV-CNX ಸಮೀಕ್ಷೆ: ಬಿಜೆಪಿ 238, ಕಾಂಗ್ರೆಸ್ ಗೆ 82 ಸ್ಥಾನ

ನ್ಯೂಸ್ ನೇಷನ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇ.47ರಷ್ಟು ಮತಗಳನ್ನು ಪಡೆದು, ಈಗಲೂ ಬಹುಜನರ ಆಯ್ಕೆಯ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಶೇ.30ರಷ್ಟು ಮಾತ್ರ ಮತ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿಂದೆ ಉಳಿದಿದಾರೆ.

ಕಳೆದ ಡಿಸೆಂಬರ್ ನಲ್ಲಿ ನ್ಯೂಸ್ ನೇಷನ್ ನಡೆಸಿದ್ದ ಸಮೀಕ್ಷೆಯಲ್ಲೂ ಇದೇ ರೀತಿ ಫಲಿತಾಂಶ ಹೊರ ಬಂದಿತ್ತು. ಮೋದಿ ಅವರು ಶೇ 47 ಹಾಗೂ ರಾಹುಲ್ ಅವರು ಶೇ 31ರಷ್ಟು ಮತಗಳನ್ನು ಪಡೆದಿದ್ದರು.

ಮೋದಿಗೆ ಸರಿಸಾಟಿ ಯಾರೂ ಇಲ್ಲ

ಮೋದಿಗೆ ಸರಿಸಾಟಿ ಯಾರೂ ಇಲ್ಲ

ಪ್ರಧಾನಿ ಹುದ್ದೆಗೆ ಯಾರು ಅರ್ಹರು ಎಂಬ ಪ್ರಶ್ನೆಯನ್ನು ವಿವಿಧ ರೀತಿಯಲ್ಲಿ ಕೇಳಿ, ಉತ್ತರ ಪಡೆಯಲಾಗಿದೆ. ನ್ಯೂಸ್ ನೇಷನ್ ನ ಮತ್ತೊಂದು ಪ್ರಶ್ನೆಗೆ ಮೋದಿ ಪರ ಶೇ 55 ಮತಗಳು ಬಂದರೆ, ಮೋದಿ ಅವರು ಸಮರ್ಥ ರಾಜಕೀಯ ಮುಖಂಡರಲ್ಲ ಎಂದು ಶೇ 32ರಷ್ಟು ಮತಗಳು ಬಂದಿವೆ.

ಬೇರೆಯವರು ಯಾರು ರೇಸಿನಲ್ಲಿಲ್ಲ

ಬೇರೆಯವರು ಯಾರು ರೇಸಿನಲ್ಲಿಲ್ಲ

ಈ ಬಾರಿ ಪ್ರಧಾನಿ ಹುದ್ದೆ ಮಹಾಘಟಬಂಧನ್ ನ ಹಲವು ನಾಯಕರ ಕಣ್ಣಿದ್ದರೂ, ಪೈಪೋಟಿ ಇರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ನಡುವೆ ಮಾತ್ರ ಎಂಬುದು ಈ ಸಮೀಕ್ಷೆಯಿಂದ ಸಾಬೀತಾಗಿದೆ. ಶೇ.23ರಷ್ಟು ಜನರು ಮಾತ್ರ ಇವರಿಬ್ಬರಿಗಿಂತ ಬೇರೆಯವರು ಪ್ರಧಾನಿಯಾಗಲಿ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆ : ರಾಹುಲ್ ಜನಪ್ರಿಯತೆಯ ಮಟ್ಟ ಏರಿದೆಯಾ? ಇಳಿದಿದೆಯಾ?

ಸರ್ಕಾರದ ಸಾಧನೆ ಬಗ್ಗೆ ಪ್ರಶ್ನೆ

ಸರ್ಕಾರದ ಸಾಧನೆ ಬಗ್ಗೆ ಪ್ರಶ್ನೆ

ದೇಶದ ಹಣದುಬ್ಬರ ನಿಯಂತ್ರಣ ಮಾಡುವಲ್ಲಿ ಮೋದಿ ಸರ್ಕಾರ ಸಫಲವಾಗಿದೆಯೇ? ಎಂಬ ಪ್ರಶ್ನೆಗೆ ಶೇ46ರಷ್ಟು ಮಂದಿ ಹೌದು ಎಂದು ಉತ್ತರಿಸಿದ್ದಾರೆ. ಆದರೆ, ಶೇ 44ರಷ್ಟು ಮಂದಿ ಬಿಜೆಪಿ ಸರ್ಕಾರದ ವಿರುದ್ಧ ಮತ ಹಾಕಿದ್ದಾರೆ.

ಉದ್ಯೋಗ ಸೃಷ್ಟಿ, ನಿರುದ್ಯೋಗ ಸಮಸ್ಯೆ

ಉದ್ಯೋಗ ಸೃಷ್ಟಿ, ನಿರುದ್ಯೋಗ ಸಮಸ್ಯೆ

ಮೋದಿ ಸರ್ಕಾರದ ಅವಧಿಯಲ್ಲಿ ಆಶ್ವಾಸನೆ ನೀಡಿದ್ದಷ್ಟು ಉದ್ಯೋಗ ಸೃಷ್ಟಿಯಾಗಿದೆಯೇ? ಎಂಬ ಪ್ರಶ್ನೆಗೆ ಶೇ 45ರಷ್ಟು ಮಂದಿ ಪರವಾಗಿ ಮತ ಹಾಕಿದ್ದಾರೆ. ಆದರೆ, 46ರಷ್ಟು ಮಂದಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಸಮರ್ಪಕವಾಗಿ ಉದ್ಯೋಗ ಅವಕಾಶ ಸೃಷ್ಟಿಯಾಗಿಲ್ಲ ಎಂದಿದ್ದಾರೆ.

ಮೋದಿ ಸರ್ಕಾರಕ್ಕೆ ಆಘಾತ! ನಿರುದ್ಯೋಗ ಪ್ರಮಾಣ ಸಕತ್ ಏರಿಕೆ

ಸ್ವಚ್ಛ ಭಾರತ್ ಯೋಜನೆ

ಸ್ವಚ್ಛ ಭಾರತ್ ಯೋಜನೆ

ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದೆನಿಸಿರುವ ಸ್ವಚ್ಛ ಭಾರತ್ ಅಭಿಯಾನ ಎಷ್ಟರಮಟ್ಟಿಗೆ ಸಫಲವಾಗಿದೆ? ಎಂಬ ಪ್ರಶ್ನೆಗೆ ಶೇ60ರಷ್ಟು ಮಂದಿ ಸರ್ಕಾರದ ಪರವಾಗಿ ಮತ ಹಾಕಿದ್ದಾರೆ.ಶೇ30 ರಷ್ಟು ಮಂದಿ ಇದು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದ್ದು, ದೇಶದಲ್ಲಿ ಸ್ವಚ್ಛತೆ ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.

ಇನ್ನಷ್ಟು ಪ್ರಶ್ನೆಗಳು ಹಾಗೂ ಉತ್ತರಗಳು

ಇನ್ನಷ್ಟು ಪ್ರಶ್ನೆಗಳು ಹಾಗೂ ಉತ್ತರಗಳು

* ಭ್ರಷ್ಟಾಚಾರ ನಿಯಂತ್ರಣ: ಸರ್ಕಾರ ಸಫಲ ಶೇ 51, ವಿಫಲ ಶೇ 40

* ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಫಲವಾಗಿದೆಯೇ? ಹೌದು ಶೇ 59, ಇಲ್ಲ ಶೇ 39.

* ಜಿಡಿಪಿ ಪ್ರಗತಿ ಸಾಧಿಸಲಾಗಿದೆಯೆ? ಹೌದು ಶೇ 50, ಇಲ್ಲ, ಶೇ 35.

* ನೋಟ್ ಬ್ಯಾನ್ ಆರ್ಥಿಕ ಪ್ರಗತಿ ಮೇಲೆ ಪರಿಣಾಮ? ಹೌದು ಶೇ 47, ಇಲ್ಲ ಶೇ 41.

ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi continues to be the popular choice of the nation for the prime ministerial post, while the popularity of the BJP-led NDA government has witnessed a downfall, revealed the opinion poll conducted by News Nation on Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more