ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮಾಂಡ ಬಗೆಯಲು ಮ್ಯಾಪ್, ಆಸ್ಟ್ರೇಲಿಯಾ ವಿಜ್ಞಾನಿಗಳ ಸಾಧನೆ..!

|
Google Oneindia Kannada News

ಬಾಹ್ಯಾಕಾಶ ಸಂಶೋಧನೆಯಲ್ಲಿ ಆಸ್ಟ್ರೇಲಿಯಾ ವಿಜ್ಞಾನಿಗಳು ಮತ್ತೊಂದು ಮಹತ್ತರ ಸಾಧನೆ ಮಾಡಿದ್ದಾರೆ. ಈ ಬೃಹತ್ ಬ್ರಹ್ಮಾಂಡದಲ್ಲಿ ಒಂದು ಗ್ಯಾಲಕ್ಸಿಯಿಂದ ಇನ್ನೊಂದು ಗ್ಯಾಲಕ್ಸಿಗೆ ಪ್ರಯಾಣ ಬೆಳೆಸಲು ಅನುಕೂಲ ಆಗುವಂತೆ ಹೊಸ ಮ್ಯಾಪಿಂಗ್ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಮರಳುಗಾಡಿನಲ್ಲಿ ಆಸ್ಟ್ರೇಲಿಯನ್ನರು ಸ್ಥಾಪಿಸಿದ್ದ ಅತ್ಯಾಧುನಿಕ ಟೆಲಿಸ್ಕೋಪ್ ಸಹಾಯದಿಂದ ಈ ಅಧ್ಯಯನ ನಡೆಸಲಾಗಿದೆ.

ಆಸಿಸ್ ವಿಜ್ಞಾನಿಗಳು ನಡೆಸಿರುವ ಅಧ್ಯಯನದಿಂದ ಹೊಸ ಗ್ರಹಗಳು ಹಾಗೂ ನಕ್ಷತ್ರಗಳ ಅನ್ವೇಶಣೆ ಸುಲಭವಾಗಲಿದೆ. ಭವಿಷ್ಯದಲ್ಲಿ ಮತ್ತೊಂದು ಭೂಮಿಯನ್ನು ಹುಡುಕುವುದು ಕೂಡ ಸುಲಭವಾಗಲಿದೆ. ಸಾಮಾನ್ಯ ಟೆಲಿಸ್ಕೋಪ್‌ಗಳು ಇಂತಹ ಅಧ್ಯಯನ ನಡೆಸಲು ಹಲವು ವರ್ಷ ತೆಗೆದುಕೊಳ್ಳುತ್ತವೆ. ಆದರೆ ಆಸ್ಟ್ರೇಲಿಯಾದ ಟೆಲಿಸ್ಕೋಪ್ ಕೇವಲ 300 ಗಂಟೆಗಳ ಕಾಲಾವಕಾಶದಲ್ಲಿ ಇಂತಹ ಸಾಧನೆ ಮಾಡಿದೆ.

ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!

ಉಪಗ್ರಹಗಳ ಉಡಾವಣೆ, ಭೂಮಿಯತ್ತ ತೂರಿ ಬರುವಂತಹ ಕ್ಷುದ್ರಗ್ರಹ ಹಾಗೂ ಉಲ್ಕೆಗಳನ್ನ ಮೊದಲೇ ಗುರುತಿಸಬಹುದು. ಹಾಗೇ ಇನ್ನೊಂದು ಗ್ರಹಕ್ಕೆ ಅಥವಾ ಗ್ಯಾಲಕ್ಸಿ ಕಡೆಗೆ ಪ್ರಯಾಣ ಬೆಳೆಸುವುದಕ್ಕೂ ಸಹಾಯಕವಾಗಲಿದೆ. ಆಸ್ಟ್ರೇಲಿಯಾದ ಮರುಭೂಮಿಯಿಂದ ಬಾಹ್ಯಾಕಾಶ ವೀಕ್ಷಣೆಗೆ ಪ್ರಶಸ್ತ ವಾತಾವರಣವಿದೆ. ಈ ಕಾರಣಕ್ಕೇ ಆಸಿಸ್ ಸರ್ಕಾರ ಸಾವಿರಾರು ಕೋಟಿ ಡಾಲರ್ ಖರ್ಚು ಮಾಡಿ ಮರುಭೂಮಿಯಲ್ಲೇ ಟೆಲಿಸ್ಕೋಪ್ ಸ್ಥಾಪನೆ ಮಾಡಿದೆ.

ಹತ್ತಿರವಾಗುತ್ತಾ ‘ಕ್ಯೂಪರ್ ಬೆಲ್ಟ್’..?

ಹತ್ತಿರವಾಗುತ್ತಾ ‘ಕ್ಯೂಪರ್ ಬೆಲ್ಟ್’..?

ಭೂಮಿಯ ಬಗ್ಗೆ ಅಧ್ಯಯನ ಮಾಡಬೇಕು ಎಂದರೆ ಮೊದಲು ಭೂಮಿಗೆ ಬಂದ ನೀರಿನ ಮೂಲದ ಕುರಿತಾಗಿ ಅಧ್ಯಯನ ನಡೆಸಬೇಕು. ಭೂಮಿಗೆ ಬಂದ ನೀರಿನ ಮೂಲದ ಜಾಡು ಹಿಡಿಯಲು 'ಕ್ಯೂಪರ್ ಬೆಲ್ಟ್' ಕುರಿತು ತಿಳಿದುಕೊಳ್ಳಬೇಕು. ಏಕೆಂದರೆ ಭೂಮಿಗೆ ನೀರು ಕೊಟ್ಟ ಭಗೀರಥ ಇದೇ 'ಕ್ಯೂಪರ್ ಬೆಲ್ಟ್'. ಈ ಜಾಗದಲ್ಲಿ ತಪಮಾನ ನಿಮ್ಮ ಊಹೆಗೂ ನಿಲುಕುವುದಿಲ್ಲ. ಮೈನಸ್ 380 ಡಿಗ್ರಿ ಸರಾಸರಿಯಲ್ಲಿ ಇಲ್ಲಿ ತಾಪಮಾನವಿರುತ್ತೆ. ಅಂದರೆ 'ಕ್ಯೂಪರ್ ಬೆಲ್ಟ್‌'ನಲ್ಲಿರುವ ಪ್ರತಿಯೊಂದು ವಸ್ತುವೂ ಮಂಜುಗಡ್ಡೆಯಾಗಿರುತ್ತದೆ. ಇಂತಹ ಜಾಗದಲ್ಲಿ ಉಲ್ಕೆಗಳು ಹಾಗೂ ಕ್ಷುದ್ರಗ್ರಹಗಳ ಭಂಡಾರ ಅಡಗಿದೆ. ಈ ಉಲ್ಕೆಗಳು ಸೂರ್ಯನ ಗುರುತ್ವಕ್ಕೆ ಒಳಗಾಗುತ್ತಾ, ಕ್ಯೂಪರ್ ಬೆಲ್ಟ್‌ ಬಂಧನದಿಂದ ಬಿಡಿಸಿಕೊಂಡು ಭೂಮಿಯ ಕಡೆಗೆ ನುಗ್ಗಿ ಬರುತ್ತವೆ. ಹೀಗೆ ಬರುವ ಉಲ್ಕೆಗಳು ತಮ್ಮ ಜೊತೆ ನೀರನ್ನೂ ತರುತ್ತವೆ. ಹೀಗೆ ಬಿದ್ದ ಉಲ್ಕೆಗಳಿಂದಲೇ ಭೂಮಿಗೆ ನೀರು ಬಂತು ಎಂಬ ವಾದವಿದೆ.

 ‘ನೀರಿನ ಗಣಿಗಾರಿಕೆ’ ನಡೆಸಬಹುದು..!

‘ನೀರಿನ ಗಣಿಗಾರಿಕೆ’ ನಡೆಸಬಹುದು..!

ಆಸ್ಟ್ರೇಲಿಯಾದ ಟೆಲಿಸ್ಕೋಪ್ ಸಂಶೋಧನೆ ನಡೆಸಿರುವ ಹೊಸ ಮ್ಯಾಪ್ ಮೂಲಕ ಕ್ಯೂಪರ್ ಬೆಲ್ಟ್ ಹಾಗೂ ನಮ್ಮ ಸುತ್ತಮುತ್ತಲ ಪ್ರದೇಶದ ಅಧ್ಯಯನ ಸುಲಭವಾಗಲಿದೆ. ಹೇಗೆಂದರೆ ಕ್ಯೂಪರ್ ಬೆಲ್ಟ್ ಕಡೆಗೆ ಹೋಗಲು ಹೊಸ ದಾರಿಯ ಅನ್ವೇಶಣೆ ಸಾಧ್ಯವಾಗಬಹುದು. ಹೊಸ ಹೊಸ ಉಪಗ್ರಹಗಳನ್ನು ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಕ್ಯೂಪರ್ ಬೆಲ್ಟ್‌ಗೆ ಕಳುಹಿಸಲು ಸಾಧ್ಯವಾಗಬಹುದು. ಒಂದೊಮ್ಮೆ ಕ್ಯೂಪರ್ ಬೆಲ್ಟ್‌ನ ಬಗ್ಗೆ ಆಳವಾದ ಅಧ್ಯಯನ ಸಾಧ್ಯವಾದರೆ, ಭೂಮಿ ಮೇಲಿನ ನೂರಾರು ಸಮಸ್ಯೆಗಳಿಗೆ ಉತ್ತರ ಸಿಗಲಿದೆ. ಈ ಪೈಕಿ ನೀರಿನ ಸಮಸ್ಯೆಗೆ ಮುಕ್ತಿ ಹಾಡಬಹುದು ಹಾಗೂ ಭೂಮಿ ಮೇಲೆ ಎದುರಾಗಿರುವ ಇಂಧನ ಸಮಸ್ಯೆಗೂ ಇದರಿಂದ ಉತ್ತರ ಸಿಗಬಹುದು. ಭವಿಷ್ಯದಲ್ಲಿ ಭೂಮಿ ಮೇಲೆ ನೀರಿನ ಕೊರತೆಯಾದರೆ 'ಕ್ಯೂಪರ್ ಬೆಲ್ಟ್‌' ಕಡೆಗೆ ಹೋಗಿ ನೀರಿನ ಗಣಿಗಾರಿಕೆ ಬೇಕಾದರೂ ನಡೆಸಬಹುದು.

ಜಗತ್ತಿನ ಕಣ್ಣು ‘ಆಸಿಸ್’ ಮೇಲೆ..!

ಜಗತ್ತಿನ ಕಣ್ಣು ‘ಆಸಿಸ್’ ಮೇಲೆ..!

ಬಾಹ್ಯಾಕಾಶ ಕ್ಷೇತ್ರ ಬೆಳೆದಂತೆಲ್ಲಾ ಹೊಸ ಹೊಸ ಆವಿಷ್ಕಾರಗಳು ಅತಿ ವೇಗವಾಗಿ ನಡೆಯುತ್ತಿವೆ. ಅದರಲ್ಲೂ ಇತ್ತೀಚೆಗೆ 'ಮತ್ತೊಂದು ಭೂಮಿ' ಹುಡುಕುವ ಕೆಲಸ ವೇಗವಾಗಿ ನಡೆಯುತ್ತಿದೆ. ಈ ಕೆಲಸಕ್ಕೆ ಆಸ್ಟ್ರೇಲಿಯಾದ ವಿಜ್ಞಾನಿಗಳ 'ಯೂನಿವರ್ಸ್ ಮ್ಯಾಪ್' ಸಹಾಯ ಮಾಡಲಿದೆ. ಭೂಮಿಯಿಂದ ಅಲ್ಪಸ್ವಲ್ಪ ದೂರದಲ್ಲಿರುವ ಹಲವು ಗ್ರಹಗಳ ಅಧ್ಯಯನ ಸುಲಭವಾಗಲಿದೆ. ನೆರೆಯ ಆಂಡ್ರೋಮೆಡಾ (ದೇವಯಾನಿ ನಕ್ಷತ್ರಪುಂಜ) ಗ್ಯಾಲಕ್ಸಿ ಅಧ್ಯಯನವೂ ಸುಲಭವಾಗಲಿದೆ. ಒಂದೊಂದು ಗ್ಯಾಲಕ್ಸಿಯಲ್ಲೂ ಕೋಟ್ಯಂತರ ನಕ್ಷತ್ರಗಳಿವೆ. ಇನ್ನು ಗ್ರಹಗಳ ಸಂಖ್ಯೆ ಲೆಕ್ಕಕ್ಕೇ ಸಿಗುವುದಿಲ್ಲ. ಹೀಗಾಗಿ ಹೊಸ ಉಪಗ್ರಹಗಳ ಉಡಾವಣೆ ಹಾಗೂ ಹೊಸ ಗ್ರಹಗಳ ಅನ್ವೇಶಣೆಗೂ ಆಸಿಸ್ ವಿಜ್ಞಾನಿಗಳ ಸಾಧನೆ ಸಹಾಯಕವಾಗಲಿದೆ.

ಇಡೀ ಬ್ರಹ್ಮಾಂಡದ ಉಷ್ಣಾಂಶ ಏರಿಕೆ

ಇಡೀ ಬ್ರಹ್ಮಾಂಡದ ಉಷ್ಣಾಂಶ ಏರಿಕೆ

ಹೊಸ ಅಧ್ಯಯನವೊಂದರ ಪ್ರಕಾರ ತಾಪಮಾನದ ಬಿಸಿ ಎದುರಿಸುತ್ತಿರುವ ಗ್ರಹದಲ್ಲಿ ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡವೇ ಉಷ್ಣಾಂಶ ಏರಿಕೆಯನ್ನು ಎದುರಿಸುತ್ತಿದೆ. ಓಹಿಯೋ ವಿಶ್ವವಿದ್ಯಾಲಯದ ಕಾಸ್ಮೋಲಜಿ ಮತ್ತು ಆಸ್ಟ್ರೋಪಾರ್ಟಿಕಲ್ ಫಿಸಿಕ್ಸ್ ಕೇಂದ್ರದ ಹೊಸ ಅಧ್ಯಯನವು, ಇಡೀ ಬ್ರಹ್ಮಾಂಡವೇ ತಾಪಮಾನ ಏರಿಕೆಯನ್ನು ಕಾಣುತ್ತಿದೆ. ಕಳೆದ 10 ಬಿಲಿಯನ್ ವರ್ಷಗಳಿಂದ ಬ್ರಹ್ಮಾಂಡದ ಉಷ್ಣ ಇತಿಹಾಸವನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಿರುವ ನಡುವೆ ವಿಜ್ಞಾನಿಗಳಿಗೆ ಈ ಮಹತ್ವದ ವಾಸ್ತವ ಗೊತ್ತಾಗಿದೆ.

English summary
Australian scientists found new map of Universe using an advanced telescope in the desert. They map millions of galaxies with new telescope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X