Shivaratri 2024: ಶಿವರಾತ್ರಿಯ ದಿನ ಈ ತಪ್ಪುಗಳನ್ನು ಮಾಡಬೇಡಿ: ಶಿವನ ಕೋಪ ಎಂದಿಗೂ ಒಳ್ಳೆಯದಲ್ಲ!
ನಾಡಿನೆಲ್ಲಡೆ ಮಹಾ ಶಿವರಾತ್ರಿ ಆಚರಣೆಯ ಸಂಭ್ರಮ ಆರಂಭಗೊಂಡಿದ್ದು, ಒಂದು ವರ್ಷದ 12 ಶಿವರಾತ್ರಿಗಳಲ್ಲಿ ಮಹಾ ಶಿವರಾತ್ರಿ ಆಚರಣೆ ಅದ್ಧೂರಿಯಾಗಿ ನಡೆಯುತ್ತದೆ. ಮಹಾ ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಕೋಟ್ಯಂತರ ಶಿವ ಭಕ್ತರು ಅಭಿಷೇಕ, ಉಪವಾಸ, ಜಾಗರಣೆಗಳನ್ನು ಮಾಡಿ ಶಿವನನ್ನು ಆರಾಧಿಸುತ್ತಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿ ವಿವಾಹವಾದ ಈ ದಿನ ಶ್ರೇಷ್ಠವಾದ ದಿನವಾಗಿದ್ದು, ಅಂದು ಶಿವ ಭಕ್ತರ ಕೋರಿಯನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ.

ಮಹಾ ಶಿವರಾತ್ರಿಯ ದಿನ ಶಿವ ಆರಾಧನೆಯಿಂದ ನಮ್ಮ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತದೆ ಎನ್ನುವುದು ಭಕ್ತರ ನಂಬಿಯಾಗಿದ್ದು, ಕಾಯ ವಾಚಾ ಮನಸ ಶಿವನ ಆರಾಧನೆ ಮಾಡಬೇಕು. ಸರಳತೆಗೆ ಪ್ರತೀಕವಾಗಿರುವ ಶಿವನು ಯಾವುದೇ ಆಡಂಭರ, ಅದ್ಧೂರಿ ಪೂಜೆಗಳನ್ನು ಬಯಸುವುದಿಲ್ಲ. ಶಿವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ ಶಿವನನ್ನು ಆರಾಧಿಸಬಹುದು. ಆದರೆ ಮಹಾ ಶಿವರಾತ್ರಿಯ ಪೂಜೆ ಮಾಡುವ ಸಂದರ್ಭದಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು.
ಈ ವರ್ಷ ಮಾರ್ಚ್ 8 ಶುಕ್ರವಾರದಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತಿದ್ದು, ಹಬ್ಬದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ಬಾರಿ ಶಿವರಾತ್ರಿಯ ಆಚರಣೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಡಿ. ಅಪ್ಪಿತಪ್ಪಿಯೂ ಶಿವರಾತ್ರಿಯ ಹಬ್ಬದ ಆಚರಣೆಯ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ.

*ಶಿವನ ಪೂಜೆ ಮಾಡುವಾಗ ಶಿವನಿಗೆ ಅಭಿಷೇಕ ಮಾಡಿ ಗಂಧ, ಚಂದನ, ಭಸ್ಮ ಲೇಪನೆ ಮಾಡಬೇಕು. ಆದರೆ ಕುಂಕುಮ ಹಾಗು ಅರಿಶಿನ ಲೇಪಿಸಬಾರದು ಎಂದು ಶಿವ ಪುರಾಣದಲ್ಲಿ ತಿಳಿಸಲಾಗಿದೆ.
*ಪೂಜೆಯಲ್ಲಿ ತುಳಸಿಗೆ ಬಹಳ ಮುಖ್ಯವಾದ ಸ್ಥಾನವಿದೆ ಆದರೆ ಅದನ್ನು ನಾವು ವಿಷ್ಣುವಿನ ಪೂಜೆಗೆ ಬಳಸಬೇಕು. ಶಿವನ ಪೂಜೆಗೆ ತುಳಸಿಯನ್ನು ನಾವು ಬಳಸಬಾರದು ಎನ್ನುವ ಮಾತಿದೆ. ಬದಲಿಗೆ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯನ್ನು ಲಿಂಗಕ್ಕೆ ಅರ್ಪಿಸಿ.
*ಪೂಜೆಯ ವೇಳೆಯಲ್ಲಿ ಸ್ಟೀಲ್ ತಟ್ಟೆಯಲ್ಲಿ ಶಿವಲಿಂಗವನ್ನು ಇರಿಸಬಾರದು. ಹಿತ್ತಾಳೆಯಿಂದ ಮಾಡಿದ ಯಾವುದೇ ಪರಿಕರ ಇಲ್ಲವೇ ಪಾತ್ರೆಯನ್ನು ದೇವರಿಗೆ ಅರ್ಪಿಸಬೇಡಿ. ಬದಲಿಗೆ ತಾಮ್ರವನ್ನು ಪೂಜೆಗೆ ಬಳಸಿ.
*ಶಿವನನ್ನು ಪೂಜಿಸುವ ಮೊದಲು ಗಣಪನಿಗೆ ಪೂಜೆಯನ್ನು ಸಲ್ಲಿಸಬೇಕು. ಏಕೆಂದರೆ ಪ್ರಥಮ ಪೂಜೆಯನ್ನು ಗಣಪತಿಗೆ ಮಾಡಬೇಕೆಂಬ ವಾಡಿಕೆ ಇದೆ.
*ಇನ್ನು ಶಿವರಾತ್ರಿಯ ದಿನ ಮಧ್ಯ ಸೇವನೆ, ಮಾಂಸಾಹಾರ ಸೇವನೆಯನ್ನು ಮಾಡಬಾರದು. ಅನೇಕರು ಉಪವಾಸ ಆಚರಣೆ ಮಾಡುತ್ತಿದ್ದಾರೆ. ಮುಖ್ಯವಾದ ಸಂಗತಿಯೆಂದರೆ ಮಹಾ ಶಿವರಾತ್ರಿಯ ದಿನ ವಿಳಂಬವಾಗಿ ಪೂಜೆಗೆ ಮಾಡಬಾರದು.












Click it and Unblock the Notifications