ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ 6.89 ಲಕ್ಷ ಮತಗಳು

|
Google Oneindia Kannada News

ನವದೆಹಲಿ, ಮೇ 24: 2019ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಭೂತಪೂರ್ವ ಜಯ ದಾಖಲಿಸಿದೆ. ಬಿಜೆಪಿ ಅಭ್ಯರ್ಥಿಗಳು ಅನೇಕ ರಾಜ್ಯಗಳಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಗುಜರಾತಿನ ನವ್ಸಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಿ. ಆರ್ ಪಾಟೀಲ್ ಅವರು ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಸಂಸದ ಎನಿಸಿಕೊಂಡಿದ್ದಾರೆ. 2019ರಲ್ಲಿ ಸಿ. ಆರ್ ಪಾಟೀಲ್ ಅವರು ಕಾಂಗ್ರೆಸ್ಸಿನ ಅಭ್ಯರ್ಥಿ ವಿರುದ್ಧ 6.89 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿ ಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿ

ಅತ್ಯಂತ ಕಡಿಮೆ ಅಂತರದ ಮತಗಳಿಂದ ಜಯ ದಾಖಲಿಸಿರುವುದು ಕೂಡಾ ಬಿಜೆಪಿ ಅಭ್ಯರ್ಥಿ. ಉತ್ತರಪ್ರದೇಶದ ಮಛ್ಲಿಶಹ್ರ್ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಭೋಲನಾಥ್ ಅವರು 181 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.

ಗೋಪಿನಾಥ್ ಮುಂಡೆ ಪುತ್ರಿ

ಗೋಪಿನಾಥ್ ಮುಂಡೆ ಪುತ್ರಿ

ಆದರೆ, ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ದಾಖಲೆ ಮುರಿಯುವಲ್ಲಿ ವಿಫಲರಾಗಿದ್ದಾರೆ. ಈ ದಾಖಲೆ ಇನ್ನು ಪ್ರೀತಂ ಮುಂಡೆ ಅವರ ಹೆಸರಿನಲ್ಲಿದೆ. ಮಾಜಿ ಕೇಂದ್ರ ಸಚಿವ ದಿವಂಗತ ಗೋಪಿನಾಥ್ ಮುಂಡೆ ಅವರ ಅಕಾಲಿಕ ನಿಧನ ನಂತರ 2014ರ ಅಕ್ಟೋಬರ್ ನಲ್ಲಿ ಬೀಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ವಿರುದ್ಧ 6.96 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

2019ರ ಲೋಕಸಮರ ಅತ್ಯಂತ ಶ್ರೀಮಂತ ಮಹಿಳಾ ಅಭ್ಯರ್ಥಿ ಯಾರು? 2019ರ ಲೋಕಸಮರ ಅತ್ಯಂತ ಶ್ರೀಮಂತ ಮಹಿಳಾ ಅಭ್ಯರ್ಥಿ ಯಾರು?

6 ಲಕ್ಷ ಮತಗಳ ಅಂತರದಲ್ಲಿ ಗೆದ್ದ ಸಂಸದರು:

6 ಲಕ್ಷ ಮತಗಳ ಅಂತರದಲ್ಲಿ ಗೆದ್ದ ಸಂಸದರು:

ಸಂಜಯ್ ಭಾಟಿಯಾ, ಕೃಷ್ಣನ್ ಪಾಲ್, ಸುಭಾಷ್ ಚಂದ್ರ ಬಹೆರಿಯಾ ಇವರು 6 ಲಕ್ಷ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. 12ಕ್ಕೂ ಅಧಿಕ ಮಂದಿ 5 ಲಕ್ಷ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಂಜಯ್ ಭಾಟಿಯಾ ಹರ್ಯಾಣದ ಕರ್ನಾಲ್ ಕ್ಷೇತ್ರದಿಂದ 6.56 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೃಷ್ಣನ್ ಪಾಲ್ ಅವರು ಫಾರಿದಾಬಾದ್ ನಲ್ಲಿ 6.38 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸುಭಾಷ್ ಚಂದ್ರ ಬೆಹರಿಯಾ 6.12 ಲಕ್ಷ ಮತಗಳಿಂದ ಜಯ ಗಳಿಸಿದ್ದಾರೆ.

ಇಂದೋರ್ ಹಾಗೂ ವಿದಿಶಾದಲ್ಲಿ ಗೆಲುವು

ಇಂದೋರ್ ಹಾಗೂ ವಿದಿಶಾದಲ್ಲಿ ಗೆಲುವು

ಸುಮಿತ್ರಾ ಮಹಾಜನ್ ಸ್ಪರ್ಧಿಸುತ್ತಿದ್ದ ಇಂದೋರ್ ನಿಂದ ಸ್ಪರ್ಧಿಸಿದ್ದ ಶಂಕರ್ ಲಾಲ್ವಾನಿ ಅವರು 5.47 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸುಷ್ಮಾ ಸ್ವರಾಜ್ ಸ್ಪರ್ಧಿಸುತ್ತಿದ್ದ ವಿದಿಶಾದಿಂದ ಸ್ಪರ್ಧಿಸಿದ್ದ ರಮಾಕಾಂತ್ ಭಾರ್ಗವ 5.03 ಲಕ್ಷ ಮತಗಳಿಂದ ಗೆದ್ದುಕೊಂಡಿದ್ದಾರೆ.

ಪ್ರಧಾನಿ ಮೋದಿ ಗೆಲುವು

ಪ್ರಧಾನಿ ಮೋದಿ ಗೆಲುವು

vಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು ವಾರಣಾಸಿಯಲ್ಲಿ 4.79 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. 2014ರಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು 3.71 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗಾಂಧಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ 5.57 ಲಕ್ಷಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

English summary
The Bharatiya Janata Party's C R Patil came close to shattering the all-time record of victory margin in a parliamentary election when he defeated his Congress rival in the Navsari Lok Sabha seat in Gujarat by a difference of 6.89 lakh votes -- the highest in the 2019 polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X