ಮೈಸೂರಿನ ನಿರಂತರ ಫೌಂಡೇಶನ್‌ನಿಂದ ನಾಟಕೋತ್ಸವ: ಯಾವ ದಿನ ಯಾವ ನಾಟಕ?
ಮೈಸೂರು, ಡಿಸೆಂಬರ್ 18: ಮೈಸೂರಿನ ನಿರಂತರ ಫೌಂಡೇಶನ್ ವತಿಯಿಂದ ಪ್ರತಿವರ್ಷ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಹಜರಂಗ ರಂಗತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಅದರಂತೆ ಪ್ರಸಕ್ತ ಡಿಸೆಂಬರ್ 25ರಿಂದ 30ರವರಗೆ (6 ದಿನಗಳ ನಾಟಕೋತ್ಸವ), ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗ ಮಂದಿರ ದಲ್ಲಿ ನಡಯಲಿದ್ದು, ಈ ಬಾರಿ ಹಲವು ರೀತಿಯ ರಂಗವಿಶೇಷತೆಗಳನ್ನು ಪ್ರಸ್ತುತ ಪಡಿಸಲು ಸಜ್ಜಾಗುತ್ತಿದೆ.
ಇಲ್ಲಿವರೆಗೆ ನಾಡಿನ ರಂಗಭೂಮಿಗೆ ಪ್ರಮುಖ ಕೊಡುಗೆ ನೀಡುತ್ತಿರುವ ನಿರಂತರ ಫೌಂಡೇಶನ್ ನೂರಾರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ರಂಗ ಉತ್ಸವಗಳನ್ನ ಯಶಸ್ವಿಯಾಗಿ ಮಾಡಿ ಪ್ರಸ್ತುತ 16ನೇ ವರ್ಷದ ಉತ್ಸವದ ಹೊಸ್ತಿಲಿಗೆ ಬಂದಿರುವುದು ವಿಶೇಷವಾಗಿದೆ. ಪ್ರತಿ ವರ್ಷವೂ ರಾಜ್ಯದ ನಾನಾ ಭಾಗಗಳಿಂದ ವಿಭಿನ್ನ ಶೈಲಿಯ ನಾಟಕ ಮತ್ತು ಜಾನಪದ ಪ್ರಕಾರಗಳ ಪ್ರದರ್ಶನವನ್ನು ಆಯೋಜಿಸಿಕೊಂಡು ಬರುತ್ತಿದೆ.

ಈ ಬಾರಿಯೂ ಸಹ ಸಮಗ್ರತೆಯ ಸಂಕೇತವಾಗಿ ನಮ್ಮ ಮಹಾಕಾವ್ಯಗಳಿಂದ ಹಿಡಿದು, ಕುವೆಂಪು ಮತ್ತು ಬ್ರೆಕ್ಟ್ ನ ನಾಟಕಗಳ ಪ್ರಸ್ತುತಿಯೂ ಇರಲಿದೆ. ನಿರಂತರ, ಬದಲಾವಣೆಗಳಿಗೆ ಹೊಂದಿಕೊಳ್ಳುವುದರೊಂದಿಗೆ, ಪರಂಪರೆಯ ಸೊಗಡನ್ನೂ ಮರೆಯದೆ, ಪ್ರಚಲಿತ ಸನ್ನಿವೇಶಗಳೊಟ್ಟಿಗೆ ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಮುಖಾಮುಖಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ಹಲವು ಯಶಸ್ವಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಜನಪರ ಹೋರಾಟಕ್ಕೆ ರಂಗಭೂಮಿ ಬಳಕೆ
ಸ್ಪಷ್ಟವಾದ ಉದ್ದೇಶ ಮತ್ತು ಸಾಮಾಜಿಕ ಜವಾಬ್ದಾರಿಗಳಿಂದ ರಂಗಭೂಮಿ, ಜಾನಪದ, ಸಾಹಿತ್ಯ, ಪರಿಸರ ಮುಂತಾದ ಎಲ್ಲಾ ರಂಗಗಳಲ್ಲೂ ಕೆಲಸ ಮಾಡಿರುವ ನಿರಂತರ ಫೌಂಡೇಶನ್, ಜನಪರ ಹೋರಾಟಗಳಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಹಾಗೂ ಸಾಕ್ಷ್ಯ ಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಕರ್ನಾಟಕದ ಮೊತ್ತ ಮೊದಲ ಮಳೆ ನೀರು ಸಂಗ್ರಹಣೆ ಕುರಿತಾದ ಜಲಜಾಥ ಹಾಗೂ ಕರ್ನಾಟಕದಾದ್ಯಂತ ಬಸವಣ್ಣನವರ ವಚನಗಳನ್ನಾಧರಿಸಿದ "ಕೂಡಲಸಂಗಮ" ದೃಶ್ಯರೂಪಕದ 160ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಪ್ರತಿವರ್ಷ ನಿರಂತರ ರಂಗ ಉತ್ಸವವನ್ನು ಹಮ್ಮಿಕೊಂಡು ಬರುತ್ತಿದೆ. ಜನಪದ ಮಹಾಕಾವ್ಯ ಜುಂಜಪ್ಪ ವಾಚನಾಭಿನಯ, ಡಾ. ಚಂದ್ರಶೇಖರ ಕಂಬಾರರ "ಶಿವರಾತ್ರಿ" ನಾಟಕವನ್ನು ಮುಂಬೈನ ಮೈಸೂರು ಅಸೋಸಿಯೇಶನ್, ಭೂಪಾಲದ "ಭಾರತ ರಂಗ ಮಂಡಲ" ಗಮನಾರ್ಹವಾಗಿದೆ.

ಹೊಸ ನಾಟಕಗಳ ರೂಪಿಸಿದ ಹೆಮ್ಮೆಯಿದೆ
ದೆಹಲಿಯಲ್ಲಿ ರಾಷ್ಟ್ರಿಯ ನಾಟಕ ಶಾಲೆ ಆಯೋಜಿಸಿದ್ದ 15ನೇ ಭಾರತ ರಂಗ ಮಹೋತ್ಸವದಲ್ಲಿ ಹಾಗೂ 2015ರ ಸಂಗೀತ ನಾಟಕ ಅಕಾಡೆಮಿಯ ಉತ್ಸವದಲ್ಲಿ ಪ್ರದರ್ಶನ ನೀಡಿದೆ. ಟಿ.ಕೆ.ದಯಾನಂದ್ ಪುಸ್ತಕ ಆಧಾರಿತ "ರಸ್ತೆ ನಕ್ಷತ್ರ" ನಾಟಕವನ್ನು ರಂಗಾಯಣ ಆಯೋಜಿಸಿದ್ದ "ಬಹುರೂಪಿ ಬಹುಭಾಷಾ ಅಂತರಾಷ್ಟ್ರಿಯ ರಂಗೋತ್ಸವ 2017" ರಲ್ಲಿ ಪ್ರರ್ದಶನ ನೀಡಿದೆ. ಜಯರಾಮ ರಾಯಪುರ ರಚನೆಯ ನಾಟಕ 'ವಾರಸುದಾರಾ'ವನ್ನು ನಿರಂತರದ ಪ್ರಸಾದ್ ಕುಂದೂರುರವರ ನಿರ್ದೇಶನದಲ್ಲಿ ಅಭಿನಯಿಸಲಾಯಿತು, ವರಕವಿ ದ. ರಾ ಬೇಂದ್ರೆಯವರ 'ಸಾಯೋ ಆಟ' ನಾಟಕವನ್ನು ನಿರಂತರದ ಹಿರಿಯ ಗೆಳೆಯರೇ ನಿರ್ದೇಶಿಸಿ ಹಲವು ಕಾಲೇಜಿನಲ್ಲಿ ಅಭಿನಯಿಸಿದ್ದಾರೆ.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮನಮೋಹಕ ಉಪಾಖ್ಯಾನಗಳನ್ನು ಆಧರಿಸಿ ಹೊಸ ನಾಟಕವನ್ನು ರೂಪಿಸಿದೆ. ನಾಟಕವು ಗೊರೂರಿನ ಮೋಡಿಮಾಡುವ ಜಗತ್ತನ್ನು ಪರಿಶೀಲಿಸುತ್ತದೆ. ಈ ವರ್ಷದ ನಿರಂತರದ ಹೊಸ ನಾಟಕ ಕನ್ನಡದ ಸಾರಸತ್ವ ಲೋಕದ ವಿಸ್ಮಯ ಕಥೆಗಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ತಮ್ಮ ನೀಳ್ಗವಿತೆಯೊಳಗೆ ಸೃಷ್ಟಿಸಿರುವ 'ಕೃಷ್ಣೇಗೌಡರ ಆನೆ' ನಾಟಕವನ್ನು ಜೀವನ್ ಕುಮಾರ್ ಹೆಗ್ಗೋಡರವರ ನಿರ್ದೇಶನದಲ್ಲಿ ಮೂಡಿಬಂದಿದೆ.
ಯಾವ ದಿನ? ಯಾವ ನಾಟಕ ಗೊತ್ತಾ?
ಏನೆಲ್ಲ ನಾಟಕಗಳಿವೆ ಎನ್ನುವುದನ್ನು ನೋಡಿದ್ದೇ ಆದರೆ ಡಿಸೆಂಬರ್ 25ರ ಬುಧವಾರ ಸಂಜೆ 7ಕ್ಕೆ, ಸಮತೆಂತೋ ಮೈಸೂರು ಪ್ರಸ್ತುತಿಯ ಏಕವ್ಯಕ್ತಿ ರಂಗ ಪ್ರಯೋಗ, ನಡೆಯಲಿದೆ. 26ರ ಗುರುವಾರ ಸಂಜೆ 5:30ಕ್ಕೆ ಅಭಿನವ ವೀರಭದ್ರೇಶ್ವರ ತಂಡದ ವೀರಗಾಸೆ ಜನಪದ ನೃತ್ಯ, ಸಂಜೆ 7ಕ್ಕೆ, ನಿರ್ದಿಗಂತ ಕೆ. ಶೆಟ್ಟಹಳ್ಳಿ (ಶ್ರೀರಂಗಪಟ್ಟಣ) ಅಭಿನಯದ ನಾಟಕ : ತಿಂಡಿಗೆ ಬಂದ ತುಂಡೇರಾಯ, 27ರ ಶುಕ್ರವಾರ, ಸಂಜೆ 7ಕ್ಕೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ಅಭಿನಯದ, ನಾಟಕ : ಚಾರುವಸಂತ, 28ರ ಶನಿವಾರ, ಸಂಜೆ 7ಕ್ಕೆ, ಉಸ್ತಾದ್ ಫಯಾಜ್ ಖಾನ್ ಸಂಗೀತ ಸಂಜೆ.

29 ಭಾನುವಾರ ಸಂಜೆ ಸಂಜೆ 7ಕ್ಕೆ, ಸಮುದಾಯ ರಾಯಚೂರು ಅಭಿನಯದ ನಾಟಕ : ರಕ್ತ ವಿಲಾಪ, 30ರ ಸೋಮವಾರ ಸಂಜೆ 5:30ಕ್ಕೆ ನಗಾರಿ ಮಂಜು ಮೈಸೂರು ಮತ್ತು ತಂಡದಿಂದ ನಗಾರಿ ಮತ್ತು ತಮಟೆ ವಾದ್ಯ ಕಾರ್ಯಕ್ರಮ, ಸಂಜೆ 7ಕ್ಕೆ, ಭಳಿರೇ ವಿಚಿತ್ರಮ್ ತಂಡ ಅಭಿನಯಯಿಸುವ ಕುವೆಂಪು ವಿರಚಿತ 'ಶ್ರೀ ರಾಮಾಯಣ ದರ್ಶನಂ'ಕೃತಿಯಿಂದ ನಾಟಕ : ದಶಾನನ ಸ್ವಪ್ನಸಿದ್ಧಿ ನಡೆಯಲಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications