ಮರ್ಫೋರ್ ಕಾಂಪ್ಯಾಕ್ಟ್ ತಂತಿಗಳು: ಭೂಕಂಪದ ಒತ್ತಡದಿಂದ ಗೋಡೆಗಳ ಕುಸಿತ ತಡೆಗಟ್ಟುವುದಕ್ಕೆ ಪರಿಹಾರ
ದೆಹಲಿ ಸೇರಿದಂತೆ ಭಾರತದ ಇತರ ಭಾಗಗಳಲ್ಲಿ ಗೋಡೆ ಕುಸಿಯುವ ಹಾಗೂ ಬಿರುಕು ಬಿಡುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಿಲ್ಟೆಕ್ ಬಿಲ್ಡಿಂಗ್ ಎಲೆಮೆಂಟ್ಸ್ ಲಿಮಿಟೆಡ್ (ಭಾರತದ ಮೊದಲ ಹಾಗೂ ಪ್ರಮುಖ ಎಎಸಿ ಬ್ಲಾಕ್ ತಯಾರಕ ಸಂಸ್ಥೆ) ಗೋಡೆಯ ಬಲವರ್ಧನೆಗೆ ಮುಂದಾಗಿದೆ. ಈ ಸಂಸ್ಥೆ ಮರ್ಫೋರ್ ಕಾಂಪ್ಯಾಕ್ಟ್ ತಯಾರಿಕೆಯಲ್ಲಿ ತೊಡಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂಬಿಕೆ ಗಳಿಸಿಕೊಂಡಿರುವ ಮಸಿನರಿ ರೀನ್ಫೋರ್ಸ್ಮೆಂಟ್ ಪರಿಹಾರವಾಗಿದ್ದು, ಗಾಳಿಯ ಒತ್ತಡ ಮತ್ತು ಭೂಕಂಪದ ಶಕ್ತಿಗಳಿಂದ ಉಂಟಾಗುವ ಗೋಡೆ ಕುಸಿತವನ್ನು ತಡೆಗಟ್ಟುತ್ತದೆ.
ಹೆಚ್ಚುತ್ತಿರುವ ಗಾಳಿಗೆ ಗೋಡೆ ಕುಸಿತಗಳು ಸಂಭವಿಸುತ್ತಿರುವುದು ಕಂಡುಬರುತ್ತಿದೆ. ತ್ವರಿತವಾಗಿ ನಿರ್ಮಿಸಲಾದ ಅಥವಾ ಸರಿಯಾದ ತಾಂತ್ರಿಕತೆ ಇಲ್ಲದ ಕಟ್ಟಡಗಳ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಹವಾಮಾನ ಬದಲಾವಣೆಯಿಂದ ಹವಾಮಾನ ಸಂಬಂಧಿತ ದುರ್ಘಟನೆಗಳು ಹೆಚ್ಚಾಗುತ್ತಿದೆ. ಭಾರತವು ಭೂಕಂಪನದ ಪ್ರದೇಶದಲ್ಲಿರುವುದರಿಂದ ಮುನ್ನೆಚ್ಚರಿಕೆಯಾಗಿ ಬಲವರ್ಧನೆ ಪರಿಹಾರಗಳು ಅತ್ಯಾವಶ್ಯಕವಾಗಿವೆ.

ಮರ್ಫೋರ್ ಕಾಂಪ್ಯಾಕ್ಟ್ ಎಂಬುದು ಹೊಸ ತಲೆಮಾರಿನ ಮ್ಯಾಸನರಿ ರೀನ್ಫೋರ್ಸ್ಮೆಂಟ್ ಆಗಿದ್ದು, ಹೈ ಟೆನ್ಸೈಲ್ ಸ್ಟೀಲ್ ನಿಂದ ತಯಾರಾಗುತ್ತದೆ. ಇದನ್ನು ಗೋಡೆ ನಿರ್ಮಾಣ ಸಮಯದಲ್ಲಿ ಮೋರ್ಟಾರ್ ಜಾಯಿಂಟ್ಗಳೊಳಗೆ ಅಳವಡಿಸಲಾಗುತ್ತದೆ. ಇದರಿಂದ ಗೋಡೆಯ ಒಟ್ಟು ಬಲ ಹೆಚ್ಚುತ್ತದೆ. ಇದು ಒತ್ತಡವನ್ನು ಬ್ಯಾಲೆನ್ಸ್ ಮಾಡುತ್ತದೆ. ಗೋಡಗಳ ಬಿರುಕುಗಳನ್ನು ತಡೆಯುತ್ತದೆ. ಮರ್ಫೋರ್ ಕಾಂಪ್ಯಾಕ್ಟ್ ಬಳಕೆಗೆ ಸುಲಭವಾಗಿದ್ದು, ಯಾವುದೇ ವಿಶೇಷ ತರಬೇತಿ ಅಥವಾ ನೈಪುಣ್ಯತೆಯ ಅಗತ್ಯವಿಲ್ಲ. ಇದನ್ನು ನೇರವಾಗಿ ತಿರುಗಿಸಿ ಗೋಡೆಯ ಮೇಲೆ ಅಳವಡಿಸಬಹುದು.
ಈ ಕುರಿತು ಮಾತನಾಡಿರುವ ಬಿಲ್ಟೆಕ್ ಬಿಲ್ಡಿಂಗ್ ಎಲೆಮೆಂಟ್ಸ್ ಲಿಮಿಟೆಡ್ ಸಿಇಒ, 'ನಾವು ಬಿಲ್ಟೆಕ್‌ನಲ್ಲಿ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ತಯಾರಿಸುತ್ತಿರುವ ಜವಾಬ್ದಾರಿಯುತ ಕಂಪನಿಯಾಗಿದ್ದೇವೆ. ಕಟ್ಟಡದ ಸುರಕ್ಷತೆಯಲ್ಲಿನ ಬದಲಾವಣೆಯು ಜನಜಾಗೃತಿಯಿಂದ ಆರಂಭವಾಗುತ್ತದೆ ಎಂಬ ನಂಬಿಕೆಯಲ್ಲಿ ಇದ್ದೇವೆ' ಎಂದು ಹೇಳಿದ್ದಾರೆ.
'ಮರ್ಫೋರ್ ಕಾಂಪ್ಯಾಕ್ಟ್ ಈಗಾಗಲೇ ಭಾರತದಲ್ಲಿ ಬಳಸಲ್ಪಡುತ್ತಿರುವ ಅಂತಾರಾಷ್ಟ್ರೀಯವಾಗಿ ನಂಬಲಾಗಿರುವ ಪರಿಹಾರವಾಗಿದೆ. ನಾವು ಜಾಗೃತಿ ಮೂಡಿಸುತ್ತೇವೆ. ಇದರಿಂದ ಸ್ಟ್ರಕ್ಚರಲ್ ಎಂಜಿನಿಯರ್, ಆರ್ಕಿಟೆಕ್ಟ್, ಕಂಟ್ರಾಕ್ಟರ್‌ಗಳು ಮತ್ತು ಡಿಸಿಜನ್ ಮೇಕರ್‌ಗಳು ಹೆಚ್ಚು ಸುರಕ್ಷಿತ ಮತ್ತು ಬಲವಾದ ಕಟ್ಟಡಗಳನ್ನು ನಿರ್ಮಿಸಲು ಲಭ್ಯವಿರುವ ಎಲ್ಲ ಸಾಧನಗಳನ್ನು ಪರಿಗಣಿಸಬಹುದಾಗಿದೆ' ಎಂದು ತಿಳಿಸಿದ್ದಾರೆ.
ಮರ್ಫೋರ್ ಕಾಂಪ್ಯಾಕ್ಟ್ ಅನ್ನು ಬೆಕಾರ್ಟ್ ಎಂಬ ಸ್ಟೀಲ್ ವೈರ್ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಭಾರತದಲ್ಲಿ ಕೇವಲ ಬಿಲ್ಟೆಕ್ ಬಿಲ್ಡಿಂಗ್ ಎಲೆಮೆಂಟ್ಸ್ ಲಿಮಿಟೆಡ್ ಮೂಲಕ ಮಾತ್ರ ಮಾರಾಟವಾಗುತ್ತದೆ. ಈ ಉತ್ಪನ್ನವನ್ನು ಗೋಡೆಯನ್ನು ನಿರ್ಮಿಸುತ್ತಿರುವಾಗಲೇ ಅಳವಡಿಸಬೇಕು. ಇದು ಎಲ್ಲಾ ಸಾಮಾನ್ಯ ಗೋಡೆ ನಿರ್ಮಾಣ ಸಾಮಗ್ರಿಗಳ ಜೊತೆಗೆ ಬಳಸಲು ಸೂಕ್ತವಾಗಿದೆ. ಇದರಿಗಾಗಿ ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಹೆಚ್ಚುವರಿ ತೂಕವಿಲ್ಲ ಮತ್ತು ಪ್ರಸ್ತುತ ಕಟ್ಟಡ ನಿರ್ಮಾಣ ಪ್ರಕ್ರಿಯೆಯೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಅದರಿಂದ ಇದು ಪ್ರಯೋಜನಕಾರಿಯಾದ ಆಯ್ಕೆಯಾಗಿದೆ.
ಮರ್ಫೋರ್ ಕಾಂಪ್ಯಾಕ್ಟ್‌ನ ಪ್ರಮುಖ ಪ್ರಯೋಜನೆಗಳು
• ಗಾಳಿ ಹಾಗೂ ಭೂಕಂಪದಿಂದ ಉಂಟಾಗುವ ಒತ್ತಡಗಳ ವಿರುದ್ಧ ರಕ್ಷಣಾ ಬಲ
• ಗೋಡೆಯ ಬಿರುಕುಗಳನ್ನು ನಿಯಂತ್ರಿಸುವಿಕೆ ಮತ್ತು ತಡೆಯುವಿಕೆ
• ಹೆಚ್ಚಿನ ತೂಕವಿಲ್ಲದ ಸುಲಭ ಅಳವಡಿಕೆ
• ಜಾಯಿನಿಂಗ್ ಮೋರ್ಟಾರ್‌ನೊಂದಿಗೆ ಬಳಕೆ ಮಾಡಿದರೆ ನೀರಿನ ಅಥವಾ ಕ್ಯೂರಿಂಗ್‌ನ ಅಗತ್ಯವಿಲ್ಲ
ಭಾರತದಲ್ಲಿ ನಿರ್ಮಾಣ ಪದ್ಧತಿಗಳನ್ನು ಹೆಚ್ಚು ಸುರಕ್ಷಿತ ಹಾಗೂ ಶಾಶ್ವತವಾಗಿಸಲು ಬಿಲ್ಟೆಕ್ ಬದ್ಧವಾಗಿದೆ. ಮೂಲಸ್ಥರದಲ್ಲಿ ಬಳಸುವ ಸಾಮಗ್ರಿಗಳಿಂದಲೇ ಈ ಪ್ರಯತ್ನ ಆರಂಭವಾಗುತ್ತದೆ.
ಬಿಲ್ಟೆಕ್ ಬಿಲ್ಡಿಂಗ್ ಎಲೆಮೆಂಟ್ಸ್ ಲಿಮಿಟೆಡ್ ಬಗ್ಗೆ
1992ರಲ್ಲಿ ಸ್ಥಾಪನೆಯಾದ ಬಿಲ್ಟೆಕ್ ಭಾರತದ ಎಎಸಿ ಉತ್ಪನ್ನಗಳ ಪ್ರಮುಖ ತಯಾರಕ ಸಂಸ್ಥೆ ಆಗಿದೆ. ಇದು ಆಧುನಿಕ ಕಟ್ಟಡ ತಂತ್ರಜ್ಞಾನಗಳಿಗೆ ಅನುಗುಣವಾಗಿ ಉನ್ನತ-ಕಾರ್ಯಕ್ಷಮತೆಯ ಪರಿಹಾರಗಳನ್ನು ನೀಡುತ್ತದೆ.












Click it and Unblock the Notifications