New Year destinations: ಹೊಸ ವರ್ಷದ ವೇಳೆ ಅತಿ ಹೆಚ್ಚು ಭೇಟಿ ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು

ಹೊಸ ವರುಷವೆಂದರೆ ಅದೊಂದು ಸಂಭ್ರಮ. ಈ ಸಂತಸವನ್ನು ಪಾರ್ಟಿ ಮೂಲಕ ಬರಮಾಡಿಕೊಳ್ಳುವುದು ಹಲವರ ವಾಡಿಕೆ. ಇನ್ನು ಹಲವರು ವರುಷ ಮುಗಿಯುತ್ತಿದೆ ಒಂದೊಳ್ಳೆ ಜಾಗ ಕಣ್ತುಂಬಿಕೊಂಡು ಬರೋಣ ಎಂದು ಗಂಟುಮೂಟೆ ಕಟ್ಟಿಕೊಂಡು ಊರು ತೊರೆಯುತ್ತಾರೆ. ಕೆಲವರು ಇರುವಲ್ಲೇ ಪಾರ್ಟಿ ಪ್ಲ್ಯಾನ್‌ ಮಾಡಿದ್ರೆ, ಹಲವರು ಪ್ರವಾಸದಲ್ಲೇ ಪಾರ್ಟಿ ಮಾಡುತ್ತಾರೆ.

ಹೊಸ ವರ್ಷಕ್ಕೂ ಕೆಲವು ದಿನಗಳ ಮುನ್ನವೇ ಅದರಲ್ಲೂ ಬೆಂಗಳೂರಿಗರು ಟ್ರಿಪ್‌ ಪ್ಲ್ಯಾನ್‌ ಮಾಡುತ್ತಾರೆ. ಕರ್ನಾಟಕದಲ್ಲಿರುವ ಬೆಸ್ಸ್‌ ವಿಸಿಟ್‌ ಪ್ಲೇಸ್‌ಗಳ ಮಾಹಿತಿಯನ್ನು ಫೋನ್‌ನಲ್ಲಿ ಜಾಲಾಡಿ, ಗಾಡಿ ತೆಗೆಯುತ್ತಾರೆ. ಒಂದೆರಡು ದಿನ ಹೊಸ ಜಾಗಗಳಲ್ಲಿ ಕಾಲ ಕಳೆಯುತ್ತಾ ಚಿಲ್‌ ಮಾಡಿ ಬರುತ್ತಾರೆ. ಇನ್ನು ಕರ್ನಾಟಕದಲ್ಲಿ ಹೊಸ ವರ್ಷಕ್ಕೆಂದು ಭೇಟಿ ನೀಡುವ ಹಲವು ಪ್ರವಾಸಿ ತಾಣಗಳು ಈ ಮುಂದಿನಂತಿವೆ..

Most Visited Tourist Destinations In Karnataka For New Year Celebrations

* ಕೂರ್ಗ್‌ (Coorg): ಹೊಸ ವರ್ಷದ ವೇಳೆ ಜನ ಹೆಚ್ಚಾಗಿ ಕೊಡಗು ಜಿಲ್ಲೆಗೆ ಪ್ರವಾಸ ತೆರಳುತ್ತಾರೆ. ಅದರಲ್ಲೂ ಮಡಿಕೇರಿ ನ್ಯೂ ಇಯರ್‌ ಪಾರ್ಟಿ ತಾಣ ಎಂದೇ ಹೆಸರುವಾಸಿಯಾಗಿದೆ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಿಂದ ರೂಪುಗೊಂಡಿರುವ ಈ ಪ್ರದೇಶದ ಸೊಬಗಿನಲ್ಲಿ ಹೊಸ ವರ್ಷ ಬರಮಾಡಿಕೊಳ್ಳುತ್ತಾರೆ.

* ನಂದಿ ಹಿಲ್ಸ್‌ (Nandi Hills): ಬೆಂಗಳೂರಿನ ಸಮೀಪದಲ್ಲೇ ಇರುವ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗುತ್ತದೆ. ಆದರೆ ಇದರ ತಪ್ಪಲಿನಲ್ಲೇ ಇತ್ತೀಚೆಗೆ ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು ತಲೆ ಎತ್ತಿವೆ. ಹಾಗಾಗಿ ಜನ ಇಲ್ಲಿಗೆ ದಾಂಗುಡಿ ಇಟ್ಟು ಪಾರ್ಟಿ ಮೂಡ್‌ಗೆ ಜಾರುತ್ತಾರೆ.

* ದಾಂಡೇಲಿ (Dandeli): ದಾಂಡೇಲಿಯನ್ನ ದಕ್ಷಿಣ ಭಾರತದ ಸಾಹಸ ಚಟುವಟಿಕೆಗಳು ರಾಜಧಾನಿ ಎಂದು ಕರೆಯಲಾಗುತ್ತದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯವು ದಟ್ಟವಾದ ಕಾಡುಗಳನ್ನು ಹೊಂದಿವೆ. ಇಲ್ಲಿ ಕಪ್ಪು ಪ್ಯಾಂಥರ್ಸ್, ಮಂಗಗಳು ಮತ್ತು ಆನೆಗಳು ಸೇರಿದಂತೆ ಪ್ರಾಣಿಗಳಿಗೆ ಮತ್ತು ಅನೇಕ ಪಕ್ಷಿ ಪ್ರಭೇದಗಳ ನೆಲೆಯಾಗಿದೆ.

Most Visited Tourist Destinations In Karnataka For New Year Celebrations

* ಚಿಕ್ಕಮಗಳೂರು: ಕರ್ನಾಟಕದ ಕಾಫಿ ನಾಡು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಿಕ್ಕಮಗಳೂರು ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿದೆ. ಇಡೀ ಜಿಲ್ಲೆ ಪ್ರವಾಸೋದ್ಯಮಕ್ಕೆ ನೆಚ್ಚಿನ ತಾಣವೂ ಆಗಿದೆ. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಬೆಂಗಳೂರಿನ ಬಹುತೇಕರು ಕಾಫಿನಾಡಲ್ಲೇ ಬೀಡುಬಿಡುತ್ತಾರೆ.

* ಹಂಪಿ (Hampi): ಪುರಾಣಗಳ ಪ್ರಕಾರ ರಾಮಾಯಣ ಯುಗದಲ್ಲಿ ಕಿಷ್ಕಿಂಧೆ ಎಂದು ಕರೆಯಲ್ಪಡುವ ಹಂಪಿ ಅಥವಾ ವಿಜಯನಗರವು ಇಂದಿನ ವಿಜಯನಗರ ಜಿಲ್ಲೆಯ ಒಂದು ಪಟ್ಟಣ. ಇಲ್ಲಿ ತುಂಗಭದ್ರಾ ನದಿಯ ಉದ್ದಕ್ಕೂ ಇರುವ ಹಂಪಿ ಹೊಸಪೇಟೆ ನಗರದ ಸಮೀಪದಲ್ಲಿದೆ. ಇದು ಕೂಡ ಹೊಸ ವರ್ಷದ ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ತಾಣ.

* ಗೋಕರ್ಣ (Gokarna): ಕರ್ನಾಟಕದ ಕಡಲತೀರದಲ್ಲಿರುವ ಗೋಕರ್ಣವನ್ನು ಮಿನಿ ಗೋವಾ ಎಂದೇ ಕರೆಯುತ್ತಾರೆ. ಇಲ್ಲಿ ಶಿವನಿಗೆ ಸಮರ್ಪಿತವಾದ ಮಹಾಬಲೇಶ್ವರ ದೇವಾಲಯವಿದೆ. ಇಲ್ಲಿನ ಕಡಲತೀರಕ್ಕೆ ಮೋಜು ಮಸ್ತಿ ಮಾಡಲು ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಜನ ಬರುತ್ತಾರೆ.

Most Visited Tourist Destinations In Karnataka For New Year Celebrations

* ಕುದುರೆಮುಖ (Kudremukh): ಹಲವಾರು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳಿಗೆ ಆವಾಸಸ್ಥಾನವಾಗಿರುವ ಕುದುರೆಮುಖದಲ್ಲಿ ಹುಲಿಗಳು, ಚಿರತೆಗಳು ಮತ್ತು ಕಾಡು ನಾಯಿಗಳನ್ನು ಕಣ್ತುಂಬಿಕೊಳ್ಳಬಹುದು. ಕುದುರೆಮುಖ ಎಂಬುದು ಚಿಕ್ಕಮಗಳೂರು ಜಿಲ್ಲೆಯ ಪರ್ವತ ಶ್ರೇಣಿಯಲ್ಲಿದೆ. ಇದರ ಆಸುಪಾಸಿನಲ್ಲೇ ಹಲವು ಪ್ರೇಕ್ಷಣೀಯ ಸ್ಥಳಗಳಿದ್ದು, ಹೊಸ ವರ್ಷದ ವೇಳೆ ಇಲ್ಲಿಗೆ ಮುಂಗಡವಾಗಿ ಸ್ಥಳ ಕಾಯ್ದಿರಿಸಿ ಪ್ರವಾಸಕ್ಕೆ ಬರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+