Get Updates
Get notified of breaking news, exclusive insights, and must-see stories!

Monkey in Polling Booth: ಮತಗಟ್ಟೆಯಲ್ಲಿ ಮಂಗ: ಮುಂದೇನಾಯ್ತು ವಿಡಿಯೋ ನೋಡಿ...

ಮಹಾರಾಷ್ಟ್ರದ 8 ಸಂಸದೀಯ ಸ್ಥಾನಗಳಿಗೆ ಶುಕ್ರವಾರ (ಏಪ್ರಿಲ್ 26) ಮತದಾನ ನಡೆಯಿತು. ರಾಜ್ಯದ ವಾರ್ಧಾ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ಮತಗಟ್ಟೆಗೆ ಮಂಗವೊಂದು ಆಗಮಿಸಿದೆ. ಇದರಿಂದ ಮತಗಟ್ಟೆಯಲ್ಲಿ ಮತದಾರರು ಸೇರಿದಂತೆ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ. ಅಷ್ಟಕ್ಕೂ ಮಂಗ ತಾನು ಸಿಂಗಲ್ ಆಗಿ ಮತಗಟ್ಟೆಗೆ ಬಂದಿರಲಿಲ್ಲ. ಬದಲಿಗೆ ಓರ್ವ ವ್ಯಕ್ತಿಯೊಂದಿಗೆ ಆಗಮಿಸಿತ್ತು.

ಮತಕೇಂದ್ರಕ್ಕೆ ಬಂದ ವ್ಯಕ್ತಿಯ ಹೆಗಲ ಮೇಲೆ ಹಾಗೂ ತಲೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಿದ್ದ ಮಂಗನನ್ನು ಕಂಡು ಜನ ಶಾಕ್ ಆಗಿದ್ದಾರೆ. ಮತಗಟ್ಟೆಯಲ್ಲಿ ಏನೆಲ್ಲಾ ದಾಂದಲೆ ಮಾಡುತ್ತೋ ಅನ್ನೋ ಆತಂಕವನ್ನು ಮಂಗ ಸೃಷ್ಟಿಸಿತ್ತು. ಆದರೆ ಮಂಗ ಅಷ್ಟೇಲ್ಲಾ ಮೈ ಮೇಲೆ ಎಗರಾಡುತ್ತಿದ್ದರೂ ವ್ಯಕ್ತಿ ಮಾತ್ರ ಭಯಪಡದೆ ಗೊಂದಲಕ್ಕೊಳಗಾಗದೆ ಮತಗಟ್ಟೆಯತ್ತ ನಡೆದುಕೊಂಡು ಹೋಗಿರುವ ದೃಶ್ಯ ವೈರಲ್ ಆಗಿದೆ.

Monkey came to the polling booth in Maharashtra Watch the video next

ವಿನೋದ್ ಕ್ಷೀರಸಾಗರ್ ಎಂಬುವವರು ವಾರ್ಧಾದ ಮತಗಟ್ಟೆಯಲ್ಲಿ ಮತ ಚಲಾಯಿಸಲು ತಮ್ಮ ಸಾಕು ಪ್ರಾಣಿ ಮಂಗನೊಂದಿಗೆ ಆಗಮನಿಸಿದರು. ವಿನೋದ್ ಕ್ಷೀರಸಾಗರ್ ಅವರು ತನ್ನ ಮುದ್ದಿನ ಸಾಕು ಮಂಗಕ್ಕೆ 'ಬಜರಂಗ್' (bajrang) ಎಂದು ಹೆಸರಿಟ್ಟಿದ್ದಾರೆ.

ಮತಗಟ್ಟೆ ವಿನೋದ್ ಮಂಗನೊಂದಿಗೆ ಆಗಮಿಸುತ್ತಿದ್ದಂತೆ ಮನುಷ್ಯರು ಮತ್ತು ಮಂಗಗಳ ನಡುವಿನ ಸ್ನೇಹ ಚರ್ಚೆಯ ವಿಷಯವಾಯಿತು. ಅಷ್ಟಕ್ಕೂ ವಿನೋದ್ ಮಂಗನೊಂದಿಗೆ ಮತಗಟ್ಟೆಗೆ ಬಂದಿದ್ದು ಯಾಕೆ? ಇದಕ್ಕೆ ವಿನೋದ್ ಹೇಳುವುದೇನು ತಿಳಿಯೋಣ.

Monkey came to the polling booth in Maharashtra Watch the video next

ನಾಯಿ ಕಚ್ಚಿ ಗಾಯಗೊಂಡಿದ 'ಬಜರಂಗ್'

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಈ ಅನನ್ಯ ಸ್ನೇಹ ಸುಮಾರು ಮೂರು ತಿಂಗಳ ಹಿಂದೆ ಪ್ರಾರಂಭವಾಯಿತು. ವಿನೋದ ಕ್ಷೀರಸಾಗರ್ ಅವರಿಗೆ 'ಬಜರಂಗ್' ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿತು. ಹೌದು... ವಿನೋದ್ ಕ್ಷೀರಸಾಗರ್ ಪ್ರಕಾರ, ಮೂರು ತಿಂಗಳ ಹಿಂದೆ ಈ 'ಬಜರಂಗ್'ಗೆ ನಾಯಿಯೊಂದು ಕಚ್ಚಿತ್ತು. ವಿನೋದ್ ತಕ್ಷಣ ಅದನ್ನು ವೈದ್ಯರ ಬಳಿ ಕರೆದುಕೊಂಡು ಹೋದರು.

ಚಿಕಿತ್ಸೆ ನಂತರ ವೈದ್ಯರು 'ಬಜರಂಗ್'ಗೆ ಮೂರು ಹೊಲಿಗೆಗಳನ್ನು ಹಾಕಿದರು. ಇದಾದ ಬಳಿಕ 'ಬಜರಂಗ್' ವಿನೋದ್ ಅವರು ಬಿಟ್ಟು ಇರಲೇ ಇಲ್ಲ. ಕಳೆದ ಮೂರು ತಿಂಗಳಿಂದ ನನ್ನೊಂದಿಗೆ 'ಬಜರಂಗ್' ಇದೆ. ನಾನು ಎಲ್ಲಿಗೆ ಹೋದರೂ ಈ ಮಂಗ ಕೂಡ ನನ್ನ ಜೊತೆ ಬರುತ್ತದೆ ಎನ್ನುತ್ತಾರೆ ವಿನೋದ್.

ಈ 'ಬಜರಂಗ್' ಕುರಿತು ಮತ್ತಷ್ಟು ಮಾತನಾಡಿದ ವಿನೋದ್ ಕ್ಷೀರಸಾಗರ್, ಇಂದು ನಾನು ಮತಗಟ್ಟೆಗೆ ಮತ ಹಾಕಲು ಬಂದಾಗಲೂ ನನ್ನ ಜತೆ 'ಬಜರಂಗ್' ಬಂದಿದ್ದನು.

ವಿನೋದ್ ಕ್ಷೀರಸಾಗರ್ ಈ 'ಬಜರಂಗ್' ತಂದಾಗ ನಾಯಿ ಕಡಿತದಿಂದ ಅದರ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆಯ ನಂತರ ವೈದ್ಯರು ಮೂರು ಹೊಲಿಗೆಗಳನ್ನು ಹಾಕಿದರು. ವಿನೋದ್ ಕ್ಷೀರಸಾಗರ್ ಅವರು ಚೇತರಿಸಿಕೊಳ್ಳುವವರೆಗೂ ಈ 'ಬಜರಂಗ್'ವನ್ನು ನೋಡಿಕೊಂಡರು.


'ಬಜರಂಗ್' ನನ್ನು ಮಕ್ಕಳಂತೆ ನೋಡಿಕೊಂಡ ವಿನೋದ್

ವಿನೋದ್ ಅವರು ಬಜರಂಗನನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ. ಅವರು ಅದಕ್ಕೆ ದ್ರಾಕ್ಷಿ, ಸೇಬು ಮತ್ತು ಇತರ ವಸ್ತುಗಳ ಜೊತೆಗೆ ಹಾಲು ಕೊಟ್ಟು ನಿತ್ಯ ಆರೈಕೆ ಮಾಡುತ್ತಾರೆ. ಮತದಾನದ ಸಮಯದಲ್ಲಿ ಮತಗಟ್ಟೆಯ ಸಿಬ್ಬಂದಿ 'ಬಜರಂಗ್' ಅನ್ನು ಒಳಗೆ ತರದಂತೆ ತಡೆದರು. ಆದರೆ ನಂತರ ಅದನ್ನು ಒಳಗೆ ಬಿಡಲಾಯಿತು. ವಿನೋದ್ ಮಂಗನೊಂದಿಗೆ ಮತಚಲಾಯಿಸಿ ಹೊರಬಂದಿದ್ದಾರೆ.

ವಿನೋದ್ ಕ್ಷೀರಸಾಗರ್ ಅವರು ತಮ್ಮನ್ನು 'ಬಜರಂಗ್' ತುಂಬಾ ಪ್ರೀತಿಸುತ್ತಾನೆ ಎಂದು ಹೇಳುತ್ತಾರೆ. ನಾನು ಹೊಲಗಳಿಗೆ, ಮಾರುಕಟ್ಟೆಗೆ ಅಥವಾ ಬೇರೆಲ್ಲಿಗೆ ಹೋದರೂ 'ಬಜರಂಗ್' ನನ್ನೊಂದಿಗೆ ಬರುತ್ತಾನೆ. ಹೀಗಾಗಿ ನಾನು ಕೂಡ ಅದನ್ನು ಬಿಟ್ಟು ಹೋಗುವುದಿಲ್ಲ ಎನ್ನುತ್ತಾರೆ ವಿನೋದ್.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತ

ಈ ವೀಡಿಯೊಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವ್ಯಕ್ತಿಯನ್ನು ದೂಷಿಸಿದ್ದಾರೆ. ಮತದಾನದಂತಹ ಗಂಭೀರ ಘಟನೆಯನ್ನು ಸಾರ್ವಜನಿಕ ಪ್ರದರ್ಶನವಾಗಿ ಪರಿವರ್ತಿಸಿದ್ದಾರೆ. ಅವರು ಸುದ್ದಿಯಾಗಲು ಕೋತಿಯನ್ನು ಮತಗಟ್ಟೆಗೆ ಕರೆತಂದಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಇನ್ನೂ ಅನೇಕ ಬಳಕೆದಾರರು ಈ ಘಟನೆಯಲ್ಲಿ ಹಾಸ್ಯವನ್ನು ಕಂಡುಕೊಂಡರು. ಪ್ರಕ್ರಿಯೆಯಲ್ಲಿ ರಾಜಕಾರಣಿಗಳನ್ನು ಗೇಲಿ ಮಾಡಿದ್ದಾರೆ. "ಮನುಷ್ಯನು ತನ್ನೊಂದಿಗೆ ಅಭ್ಯರ್ಥಿಯನ್ನು ಕರೆತಂದಿದ್ದಾನೆಯೇ?" ಎಂದು ಬಳಕೆದಾರರು ಗೇಲಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+