Karnataka Waterfalls: ಈ ಮಳೆಗಾಲದಲ್ಲಿ ನೀವು ಭೇಟಿ ನೀಡಲೇಬೇಕಿರುವ ರಾಜ್ಯದ ಮನಮೋಹಕ ಜಲಪಾತಗಳಿವು
ಕರ್ನಾಟಕವು ಶ್ರೀಮಂತ ಪರಂಪರೆ ಹಾಗೂ ಪ್ರಕೃತಿಗೆ ಹೆಸರುವಾಸಿಯಾದ ರಾಜ್ಯವಾಗಿದೆ. ಹೆಸರಾಂತ ಜಲಪಾತಗಳಿಗೆ ನೆಲೆಯಾಗಿದೆ. ಈ ನೈಸರ್ಗಿಕ ಅದ್ಭುತಗಳು ಕೇವಲ ಪ್ರವಾಸಿ ತಾಣಗಳಾಗಿರದೇ, ಕನ್ನಡ ಸಾಹಿತ್ಯ ಹಾಗೂ ಸಂಗೀತಕ್ಕೆ ಸ್ಫೂರ್ತಿಯಾಗಿದೆ. ನೀವು ನಗರ ಜೀವನದಿಂದ ಬೇಸತ್ತಿದ್ದರೆ, ಕರ್ನಾಟಕದ ಈ ಮನಮೋಹಕ ಜಲಪಾತಗಳಿಗೆ ಭೇಟಿ ನೀಡಿ ಆನಂದಿಸಬಹುದು.
ಜೋಗ ಜಲಪಾತ
ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ ಕರ್ನಾಟಕದ ಅದ್ಬುತಗಳಲ್ಲಿ ಒಂದಾಗಿದೆ. ಶರಾವತಿ ನದಿಯಿಂದ ಈ ಜಲಪಾತವು ಉದ್ಬವಿಸಿದೆ. ಜೋಗ ಜಲಪಾತವು ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಅದ್ಭುತವಾದ ಜಲಪಾತವು ಮಳೆಗಾಲದಲ್ಲಿ ಭವ್ಯವಾಗಿ ಕಾಣಿಸುತ್ತದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಪ್ರಕೃತಿ ಪ್ರೀಯರನ್ನು ಆಕರ್ಷಿಸುತ್ತದೆ.

ಅಬ್ಬೆ ಜಲಪಾತ
ಮತ್ತೊಂದು ಗಮನಾರ್ಹ ಜಲಪಾತವೆಂದರೆ ಮಡಿಕೇರಿ ಬಳಿಯ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಬ್ಬೆ ಜಲಪಾತ. ಹಚ್ಚ ಹಸಿರಿನ ಕಾಫಿ ತೋಟಗಳು ಮತ್ತು ಎಸ್ಟೇಟ್‌ಗಳಿಂದ ಸುತ್ತುವರೆದಿರುವ ಅಬ್ಬೆ ಜಲಪಾತವು ಸುಂದರವಾದ ಅನುಭವವನ್ನು ನೀಡುತ್ತದೆ. ಇದು ಫೋಟೊಗ್ರಾಪಿ ಮತ್ತು ಕುಟುಂಬ ಪ್ರವಾಸಗಳಿಗೆ ಅತ್ಯಂತ ಪ್ರೆಕ್ಷನೀಯ ಸ್ಥಳವಾಗಿದೆ.
ಹೆಬ್ಬೆ ಜಲಪಾತ
ಚಿಕ್ಕಮಗಳೂರಿನಲ್ಲಿರುವ ಹೆಬ್ಬೆ ಜಲಪಾತವು ಮತ್ತೊಂದು ಆಕರ್ಷಕ ತಾಣವಾಗಿದೆ. ಈ ಜಲಪಾತದ ಪ್ರವೇಶವು ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಬರುತ್ತದೆ. ದಟ್ಟವಾದ ಕಾಡುಗಳ ಮೂಲಕ ರೋಮಾಂಚಕ ಜೀಪ್ ಸವಾರಿಯನ್ನು ನೀವಿಲ್ಲಿ ಮಾಡಬಹುದು. ಜಲಪಾತವನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ - ಬಿಗ್ ಫಾಲ್ಸ್ ಮತ್ತು ಸ್ಮಾಲ್ ಫಾಲ್ಸ್. ಈ ಎರಡೂ ಜಲಪಾತಗಳ ಸುತ್ತಮುತ್ತ ಬರುವ ಪ್ರದೇಶಗಳಲ್ಲಿ ಸೌಂದರ್ಯ ದೇವತೆ ಧರೆಗಿಳಿದು ಬಂದಿದ್ದಾಳೆ ಎಂದು ಹೇಳಲಾಗುತ್ತದೆ.

ಲಕ್ಷ್ಮಣ ತೀರ್ಥ ಜಲಪಾತ
ಇರ್ಪು ಜಲಪಾತವನ್ನು ಲಕ್ಷ್ಮಣ ತೀರ್ಥ ಜಲಪಾತ ಎಂದೂ ಕರೆಯುತ್ತಾರೆ. ಇದು ಕೊಡಗು ಜಿಲ್ಲೆಯಲ್ಲಿದೆ. ಈ ಜಲಪಾತವು ಧಾರ್ಮಿಕ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಮನುಷ್ಯರ ಪಾಪಗಳನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಇರ್ಪು ಜಲಪಾತಕ್ಕೆ ಚಾರಣವನ್ನು ಕೈಗೊಳ್ಳಬಹುದಾಗಿದೆ. ಇದು ಪಶ್ಚಿಮ ಘಟ್ಟಗಳ ರುದ್ರರಮಣೀಯ ಸ್ಥಳಗಳಲ್ಲಿ ಒಂದಾಗಿದೆ.

ಶಿವನಸಮುದ್ರ ಜಲಪಾತ
ಕೊನೆಯದಾಗಿ, ಕಾವೇರಿ ನದಿಯ ಮೇಲಿರುವ ಶಿವನಸಮುದ್ರ ಜಲಪಾತವು ಭೇಟಿ ನೀಡಲೇಬೇಕಾದ ಮತ್ತೊಂದು ಸ್ಥಳವಾಗಿದೆ. ಈ ಜಲಪಾತವು ಶಿವನಸಮುದ್ರ ದ್ವೀಪವನ್ನು ಸೃಷ್ಟಿಸಿದೆ. ಈ ದ್ವೀಪವನ್ನು ಅವಳಿ ಜಲಪಾತಗಳು ರೂಪಿಸಿವೆ. ಇದು ರುದ್ರರಮನೀಯ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ಈ ಜಲಪಾತದ ಸುತ್ತಲಿನ ಹಸಿರು ಮತ್ತು ಜಲಪಾತದ ಅಬ್ಬರವು ಪ್ರವಾಸಿಗರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications