• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ವೀಕೆಂಡ್ ವಿತ್' ಗುರುಪ್ರಸಾದ್: ಆಸಕ್ತರಿಗೆ ಮಾತ್ರ ಸಿನಿಮಾ ಪಾಠ

|

'ಮಠ' ಗುರುಪ್ರಸಾದ್ ಎಂದೇ ಮನೆಮಾತಾಗಿರುವ ಈ ಚಿತ್ರ ನಿರ್ದೇಶಕ ಸದಾ ಹೊಸದು ಹುಡುಕುತ್ತಲೇ ಅಲೆಯೋದು ಗೊತ್ತಿರೋ ವಿಷಯಾನೇ..! ನಾಲ್ಕು ವಿಭಿನ್ನ ಸಿನಿಮಾಗಳು, ಒಂಭತ್ತು ರಿಯಾಲಿಟಿ ಶೋಗಳು, ಮೂರು ಪುಸ್ತಕಗಳು, ಭಾರತ ಸರ್ಕಾರಕ್ಕೆ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆಗಿನ ಡಾಕ್ಯುಮೆಂಟರಿ, 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ, ಸಂಭಾಷಣಾ ಕರ್ತೃ ಇವರ ಕ್ರೆಡಿಟ್‌ಲ್ಲಿ ಇದೆ.

ಅದಲ್ಲದೇ ಆಸಕ್ತ ಭಾವೀ ನಿರ್ದೇಶಕರು, ಬರಹಗಾರರಿಗೆ ಬರವಣಿಗೆಯ ವ್ಯಾಕರಣದ ಬಗ್ಗೆ ಅವರೇ ಖುದ್ದಾಗಿ ಗಂಟೆಗಟ್ಟಲೆ ಪಾಠ ಹೇಳಿ ಸುಮಾರು 60ಕ್ಕೂ ಹೆಚ್ಚು ಪ್ರತಿಭೆಗಳನ್ನು 'ಗುರುಪ್ರಸಾದ್ ಇನ್ಸ್ಟಿಟ್ಯೂಟ್ ಆಫ್ ಸ್ಕ್ರಿಪ್ಟ್ ರೈಟಿಂಗ್ ಅಂಡ್ ಫಿಲ್ಮ್ ಡೈರೆಕ್ಷನ್' ತರಬೇತಿ ಸಂಸ್ಥೆಯಲ್ಲಿ ತಯಾರು ಮಾಡಿದ್ದಾರೆ. ಇದಲ್ಲ ಸುದ್ದಿ.. ಮುಂದೆ ಇದೆ..!

ಎಲ್ಲರ ತಲೆಯಲ್ಲೂ ಕಥೆ ಮತ್ತು ಐಡಿಯಾಗಳು ಸೀನ್‌ಗಳು ಹುಟ್ಟುತ್ತದೆ. ಮ್ಯೂಸಿಕ್ ಕೇಳುವಾಗ, ಡ್ರೈವ್ ಮಾಡುವಾಗ, ಸ್ನಾನ ಮಾಡುವಾಗ ಹೀಗೆ.. ಆದರೆ ಅದನ್ನು ಚಿತ್ರಕಥೆಯನ್ನಾಗಿ ಕಟ್ಟುವುದು ಹೇಗೆ..? ಇದು ಎಲ್ಲ ಸಿನಿಮಾಸಕ್ತರಿಗೂ ಇರುವ ಸಂದೇಹ. ಬಹಳಷ್ಟು ಸಾಫ್ಟ್‌ವೇರ್ ಇಂಜನಿಯರ್ ‌ಗಳು ಈ ಪ್ರಶ್ನೆಯನ್ನು, ಚಿತ್ರಕಥೆ ರಚನೆಯ ಬಗೆಗಿನ ಸಂದೇಹಗಳನ್ನು ಇವರಿಗೆ ಮೇಲ್ ಮಾಡುತ್ತಲೇ ಇದ್ದರಂತೆ. ಹಾಗಾಗಿ ಹುಟ್ಟಿಕೊಂಡಿದ್ದು ಇವರ ಚಿತ್ರಕಥೆ, ಸಂಭಾಷಣೆ ಮತ್ತು ಚಿತ್ರ ನಿರ್ದೇಶನ ತರಬೇತಿ ಸಂಸ್ಥೆ, ಜಿಯೋಸ್ವಾದ್.

ಇದರ ಬಗ್ಗೆ ಸ್ವತ: ಗುರುಪ್ರಸಾದ್‌ ರವರೇ ನಮ್ಮ ಫೋನ್ ಕರೆಗೆ ಸ್ಪಂದಿಸಿದ್ದಾರೆ. ವಿವರಗಳು ಕೆಳಗಿವೆ ಓದಿಕೊಳ್ಳಿ....

ಒನ್ ಇಂಡಿಯಾ: ಹಲೋ

ಗುರು: ಹಲೋ

ಒನ್ ಇಂಡಿಯಾ: ಸರ್ ಒನ್ ಇಂಡಿಯಾ ಕನ್ನಡ ಇಂದ.. ಕಾಲ್ ಮಾಡ್ತಿದ್ದೀವಿ.. ಭರತ್ ಅಂತ..

ಗುರು: ಹೇಳಿ ಭರತ್.. ಮೊದ್ಲಿಗೇ ಒಂದು ಹೇಳ್ಬಿಡ್ತೀನಿ.. ಮೀ ಟೂ ಬಗ್ಗೆಯಾದರೆ ಅದರ ಬಗ್ಗೆ ಸಿನಿಮಾನೇ ಮಾಡ್ತಿದ್ದೀನಿ.. ಅದರಲ್ಲಿ ಎಲ್ಲ ತೋರಿಸ್ತೀನಿ.. ನೊಡ್ಕೊಳ್ಳಿ.. ಬೇರೆ ಏನಾದ್ರೂ ಇದ್ರೆ ಮಾತಾಡಿ ನಾನು ಸ್ವಲ್ಪ ಬ್ಯುಸಿ ಇದ್ದೀನಿ..

ಒಇ: ನಿಮ್ಮ ಸ್ಕೂಲ್ ಬಗ್ಗೆ ಮಾತಾಡೋದಿತ್ತು.. ನೀವೆ ನೀವಾಗಿ ಮೀಟೂ ಬಗ್ಗೆ ಹೇಳೋದಾದ್ರೆ ಅದೂ ಹೇಳಬಹುದು.. ಬಲವಂತ ಮಾಡಲ್ಲ..ಸರ್..

ಗುರು: ಏನು ಗೊತ್ತಾ.. ಭರತ್.. ಮೀಟೂ ಅಭಿಪ್ರಾಯ ಸಂಗ್ರಹದಲ್ಲಿ ನಾನು ಆಡಿರುವ ಪ್ರತಿಯೊಂದು ಮಾತಿಗೂ ನಾನು ಬದ್ಧನಿದ್ದೇನೆ. ಚಾನಲ್‌ಗಳು ತಮ್ಮ ಅನುಕೂಲಕ್ಕೆ ಹೇಗೇಗೋ ಎಡಿಟ್ ಮಾಡಿ ತೋರಿಸಿದ್ದಾರೆ.. ಅವರನ್ನ ನಂಬೋರು ನಂಬಲಿ.. ಪ್ರತಿಕ್ರಿಯಿಸೋರು ಪ್ರತಿಕ್ರಿಯಿಸಲಿ.. ಒಂದು ಮರ ಅಂದಾಗ ಎರಡು ಎಲೆ ಉದರಲೇ ಬೇಕು..

ಮನುಷ್ಯ ಅಂದಾಗ ನಾಲ್ಕು ಕೂದಲು ಉದುರಲೇ ಬೇಕು.. ಇಷ್ಟರಲ್ಲೇ ಮನಬಂದಂತೆ ನನ್ನ ವಿರುದ್ಧ ಪ್ರತಿಕ್ರಿಯಿಸಿದ ಎಲ್ಲರಿಗೂ ಒಂದು ಶಾಕ್ ಕಾದಿದೆ. ಇಷ್ಟು.. ಸದ್ಯಕ್ಕೆ.. ಸ್ಕೂಲ್ ಬಗ್ಗೆ ಏನು ವಿವರ ಬೇಕು.. ಈಗ ಕೇಳ್ಬೋದು..

ಒಇ: ಸಂದರ್ಶನದ ಮೂಲಕ ಮಾತ್ರ ಸೀಟ್ ಕೊಡೋದು ಅಂತ ತಿಳೀತು.. ಯಾಕೆ ಹಾಗೆ?

ಗುರು: ಸಿನಿಮಾ ಮಾಡೋನಿಗೆ ಕೆಲವು ಕನಿಷ್ಠ ಜ್ಞಾನ ಇರಬೇಕು.. ಭಾಷೆಯ ಮೇಲಿನ ಹಿಡಿತ, ಕಮ್ಯೂನಿಕೇಶನ್ ಸ್ಕಿಲ್ಸ್, ಪ್ರಪಂಚ ಮತ್ತು ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಪ್ರೇಮ, ಸಿನಿ ಮಾರುಕಟ್ಟೆಯ ಬಗ್ಗೆ ಕಲ್ಪನೆ, ನಾನು ಕೊಡುವ ಮಾಹಿತಿಗಳನ್ನ.. ಅಂದರೆ ನನ್ನ 27 ವರ್ಷಗಳ ರಿಸರ್ಚ್ ಅದು.. ದಕ್ಕಿಸಿಕೊಳ್ಳುವ ಶಕ್ತಿಯಿರಬೇಕು.. ದದ್ದಿಗಳಿಗೆ ಮತ್ತು ಸಿನಿಮಾವನ್ನು ಬರಿಯ ತಮ್ಮ ಕೀರ್ತಿ, ಲಾಭ, ಮೀಟೂ ಇತ್ಯಾದಿಗಳಿಗೆ ಬಳಿಸಿಕೊಳ್ಳುವ ಹುನ್ನಾರ ಇಟ್ಕೊಂಡು ಬಂದ ಅಭ್ಯರ್ಥಿಗಳಿಗೆ ನಾನು ಸೀಟ್ ಕೊಡಲಾರೆ, ಗುರುವಾಗಲಾರೆ..

ಒಇ: ಈ ಚಿತ್ರಕಥೆ ಶಾಲೆಯ ಉದ್ದೇಶ ಏನು.. ಮುಂದಿನ ದಿನಗಳಲ್ಲಿ ತಾವು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟಿದ್ದೀರಂತೆ.. ಹೌದಾ..?

ಗುರು: (ನಕ್ಕು) ಚಲನಚಿತ್ರ ಅಕಾಡೆಮಿ ಮಾಡಬೇಕಾಗಿರೋ ಕೆಲಸಾನಾ ನಾನು ನನ್ನ ದುಡ್ಡಲ್ಲೇ ಕಳೆದ 3 ಮೂರು ವರ್ಷಗಳಿಂದ ಮಾಡ್ತಿದ್ದೀನಿ.. ಹೆಮ್ಮೆ ಇದೆ.. ಆ ಪದವಿಯಲ್ಲಿರೋರಿಗೆ ಇದು ತಲುಪಲಿ.. ನಾಗಾಭರಣರವರು ಇದ್ದಾಗ ಅಕಾಡೆಮಿಯಲ್ಲಿ ಕೆಲಸಗಳಾಗುತ್ತಿದ್ದವು.. ಈಗ ಏನಾಗುತ್ತಿದ್ದೆಯೋ ನಂಗೆ ಗೊತ್ತಿಲ್ಲ.. ರೈಟ್ ಟು ಇನ್‌ ಫರ್ಮೇಶನ್ ಆಕ್ಟ್ ಅಡಿಯಲ್ಲಿ ಕಳೆದ 5 ವರ್ಷಗಳ ಚಲನಚಿತ್ರ ಅಕಾಡೆಮಿಯಲ್ಲಿ ಆಗಿರೋ ಕೆಲಸಗಳ ಬಗ್ಗೆ ಮಾಹಿತಿ ತರಿಸುತ್ತಿದ್ದೀನಿ.. ನಿಮಗೂ ತಲುಪಿಸುತ್ತೀನಿ..

ಒಇ: ಖಂಡಿತಾ ಕೊಡಿ ಸರ್.. ಪ್ರಕಟಿಸೋಣಾ.. ಒಟ್ಟು ಎಷ್ಟು ಬ್ಯಾಚ್ ‌ಗಳಾಗಿವೆ.. ಇದುವರೆಗೂ.. ಮೂರು ವರ್ಷದಲ್ಲಿ..? ಎಷ್ಟು ಜನ ನಿರ್ದೇಶಕರಾಗಿದ್ದಾರೆ..?

ಗುರು: ಸುಮಾರು 60 ಪ್ರತಿಭೆಗಳಿಗೆ ತರಬೇತಿಸಿದ್ದೇನಿ.. ೧೧ ಜನ ನಿರ್ದೇಶಕರಾಗುತ್ತಿದ್ದಾರೆ..

ಒಇ: ಮಿಕ್ಕವರು..?

ಗುರು: ಅಧ್ಯಯನದಲ್ಲಿದ್ದಾರೆ.. ಕಾನ್ಫಿಡೆನ್ಸ್ ಬಂದಾಗ ಆಗ್ತಾರೆ.. ಅಥವಾ ನಮ್ಮ ಕ್ಷೇತ್ರ ಇದಲ್ಲ ಅನ್ನೋ ನಿರ್ಧಾರಕ್ಕೆ ಬಂದು ತಮ್ಮ ಫೀಲ್ಡ್‌ನಲ್ಲಿ ಮುಂದುವರೆಯುತ್ತಾರೆ.. ಅವರ ಜೀವನ ಹಾಳಾಗುವುದಿಲ್ಲ.. ಇಂಡಸ್ಟ್ರಿಗೆ ಅರೆ-ಮಾಗಿದವರು ಬಂದು ಪ್ರಡ್ಯೂಸರ್ ‌ಗಳನ್ನು ಮುಂಡಾಯಿಸುವುದು.. ತಪ್ಪುತ್ತದೆ.. ದ್ವಿಲಾಭ.. (ಅವರ ಶೈಲಿಯಲ್ಲೇ ಕೊಂಕು ನಗು)

ಒಇ: ಈಗ ಏನ್ ನಡೀತಿದೆ..??

ಗುರು: ವಾರದ ಐದು ದಿನ ದುಡಿಯುತ್ತಿರುವ ಸಿನಿಮಾಸಕ್ತರಿಗಾಗಿ.. ವಾರಾಂತ್ಯದ ತರಗತಿಗಳು.. ಅಡ್ಮಿಷನ್ ಆಗ್ತಿದೆ.. ನವೆಂಬರ್ 10 ರಿಂದ.. ಕ್ಲಾಸಸ್ ಶುರುವಾಗ್ತಿದೆ.. ಈಗ ಸಂದರ್ಶನ ನಡೀತಿದೆ..

ಒಇ: ಹೇಗಿದೆ.. ಪ್ರತಿಕ್ರಿಯೆ..??

ಗುರು: ಇಂಜಿನಿಯರ್ಸ್, ಅಧ್ಯಾಪಕರು, ಲಾಯರ್ಸ್, ವಿದ್ಯಾರ್ಥಿಗಳು, ಒಬ್ಬ ಡಾಕ್ಟರ್, ವಿಪರ್ಯಾಸವೆಂದರೆ ಒಬ್ಬ ಸಿನಿಮಾ ಮಾಡಿ 2 ಕೋಟಿ ಕಳೆದು ಕೊಂಡ ನಿರ್ಮಾಪಕ, ಅವರ ಹೆಸರು ಬೇಡ.. ಹೀಗೆ.. ಬರ್ತಿದ್ದಾರೆ..

ಒಇ: ಹೆಣ್ಣು ಮಕ್ಕಳು..?

ಗುರು: ಮೀ ಟೂ ಹವಾ ಇರೋದ್ರಿಂದ ಈ ಬ್ಯಾಚ್ ‌ನಲ್ಲಿ ಹೆಣ್ಣು ಮಕ್ಕಳು ಇರೋದಿಲ್ಲ.. (ನಕ್ಕರು) ಮುಂದಿನ ಬ್ಯಾಚ್ ‌ನಲ್ಲಿ ಬಹುಶ: ಇರ್ತಾರೆ..

ಒಇ: ಫೀಸ್ ಎಷ್ಟಿರತ್ತೆ..?

ಗುರು: ಸಂದರ್ಶನದಲ್ಲಿ ಆಯ್ಕೆಯಾದ ಮೇಲಿನ ಮಾತದು.. ಒಂದು ಸ್ಮಾರ್ಟ್ ಫೋನ್‌ಗಿಂತ ಕಮ್ಮಿ ಅಂದ್ಕೊಳ್ಳಿ.. (ನಗು)

ಒಇ: ನಿಮ್ಮನ್ನ ಹಿಡಿಯೋದು ಹೇಗೆ.. ಅಪ್ಲಿಕೇಶನ್ ತಲುಪಿಸೋಕೆ.. (ನಗು)

ಗುರು: ಫೇಸ್‍ಬುಕ್‌ಲ್ಲಿದ್ದೀನಿ ಅಲ್ಲಿ ಹಿಡಿಬೋದು(ನಗು) ಅಥವಾ ನನಗೆ ಮೇಲ್ ಕೂಡಾ ಮಾಡ್ಬೋದು.. ಒಂದು ಡಿಸೈನ್ ಕಳಿಸ್ತೀನಿ.. ಅದರಲ್ಲಿ ಮಾಹಿತಿ ಇದೆ.. ಹಾಕೋ ಹಾಗಿದ್ರೆ ಹಾಕಿ..

ಒಇ: ಮೇಲಿನೋರೊಂದಿಗೆ ಮಾತಾಡ್ತೀನಿ ಸರ್.. ಏನಕ್ಕೂ ನೀವು ವಾಟ್ಸಾಪ್ ಮಾಡಿರಿ.. ಏನಾದ್ರು ಬೇರೆ ಹೇಳೋದಿತ್ತಾ..?

ಗುರು: ಐ ಲವ್ ಯುವರ್ ಇಂಟರೆಸ್ಟ್ ಆನ್ ಮೈ ಸ್ಕೂಲ್.. ಥಾಂಕ್ಯೂ ಭರತ್.. ಥ್ಯಾಂಕ್ಯೂ..

ಒಇ: ವಿ ರೆಸ್ಪೆಕ್ಟ್ ಯೂ ಸರ್..

ಗುರು: ಮೀ ಟೂ.. (ಇಬ್ಬರೂ ನಕ್ವು..)

ಈ ಫೋನ್ ಸಂದರ್ಶನ ನಡೆದ ಹಾಗೇ ನಿಮ್ಮುಂದೆ ಇಟ್ಟಿದ್ದೀನಿ..!! ಆಸಕ್ತರು ಗುರುಗಳನ್ನು ಸಂಪರ್ಕಿಸಬಹುದು.

ಬೆಸ್ಟ್ ವಿಶಸ್..

ಗುರುಗಳನ್ನು ಇ-ಮೇಲ್ ಮುಖಾಂತರ ಸಂಪರ್ಕಿಸಿ

directorguruprasad@gmail.com

English summary
If you are interested to learn the art of Script Writing and Direction, Here is an opportunity to learn the secrets of Cinema Scripts in Guruprasad's Institute of Script Writing and Film Direction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X