ಇದು ಮಾನವನ ಶತಮಾನದ ಸಾಧನೆ! ಮರೆಯದಿರಿ, ಮರೆತು ನಿರಾಶರಾಗದಿರಿ!

ಮಂಗಳ ಗ್ರಹ, ಈ ಹೆಸರು ಕಿವಿಗೆ ಬಿದ್ದರೆ ಸಾಕು ಮಾನವರು ಅಲರ್ಟ್ ಆಗ್ತಾರೆ. ಅದರಲ್ಲೂ ವಿಜ್ಞಾನಿಗಳು ಕೈಯಲ್ಲಿ ಟೆಲಿಸ್ಕೋಪ್ ಹಿಡಿದು ಬಾಹ್ಯಾಕಾಶದಲ್ಲಿ ಝೂಮ್ ಹಾಕಲು ಸಿದ್ಧರಾಗ್ತಾರೆ. ಏಕೆಂದರೆ ಮಂಗಳ ಗ್ರಹವೇ ಒಂದು ಅಚ್ಚರಿ. ಈಗ ಅಂಗಾರಕನ ಮೇಲೆ ಮಾನವ ಶತಮಾನದ ಸಾಧನೆ ಮಾಡಲು ಸಜ್ಜಾಗಿದ್ದಾನೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಮಹತ್ವಾಕಾಂಕ್ಷಿ ಯೋಜನೆ ನನಸಾಗಿದೆ. ಮಂಗಳನ ಅಧ್ಯಯನಕ್ಕೆ ನಾಸಾ ರವಾನಿಸಿದ್ದ 'ಪೆರ್‌ಸೆವೆರನ್ಸ್' ಗುರಿ ಮುಟ್ಟಿದ್ದು, ಕಾರ್ಯಾಚರಣೆ ಆರಂಭಿಸಿ 2 ತಿಂಗಳುಗಳೇ ಕಳೆದಿದೆ. ಹಾಗೇ ತನ್ನ ಹೊಟ್ಟೆ ಒಳಗೆ ಮಗುವಿನಂತೆ ಕಾಪಾಡಿದ್ದ ಪುಟಾಣಿ ಹೆಲಿಕಾಪ್ಟರ್ ಅನ್ನ ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ಇಳಿಸಿದೆ ಪೆರ್‌ಸೆವೆರನ್ಸ್ ರೋವರ್.

ಇದೀಗ ಹೆಲಿಕಾಪ್ಟರ್ ಹಾರಾಟಕ್ಕೆ ಕೌಂಟ್‌ಡೌನ್ ಶುರು ಆಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಏಪ್ರಿಲ್ 11 ಅಂದರೆ ಇದೇ ಭಾನುವಾರ ಹೆಲಿಕಾಪ್ಟರ್ ಮೊದಲ ಹಾರಾಟ ನಡೆಸಲಿದೆ.

ಈ ಮೂಲಕ ಬೇರೆ ಗ್ರಹದಲ್ಲಿ ಮೊದಲ ಬಾರಿ ಹೆಲಿಕಾಪ್ಟರ್ ಹಾರಿಸಿದ ಕೀರ್ತಿಗೆ ನಾಸಾ ಪಾತ್ರವಾಗಲಿದೆ. ಏಪ್ರಿಲ್ 11ರಂದು ಹೆಲಿಕಾಪ್ಟರ್ ಹಾರಾಟ ನಡೆಸಿದರೆ, ಇದರ ಮಾಹಿತಿ ಭೂಮಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಏಪ್ರಿಲ್ 12ರಂದು ಭಾರತೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ನಾಸಾ ಲೈವ್ ಸ್ಟ್ರೀಮ್ ಮೂಲಕ ನಮಗೆಲ್ಲಾ ಹೆಲಿಕಾಪ್ಟರ್ ಹಾರಾಟದ ದರ್ಶನ ಮಾಡಿಸಲಿದೆ.

ಇದು ತಮಾಷೆ ಅಲ್ಲವೇ ಅಲ್ಲ..!

ಇದು ತಮಾಷೆ ಅಲ್ಲವೇ ಅಲ್ಲ..!

ಭೂಮಿ ಹೊರಗೆ ಮೊಟ್ಟ ಮೊದಲ ಬಾರಿಗೆ ಹೆಲಿಕಾಪ್ಟರ್ ಹಾರುತ್ತಿದೆ. ಹಾಗಂತ ಇದು ತಮಾಷೆಯ ವಿಚಾರ ಅಲ್ಲವೇ ಅಲ್ಲ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ. ಮಂಗಳ ಗ್ರಹದ ಮೇಲೆ ಭೂಮಿ ಮೇಲೆ ಬೀಳುವ ಶೇಕಡಾ 50ರಷ್ಟು ಸೂರ್ಯನ ಬೆಳಕು ಕೂಡ ಬೀಳುವುದಿಲ್ಲ. ಹೀಗಿರುವಾಗ ಹೆಲಿಕಾಪ್ಟರ್ ಸೂರ್ಯ ಹಾಗೂ ಬ್ಯಾಟರಿ ಶಕ್ತಿ ಆಧರಿಸಿ ಹಾರುವುದು ಕಷ್ಟ ಕಷ್ಟ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಹಾರಲು ಸಜ್ಜಾಗಿ ನಿಂತಿದೆ ನಾಸಾ ಸಂಸ್ಥೆಯ ಹೆಲಿಕಾಪ್ಟರ್. ರಾತ್ರಿ ಹೊತ್ತಲ್ಲಿ ಮೈನಸ್ 90 ಡಿಗ್ರಿ, ಎಂದರೆ ಹಿಮಾಲಯಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ನಾಸಾ ಹೆಲಿಕಾಪ್ಟರ್ ಬದುಕಬೇಕಿದೆ. ಎಲ್ಲವನ್ನೂ ಎದುರಿಸಿ ಏಪ್ರಿಲ್ 11ಕ್ಕೆ ನಾಸಾ ಸಂಸ್ಥೆಯ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಹಾರಾಟ ನಡೆಸಲಿದೆ.

200 ಕೋಟಿ ವರ್ಷಗಳಷ್ಟು ಹಳೇ ಕೆರೆ

200 ಕೋಟಿ ವರ್ಷಗಳಷ್ಟು ಹಳೇ ಕೆರೆ

ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲನ್ನು ಗೆದ್ದಿದೆ. ಪೆರ್‌ಸೆವೆರನ್ಸ್ ರೋವರ್ ಇದೀಗ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿ ಮೇಲೆ. ಈವರೆಗೂ ಯಾರೂ ಈ ಸಾಹಸ ಮಾಡಿರಲಿಲ್ಲ. ಏಕೆಂದರೆ 'ಜೆಝೀರೋ' ಕುಳಿಯಲ್ಲಿ ತನ್ನ ಬಿಡಾರ ಹೂಡುವುದು ಯಾವುದೇ ದೇಶಕ್ಕೂ ಸಾಧ್ಯವಿರದ ಮಾತು. ಅಲ್ಲಿನ ಇಕ್ಕಟ್ಟಾದ ಪರಿಸ್ಥಿತಿ ಹಾಗೂ ವ್ಯತಿರಿಕ್ತ ವಾತಾವರಣ ಅಧ್ಯಯನಕ್ಕೆ ಸಹಕಾರಿ ಆಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾಸಾ, ತನ್ನ ರೋವರ್ ಲ್ಯಾಂಡ್ ಮಾಡುವಲ್ಲಿ ಯಶಸ್ಸು ಕಂಡಿದೆ.

6 ಚಕ್ರದ ರೋವರ್..!

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ 'ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+