ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ನೇ ಹಂತದ ಚುನಾವಣೆಗೆ ಮಣಿಪುರ ಸಿದ್ಧ: ಪ್ರಮುಖ ಅಭ್ಯರ್ಥಿಗಳು, ಕ್ಷೇತ್ರಗಳ ವಿವರ ಇಲ್ಲಿದೆ

|
Google Oneindia Kannada News

ಇಂಫಾಲ್‌, ಫೆಬ್ರವರಿ 27: ಈಶಾನ್ಯ ರಾಜ್ಯ ಮಣಿಪುರದಲ್ಲಿ ನಾಳೆ ಮೊದಲ ಹಂತದ ವಿಧಾನಭೆ ಚುನಾವಣೆ ನಡೆಯಲಿದೆ. ರಾಜ್ಯದ ಮತದಾರರನ್ನು ಓಲೈಸಲು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಕೊನೆಯ ಪ್ರಯತ್ನವನ್ನು ಈಗಾಗಲೇ ಮಾಡಿ ಮುಗಿಸಿದೆ. ಇಂದು 1 ನೇ ಹಂತದ ಚುನಾವಣೆಯ ಪ್ರಚಾರವು ಇಂದು ಕೊನೆಗೊಂಡಿದೆ.

ಹೈವೋಲ್ಟೇಜ್ ಪ್ರಚಾರದಲ್ಲಿ ಆಡಳಿತಾರೂಢ ಬಿಜೆಪಿ ಹಿಂದಿನ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷಗಳ ದುರಾಡಳಿತದ ಬಗ್ಗೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿತು. ಮುಂಬರುವ ಐದು ವರ್ಷಗಳಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಭರವಸೆ ನೀಡಿದೆ. ಮತ್ತೊಂದೆಡೆ, ಬಿಜೆಪಿಯು ಚುನಾವಣಾ ಸಂಬಂಧಿತ ಹಿಂಸಾಚಾರವನ್ನು ಆರೋಪಿಸಿದ. ನಿಷೇಧಿತ ಕುಕಿ ರಾಷ್ಟ್ರೀಯ ಸಂಘಟನೆಯು ಬಿಜೆಪಿಯನ್ನು ಬೆಂಬಲಿಸುವ ಮತ್ತು ಮತದಾರರಿಗೆ ಬೆದರಿಕೆ ಹಾಕುವ ಹೇಳಿಕೆ ನೀಡಿದ ನಂತರ ತಕ್ಷಣವೇ ಮಧ್ಯಪ್ರವೇಶಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ.

ಚುನಾವಣೆಗೆ ಒಂದು ದಿನ ಮುನ್ನ ಮಣಿಪುರದಲ್ಲಿ ಬಾಂಬ್ ಸ್ಫೋಟಚುನಾವಣೆಗೆ ಒಂದು ದಿನ ಮುನ್ನ ಮಣಿಪುರದಲ್ಲಿ ಬಾಂಬ್ ಸ್ಫೋಟ

ತಮ್ಮ ಪ್ರಣಾಳಿಕೆಯಲ್ಲಿ ಎಎಫ್‌ಎಸ್‌ಪಿಎ ವಿಚಾರವೇ ಇಲ್ಲ ಎಂದು ವಿರೋಧ ಪಕ್ಷವೂ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ. ಮತ್ತೊಂದೆಡೆ, ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳಿಂದ 20 ಕ್ಕೂ ಹೆಚ್ಚು ನಾಯಕರು ಜೆಡಿಯುಗೆ ಸೇರ್ಪಡೆಗೊಂಡಿದ್ದಾರೆ. ರಾಜ್ಯದಲ್ಲಿ 10.49 ಲಕ್ಷ ಮಹಿಳೆಯರು ಮತ್ತು 9.58 ಲಕ್ಷ ಪುರುಷರು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ನಾಳೆ ನಡೆಯುವ ಮೊದಲ ಹಂತದ ಚುನಾವಣೆಯ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ ಮುಂದೆ ಓದಿ....

 ಮಣಿಪುರ ಚುನಾವಣೆ: ಮತದಾನದ ದಿನಾಂಕ, ಸಮಯ, ಫಲಿತಾಂಶ ದಿನಾಂಕ

ಮಣಿಪುರ ಚುನಾವಣೆ: ಮತದಾನದ ದಿನಾಂಕ, ಸಮಯ, ಫಲಿತಾಂಶ ದಿನಾಂಕ

ಮಣಿಪುರದಲ್ಲಿ ಮತದಾನವು ಫೆಬ್ರವರಿ 28 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರ ನಡುವೆ ನಡೆಯಲಿದೆ. ಮೊದಲು ಹಂತ-1 ಮತದಾನವನ್ನು ಫೆಬ್ರವರಿ 27 ರಂದು ನಿಗದಿಪಡಿಸಲಾಗಿತ್ತು. ಆದರೆ ನಂತರ ದಿನಾಂಕವನ್ನು ಚುನಾವಣಾ ಆಯೋಗವು ಪರಿಷ್ಕರಿಸಿತ್ತು. ಈಗ ಮೊದಲ ಹಂತದ ಮಣಿಪುರ ವಿಧಾನಸಭೆ ಚುನಾವಣೆ ನಾಳೆ ನಡೆಯಲಿದೆ. ಎರಡನೇ ಅಥವಾ ಕೊನೆಯ ಹಂತದ ವಿಧಾನಸಭೆ ಚುನಾವಣೆಯು ಮಾರ್ಚ್ 5 ರಂದು ನಡೆಯಲಿದೆ. ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ, ಗೋವಾ, ಪಂಜಾಬ್‌ನಲ್ಲಿ ಮಾರ್ಚ್ 10ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.

 ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು

ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು

ಮಣಿಪುರದ ಒಟ್ಟು 60 ಸ್ಥಾನಗಳಲ್ಲಿ 38 ಸ್ಥಾನಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. 38 ಸ್ಥಾನಗಳಿಗೆ 15 ಮಹಿಳೆಯರು ಸೇರಿದಂತೆ ಒಟ್ಟು 173 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 38 ಸ್ಥಾನಗಳಲ್ಲಿ, 29 ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಬಿಷ್ಣುಪುರ್ ಕಣಿವೆ ಜಿಲ್ಲೆಗಳಲ್ಲಿವೆ. ಒಂಬತ್ತು ಸ್ಥಾನಗಳು ಚರ್ಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ಫರ್ಜಾಲ್‌ನಲ್ಲಿ ಹರಡಿವೆ. ಪ್ರಮುಖ ಅಭ್ಯರ್ಥಿಗಳೆಂದರೆ ಹೀಂಗಾಂಗ್ ಕ್ಷೇತ್ರದಿಂದ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಎನ್ ಬಿರೇನ್ ಸಿಂಗ್, ಸಿಂಗ್ಜಮೈ ಕ್ಷೇತ್ರದಿಂದ ಸ್ಪೀಕರ್ ವೈ ಖೇಮ್‌ಚಂದ್ ಸಿಂಗ್, ಉರಿಪೋಕ್ ಕ್ಷೇತ್ರದಿಂದ ಉಪ ಮುಖ್ಯಮಂತ್ರಿ ಮತ್ತು ಎನ್‌ಪಿಪಿ ಅಭ್ಯರ್ಥಿ ಯುಮ್ನಮ್ ಜಾಯ್‌ಕುಮಾರ್ ಮತ್ತು ನಂಬೋಲ್ ಕ್ಷೇತ್ರದಿಂದ ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಎನ್ ಲೋಕೇಶ್ ಸಿಂಗ್ ಆಗಿದ್ದಾರೆ.

 ಮಣಿಪುರ ಚುನಾವಣೆ ಒಪಿನಿಯನ್‌ ಪೋಲ್‌, ಎಕ್ಸಿಟ್‌ ಪೋಲ್‌

ಮಣಿಪುರ ಚುನಾವಣೆ ಒಪಿನಿಯನ್‌ ಪೋಲ್‌, ಎಕ್ಸಿಟ್‌ ಪೋಲ್‌

ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಸಮೀಕ್ಷೆಗಳು ಕಾಂಗ್ರೆಸ್‌ಗಿಂತ ಬಿಜೆಪಿಗೆ ಮುನ್ನಡೆಯನ್ನು ಊಹಿಸಿದ್ದವು. ಎಕ್ಸಿಟ್ ಪೋಲ್‌ಗಳು ಮಾರ್ಚ್ 7 ರಂದು ಬಿಡುಗಡೆಯಾಗಲಿದೆ. ಮಣಿಪುರದಲ್ಲಿ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಝೀ ನ್ಯೂಸ್ ಅಭಿಪ್ರಾಯ ಸಂಗ್ರಹವನ್ನು ನಡೆಸಿದ್ದು, ನೀಡಿರುವ ವರದಿಯಂತೆ ಬಿಜೆಪಿ 33-37 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಮತ್ತೊಂದೆಡೆ, ಕಾಂಗ್ರೆಸ್ ಕೇವಲ 13-17 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ನಿರೀಕ್ಷೆಯಿದೆ.

Recommended Video

ಭಾರತದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಉಕ್ರೇನ್‌‌ನ್ನು ಯಾಕೆ ಆಯ್ಕೆ ಮಾಡಿಕೊಳ್ತಾರೆ? | Oneindia Kannada
 ಯಾವೆಲ್ಲಾ ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆ?

ಯಾವೆಲ್ಲಾ ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆ?

ಇಂಫಾಲ್ ಪೂರ್ವ: ಖುಂಡ್ರಕ್ಪಂ, ಹೀಂಗಂಗ್, ಖುರೈ, ಕ್ಷೇತ್ರೀಗಾವ್, ಥಾಂಗ್ಜು, ಕೀರಾವ್, ಆಂಡ್ರೊ, ಲಾಮಲೈ, ಯೈಸ್ಕುಲ್, ವಾಂಗ್ಖೈ
ಇಂಫಾಲ್ ಪಶ್ಚಿಮ: ತಂಗ್ಮೇಬಾಂಡ್, ಉರಿಪೋಕ್, ಸಾಗೋಲ್ಬಂಡ್, ಕೀಶಾಮ್‌ತಾಂಗ್, ಸಿಂಗ್ಜಮೀ, ಸೆಕ್ಮೈ, ಲಮ್ಸಂಗ್, ಕೊಂತೌಜಮ್, ಪಟ್ಸೋಯ್, ಲಾಂಗ್ತಬಲ್, ನವೋರಿಯಾ ಪಖಾಂಗ್ಲಕ್ಪಾ, ವಾಂಗೋಯ್, ಮಯಾಂಗ್ ಇಂಫಾಲ್
ಬಿಷ್ಣುಪುರ: ನಂಬೋಲ್, ಓಯಿನಮ್, ಬಿಷ್ಣುಪುರ, ಮೊಯಿರಾಂಗ್, ತಂಗ, ಕುಂಬಿ,
ಕಾಂಗ್ಪೋಪಿ: ಸಾಯಿಕುಲ್, ಕಾಂಗ್ಪೋಪಿ, ಸೈತು
ಚುರಚಂದಪುರ: ತಿಪೈಮುಖ, ಥಾನ್ಲಾನ್, ಹೆಂಗ್ಲೆಪ್, ಚುರಚಂದಪುರ, ಸೈಕೋಟ್, ಸಿಂಘತ್

English summary
Assembly Elections 2022: Manipur Phase 1 Voting Date, Time, Results, Candidates, Key Constituencies, Exit Poll – All you need to know in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X