ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26 ವರ್ಷಗಳಿಂದ ಅಮೆರಿಕಾಗೆ ಗಣಪತಿ ಮೂರ್ತಿ ಕಳುಹಿಸುವ ಮಂಗಳೂರಿನ ಕುಟುಂಬ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್‌ 29: ಗಣೇಶ ಚತುರ್ಥಿ ಬಂತೆಂದೆರೆ ಎಲ್ಲರ ಮನೆ ಮನದಲ್ಲಿ ಗಣೇಶ ಪೂಜಿಸಲ್ಪಡುತ್ತಾ‌ನೆ. ವಿಘ್ನ ವಿನಾಯಕನ ಹಬ್ಬವನ್ನು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೂರದ ಅಮೆರಿಕ ದೇಶದಲ್ಲಿಯೂ ಗಣೇಶನ ಆರಾಧನೆ ನಡೆಯುತ್ತದೆ. ವಿಶೇಷ ವೆಂದರೆ ದೂರದ ಅಮೆರಿಕಾದಲ್ಲಿ ಪೂಜಿಸಲ್ಪಡುವ ಗಣಪ ಹೋಗೋದು ಮಾತ್ರ ಕಡಲತಡಿಯಿಂದ.

ದೇಶದೆಲ್ಲೆಡೆ ಗಣೇಶ ಚೌತಿಯ ಸಂಭ್ರಮ ಸಡಗರ. ಕೊರೊನಾ ಸಂಕಷ್ಟದ 2 ವರ್ಷದ ಬಳಿಕ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶದಡಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದು, ವಿದೇಶದಲ್ಲೂ ಗಣೇಶ ಚತುರ್ಥಿಯನ್ನು ಅಷ್ಟೇ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂಪ್ರದಾಯವನ್ನು ಅಮೆರಿಕದಲ್ಲಿರುವ ಕುಟುಂಬವೊಂದು ನಿರಂತರವಾಗಿ ಚಾಚೂ ತಪ್ಪದೆ ಪಾಲಿಸುತ್ತಿದೆ.

ಚಿಕಾಗೋದಲ್ಲಿರುವ ಮಂಗಳೂರು ಮೂಲದ ಕುಟುಂಬವೊಂದು ಕಳೆದ 26 ವರ್ಷಗಳಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದೆ. ವಿಶೇಷವೆಂದರೆ ಅಲ್ಲಿ ಪೂಜಿಸುವ ಗಣೇಶ ಮೂರ್ತಿ ತಯಾರಾಗಿ ಹೋಗೊದು ಮಾತ್ರ ಕಡಲ ನಗರಿ ಮಂಗಳೂರಿನಿಂದ. ಚಿಕಾಗೋದಲ್ಲಿರುವ ಶೆರ್ಲೆಕರ್ ಕುಟುಂಬ ಪ್ರತಿ ವರ್ಷ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಹಬ್ಬವನ್ನು ಆಚರಿಸುತ್ತಾರೆ. ಇದಕ್ಕಾಗಿ ಅವರು ಮಂಗಳೂರಿನ ಮಣ್ಣಗುಡ್ಡೆಯ ಶ್ರೀ ಗಣೇಶ್ ಗೃಹದಲ್ಲಿ ಮಾಡುವ ಗಣೇಶ ಮೂರ್ತಿ ತರಿಸಿಕೊಳ್ಳುವರು.

ಗಣೇಶ ಚತುರ್ಥಿ 2022: ಯಾವ ಸಮಯ, ನಕ್ಷತ್ರದಂದು ಮನೆಗೆ ಗಣಪತಿ ತರಬೇಕು?ಗಣೇಶ ಚತುರ್ಥಿ 2022: ಯಾವ ಸಮಯ, ನಕ್ಷತ್ರದಂದು ಮನೆಗೆ ಗಣಪತಿ ತರಬೇಕು?

ಕಳೆದ 26 ವರ್ಷಗಳಿಂದ ಗಣೇಶ್​​ ಗೃಹದಲ್ಲಿ ತಯಾರಾಗುವ ಮೂರ್ತಿಯನ್ನು ಅಮೆರಿಕಕ್ಕೆ ಕಳುಹಿಸಲಾಗುತ್ತಿದೆ. ಈ ಹಿಂದೆ ಇಲ್ಲಿಂದ ಲಂಡನ್​​ಗೂ ಮೂರ್ತಿಯನ್ನು ಕಳುಹಿಸಲಾಗುತ್ತಿತ್ತು. ಆದರೆ ಕೊರೊನಾ ಬಳಿಕ ಅದು ನಿಂತಿದೆ.

 9 ಇಂಚಿನ 10 ಅಡಿ ಎತ್ತರದವರೆಗೆ ಗಣಪ

9 ಇಂಚಿನ 10 ಅಡಿ ಎತ್ತರದವರೆಗೆ ಗಣಪ

ಮಂಗಳೂರಿನ ಮಣ್ಣಗುಡ್ಡ ನಿವಾಸಿ ರಾಮಚಂದ್ರ ರಾವ್ ಅವರ ಮುಂದಾಳತ್ವದಲ್ಲಿ ವರ್ಷಂಪ್ರತಿ ಗಣಪನ ಮೂರ್ತಿ ತಯಾರಿಕಾ ಕಾರ್ಯವನ್ನು ಅವರ ಮನೆಮಂದಿಯೆಲ್ಲಾ ಸೇರಿ ಮಾಡುತ್ತಾರೆ. ಅವರ ತಂದೆ ಮೋಹನ್ ರಾವ್ ಅವರಿಂದ ಗಣೇಶ ಮೂರ್ತಿ ತಯಾರಿ ಆರಂಭವಾಗಿದ್ದು, ಆ ಬಳಿಕ ಅವರ ನಾಲ್ವರು ಮಕ್ಕಳು, ಆ ಬಳಿಕ ಅವರ ಮಕ್ಕಳು ಇದೀಗ ಮೊಮ್ಮಕ್ಕಳು ಸೇರಿ ನಾಲ್ಕು ತಲೆಮಾರುಗಳಿಂದ ಈ ಕಾರ್ಯದಲ್ಲಿ ನಿರತವಾಗಿದೆ. ಇವರಲ್ಲಿ 9 ಇಂಚಿನ ಗಣಪನಿಂದ 10 ಅಡಿ ಎತ್ತರದ ಗಣಪನು ತಯಾರಾಗುತ್ತಾನೆ.

 ಪರಿಸರ ಸ್ನೇಹಿ ಗಣಪ ತಯಾರಿ

ಪರಿಸರ ಸ್ನೇಹಿ ಗಣಪ ತಯಾರಿ

ಈ ಬಾರಿ ಬರೋಬ್ಬರಿ 235 ಗಣಪನನ್ನು ಈ ಕುಟುಂಬ ತಯಾರಿಸಿದೆ. ಬರೀ ಆವೆಮಣ್ಣು, ಬೈಹುಲ್ಲು, ಪರಿಸರ ಪೂರಕ ಬಣ್ಣ ಬಳಸಿ ಗಣಪನನ್ನು ಇವರು ತಯಾರಿಸುತ್ತಾರೆ. ಮಂಗಳೂರು ನಗರದ ಆಸುಪಾಸಿನಲ್ಲಿ ಕೂರಿಸುವ ಪ್ರಖ್ಯಾತ ಸಾರ್ವಜನಿಕ ಗಣಪನನ್ನು ಈ ಕುಟುಂಬವೇ ತಯಾರಿಸುತ್ತದೆ. ಆವೆಮಣ್ಣಿನ ಕೊರತೆಯಿದ್ದರೂ ಯಾವುದೇ ಕಾರಣಕ್ಕೆ ಪರಿಸರ ಮಾರಕ ಪರಿಕರಗಳಿಂದ ಇವರು ಗಣಪತಿಯನ್ನು ತಯಾರಿಸುವುದಿಲ್ಲ. ಆಧುನಿಕ ಕಾಲಘಟ್ಟದಲ್ಲೂ ತಲೆಮಾರುಗಳಿಂದ ಕುಟುಂಬವೊಂದು ಇಂತಹ ಕಾರ್ಯದಲ್ಲಿ ತೊಡಗಿರುವುದು ವಿಶೇಷವೇ ಸರಿ.

 ಪ್ರತೀ ವರ್ಷ 235 ಗಣೇಶನ ಮೂರ್ತಿ ತಯಾರಿ

ಪ್ರತೀ ವರ್ಷ 235 ಗಣೇಶನ ಮೂರ್ತಿ ತಯಾರಿ

ಮೋಹನ್‌ರಾಯರ ಕುಟುಂಬ ಕಳೆದ 92 ವರ್ಷಗಳಿಂದ ಗಣಪತಿಯ ಮೂರ್ತಿಗಳನ್ನು ತಯಾರಿಸಿಕೊಂಡು ಬಂದಿದೆ. ಇಂದಿಗೂ ಈ ಕುಟುಂಬ ಪ್ರತಿವರ್ಷ 235 ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದೆ. ಈ ಕುಟುಂಬ ತಯಾರಿಸಿದ ಗಣಪತಿಯ ಮೂರ್ತಿಯನ್ನೇ ಚಿಕಾಗೋದಲ್ಲಿರುವ ಶೆರ್ಲೆಕರ್ ಕುಟುಂಬ ಪ್ರತಿ ವರ್ಷ ತರಿಸಿಕೊಳ್ಳುತ್ತಾರೆ.

 ಅಮೆರಿಕಾಗೆ ಗಣಪ ಮೂರ್ತಿ ಕಳುಹಿಸುವ ಕುಟಂಬ

ಅಮೆರಿಕಾಗೆ ಗಣಪ ಮೂರ್ತಿ ಕಳುಹಿಸುವ ಕುಟಂಬ

ಅಮೆರಿಕಕ್ಕೆ ಕಳುಹಿಸಲಾಗುವ ಗಣೇಶನ ಮೂರ್ತಿಯನ್ನು ಸುಮಾರು 4.5 ಕೆ ಜಿ ಯ ಒಳಗೆ ನಿರ್ಮಿಸಲಾಗುತ್ತದೆ. 15 ಇಂಚು ಉದ್ದವಿರುವಂತೆ ತಯಾರಿಸಲಾಗುತ್ತದೆ. ಕ್ಯಾಬಿನ್ ಲಗೇಜ್ ಆಗಿ ವಿಮಾನದಲ್ಲಿ ಕೊಂಡೊಯ್ಯಲು 5 ಕೆ ಜಿ ಒಳಗೆ ಇರಬೇಕಾದ ಕಾರಣ, ಅಷ್ಟೇ ಗಾತ್ರದಲ್ಲಿ ಮೂರ್ತಿ ನಿರ್ಮಾಣವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅದನ್ನು ತೆರೆದು ನೋಡುವಂತೆ ಸಹ ಪ್ಯಾಕ್ ಮಾಡಿ ಕಳುಹಿಸಲಾಗುತ್ತದೆ.

ಕಳೆದ 26 ವರ್ಷಗಳಿಂದ ಮಂಗಳೂರಿಂದ ಗಣಪನ ಮೂರ್ತಿ ಅಮೆರಿಕಾಗೆ ಹೋಗುತ್ತಿದೆ. ಅಮೆರಿಕಾದಲ್ಲಿ ಕಳೆದ 26 ವರ್ಷಗಳಿಂದ ಪೂಜಿಸಲ್ಪಡುವ ಗಣೇಶನ ಮೂರ್ತಿ ತಯಾರಾಗಿ ಹೋಗೊದು ಮಂಗಳೂರಿನಂದ ಅನ್ನೋದು ಹೆಮ್ಮೆಯ ಸಂಗತಿ.

English summary
A Family from Mangalur Sending Ganesha idols to a family last 26 years living in the United states of America ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X