Tirupati Tirumala:ಸೆಲ್ಫಿಗಾಗಿ ತಿರುಪತಿ ಮೃಗಾಲಯದಲ್ಲಿರುವ ಸಿಂಹದ ಗುಹೆಗೆ ಹಾರಿದ ವ್ಯಕ್ತಿ!

ತಿರುಪತಿ ಫೆಬ್ರವರಿ 16: ಸಾಮಾಜಿಕ ಜಾಲತಾಣದಲ್ಲಿ ತಮ್ಮದೂ ಒಂದು ಪೋಟೋ ಮೆಚ್ಚಿಕೊಳ್ಳಬೇಕು ಅನ್ನೋ ಆಸೆ ಪ್ರತಿಯೊಬ್ಬರಲ್ಲೂ ಹೆಮ್ಮರವಾಗಿ ಬೆಳೆಯತೊಡಗಿದೆ. ಇದಕ್ಕಾಗಿ ಜನ ಮಾಡಬಾರದ ಕೆಲಸಗಳನ್ನೆಲ್ಲಾ ಮಾಡಲು ಹೋಗಿ ಪ್ರಯಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ತಿರುಪತಿಯಲ್ಲೂ ವ್ಯಕ್ತಿಯೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಹೌದು... ಸೆಲ್ಫಿ ಗೀಳಿಗೆ ಅದೆಷ್ಟೋ ಜನ ಬಲಿಯಾಗಿದ್ದಾರೆ. ಆದರೂ ಸಹ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ತಿರುಪತಿ ಮೃಗಾಲಯದಲ್ಲಿ ಗುರುವಾರ ಸಿಂಹದೊಂದಿಗೆ ಸೆಲ್ಫಿಗೆ ಪೋಸ್ ಕೊಡಲು ಹೋಗಿ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮೃತನನ್ನು ರಾಜಸ್ಥಾನದ ಪ್ರಹ್ಲಾದ್ ಗುರ್ಜರ್ (38) ಎಂದು ಗುರುತಿಸಲಾಗಿದೆ.

Man who jumped into the lions den in Rupati Zoo!

ಸೆಲ್ಫಿ ಹುಚ್ಚಾಟವಾಡಿದ ಈ ವ್ಯಕ್ತಿ ಮದ್ಯಪಾನ ಮಾಡಿದ್ದನೆಂದು ಹೇಳಲಾಗುತ್ತಿದೆ. ವ್ಯಕ್ತಿ ಕುಡಿದ ಅಮಲಿನಲ್ಲಿ ಸಿಂಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ನಾಲ್ಕು ಅಡಿಯ ಸುರಕ್ಷತಾ ಗೋಡೆಯನ್ನು ಸ್ಕೇಲ್ ಮಾಡುವ ಮೂಲಕ ಸಿಂಹದ ಆವರಣಕ್ಕೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆವರಣದ ಉಸ್ತುವಾರಿ ವಹಿಸಿರುವ ಮೃಗಾಲಯ ವೀಕ್ಷಕ ಎಚ್ಚರಿಕೆಗೆ ಪ್ರಹ್ಲಾದ್ ಕಿವಿಗೊಡಲಿಲ್ಲ.

ಸಿಂಹದ ಗುಹೆಗೆ ಬೀಳುತ್ತಿದ್ದಂತೆ ಸಿಂಹ ಆತನ ಮೇಲೆ ಹಾರಿ ಕಚ್ಚಿ ಎಳೆದಾಡಿದೆ. ಕೆಲ ಹೊತ್ತು ಮೃಗಾಲಯದಲ್ಲಿ ಬಿಗುವಿ ವಾತಾವರಣ ನಿರ್ಮಾಣವಾಗಿತ್ತು. ವ್ಯಕ್ತಿಯನ್ನು ಸಿಂಹದ ದಾಳಿಯಿಂದ ತಪ್ಪಿಸಲು ಸಿಬ್ಬಂದಿಗಳು ಹರಸಾಹಸವೇ ಪಟ್ಟಿದ್ದಾರೆ. ಕೆಲ ಸಮಯದ ಬಳಿ ತೀವ್ರವಾಗಿ ಗಾಯಗೊಂಡ ಪ್ರಹ್ಲಾದ್ ದೇಹವನ್ನು ಹೊರತೆಗೆಯಲಾಯಿತು.

ಇದಕ್ಕಾಗಿ 12 ವರ್ಷದ ಸಿಂಹವನ್ನು ಪಂಜರದಲ್ಲಿ ಬಂಧಿಸಬೇಕಾಯಿತು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಿಂಹ ಕಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡ ಪ್ರಹ್ಲಾದ್ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

Man who jumped into the lions den in Rupati Zoo!

ಆಂಧ್ರಪ್ರದೇಶದ ಮೃಗಾಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ. ಕಳೆದ ವರ್ಷ ನವೆಂಬರ್ 27 ರಂದು ವಿಶಾಖಪಟ್ಟಣಂ ಮೃಗಾಲಯದಲ್ಲಿ ಸುರಕ್ಷತಾ ಬಾಗಿಲು ಮುಚ್ಚಲು ಮರೆತ ನಂತರ ಕರಡಿ ದಾಳಿ ಮಾಡಿ ಮೃಗಾಲಯದ ನೌಕರ ಸಾವನ್ನಪ್ಪಿದ್ದರು.

ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಥಮೀಮ್ ಅಹ್ಮದ್ ಅವರು ಸಿಂಹದ ಆವರಣದ ಸಮೀಪ ಪ್ರವೇಶವಿಲ್ಲದ ಪ್ರದೇಶಕ್ಕೆ ನುಸುಳಿದರು. ಓವರ್‌ಹೆಡ್ ನೀರಿನ ಟ್ಯಾಂಕ್ ಮೇಲೆ ಹತ್ತಿದ ನಂತರ ಮಧ್ಯಾಹ್ನ 2.3 ರ ಸುಮಾರಿಗೆ ಇದ್ದಕ್ಕಿದ್ದಂತೆ ಸಿಂಹದ ಆವರಣಕ್ಕೆ ಹಾರಿದರು. ಈ ವೇಳೆ ಸಿಂಹ ದಾಳಿ ಮಾಡಿದೆ.

ಸೆಲ್ಫಿ ಗೀಳಿಗೆ ಜನ ಬಲಿ

ಕಂಡ ಕಂಡಲ್ಲೆಲ್ಲ ಸೆಲ್ಫಿ ತೆಗೆದುಕೊಳ್ಳುವುದು ಹಲವರಿಗೆ ಕ್ರೇಜ್. ಆದರೆ, ಇಂತಹ ಕ್ರೇಜ್ ಗೆ ಈ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಯುವಕನೊಬ್ಬ ಜೀವ ಕಳೆದುಕೊಂಡಿದ್ದ. ಈ ಘಟನೆ ಮಾಸುವ ಮುನ್ನವೇ ಅದೇ ಚಾರ್ಮಾಡಿ ಘಾಟಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕನೊಬ್ಬ ಪ್ರಪಾತಕ್ಕೆ ಬಿದ್ದು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದನು.

ಧರ್ಮಸ್ಥಳದಿಂದ ವಾಪಸ್ ಬರುವಾಗ ಆಲೆಕಾನ್ ಜಲಪಾತ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಮೂಡಿಗೆರೆ ತಾಲೂಕು ನಂದಿಪುರದ ಮಂಜುನಾಥ್ ಗಾಯಗೊಂಡ ಯುವಕ, ಅಪಾಯ ಇರುವುದು ಗೊತ್ತಿದ್ದೂ ಸೆಲ್ಫಿಯ ಗುಂಗಿನಲ್ಲಿ ಬಂಡೆಯ ಮೇಲೆ ಕಾಲಿಟ್ಟಿದ್ದು, ಸುಮಾರು 150 ಅಡಿ ಪ್ರಪಾತಕ್ಕೆ ಜಾರಿ ಬಿದ್ದಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+