Kumbh Mela: ಕುಂಭ ಸ್ನಾನದ ವೇಳೆ ಭಕ್ತನ ಕಾಲಿಗೆ ತಾಕಿದ ಆಮೆ: ಮುಂದೆ ನಡೆದಿದ್ದೇನು?
ನಮ್ಮ ದೇಶ ಮಾತ್ರವಲ್ಲದೇ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವಾಗಿರುವ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಆಯೋಜಕ ನಿರೀಕ್ಷೆಗೂ ಮೀರಿದ ಜನದಟ್ಟಣೆಯಾಗುತ್ತಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿತ್ತು. ಆದರೆ ಈಗಿನ ಭಕ್ತರ ಸಂಖ್ಯೆಯನ್ನು ನೋಡಿದರೆ ಮುಗಿಯವ ವೇಳೆಗೆ ಈ ಮಹಾ ಕುಂಭ ಮೇಳದಲ್ಲಿ ಐವತ್ತರಿಂದ ಅರವತ್ತು ಕೋಟಿ ಭಕ್ತರು ಭಾಗಿಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಜಗತ್ತಿನಾದ್ಯಂತ ಸುದ್ದಿಯಲ್ಲಿರುವ ಮಹಾ ಕುಂಭಮೇಳವು ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಕೋಟ್ಯಂತರ ಭಕ್ತರು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ತೆರಳಿ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಕೈಗೊಳ್ಳುತ್ತಿದ್ದಾರೆ. ಕುಂಭ ಸ್ನಾನದ ಬಳಿಕ ಒಬೊಬ್ಬರಿಗೆ ಒಂದೊಂದು ಅನುಭವವಾಗಿದ್ದು, ಇಲ್ಲೊಬ್ಬ ವ್ಯಕ್ತಿಗೆ ವಿಚಿತ್ರ ಅನುಭವವಾಗಿದೆ.

ಎಲ್ಲ ಭಕ್ತರಂತೆ ಬಿಹಾರದ ದಶರಥ್ ಯಾದವ್ ಎನ್ನುವವರು ಕೂಡ ಮಹಾ ಕುಂಭಮೇಳಕ್ಕೆ ತೆರಳಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ವೇಳೆ ಗಂಗಾ ನದಿಯ ನೀರಿನಲ್ಲಿ ಮುಳುಗಿದಾದ ಅವರಿಗೆ ಅಚ್ಚರಿಯೊಂದು ಕಾದಿತ್ತು. ದಶರಥ್ ಯಾದವ್ ಮೊದಲು ಎರಡು ಮುಳುಗು ಹಾಕಿದ್ದರು. ಕೊನೆಯಲ್ಲಿ ಮೂರನೇ ಮುಳುಗು ಹಾಕುವ ವೇಳೆ ಏನೋ ಕಾಲಿ ಬಳಿ ಸ್ಪರ್ಶಿಸಿದಂತಾಗಿದೆಯಂತೆ. ಈ ವೇಳೆ ಏನದು ಎಂದು ದಶರಥ್ ಯಾದವ್ ನೋಡಿದಾಗ ನೋಡಲು ವಿಶೇಷವಾಗಿದ್ದ ಆಮೆಯೊಂದು ದಶರಥ್ ಯಾದವ್ ಕಾಲ ಬಳಿ ಬಂದಿದೆ.
ಇದನ್ನು ನೋಡಿದ ಕೂಡಲೇ ದಶರಥ್ ಕಾಲಿನ ಬಳಿಯಿಂದ ತೆಗೆದು ಕಣ್ಣಿಗೆ ಒತ್ತಿಕೊಂಡು ದಡಕ್ಕೆ ತಂದಿದ್ದಾರೆ. ನೋಡಲು ಬಹಳ ವಿಶೇಷವಾಗಿ ಕಾಣುತ್ತಿದ್ದ ಆ ಆಮೆ ಈಗ ದಶರಥ್ ಯಾದವ್ ಅವರ ಬಳಿಯೇ ಇದೆ ಎನ್ನಲಾಗಿದೆ. ಈ ಆಮೆಯ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು, ಜನರು ಸಾಕ್ಷಾತ್ ಮಹಾವಿಷ್ಣು ಅಮೃತ ಮಂಥನಕ್ಕಾಗಿ ಕೂರ್ಮಾವತಾರ ಎತ್ತಿದ ಆಮೆ ಎಂದು ದಶರಥ್ ಯಾದವ್ ಅವರನ್ನು ಹುಡುಕಿ ಬಂದು ಆಮೆಯ ದರ್ಶನ ಪಡೆದು ನಮಸ್ಕರಿಸುತ್ತಿದ್ದಾರೆ. ಈ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ.












Click it and Unblock the Notifications