ಚಂದ್ರಗ್ರಹಣ 2022: ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಸುರಕ್ಷಿತವೇ?
ಚಂದ್ರಗ್ರಹಣ ನೈಸರ್ಗಿಕ ವಿದ್ಯಮಾನವಾಗಿದೆ. ಇದು ಸೂರ್ಯೋದಯ ಮತ್ತು ಸೂರ್ಯಾಸ್ತವಿದ್ದಂತೆ. ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ ಈ ಘಟನೆಯನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಅನೇಕ ಜನರು ತಮ್ಮ ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ನೋಡಬಹುದೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿದ್ದಾರೆ.
ವಾಸ್ತವವಾಗಿ, ಸೂರ್ಯನ ಬೆಳಕು ಹಾನಿಕಾರಕ ಯುವಿ ಕಿರಣಗಳನ್ನು ಹೊಂದಿದೆ ಮತ್ತು ಅದು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಆದರೆ ಚಂದ್ರನ ಕಿರಣಗಳು ತೀವ್ರವಾಗಿರುವುದಿಲ್ಲ. ಅಂದರೆ ಸೂರ್ಯಗ್ರಹಣದಂತೆ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಲು ಜನರು ಹಿಂಜರಿಯಬೇಕಾಗಿಲ್ಲ ಎಂದು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಹೇಳಿದೆ.
ಹೀಗಾಗಿ ನೀವು ಅದನ್ನು ನಿಮ್ಮ ಬರಿ ಕಣ್ಣುಗಳಿಂದ ಅಂದರೆ ಯಾವುದೇ ಸಾಧನಗಳನ್ನು ಬಳಕೆ ಮಾಡದೆ ನೋಡಬಹುದು. ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೂ ನೀವು ಅದನ್ನು ಬರಿ ಕಣ್ಣಿನಿಂದ ನೋಡಲು ಹಿಂಜರಿಯುತ್ತಿದ್ದರೆ, ಚಂದ್ರಗ್ರಹಣವನ್ನು ನೇರವಾಗಿ ನೋಡುವ ಬದಲು, ದೂರದರ್ಶಕದ ಮೂಲಕ ನೋಡಬಹುದು. ಚಂದ್ರಗ್ರಹಣವನ್ನು ನೋಡಲು ನೀವು ಬೈನಾಕ್ಯುಲರ್‌ಗಳು, ದೂರದರ್ಶಕಗಳನ್ನು ಬಳಸಬಹುದು ಅಥವಾ ಆನ್‌ಲೈನ್ ವಿಡಿಯೊಗಳನ್ನು ವೀಕ್ಷಿಸಬಹುದು.

ಚಂದ್ರಗ್ರಹಣ ಎಲ್ಲಿ ಗೋಚರಿಸುತ್ತದೆ?
2022 ರ ಎರಡನೇ ಮತ್ತು ಕೊನೆಯ ಸಂಪೂರ್ಣ ಚಂದ್ರಗ್ರಹಣ ಪ್ರಪಂಚದ ಅನೇಕ ಭಾಗಗಳಲ್ಲಿ ಗೋಚರಿಸುತ್ತದೆ. ಇವುಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾ, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರ ಸೇರಿವೆ.
ಭಾಗಶಃ ಚಂದ್ರಗ್ರಹಣ:
ಭಾರತ ತನ್ನ ಬಹುತೇಕ ರಾಜ್ಯಗಳಲ್ಲಿ ನವೆಂಬರ್ 8 ರಂದು ಭಾಗಶಃ ಚಂದ್ರಗ್ರಹಣವನ್ನು ವೀಕ್ಷಿಸಲಿದೆ. ಕೊಹಿಮಾ, ಅಗರ್ತಲಾ, ಗುವಾಹಟಿ, ಕೋಲ್ಕತ್ತಾ, ಭುವನೇಶ್ವರ್, ಸಿಲಿಗುರಿ, ಪಾಟ್ನಾ ಮತ್ತು ರಾಂಚಿ ಸಂಪೂರ್ಣ ಗ್ರಹಣಕ್ಕೆ ಸಾಕ್ಷಿಯಾಗಲಿವೆ.

ಭಾರತದಲ್ಲಿ ನವೆಂಬರ್ 8 ರಂದು ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣದ ಹಂತಗಳು
ಭಾಗಶಃ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 2.39
ಪೂರ್ಣ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 3.46
ಗರಿಷ್ಠ ಪೂರ್ಣ ಚಂದ್ರಗ್ರಹಣ - 4:29 pm
ಪೂರ್ಣ ಚಂದ್ರಗ್ರಹಣ ಕೊನೆಗೊಳ್ಳುತ್ತದೆ - ಸಂಜೆ 5:11
ಮೂನ್ಸೆಟ್ - 6.19 ಬೆಳಗ್ಗೆ












Click it and Unblock the Notifications