ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ
"ಭಾರತದ ಹೊಸ ರಾಜ್ಯ ತೆಲಂಗಾಣದ ರಾಜಧಾನಿಯಾದ ಹೈದರಾಬಾದ್ ಅತ್ಯಂತ ಪ್ರತಿಷ್ಟೆಯ ಲೋಕಸಭಾ ಕ್ಷೇತ್ರಗಳಲ್ಲೊಂದು. 1951ರಲ್ಲಿ ಈ ಕ್ಷೇತ್ರದಲ್ಲಿ ಮೊತ್ತಮೊದಲ ಬಾರಿಗೆ ಕಾಂಗ್ರೆಸ್ ಜಯ ಸಾಧಿಸಿತ್ತು. ಆದರೆ ನಂತರ 1989 ರಿಂದ ಈ ಕ್ಷೇತ್ರದಲ್ಲಿ ಸತತ ಎಂಟು ಬಾರಿ ಎಐಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷವೇ ಜಯಗಳಿಸುತ್ತ ಬಂದಿದೆ.
ಈ ಕ್ಷೇತ್ರದಲ್ಲಿ ಶೇ. 65 ರಷ್ಟು ಮುಸ್ಲಿಮರಿದ್ದಾರೆ. ಒಟ್ಟು 18.22 ಲಕ್ಷ ಮತದಾರರು ಹೈದರಾಬಾದ್ ಕ್ಷೇತ್ರದಲ್ಲಿದ್ದಾರೆ. 2011 ರ ಜನಗಣತಿಯ ಪ್ರಕಾರ ಹೈದರಾಬಾದಿನ ಒಟ್ಟು ಜನಸಂಖ್ಯೆ 6,809,970. ಹೈದರಾಬಾದ್ ಅನ್ನು ದೇಶದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ತಾಣ ಎಂದೇ ಕರೆಯಲಾಗುತ್ತದೆ. ಆರ್ಥಿಕ ಕ್ಷೇತ್ರದಲ್ಲಿಯೂ ಈ ನಗರ ಮುಂಚೂಣಿಯಲ್ಲಿದೆ. ಹಲವು ಐಟಿ ಕಂಪನಿಗಳಿಗೂ ಇದು ನೆಲೆ ನೀಡಿದೆ.
2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,23,664. ಅವರಲ್ಲಿ 961290 ಪುರುಷರು. 862374 ಮಹಿಳೆಯರು.

ಈ ಕ್ಷೇತ್ರದಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳು ಮಲಕ್ ಪೇಟ್, ಕರ್ವಾನ್, ಗೋಶಮಹಲ್, ಛಾರ್ಮಿನಾರ್, ಚಂದ್ರಾಯನಗುಟ್ಟ, ಯಾಕುತ್ಪುರ, ಬಹದೂರ್ ಪುರ.
ಮುತ್ತಿನ ನಗರಿ ಎಂದೇ ಕರೆಯಲ್ಪಡುವ ಹೈದರಾಬಾದಿನ ಮುತ್ತುಗಳೆಂದರೆ ಜಗತ್ಪ್ರಸಿದ್ಧಿ ಪಡೆದಿವೆ. ಭಾರತ್ ಇಲೆಕ್ಟ್ರಾನಿಕ್ಸ್, ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿ., ಡಿಫೆನ್ಸ್ ರೀಸರ್ಚ್ ಅಂಡ್ ಡೆವೆಲಪ್ ಮೆಂಟ್ ಆರ್ಗನೈಸೇಶನ್ ಮುಂತಾದ ಪ್ರತಿಷ್ಟಿತ ಕಂಪನಿಗಳು ಇಲ್ಲಿವೆ.

ಈ ಕ್ಷೇತ್ರ ಎಐಎಂಐಎಂನ ಭದ್ರಕೋಟೆ. 1989 ರಿಂದ ಸತತ ಏಳು ಬಾರಿ ಈ ಕ್ಷೇತ್ರದಲ್ಲಿ ಸಾಲಾಹುದ್ದಿನ್ ಓವೈಸಿ ಗೆಲುವು ಸಾಧಿಸಿದ್ದರು.
ನಂತರ 2004 ರಿಂದ ಈ ಕ್ಷೇತ್ರದಲ್ಲಿ ಸಾಲಾಹುದ್ದಿನ್ ಓವೈಸಿ ಅವರ ಪುತ್ರ ಅಸಾದುದ್ದಿನ್ ಓವೈಸಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹಾಲಿ ಸಂಸದರೂ ಅವರೇ. ಇದುವರೆಗೂ ಲೋಕಸಭೆಯಲ್ಲಿ ಶೇ.84 ರಷ್ಟು ಹಾಜರಿ ಹೊಂದಿರುವ ಓವೈಸಿ, 59 ಚರ್ಚೆಗಳಲ್ಲಿ ಭಾಗವಹಿಸಿದ್ದು, 712 ಪ್ರಶ್ನೆಗಳನ್ನು ಕೇಳಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಓವೈಸಿಯವರೇ ಗೆಲ್ಲುತ್ತಾರೆ ಎಂದು ಅಂದಾಜಿಸಲಾಗಿದೆ. "
1951-57 ರಲ್ಲಿ ಕಾಂಗ್ರೆಸ್ ನ ಅಹ್ಮದ್ ಮೋಹಿದ್ದಿನ್ ಗೆಲುವು ಸಾಧಿಸಿದ್ದರು. ಆಗಿನಿಂದಲೂ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ವಿನಾಯಕ್ ರಾವ್ ಕೊರಟ್ಕರ್ 1957-62 ರ ಅವಧಿಯಲ್ಲಿ ಗೆದ್ದರೆ, ಗೋಪಾಲಯ್ಯ ಸುಬ್ಬುಕೃಷ್ಣ ಮೆಲುಕೋಟೆ 1962-71 ರವರೆಗೆ ಗೆಲುವು ಸಾಧಿಸಿದ್ದರು.1971 ರಲ್ಲಿ ತೆಲಂಗಾಣ ಪ್ರಜಾ ಸಮಿತಿಯಿಂದ ಸ್ಪರ್ಧಿಸಿ 1971-77 ರಲ್ಲಿ ಗೋಪಾಲಯ್ಯ ಸುಬ್ಬುಕೃಷ್ಣ ಮೆಲುಕೋಟೆ ಗೆಲುವು ಸಾಧಿಸಿದ್ದರು. 1977-84 ರವರೆಗೆ ಕಾಂಗ್ರೆಸ್ ನ ಕೆ ಎಸ್ ನಾರಾಯಣ ಗೆದ್ದರು. 1984-89 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಲ್ತಾನ್ ಸಲಾಹುದ್ದಿನ್ ಓವೈಸಿ ಗೆಲುವು ಸಾಧಿಸಿದರು. ನಂತರ ಆಲ್ ಇಂಡಿಯಾ ಮುಜ್ಲಿಸ್ ಎ ಇಥೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷ ಸ್ಥಾಪಿಸಿದ ಅವರು 1999-04ರವರೆಗೂ ಸತತ ಐದು ಆರು ಗೆಲುವು ಸಾಧಿಸಿದರು. ನಂತರ ಅವರ ಪುತ್ರ ಅಸಾದುದ್ದಿನ್ ಓವೈಸಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. 2004-2014 ರವರೆಗೂ ಅವರೇ ಗೆಲುವು ಸಾಧಿಸಿದ್ದು, ಹೈದರಾಬಾದ್ ಇದೀಗ ಎಐಎಂ ಐಎಂ ನ ಭದ್ರಕೋಟೆಯಾಗಿದೆ.

2014 ರಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಅಸಾದುದ್ದಿನ್ ಓವೈಸಿ ಪಡೆದ ಒಟ್ಟು ಮತಗಳು 6,13,868 ಮತಗಳು. ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಾ.ಭಗವಂತ ರೆಡ್ಡಿ ಪಡೆದ ಮತಗಳು 3,11,414. ಒಟ್ಟು ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದರು. ಈ ಬಾರಿಯೂ ಓವೈಸಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications