2019ರ ಲೋಕ ಸಮರ: ಬಿಜೆಪಿ ಅಭ್ಯರ್ಥಿಗಳ ಅಂತಿಮ ಸಂಭಾವ್ಯ ಪಟ್ಟಿ
Recommended Video

ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ, ಶಿವಮೊಗ್ಗದ ಮಾಜಿ ಸಂಸದ ಬಿಎಸ್ ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ, ದೆಹಲಿಗೆ ತೆರಳಿದ್ದಾರೆ. ಸೋಮವಾರದಂದು ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯಲ್ಲಿ ಘೋಷಿಸಲಾಗುತ್ತದೆ.
ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಹೆಚ್ಚಿನ ಅಧಿಕಾರ ಸಿಕ್ಕರೂ, ಎರಡೆರಡು ಬಾರಿ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಕಳುಹಿಸಬೇಕಾಯಿತು.
ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಅಧಿಕವಾಗಿದ್ದರೆ, ಆಂತರಿಕ ಸಮೀಕ್ಷೆಯಂತೆ 9 ಕ್ಷೇತ್ರಗಳಿಗೆ ಸರಿಯಾದ ಅಭ್ಯರ್ಥಿ ಸಿಗದೆ ಬಿಜೆಪಿ ಪರದಾಡುತ್ತಿದೆ. ಅಂತೂ ಇಂತೂ ಹಾಲಿ ಸಂಸದರಿಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದಾರೆ.
ಈ ಹಿಂದೆ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಸಂಭಾವ್ಯ ಪಟ್ಟಿಯಂತೆ 28 ಕ್ಷೇತ್ರಗಳ ಪೈಕಿ ಬಹುತೇಕ ಎಲ್ಲಾ ಹೆಸರುಗಳು ಖಚಿತವಾಗಿವೆ. ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ್ ಹೆಸರುಗಳನ್ನು ತೆಗೆದು ಹಾಕಲಾಗಿದ್ದು, ಇನ್ನು ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಅಕಾಂಕ್ಷಿಗಳಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ನಾಳೆ ತಿಳಿಯಲಿದೆ. ಅಷ್ಟರಲ್ಲಿ ಈ ಲೇಟೆಸ್ಟ್ ಸಂಭಾವ್ಯ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿ

ಮೈಸೂರಿನಲ್ಲಿ ಮತ್ತೊಮ್ಮೆ ಪ್ರತಾಪ್ ಸಿಂಹ ಅಭ್ಯರ್ಥಿ
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವಿಭಜಿತ ಕನ್ನಡ ಜಿಲ್ಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿ, ಗೆಲುವು ಕಾಣಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಈ ತಂತ್ರಗಾರಿಕೆ ಲೋಕಸಭೆ ಚುನಾವಣೆಯಲ್ಲೂ ಮುಂದುವರೆಸುವ ಸಾಧ್ಯತೆಯಿದೆ.
1. ಮೈಸೂರು: ಪ್ರತಾಪ್ ಸಿಂಹ
2. ಕೊಪ್ಪಳ : ಸಂಗಣ್ಣ ಕರಡಿ
3. ತುಮಕೂರು : ಜಿ.ಎಸ್ ಬಸವರಾಜು
4. ಬಾಗಲಕೋಟೆ : ಪಿ.ಸಿ ಗದ್ದಿಗೌಡರ್
5. ಬಳ್ಳಾರಿ - ವೆಂಕಟೇಶ್ ಪ್ರಸಾದ್ (ನಾಗೇಂದ್ರ ಸೋದರ )/ ದೇವೇಂದ್ರಪ್ಪ

ಬೆಂಗಳೂರು ವಲಯದ ಅಭ್ಯರ್ಥಿಗಳು
6. ಬೆಂಗಳೂರು ಉತ್ತರ : ಡಾ. ಎಚ್.ಎಂ ಚಂದ್ರಶೇಖರ್/ಡಿ.ವಿ ಸದಾನಂದ ಗೌಡ
7. ಬೆಂಗಳೂರು ಕೇಂದ್ರ : ಪಿ.ಸಿ ಮೋಹನ್
8 ಬೆಂಗಳೂರು ಗ್ರಾಮಾಂತರ: ಸಿ.ಪಿ ಯೋಗೇಶ್ವರ್/ ರುದ್ರೇಶ್
9 ಬೆಂಗಳೂರು ದಕ್ಷಿಣ : ತೇಜಸ್ವಿನಿ ಅನಂತ್ ಕುಮಾರ್
ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು, ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಎಂ ಆರ್ ರುದ್ರೇಶ್, ತುಳಸಿ ಮುನಿರಾಜು ಗೌಡ, ಅಶ್ವಥ್ ನಾರಾಯಣ ಗೌಡ ಅವರ ಹೆಸರು ಕೇಳಿ ಬಂದಿತ್ತು.

ಚಿಕ್ಕಬಳ್ಳಾಪುರಕ್ಕೆ ಮತ್ತೊಮ್ಮೆ ಬಿಎನ್ ಬಚ್ಚೇಗೌಡ
10. ಚಿಕ್ಕಬಳ್ಳಾಪುರ : ಬಿಎನ್ ಬಚ್ಚೇಗೌಡ
11. ಕೋಲಾರ : ಡಿಎಸ್ ವೀರಯ್ಯ
12. ಚಾಮರಾಜನಗರ : ವಿ ಶ್ರೀನಿವಾಸ ಪ್ರಸಾದ್
13. ಚಿತ್ರದುರ್ಗ: ಎ ನಾರಾಯಣ ಪ್ರಸಾದ್/ ಜನಾರ್ದನ ಸ್ವಾಮಿ/ ಮಾನಪ್ಪ ವಜ್ಜಲ್

ಮಂಡ್ಯಕ್ಕೆ ಸಿದ್ದರಾಮಯ್ಯ ಅವರು ಅಭ್ಯರ್ಥಿ
14. ದಕ್ಷಿಣ ಕನ್ನಡ : ನಳೀನ್ ಕುಮಾರ್ ಕಟೀಲ್
15. ಮಂಡ್ಯ : ಸಿದ್ದರಾಮಯ್ಯ
16. ಉತ್ತರ ಕನ್ನಡ ; ಅನಂತಕುಮಾರ್ ಹೆಗಡೆ
17. ಧಾರವಾಡ: ಪ್ರಹ್ಲಾದ್ ಜೋಶಿ

ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿಗಳು
18. ಶಿವಮೊಗ್ಗ: ಬಿವೈ ರಾಘವೇಂದ್ರ
19: ಉಡುಪಿ -ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
20 : ಹಾಸನ : ಎ ಮಂಜು
21 ದಾವಣಗೆರೆ: ಜಿಎಂ ಸಿದ್ದೇಶ್ವರ

ಹಾವೇರಿ ಇನ್ನಿತರ ಕ್ಷೇತ್ರಗಳು
22. ಹಾವೇರಿ: ಶಿವಕುಮಾರ್ ಉದಾಸಿ
23.ಬೀದರ್ : ಭಗವಂತ್ ಖೂಬಾ
24 . ಕಲಬುರಗಿ : ಡಾ. ಉಮೇಶ್ ಜಾಧವ್
25: ವಿಜಯಪುರ: ರಮೇಶ್ ಜಿಗಜಿಣಗಿ

ಬೆಳಗಾವಿ ಇನ್ನಿತರ ಕ್ಷೇತ್ರಗಳ ಅಭ್ಯರ್ಥಿಗಳು
26. ಬೆಳಗಾವಿ: ಸುರೇಶ್ ಅಂಗಡಿ
27. ಚಿಕ್ಕೋಡಿ: ರಮೇಶ್ ಕತ್ತಿ ಅಥವಾ ಪ್ರಭಾಕರ್ ಕೋರೆ
28. ರಾಯಚೂರು: ತಿಪ್ಪರಾಜು ಹವಾಲ್ದಾರ್/ ಸಣ್ಣ ಫಕೀರಪ್ಪ/ ಅಮರೇಶ್ ನಾಯಕ್












Click it and Unblock the Notifications