ರಾಯಲಸೀಮೆಯ ಹೆಬ್ಬಾಗಿಲು ಕಡಪ ಲೋಕಸಭಾ ಕ್ಷೇತ್ರದ ಪರಿಚಯ
ಆಂಧ್ರಪ್ರದೇಶದ ರಾಯಲಸೀಮೆಯ ಪ್ರಮುಖ ಜಿಲ್ಲೆ ಕಡಪ, ಕಡಪ(ಗಡಪ) ಎಂದರೆ ತೆಲುಗು ಭಾಷೆಯಲ್ಲಿ ಹೆಬ್ಬಾಗಿಲು ಎಂದರ್ಥ. ಯಾತ್ರಾ ಸ್ಥಳವಾದ ತಿರುಪತಿಗೆ ಕಡಪ ನಗರವೇ ಉತ್ತರದ ಹೆಬ್ಬಾಗಿಲಿನಂತಿದೆ. ಈ ಜಿಲ್ಲೆಯ ಉತ್ತರಕ್ಕೆ ಕರ್ನೂಲು, ದಕ್ಷಿಣಕ್ಕೆ ಚಿತ್ತೂರು, ಪಶ್ಚಿಮಕ್ಕೆ ಅನಂತಪುರ ಮತ್ತು ಪೂರ್ವಕ್ಕೆ ನೆಲ್ಲೂರು ಜಿಲ್ಲೆಗಳಿವೆ.
ಕಡಪ ಜಿಲ್ಲೆಯಲ್ಲಿ ಹರಿಯುವ ಅತ್ಯಂತ ಮುಖ್ಯ ನದಿ. ಪೆನ್ನಾರ್ ಪಾಪಾಗ್ನಿ, ಚೆಯ್ಯರು, ಚಿತ್ರಾವತಿ ಮೊದಲಾದವು ಇದರ ಉಪನದಿಗಳು. ಮಳೆಗಾಲದಲ್ಲಿ ಇವು ತುಂಬಿ ಹರಿಯುತ್ತವೆ. ಕಡಪ ಕಲ್ಲುಗಳೆಂದು ಪ್ರಸಿದ್ಧವಾದ ಶಿಲೆಗಳು ಈ ಜಿಲ್ಲೆಯ ಉತ್ತರ ಭಾಗದಲ್ಲಿ ದೊರಕುತ್ತವೆ. ಇವನ್ನು ನೆಲಕ್ಕೆ ಹೆಂಚಿನಂತೆ ಹಾಸುವುದಕ್ಕೂ ಮೇಜುಗಳ ಮೇಲ್ಭಾಗಕ್ಕೂ ಉಪಯೋಗಿಸುತ್ತಾರೆ.
ದಟ್ಟ ಕಾಡು ಪ್ರದೇಶಗಳನ್ನು ಒಳಗೊಂಡಿರುವ ಕಡಪ ಪ್ರದೇಶದಲ್ಲೇ ಪ್ರಸಿದ್ಧ ಗೋಲ್ಕಂಡಾ ವಜ್ರಗಳು ಪತ್ತೆಯಾಗಿದ್ದವು. ನಿಜಾಮರು, ಚೋಳರು, ವಿಜಯನಗರದ ಅರಸರು, ಮೈಸೂರು ಸಾಮ್ರಾಜ್ಯದ ಇಲ್ಲಿ ಆಡಳಿತ ನಡೆಸಿವೆ.

ಗುಡ್ಡಗಾಡು ಪ್ರದೇಶವಾಗಿರುವ ಕಡಪ ಆರ್ಥಿಕವಾಗಿ ಪ್ರಗತಿ ಕಂಡಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿದ್ದರೂ ಭಾರಿ ಕೈಗಾರಿಕೆಗಳು ಇತ್ತ ಸುಳಿದಿಲ್ಲ. ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿ ಉಳಿದು ಬಿಟ್ಟಿದೆ. ಸರ್ಕಾರದ ವಿಶೇಷ ಅನುದಾನದ ಯೋಜನೆಗಳಲ್ಲಿ ಕಡಪ ಕ್ಷೇತ್ರಕ್ಕೆ ಹೆಚ್ಚಿನ ಪಾಲು ಇದ್ದೇ ಇರುತ್ತದೆ.
2011ರ ಜನಗಣತಿಯ ಪ್ರಕಾರ ಕಡಪ ಜಿಲ್ಲೆಯಲ್ಲಿ 28,84,524 ಜನಸಂಖ್ಯೆ ಇದೆ, ಹಿಂದೂಗಳು 83.7%, ಮುಸ್ಲಿಮರು 14% ಮತ್ತು ಕ್ರಿಶ್ಚಿಯನ್ನರು 2.3%ರಷ್ಟಿದೆ ಶೇ 16.09ರಷ್ಟು ಮಂದಿ ಪರಿಶಿಷ್ಟ ಜಾತಿ ಹಾಗೂ ಶೇ 2.01ರಷ್ಟು ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ 66.03ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದರೆ, ಶೇ 33.97ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ಶೇ 67.30ರಷ್ಟು ಸಾಕ್ಷರತೆ ಪ್ರಮಾಣ ಹೊಂದಿದೆ.
ಆಂಧ್ರಪ್ರದೇಶದ ಪ್ರಮುಖ ಲೋಕಸಭಾ ಕ್ಷೇತ್ರ ಕಡಪ ಸದ್ಯ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ. 2011ರಲ್ಲಿ ಚುನಾವಣಾ ಕಣಕ್ಕಿಳಿದ ವೈಎಸ್ಸಾರ್ ಪಕ್ಷಕ್ಕೆ ಮೊದಲ ಯತ್ನದಲ್ಲೇ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಜಯ ದೊರೆಕಿಸಿಕೊಟ್ಟರು. ಸದ್ಯ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ 33 ವರ್ಷ ವಯಸ್ಸಿನ ವೈಎಸ್ ಅವಿನಾಶ್ ರೆಡ್ಡಿ ಅವರು ಹಾಲಿ ಸಂಸದರಾಗಿದ್ದರು. 2016ರ್ ಜೂನ್ 20ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2014ರಲ್ಲಿ ಶೇ 77ರಷ್ಟು ಮತದಾನವಾಗಿತ್ತು.12,00,662 ಮತಗಳ ಪೈಕಿ 5,88,805 ಪುರುಷ ಮತಗಳು ಹಾಗೂ 6,11,857 ಮಹಿಳಾ ಮತಗಳು ದಾಖಲಾಗಿವೆ.
ರಾಜ್ಯ ಇಬ್ಭಾಗವಾದ ಬಳಿಕ ರಾಜಕೀಯವಾಗಿ ಈ ಕ್ಷೇತ್ರ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಕಣವಾಗಿದೆ. ವೈಎಸ್ಸಾರ್ ಕಾಂಗ್ರೆಸ್ ನ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ಸಮೈಕ್ಯಾಂಧ್ರಕ್ಕಾಗಿ ಆಗ್ರಹಿಸಿದ್ದರು. ಆದರೆ, ರಾಜ್ಯ ಇಬ್ಭಾಗವಾಗುವುದನ್ನು ತಪ್ಪಿಸಲಾಗಲಿಲ್ಲ.
ಸೀಮೆ ಸುಣ್ಣ, ನೈಸರ್ಗಿಕ ಖನಿಜಗಳನ್ನು ಹೊಂದಿರುವ ಕಲ್ಲು ಬಂಡೆಗಳ ಗುಡ್ಡಗಾಡು ಪ್ರದೇಶವಾಗಿರುವ ಕಡಪ ಆರ್ಥಿಕವಾಗಿ ಪ್ರಗತಿ ಕಂಡಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿದ್ದರೂ ಭಾರಿ ಕೈಗಾರಿಕೆಗಳು ಇತ್ತ ಸುಳಿದಿಲ್ಲ. ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿ ಉಳಿದು ಬಿಟ್ಟಿದೆ. ಸರ್ಕಾರದ ವಿಶೇಷ ಅನುದಾನದ ಯೋಜನೆಗಳಲ್ಲಿ ಕಡಪ ಕ್ಷೇತ್ರಕ್ಕೆ ಹೆಚ್ಚಿನ ಪಾಲು ಇದ್ದೇ ಇರುತ್ತದೆ.

ಈ ಕ್ಷೇತ್ರದಲ್ಲಿ 15,50,579 ಮತದಾರರಿದ್ದು, 7,65,036 ಪುರುಷರು ಹಾಗೂ 7,85,543 ಮಹಿಳೆಯರಿದ್ದಾರೆ. ಈ ಕ್ಷೇತ್ರದ ಹಾಲಿ ಸಂಸದ ಅವಿನಾಶ್ ರೆಡ್ಡಿ ಅವರು ಸಂಸತ್ತಿನಲ್ಲಿ ಶೇ 42ರಷ್ಟು ಹಾಜರಾತಿ ಹೊಂದಿದ್ದು, 8 ಬಾರಿ ಚರ್ಚೆಗಳಲ್ಲಿ ಪಾಲ್ಗೊಂಡು 240 ಪ್ರಶ್ನೆಗಳನ್ನು ಕೇಳಿದ್ದಾರೆ.
2009ರಿಂದ ಇಲ್ಲಿ ತನಕ ವೈಎಸ್ಸಾರ್ ಕಾಂಗ್ರೆಸ್ ಪಕ್ಷವು ಒಂದು ಬಾರಿ ಹಾಗೂ ಕಾಂಗ್ರೆಸ್ ಒಂದು ಬಾರಿ ಗೆಲುವು ಸಾಧಿಸಿದೆ. ಎರಡು ಪಕ್ಷಗಳು ತಲಾ ಶೇ 50ರಷ್ಟು ಗೆಲುವಿನ ಫಲಿತಾಂಶವನ್ನು ಹೊಂದಿವೆ.

ಕಡಪ ಕ್ಷೇತ್ರದ ಮೇಲೆ ವೈಎಸ್ಸಾರ್ ಪಕ್ಷದ ಪ್ರಭಾವ ಹೆಚ್ಚಾಗಿದ್ದರೂ, ಈ ಬಾರಿ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಾರ್ಟಿ ಮೈತ್ರಿ ಮಾಡಿಕೊಂಡು ಭಾರಿ ಪೈಪೋಟಿ ನೀಡುವ ನಿರೀಕ್ಷೆಯಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications