ಉತ್ತರ ಪ್ರದೇಶ: ಗೋರಖ್ಪುರ ಲೋಕಸಭಾ ಕ್ಷೇತ್ರ ಪರಿಚಯ
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಬಹಳ ಮಹತ್ವದ್ದು ಗೋರಖ್ಪುರ. ಮುಖ್ಯಂತ್ರಿ ಯೋಗಿ ಅದಿತ್ಯನಾಥ್ ಅವರು 2014 ರ ಲೋಕಸಭಾ ಚುನಾವಣೆಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದಿದ್ದರು. 1998 ರಿಂದಲೂ ಯೋಗಿ ಆದಿತ್ಯನಾಥ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತ ಬಂದಿದ್ದಾರೆ.
ಆದರೆ 2017 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಯೋಗಿ ಆದಿತ್ಯನಾಥ್ ಅವರನ್ನೇ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಬಿಜೆಪಿ ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದು ಯೋಗಿಗೆ ತೀವ್ರ ಮುಖಭಂಗವನ್ನುಂಟು ಮಾಡಿತ್ತು.
2014 ರ ಚುನಾವಣೆಯ ಅಂಕಿಸಂಖ್ಯೆಗಳ ಪ್ರಕಾರ ಗೋರಖ್ಪುರದ ಒಟ್ಟು ಮತದಾರರ ಸಂಖ್ಯೆ 1,955,461, ಅವರಲ್ಲಿ 1,075,202 ಪುರುಷರು ಮತ್ತು 880,103 ಮಹಿಳೆಯರು.

ಗೋರಖ್ಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಮಾಜವಾಧಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್ 4,56,513 ಮತಗಳನ್ನು ಪಡೆದಿದ್ದರೆ, ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ 4,34,632 ಮತಗಳನ್ನು ಪಡೆದಿದ್ದರು.
ಈ ನಗರವನ್ನು ಮೊದಲಿಗೆ ಗೋರಕ್ಷಪುರ ಎಂದೇ ಕರೆಯಲಾಗುತ್ತಿತ್ತು. ನಾಲ್ಕೈದು ವರ್ಷಗಳಿಗೊಮ್ಮೆ ಇಲ್ಲಿ ಪ್ರವಾಹ ಉಂಟಾಗುವುದು ಮಾಮೂಲೆನ್ನಿಸಿದೆ. ಈ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅವುಗಳೆಂದರೆ ಕೈಂಪಿರ್ಗಂಜ್, ಪಿಪ್ರೈಚ್, ಗೋರಖ್ಪುರ ನಗರ, ಗೋರಖ್ಪುರ ಗ್ರಾಮೀಣ, ಸಹಜನ್ವ ಕ್ಷೇತ್ರಗಳು.

ರಾಪ್ತಿ ನದಿಯ ತಟದಲ್ಲಿರುವ ಗೋರಖ್ಪುರ, ದಲ್ಲಿ ನಾಥ ಪಂಥದ ಜನರೇ ಹೆಚ್ಚು.
1952 ರಲ್ಲಿ ಕಾಂಗ್ರೆಸ್ ನ ಸಿಂಹಾಸನ್ ಸಿಂಗ್ ಅವರೊಂದಿಗೆ ಮೂರ್ನಾಲ್ಕು ಜನ ಒಂದೇ ವರ್ಷದಲ್ಲಿ ಬೇರೆ ಬೇರೆ ಬಾರಿಗೆ ಚುನಾವಣೆಗೆ ನಿಂತು ಗೆದ್ದರು. ಮತ್ತೆ 1957-62 ಮತ್ತು 1962-67 ರ ಅವಧಿಯಲ್ಲೂ ಸಿಂಹಾಸನ್ ಸಿಂಗ್ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದರು. 1967-70, 1970-71 ರಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಕ್ರಮವಾಗಿ ಮಹಂತ್ ದಿಗ್ವಿಜಯನಾಥ್ ಮತ್ತು ಮಹಂತ್ ಅವೆದ್ಯನಾಥ್ ಗೆಲುವು ಸಾಧಿಸಿದರು. 1971-77 ರಲ್ಲಿ ಕಾಂಗ್ರೆಸ್ ನ ನರಸಿಂಹ ನಾರಾಯಣ ಪಾಂಡೆ ಗೆಲುವು ಸಾಧಿಸಿದರೆ, 1977-80 ರಲ್ಲಿ ಭಾರತೀಯ ಲೋಕದಳದ ಹರಿಕೇಶ್ ಬಹದೂರ್ ಗೆಲುವು ಸಾಧಿಸಿದರು. 1980-84 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಹರಿಕೇಶ್ ಬಹದೂರ್ ಗೆದ್ದರು. 1984-89 ಅವಧಿಯಲ್ಲಿ ಮದನ್ ಪಾಂಡೆ ಕಾಂಗ್ರೆಸ್ ನಿಂದ ಗೆದ್ದರೆ, ಹಿಂದು ಮಹಾಸಭಾದಿಂದ ಸ್ಪರ್ಧಿಸಿ ಮಹಾಂತ್ ಅವೇದ್ಯನಾಥ್ 1989-90 ರ ಅವಧಿಯಲ್ಲಿ ಗೆದ್ದರು.

ನಂತರ ಈ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಯಿತು. ಬಿಜೆಪಿ ಜೊತೆ ಗುರುತಿಸಿಕೊಂಡ ಮಹಾಂತ್ ಅವೇದ್ಯನಾಥ್ 1991-96 ಮತ್ತು 1996-98 ರ ಅವಧಿಯಲ್ಲಿ ಗೆದ್ದರೆ, ಜುತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 1998-99 ರಿಂದ 2014-17 ರವರೆಗೆ ಸತತ ಐದು ಬಾರಿ ಗೆದ್ದರು. ಆದರೆ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ನಡೆದ ಉಪಚುನಾವಣೆಯಲ್ಲಿ ಕ್ಷೇತ್ರದಿಂದ ಅಚ್ಚರಿಯ ರೀತಿಯಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್ ಗೆಲುವು ಸಾಧಿಸಿದರು.

20114 ರ ಚುನಾವಣೆಯಲ್ಲಿ ಗೋರಖ್ಪುರ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ತು ಮತಗಳ ಸಂಖ್ಯೆ 10,40,199. ಇವರಲ್ಲಿ ಪುರುಷರು 5,69,717 ಮತ್ತು ಮಹಿಳೆಯರು 4,70,482.












Click it and Unblock the Notifications