ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಸದಾನಂದ ಗೌಡರ ವ್ಯಕ್ತಿಚಿತ್ರ

By ಮಹೇಶ್ ಮಲ್ನಾಡ್
|
Google Oneindia Kannada News

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಸದಾನಂದ ಗೌಡ ಅವರು ಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರಾಗಿ ಗುರುತಿಸಿಕೊಂಡವರು. ಸದಾನಂದ ಗೌಡರು ಅವರು ಹಂತ ಹಂತವಾಗಿ ರಾಜಕೀಯದಲ್ಲಿ ಬೆಳದವರು. ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿದವರು.

ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುವ ಸದಾನಂದ ಗೌಡ ಅವರು ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಠಿಣ ಪ್ರತಿಸ್ಪರ್ಧಿ ಎದುರಿಸುವ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಸ್ಪರ್ಧೆ ಕುತೂಹಲಕಾರಿಯಾಗಲಿದೆ.

ಬೆಂಗಳೂರು ದಕ್ಷಿಣದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ವ್ಯಕ್ತಿಚಿತ್ರಬೆಂಗಳೂರು ದಕ್ಷಿಣದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ವ್ಯಕ್ತಿಚಿತ್ರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 1999ರಿಂದ ಸತತವಾಗಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ. ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಸದಾನಂದ ಗೌಡರಿಗೆ ಮತ್ತೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಸದಾನಂದ ಗೌಡ ಅವರನ್ನು ಮತ್ತೊಮ್ಮೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಕಳುಹಿಸಿ, ಶೋಭಾ ಕರಂದ್ಲಾಜೆ ಅವರನ್ನು ಈ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಹಾಲಿ ಸಂಸದರ ಕ್ಷೇತ್ರಗಳಲ್ಲಿ ಬದಲಾವಣೆಯಾಗಿಲ್ಲ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

2014ರಲ್ಲಿ 16ನೇ ಲೋಕಸಭೆಗೆ ಅಯ್ಕೆಯಾದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು ನಂತರ ಅಂಕಿ ಅಂಶ ಹಾಗೂ ಕಾರ್ಯಾನುಷ್ಠಾನ ಇಲಾಖೆ ಸಚಿವರಾಗಿದ್ದರು. ಸದ್ಯ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವರಾಗಿದ್ದಾರೆ.

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಸದಾನಂದ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಸದಾನಂದ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಕುಟುಂಬದ ಸಾಮಾನ್ಯ ಮನೆತನಕ್ಕೆ ಸೇರಿದ ವೆಂಕಪ್ಪಗೌಡ ಮತ್ತು ಕಮಲ ದಂಪತಿಗಳ ಸುಪುತ್ರನಾಗಿ 18 ಮಾರ್ಚ್ 1953ರಲ್ಲಿ ಸದಾನಂದ ಗೌಡರು ಜನಿಸಿದರು.

ಶಿಕ್ಷಣ:
* ಕನ್ನಡ, ತುಳು, ಅರೆಭಾಷೆಯನ್ನು ಚೆನ್ನಾಗಿ ಬಲ್ಲರು.
* ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ.
* ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಿಂದ ಬಿ.ಎಸ್ಸಿ. ಪದವಿ.
* ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದಲ್ಲಿ ಕಾನೂನು ಶಿಕ್ಷಣ
* ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿಯಾಗಿದ್ದರು.

ವಕೀಲರಾಗಿ ವೃತ್ತಿ ಆರಂಭ

ವಕೀಲರಾಗಿ ವೃತ್ತಿ ಆರಂಭ

ವೃತ್ತಿ:
* 1976 ರಲ್ಲಿ ಸುಳ್ಯ ಮತ್ತು ಪುತ್ತೂರು ನಗರಗಳಲ್ಲಿ ವಕೀಲ ವೃತ್ತಿ ಆರಂಭ.
* ಸದಾನಂದ ಗೌಡರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸರಕಾರಿ ಅಭಿಯೋಜಕರಾಗಿಯೂ ಅಲ್ಪ ಅವಧಿ ಕಾರ್ಯನಿರ್ವಹಿಸಿದ್ದರು. ಕುಟುಂಬ,
ಆಸಕ್ತಿ: ಉತ್ತಮ ಖೋ ಖೋ ಆಟಗಾರ.ಶಟ್ಲ್ ಬ್ಯಾಡ್ಮಿಂಟನ್, ಟೆನ್ನಿಸ್ ಅಂದ್ರೆ ಸದಾನಂದಗೌಡರಿಗೆ ಇಷ್ಟ. ಕರಾವಳಿ ಊಟ ತಿಂಡಿ, ಯಕ್ಷಗಾನ ಪಂಚಪ್ರಾಣ. ನಗುನಗುತಾ ನಲಿ ಏನೇ ಆಗಲಿ ಎಂಬುದು ಇರುವ ಧ್ಯೇಯವಾಕ್ಯ. 1981 ರಲ್ಲಿ ಡಾಟಿಯವರನ್ನು ವಿವಾಹವಾದ ಸದಾನಂದ ಗೌಡರ ಪುತ್ರ ಕಾರ್ತಿಕ್ ತಾಂತ್ರಿಕ ಶಿಕ್ಷಣ ಪೂರೈಸಿದ್ದಾರೆ.

ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ಸಹಕಾರಿ ರಂಗ

ಸಹಕಾರಿ ರಂಗ

* ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ, ಎಸ್.ಕೆ.ಎ.ಸಿ.ಎಂ. ಸೊಸೈಟಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
* ಸುಳ್ಯದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ
* ಮಂಡೆಕೋಲು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ
* ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
* ರಾಜ್ಯದ ಭೂ ಅಡಮಾನ ಬ್ಯಾಂಕ್‌ಗಳ ಸಿಬಂಧಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಆರಂಭದ ರಾಜಕಾರಣ

ಆರಂಭದ ರಾಜಕಾರಣ

* ಜನಸಂಘದ ಪ್ರಾಥಮಿಕ ಸದಸ್ಯನಾಗಿ ರಾಜಕಾರಣಕ್ಕೆ ಧುಮುಕಿದವರು.
* ಭಾರತೀಯ ಜನತಾ ಪಾರ್ಟಿಯ ಸುಳ್ಯ ಕ್ಷೇತ್ರ ಸಮಿತಿಯ ಅಧ್ಯಕ್ಷ
* ದಕ್ಷಿಣಕನ್ನಡ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ
* ದ.ಕ. ಜಿಲ್ಲಾ ಜಿ.ಜೆ.ಪಿ. ಉಪಾಧ್ಯಕ್ಷ
* ಯುವ ಮೋರ್ಚಾದ ರಾಜ್ಯ ಸಮಿತಿಯ ಕಾರ್ಯದರ್ಶಿ
* ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯದರ್ಶಿ
* 2006 ರಿಂದ ರಾಜ್ಯ ಬಿ.ಜೆ.ಪಿ.ಯ ಚುಕ್ಕಾಣಿ ಹಿಡಿದು 2008 ರಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಗಣನೀಯ ಪಾತ್ರ.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

ಶಾಸಕನಾಗಿ ಸದಾನಂದ ಗೌಡ

ಶಾಸಕನಾಗಿ ಸದಾನಂದ ಗೌಡ

* 1989 ರಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ
* ಸದಾನಂದ ಗೌಡರು 1994 ರಲ್ಲಿ ಮೊತ್ತ ಮೊದಲ ಬಾರಿಗೆ ಶಾಸಕನಾಗಿ ಚುನಾಯಿತರಾಗಿ 1999ರಲ್ಲಿ ಪುನರಾಯ್ಕೆಯಾದರು.
* ಶಾಸಕನಾಗಿ ದ್ವಿತೀಯ ಅವಧಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ. ಶಾಸಕಾಂಗ ಪಕ್ಷದ ಉಪನಾಯಕನಾಗಿ ಆಯ್ಕೆ
* ಮಹಿಳಾ ದೌರ್ಜನ್ಯ ತಡೆಯ ಮೇಲಣ ಕರಡು ಮಸೂದೆ ರೂಪಿಸುವ ಸಮಿತಿಯ ಸದಸ್ಯ
* ಶಕ್ತಿ, ಇಂಧನ ಮತ್ತು ವಿದ್ಯುಚ್ಛಕ್ತಿಯ ಕುರಿತಾದ ವಿಧಾನಸಭೆಯ ಸ್ಪೀಕರ್‌ರವರಿಂದ ರಚಿಸಲ್ಪಟ್ಟ ಸಮಿತಿಯ ಸದಸ್ಯ
* 2001-02 ರಾಜ್ಯ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ರಂಗದ ಉದ್ದಿಮೆಗಳ ಸಮಿತಿಯ ಸದಸ್ಯ
* 2002-03 ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯನಾಗಿ ನಾಮನಿರ್ದೇಶನ.

ಅಡಿಕೆ ಬೆಂಬಲ ಬೆಲೆಗಾಗಿ ಹೋರಟ ಮಾಡಿದ್ದರು

ಅಡಿಕೆ ಬೆಂಬಲ ಬೆಲೆಗಾಗಿ ಹೋರಟ ಮಾಡಿದ್ದರು

* 2003-04 ಪುತ್ತೂರು ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷನಾಗಿ ಹತ್ತು ವರ್ಷಗಳಲ್ಲಿ ಸುಮಾರು 3500ಕ್ಕೂ ಮಿಕ್ಕಿದ ಆಶ್ರಯ ಮನೆಗಳ ವಿತರಣೆ ಮಾಡಿರುತ್ತಾರೆ.
* ಪುತ್ತೂರು ತಾಲೂಕಿನ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷನಾಗಿ ಹತ್ತು ವರ್ಷಗಳಲ್ಲಿ 1700 ಕಡತಗಳನ್ನು ವಿಲೇವಾರಿ ಮಾಡಿ ಬಡ ಅರ್ಹ ಜನತೆಗೆ ಭೂಮಿಯನ್ನು ಸಕ್ರಮೀಕರಣಗೊಳಿಸಿದ್ದಾರೆ. * ಪುತ್ತೂರು ತಾಲೂಕು ಪಂಚಾಯತ್ ಉತ್ತಮ ಆಡಳಿತಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯಲು ತನ್ನ ಶಾಸಕತ್ವದ ಅವಧಿಯಲ್ಲಿ ಯೋಗ್ಯ ಹಾಗೂ ಸಮರ್ಥ ಮಾರ್ಗದರ್ಶನ ಮಾಡಿರುತ್ತಾರೆ.
* ಅಡಿಕೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಚಿಂತಾಕ್ರಾಂತರಾಗಿದ್ದ ನಾಡಿನ ಅಡಿಕೆ ಬೆಳೆಗಾರರಿಗೆ ದಕ್ಷ ನೇತೃತ್ವ ನೀಡಿದ್ದಾರೆ

ಲೋಕಸಭೆ ಚುನಾವಣೆ: ದೇವೇಗೌಡರ ವಿರುದ್ಧ ಸೆಣೆಸಲು ಸಿದ್ಧ: ಡಿವಿಎಸ್ಲೋಕಸಭೆ ಚುನಾವಣೆ: ದೇವೇಗೌಡರ ವಿರುದ್ಧ ಸೆಣೆಸಲು ಸಿದ್ಧ: ಡಿವಿಎಸ್

2004ರಲ್ಲಿ ಮೊದಲ ಬಾರಿಗೆ ಸಂಸದರಾದರು

2004ರಲ್ಲಿ ಮೊದಲ ಬಾರಿಗೆ ಸಂಸದರಾದರು

* 2004 ರಲ್ಲಿ ಅವರು ಮಂಗಳೂರು ಸಂಸದರಾಗಿ ಆಯ್ಕೆಯಾದರು.
* ಸಂಸದರಾದ ಬಳಿಕ ಇವರನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಕ.
* ಗೋವಾ ರಾಜ್ಯದ ಪಕ್ಷ ವ್ಯವಹಾರಗಳ ಉಸ್ತುವಾರಿ ವಹಿಸಿದಾಗ ಸದಾನಂದ ಗೌಡರು ರಾಷ್ಟ್ರ ಮಟ್ಟದಲ್ಲಿಯೂ ಗುರುತಿಸಲ್ಪಟ್ಟರು.
* ಭಾರತ ಸರಕಾರ ಸದಾನಂದ ಗೌಡರನ್ನು 2005ರಲ್ಲಿ ಕೇಂದ್ರ ಕಾಫಿ ಬೋರ್ಡಿನ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿತು.
* ಭಾರತೀಯ ಜನತಾ ಪಾರ್ಟಿಯ ವರಿಷ್ಠರು ಸದಾನಂದ ಗೌಡರ ಕೈಗೆ 2006 ರಾಜ್ಯ ಬಿ.ಜೆ.ಪಿ. ಘಟಕದ ಚುಕ್ಕಾಣಿಯನ್ನು ನೀಡಿದರು.
* 2007 ರಲ್ಲಿ ಇವರು ರಾಜ್ಯ ಬಿ.ಜೆ.ಪಿ. ಅಧ್ಯಕ್ಷರಾಗಿ ಪುರಾಯ್ಕೆಯಾದರು.
* 2008ರಲ್ಲಿ ರಾಜ್ಯದಲ್ಲಿ ಮೊತ್ತಮೊದಲ ಪೂರ್ಣ ಪ್ರಮಾಣದ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಹೊಣೆಯರಿತು ಕೆಲಸ ಮಾಡಿ ಪಕ್ಷದ ಹಿರಿಯರ ಮೆಚ್ಚುಗೆಗೆ ಪಾತ್ರರಾದರು.

ಸಂಸದರಾಗಿ ನಂತರ ಮುಖ್ಯಮಂತ್ರಿಯಾದರು

ಸಂಸದರಾಗಿ ನಂತರ ಮುಖ್ಯಮಂತ್ರಿಯಾದರು

* 2009ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಗೆಲುವು ಸಾಧಿಸಿಕರಾವಳಿ ಮತ್ತು ಮಲೆನಾಡಿನ ಜನರ ಮನ ಗೆದ್ದರು.
* ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮಂಜೂರು ಮಾಡಿಸಿದರು.
* ಇಂದಿರಾಗಾಂಧಿಯವರ ಕಾಲದಿಂದಲೇ ನನೆಗುದಿಗೆ ಬಿದ್ದಿದ್ದ ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಲೈನಿನ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿದರು.
* ಕರಾವಳಿಯ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 17 ರ ಚತುಷ್ಪಥೀಕರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿದರು.
* ಮೀನುಗಾರಿಕೆಗೆ ಕೇಂದ್ರದಿಂದ ಮಂಜೂರಾಗಲು ಬಾಕಿಯಿದ್ದ ಪ್ರೋತ್ಸಾಹಕ ಕ್ರಮಗಳನ್ನು ತ್ವರಿತ ಮಂಜೂರಾತಿ.
* ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಪತನ ನಂತರ ಕರ್ನಾಟಕದ 26ನೇ ಮುಖ್ಯಮಂತ್ರಿಯಾದರು.

English summary
Lok Sabha Elections 2019 : DV Sadananda Gowda is the Member of Parliament for Bangalore North. Sadananda Gowda is the key member of BJP, RSS a Hindu nationalist volunteer organisation. He is contesting from Bangalore North again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X