ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿನಿ ತಾರೆಯರು
ಲೋಕಸಭೆ ಚುನಾವಣೆ 2019ರಲ್ಲಿ ದೇಶದ ಅತಿ ದೊಡ್ಡ ಪಕ್ಷವಾಗಿ ಎನ್.ಡಿ.ಎ ಮೈತ್ರಿಕೂಟ ಹೊರಹೊಮ್ಮಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮಹಾಘಟಬಂಧನ್ ಮಾಡಿಕೊಂಡಿದ್ದ ತೃತಿಯ ರಂಗಕ್ಕೂ ಭಾರಿ ಹಿನ್ನಡೆಯಾಗಿದೆ.
ಘಟಾನುಘಟಿ ರಾಜಕಾರಣಿಗಳ ಜೊತೆ ಸಿನಿಮಾ ಇಂಡಸ್ಟ್ರಿಯವರು ಕೂಡ ಲೋಕಸಭೆ ಅಖಾಡದಲ್ಲಿದ್ದರು. ಕರ್ನಾಟಕದಿಂದ ಸುಮಲತಾ, ನಿಖಿಲ್ ಕುಮಾರ್, ಪ್ರಕಾಶ್ ರೈ ಸ್ಪರ್ಧಿಸಿದ್ದರು. ದೇಶದ ಇತರೆ ರಾಜ್ಯಗಳಲ್ಲೂ ಸಿನಿಮಾ ಸ್ಟಾರ್ ಗಳು ಸ್ಪರ್ಧೆ ಮಾಡಿದ್ದರು.
ಹೇಮಾ ಮಾಲಿನಿ, ಜಯಪ್ರದಾ, ಶತ್ರುಜ್ಞ ಸಿನ್ಹಾ, ರವಿ ಕಿಶನ್, ಪವನ್ ಕಲ್ಯಾಣ್, ಸನ್ನಿ ಡಿಯೋಲ್, ಸ್ಮೃತಿ ಇರಾನಿ, ಊರ್ಮಿಳಾ, ಬಾಬು ಸುಪ್ರಿಯೋ ಹೀಗೆ ಇನ್ನು ಹಲವರು ಲೋಕ ಅಖಾಡದಲ್ಲಿದ್ದರು. ಹಾಗಿದ್ರೆ, ಇವರುಗಳ ಪೈಕಿ ಯಾರು ಗೆದ್ದರು? ಯಾರು ಸೋತರು? ಮುಂದೆ ಓದಿ.....

ಗೆದ್ದು ನಗೆ ಬೀರಿದ ಸುಮಲತಾ
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸಿದ್ದ ನಟ ಹಾಗೂ ಸಿಎಂ ಪುತ್ರ ನಿಖಿಲ್ ಕುಮಾರ್ ಸೋತಿದ್ದಾರೆ.

ಪ್ರಕಾಶ್ ರೈ ಕಥೆ ಏನಾಯಿತು?
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿಯ ಪಿಸಿ ಮೋಹನ್ ಹಾಗೂ ಕಾಂಗ್ರೆಸ್ ರಿಜ್ವಾನ್ ಅರ್ಷಾದ್ ವಿರುದ್ಧ ಭಾರಿ ಹೀನಾಯವಾಗಿ ಸೋಲು ಕಂಡಿದ್ದಾರೆ.

ಎರಡೂ ಕ್ಷೇತ್ರದಲ್ಲಿ ಸೋತ ಪವನ್ ಕಲ್ಯಾಣ್
ಆಂಧ್ರಪ್ರದೇಶದಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು. ಗಾಜುವಾಕ ಮತ್ತು ಭೀಮಾವರಂ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಪವನ್ ಕಲ್ಯಾಣ್ ಎರಡೂ ಕ್ಷೇತ್ರದಲ್ಲೂ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಗೆದ್ದ ಸ್ಮೃತಿ, ಹೇಮಾ ಮಾಲಿನಿ
ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಭರ್ಜರಿ ಜಯಗೊಳಿಸಿದ್ದಾರೆ. ಉತ್ತರ ಪ್ರದೇಶದ ಮಥುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ನಟಿ ಹೇಮಾ ಮಾಲಿನಿ ಕೂಡ ಜಯ ಕಂಡಿದ್ದಾರೆ.

ಸೋತ ಜಯಪ್ರದಾ, ಶತ್ರುಜ್ಞ ಸಿನ್ಹಾ
ಉತ್ತರ ಪ್ರದೇಶದ ರಾಂಪುರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಟಿ ಜಯಪ್ರದಾ ಸೋಲು ಕಂಡಿದ್ದಾರೆ. ಪಾಟ್ನ ಸಾಹಿಬ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ಶತ್ರುಜ್ಞ ಸಿನ್ಹಾ ಕೂಡ ಸೋತಿದ್ದಾರೆ. ಶತ್ರುಜ್ಞ ಸಿನ್ಹಾ ಪತ್ನಿ ಪೂನಂ ಸಿನ್ಹಾ ಸಮಾಜವಾದಿ ಪಕ್ಷದಿಂದ ಲಕ್ನೌ ನಲ್ಲಿ ಸ್ಪರ್ಧೆ ಮಾಡಿದ್ದರು. ಇವರು ಕೂಡ ಸೋತಿದ್ದಾರೆ.

ಗೆದ್ದ ಸನ್ನಿ ಡಿಯೋಲ್, ಸೋತ ಊರ್ಮಿಳಾ
ಪಂಜಾಬ್ ನ ಗುರ್ದಾಸ್ ಪುರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಸನ್ನಿ ಡಿಯೋಲ್ ಗೆಲುವು ಕಂಡಿದ್ದಾರೆ. ಮುಂಬೈ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಟಿ ಊರ್ಮಿಳಾ ಮಾತೊಂಡ್ಕರ್ ಸೋಲು ಕಂಡಿದ್ದಾರೆ. ಗೋರಖ್ ಪುರದಲ್ಲಿ ಭೋಜ್ ಪುರಿ ನಟ ರವಿಕಿಶನ್ ಗೆಲುವು ಸಾಧಿಸಿದ್ದಾರೆ.

ಬಹುಭಾಷೆ ನಟಿ ರೋಜಾ ಗೆಲುವು
ಬಹುಭಾಷೆ ನಟಿ ರೋಜಾ ನಗಾರಿ ವಿಧಾನಸಭೆ ಕ್ಷೇತ್ರದಿಂದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಜಯ ಸಾಧಿಸಿದ್ದಾರೆ. ಜಗನ್ ಮೋಹನ್ ಸರ್ಕಾರದಲ್ಲಿ ಮಂತ್ರಿಯಾಗುವ ಸಾಧ್ಯತೆಯೂ ಇದೆ. ಮನೋಜ್ ತಿವಾರಿ ಗೆಲುವು ಕಂಡಿದ್ದಾರೆ. ನಟಿ ಮೂನ್ ಮೂನ್ ಸೇನ್ ವಿರುದ್ಧ ಬಬೂಲ್ ಸುಪ್ರಿಯೋ ಗೆಲುವು ಕಂಡಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications