ಬಾಯಿಗೆ ಇಟ್ಟುಕೊಳ್ಳುವಾಗ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಹರಿದಾಡುತ್ತಿತ್ತು ಹುಳು!
ಇತ್ತೀಚೆಗೆ ವಿಮಾನಗಳಲ್ಲಿ ನೀಡುವ ಆಹಾರ ಗುಣಮಟ್ಟ ಕಳೆದುಕೊಂಡಿರುವ ಸುದ್ದಿಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ವಿಮಾನದಲ್ಲಿ ದೂರದೂರಿಗೆ ಗಂಟೆಗಟ್ಟಲೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಆಹಾರ ನೀಡಲಾಗುತ್ತದೆ. ಆದರೆ ಇದು ಕೆಲ ಬಾರಿ ಹಾಳಾಗಿರುವುದು, ಇದರಲ್ಲಿ ಜಿರಳೆ, ಹುಳುಗಳು ಇರುವುದು ಆಗಾಗ ಸುದ್ದಿಯಾಗುತ್ತಲೇ ಇವೆ. ಸದ್ಯ ಇಂಥಹ ಸುದ್ದಿಯೊಂದು ವೈರಲ್ ಆಗಿದೆ.
ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ತಮಗೆ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಜೀವಂತ ಹುಳು ಹರಿದಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕುಶ್ಬೂ ಗುಪ್ತಾ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸ್ಯಾಂಡ್‌ವಿಚ್‌ನಲ್ಲಿ ಜೀವಂತ ಹುಳು ಹರಿದಾಡುವ ಫೋಟೋ ಕೂಡ ಶೇರ್ ಮಾಡಿದ್ದಾರೆ.

ಇದು ಜನಾಕ್ರೋಶಕ್ಕೆ ಗುರಿಯಾಗಿದೆ. ಕುಶ್ಬೂ ಗುಪ್ತಾ ಅವರು ಈ ಘಟನೆಯನ್ನು ವಿಮಾನಯಾನ ಸಂಸ್ಥೆಗೆ ಟ್ಯಾಗ್ ಮಾಡುವ ಮೂಲಕ ವಿವರಿಸಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಕುಶ್ಬೂ ಅವರಿಗೆ ಸಸ್ಯಾಹಾರಿ ಸ್ಯಾಂಡ್‌ವಿಚ್ ನೀಡಲಾಯಿತು.
ಅವರು ವಿಮಾನ ಟಿಕೆಟ್‌ನೊಂದಿಗೆ ಊಟವನ್ನು ಮೊದಲೇ ಕಾಯ್ದಿರಿಸಿದ್ದರು. ಸ್ಯಾಂಡ್‌ವಿಚ್ ಅನ್ನು ತಿನ್ನುವಾಗ ಕುಶ್ಬೂ ಗುಪ್ತಾ ಅವರಿಗೆ ಅದರಲ್ಲಿ ಏನೋ ಹರಿದಾಡುವುದು ಕಾಣಿಸಿದೆ. ಅದನ್ನು ಹತ್ತಿರದಿಂದ ನೋಡಿದಾಗ ಅವರು ಅಕ್ಷರಶ: ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಜೀವಂತ ಹುಳವೊಂದು ಹರಿದಾಡುತ್ತಿರುವುದನ್ನು ಕುಶ್ಬೂ ಗುಪ್ತಾ ಅವರು ಗಮನಿಸಿದ್ದಾರೆ.
ತಕ್ಷಣ ಅವರು ಗಗನ ಸಖಿಗೆ ಅದನ್ನು ತೋರಿಸಿದ್ದಾರೆ. ಈ ವೇಳೆ ವಿಮಾನ ಸಿಬ್ಬಂದಿ ಕುಶ್ಬೂ ಗುಪ್ತಾ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. ಕುಶ್ಬೂ ಗುಪ್ತಾ ಅವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇಂಡಿಗೋ ವಿಮಾನದಲ್ಲಿ ತನ್ನ ಸಂಕಷ್ಟದ ಅನುಭವವನ್ನು ಅವರು ವಿವರಿಸಿದ್ದಾರೆ. ಆಹಾರದ ಗುಣಮಟ್ಟ ಮತ್ತು ಸೇವಾ ಗುಣಮಟ್ಟದಲ್ಲಿನ ಕುಸಿತಕ್ಕಾಗಿ ವಿಮಾನಯಾನ ಸಂಸ್ಥೆಯನ್ನು ದೂಷಿಸಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.

ಇಂಡಿಗೋ ಪ್ರತಿಕ್ರಿಯೆ ಏನು
ಕುಶ್ಬೂ ಗುಪ್ತಾ ಅವರ ಸಂದೇಶಕ್ಕೆ ಇಂಡಿಗೋ ಪ್ರತಿಕ್ರಿಯೆ ನೀಡಿದೆ. ಇಂಡಿಗೋ ಪ್ರಯಾಣಿಕರಾದ ಗುಪ್ತಾಗೆ ಕ್ಷಮೆಯಾಚಿಸಿದೆ ಮತ್ತು ವಿಷಯವು ಪ್ರಸ್ತುತ ತನಿಖೆಯಲ್ಲಿದೆ ಎಂದು ಹೇಳಿದೆ. "ನಮ್ಮ ಗ್ರಾಹಕರಲ್ಲಿ ಒಬ್ಬರು ದೆಹಲಿಯಿಂದ ಮುಂಬೈಗೆ 6E 6107 ವಿಮಾನದಲ್ಲಿ ತಮ್ಮ ಅನುಭವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ನಮಗೆ ತಿಳಿದಿದೆ. ವಿಮಾನದಲ್ಲಿ ಆಹಾರ ಮತ್ತು ಪಾನೀಯ ಸೇವೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿರುತ್ತೇವೆ. ತನಿಖೆಯ ನಂತರ, ನಮ್ಮ ಸಿಬ್ಬಂದಿ ಸ್ಯಾಂಡ್‌ವಿಚ್‌ನ ಸೇವೆಯನ್ನು ತಕ್ಷಣವೇ ನಿಲ್ಲಿಸಿದೆ, "ಎಂದಿದೆ.
"ಪ್ರಸ್ತುತ ವಿಷಯವು ಸಂಪೂರ್ಣ ಪರೀಕ್ಷೆಯಲ್ಲಿದೆ. ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಅಡುಗೆದಾರರೊಂದಿಗೆ ಮಾತನಾಡಿದ್ದೇವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ" ಎಂದು ಅದು ಹೇಳಿದೆ.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications