Get Updates
Get notified of breaking news, exclusive insights, and must-see stories!

2018ರ ಅತಿ ಕೆಟ್ಟ ಪಾಸ್ವರ್ಡ್ ಗಳಲ್ಲಿ 'ಡೋನಾಲ್ಡ್' ಗೂ ಸ್ಥಾನ

ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅತಿ ಕೆಟ್ಟ ಪಾಸ್ವರ್ಡ್ ನೀಡುವವರ ಪಟ್ಟಿ, ಅಭ್ಯಾಸ ಮುಂದುವರೆದಿದೆ. 123456 ಇದು 2013, 2014, 2015, 2016 ಹಾಗೂ 2017ರಲ್ಲಿ ಅತಿ ಕೆಟ್ಟ ಪಾಸ್ವರ್ಡ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಈ ಬಾರಿ ಅಚ್ಚರಿಯೆಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೆಸರು ಸೇರ್ಪಡೆಯಾಗಿದೆ.

ಸುಲಭವಾದ ಪಾಸ್ವರ್ಡ್ ನೀಡಿದ ಹಲವು ಇಂಟರ್ ನೆಟ್ ಬಳಕೆದಾರರು ಹ್ಯಾಕರ್ ಗಳ ತುತ್ತಾಗುವುದು ಸಾಮಾನ್ಯ ಸಂಗತಿ. ಸರಳ, ಸುಸೂತ್ರವಾದ ಪಾಸ್ ವರ್ಡ್ ಬಳಸಿದರೆ ಅದು ನೆನಪಿನಲ್ಲುಳಿಯುವುದು ಸುಲಭ ಎಂಬ ತರ್ಕಕ್ಕೆ ಜೋತುಬಿದ್ದ ಬಳಕೆದಾರರು ಅನಗತ್ಯವಾಗಿ ತೊಂದರೆ ಸಿಲುಕಿಕೊಳ್ಳುತ್ತಿದ್ದಾರೆ. ಗೂಗಲ್, ಫೇಸ್ ಬುಕ್, ಟ್ವಿಟ್ಟರ್ ಕೂಡಾ ಅತಿಕ್ರಮಿಗಳ ದಾಳಿಗೆ ಆಗಾಗ ತುತ್ತಾಗುತ್ತಿರುತ್ತದೆ. ಇದಕ್ಕೆ ಬಳಕೆದಾರರ ಸಾಮಾನ್ಯ ಜ್ಞಾನದ ಕೊರತೆ ಕಾರಣ ಎಂದು ಇಂಟರ್ನೆಟ್ ಸುರಕ್ಷತಾ ಸಂಸ್ಥೆ ಸ್ಪಾಶ್ ಡೇಟಾ ಹೇಳಿದೆ.

ಪ್ರತಿ ವರ್ಷದಂತೆ ಅತಿಕೆಟ್ಟ ಪಾಸ್ ವರ್ಡ್ ಗಳನ್ನು ಪಟ್ಟಿಯನ್ನು ಸ್ಪಾಶ್ ಡೇಟಾ ಈ ವರ್ಷವೂ ಪ್ರಕಟಿಸಿದೆ.ಸುಮಾರು 5 ಮಿಲಿಯನ್ ಪಾಸ್ ವರ್ಡ್ ಗಳ ಮಾಹಿತಿಯನ್ನಾಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ ಸ್ಪಾಶ್ ಡೇಟಾ ಸಿಇಒ ಮಾರ್ಗನ್ ಸ್ಲೇನ್ ಅವರು ಪ್ರತಿಕ್ರಿಯಿಸಿ,'ಅಧ್ಯಕ್ಷರೆ ಕ್ಷಮಿಸಿ ಇದು ಸುಳ್ಳು ಸುದ್ದಿಯಲ್ಲ, ನಿಮ್ಮ ಹೆಸರು ಕೂಡಾ ಅತಿ ಹೆಚ್ಚು ಬಾರಿ ಪಾಸ್ವರ್ಡ್ ಆಗಿ ಬಳಕೆಯಾಗಿದೆ. ಆದರೆ, ಅದು ಕೂಡಾ ಸುರಕ್ಷಿತ ಪಟ್ಟಿಯಲ್ಲಿಲ್ಲ' ಎಂದಿದ್ದಾರೆ.

List of worst passwords of 2018 revealed; ‘donald’ is among top 25

ಹ್ಯಾಕರ್ ಗಳಿಂದ ಮುಕ್ತರಾಗಲು ಸ್ವಲ್ಪವಾದರೂ ಕ್ಲಿಷ್ಟವಾದ ಪಾಸ್ ವರ್ಡ್ ಬಳಸುವಂತೆ ಕೋರಲಾಗಿದೆ. 2017ರ 25 ಅತಿ ಕೆಟ್ಟ ಪಾಸ್ ವರ್ಡ್ ಗಳ ಪಟ್ಟಿ ಹೀಗಿದೆ:

1. 123456
2. password
3. 123456789
4. 12345678
5. 12345
6. 111111
7. 1234567
8. sunshine
9. qwerty
10. iloveyou
11. princess
12. admin
13. welcome
14. 666666
15. abc123
16. football
17. 123123
18. monkey
19. 654321
20. !@#$%^&*
21. charlie
22. aa123456
23. donald
24. password1
25. qwerty123

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+