ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka municipal corporations; ಕರ್ನಾಟಕದ ಮಹಾನಗರ ಪಾಲಿಕೆಗಳು

|
Google Oneindia Kannada News

ಮಹಾನಗರದ ಆಡಳಿತವನ್ನು ಮಹಾನಗರ ಪಾಲಿಕೆಗಳು ನೋಡಿಕೊಳ್ಳುತ್ತದೆ. ಕರ್ನಾಟಕದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅತಿ ದೊಡ್ಡ ಮಹಾನಗರ ಪಾಲಿಕೆಯಾಗಿದೆ. ಬಿಬಿಎಂಪಿ ಮೊದಲು 198 ವಾರ್ಡ್‌ಗಳನ್ನು ಹೊಂದಿತ್ತು. ಈಗ ಸರ್ಕಾರ ವಾರ್ಡ್ ಪುನರ್ ವಿಂಗಡನೆ ಮಾಡಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದೆ.

ಒಂದು ನಗರ ಮಹಾನಗರ ಪಾಲಿಕೆಯಾಗಲು ನಗರ ಪ್ರದೇಶದಲ್ಲಿ 2 ಲಕ್ಷ ಮತ್ತು ಸುತ್ತಲಿನ ಪ್ರದೇಶದಲ್ಲಿ 1 ಲಕ್ಷ ಜನಸಂಖ್ಯೆ ಹೊಂದಿರಬೇಕು. ನಗರದ ಕಂದಾಯ ಆದಾಯ ಸುಮಾರು 6 ಕೋಟಿ ರೂ.ಗಳಿಗೂ ಹೆಚ್ಚಿರಬೇಕು. ತೆರಿಗೆ, ದಂಡ, ಬಾಡಿಗೆ ಪಾಲಿಕೆಯ ಪ್ರಮುಖ ಆದಾಯದ ಮೂಲಗಳು. ರಸ್ತೆ, ನೀರು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಮಹಾನಗರ ಪಾಲಿಕೆಗಳ ಕೆಲಸವಾಗಿದೆ.

ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಮೇಯರ್ ಮೀಸಲಾತಿ ಪ್ರಕಟರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಮೇಯರ್ ಮೀಸಲಾತಿ ಪ್ರಕಟ

2011ರ ಜನಗಣತಿ ಅನ್ವಯ ವಿಂಗಡನೆ ಮಾಡಿದಂತೆ ಕರ್ನಾಟಕದಲ್ಲಿರುವ ಮಹಾನಗರ ಪಾಲಿಕೆಗಳು 11. ಇವುಗಳಲ್ಲಿ ಬೆಂಗಳೂರಿನ ಆಡಳಿತವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೋಡಿಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಬೀದರ್, ಮಂಡ್ಯ ಸೇರಿದಂತೆ ವಿವಿಧ ನಗರಗಳು ಮಹಾನಗರ ಪಾಲಿಕೆಯಾಗುವ ಹಂತದಲ್ಲಿವೆ.

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ: 225 ಕೋಟಿ ರೂಪಾಯಿ ಆರ್ಥಿಕ ಹೊರೆ!ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ: 225 ಕೋಟಿ ರೂಪಾಯಿ ಆರ್ಥಿಕ ಹೊರೆ!

List of Municipal Corporations in Karnataka

ಮಹಾನಗರ ಪಾಲಿಕೆ ಆಡಳಿತವನ್ನು ಆಯುಕ್ತರು ನೋಡಿಕೊಳ್ಳುತ್ತಾರೆ. ಜನರಿಂದ ಆಯ್ಕೆಗೊಂಡ ಸದಸ್ಯರು ನಗರದ ಮೇಯರ್ ಮತ್ತು ಉಪ ಮೇಯರ್ ಆಗಿರುತ್ತಾರೆ. ನಗರದ ಜನಸಂಖ್ಯೆ ಆಧಾರದ ಮೇಲೆ ವಾರ್ಡ್‌ಗಳನ್ನು ರಚನೆ ಮಾಡಲಾಗುತ್ತದೆ. ಮೇಯರ್ ಮತ್ತು ಉಪ ಮೇಯರ್‌ ಅವಧಿ ಒಂದು ವರ್ಷವಾಗಿರುತ್ತದೆ.

ಬಿಬಿಎಂಪಿಗೆ ಇನ್ನು 243 ವಾರ್ಡ್; ಸರ್ಕಾರದಿಂದ ಅಧಿಕೃತ ಆದೇಶಬಿಬಿಎಂಪಿಗೆ ಇನ್ನು 243 ವಾರ್ಡ್; ಸರ್ಕಾರದಿಂದ ಅಧಿಕೃತ ಆದೇಶ

ಮಹಾನಗರ ಪಾಲಿಕೆಗಳು ತಮ್ಮ ಆದಾಯಕ್ಕೆ ಅನುಗುಣವಾಗಿ ಪ್ರತಿ ವರ್ಷ ಬಜೆಟ್ ಮಂಡನೆ ಮಾಡುತ್ತವೆ. ಬಜೆಟ್‌ನಲ್ಲಿ ನಗರದ ಅಭಿವೃದ್ಧಿ, ಆದಾಯ ಸಂಗ್ರಹಕ್ಕೆ ಯೋಜನೆಯನ್ನು ತಯಾರು ಮಾಡಲಾಗುತ್ತದೆ.

ಕರ್ನಾಟಕದ ಮಹಾನಗರ ಪಾಲಿಕೆಗಳ ಪಟ್ಟಿ

1 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (243 ವಾರ್ಡ್)
2 ಮೈಸೂರು ಮಹಾನಗರ ಪಾಲಿಕೆ (65 ವಾರ್ಡ್)
3 ಬೆಳಗಾವಿ ಮಹಾನಗರ ಪಾಲಿಕೆ (58 ವಾರ್ಡ್‌)
4 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (82 ವಾರ್ಡ್)
5 ಕಲಬುರಗಿ ಮಹಾನಗರ ಪಾಲಿಕೆ (55 ವಾರ್ಡ್)
6 ಬಳ್ಳಾರಿ ಮಹಾನಗರ ಪಾಲಿಕೆ (39 ವಾರ್ಡ್‌)
7 ಮಂಗಳೂರು ಮಹಾನಗರ ಪಾಲಿಕೆ (60 ವಾರ್ಡ್‌ಗಳು)
8 ವಿಜಯಪುರ ಮಹಾನಗರ ಪಾಲಿಕೆ (35 ವಾರ್ಡ್‌ಗಳು)
9 ತುಮಕೂರು ಮಹಾನಗರ ಪಾಲಿಕೆ (35 ವಾರ್ಡ್‌ಗಳು)
10 ದಾವಣಗೆರೆ ಮಹಾನಗರ ಪಾಲಿಕೆ (45 ವಾರ್ಡ್‌ಗಳು)
11 ಶಿವಮೊಗ್ಗ ಮಹಾನಗರ ಪಾಲಿಕೆ (35 ವಾರ್ಡ್‌ಗಳು)

ಮಹಾನಗರ ಪಾಲಿಕೆಯ ಪ್ರಮುಖ ಕಾರ್ಯಗಳನ್ನು ಈ ರೀತಿಯಾಗಿ ಪಟ್ಟಿ ಮಾಡಬಹುದಾಗಿದೆ.
ನೀರು ಸರಬರಾಜು ಹಾಗೂ ಒಳಚರಂಡಿ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ, ಬೀದಿ ದೀಪ ಅಳವಡಿಕೆ, ಆಸ್ತಿ ತೆರಿಗೆ ವಸೂಲಾತಿ. ನೀರಿನ ತೆರಿಗೆ ವಸೂಲಾತಿ, ಮಳಿಗೆಗಳ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಿಗೆ ಫಿ ವಸೂಲಾತಿ, ಅಭಿವೃದ್ಧಿ ಕಾಮಗಾರಿಗಳು.

ಕರ್ನಾಟಕದಲ್ಲಿ ಮೊದಲು ಅಸ್ತಿತ್ವಕ್ಕೆ ಬಂದಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ. 1962ರಲ್ಲಿ 20 ಕಿ. ಮೀ. ಅಂತರದಲ್ಲಿರುವ ಎರಡು ನಗರಗಳ ಸಮ್ಮಿಲನದಿಂದ ಹುಬ್ಬಳ್ಳಿ-ಧಾರವಾಡ ಪಾಲಿಕೆಯು ಅಸ್ಥಿತ್ವಕ್ಕೆ ಬಂದಿತು. ಇದು ನಗರಾಡಳಿತ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಪ್ರಯೋಗವಾಗಿರುತ್ತದೆ.

ಕರ್ನಾಟಕದಲ್ಲಿ ಕೊನೆಯದಾಗಿ ರಚನೆಗೊಂಡಿರುವುದು ವಿಜಾಪುರ (ವಿಜಯಪುರ) ಮಹಾನಗರ ಪಾಲಿಕೆ. ಕರ್ನಾಟಕದ ಪ್ರಮುಖ 10 ಜನಸಂಖ್ಯೆಯ ನಗರಗಳಲ್ಲಿ ಇದೂ ಒಂದು.

English summary
Here is the list of municipal corporations in Karnataka. BBMP, Mysuru municipal corporation, belagavi municipal corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X